Homeಮುಖಪುಟಪ್ರತಿಭಟನಾ ನಿರತ ಕುಸ್ತಿಪಟುಗಳಿಂದ ಕೇಂದ್ರ ಕ್ರೀಡಾ ಸಚಿವರ ಭೇಟಿ; ಸಭೆ ವಿಫಲ; ಪ್ರತಿಭಟನೆ ಹೆಚ್ಚಿಸುವುದಾಗಿ ಎಚ್ಚರಿಕೆ

ಪ್ರತಿಭಟನಾ ನಿರತ ಕುಸ್ತಿಪಟುಗಳಿಂದ ಕೇಂದ್ರ ಕ್ರೀಡಾ ಸಚಿವರ ಭೇಟಿ; ಸಭೆ ವಿಫಲ; ಪ್ರತಿಭಟನೆ ಹೆಚ್ಚಿಸುವುದಾಗಿ ಎಚ್ಚರಿಕೆ

ಕುಸ್ತಿಪಟುಗಳು ಕುಸ್ತಿ ಒಕ್ಕೂಟದ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್ ಭೂಷಣ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ

- Advertisement -
- Advertisement -

ಕ್ರೀಡಾ ಆಡಳಿತ ಮಂಡಳಿಯ ಮುಖ್ಯಸ್ಥರು ಮತ್ತು ಅದರ ತರಬೇತುದಾರರು ಮಹಿಳಾ ಆಟಗಾರರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದು ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಒಕ್ಕೂಟ ಸರ್ಕಾರ ಸಚಿವ ಅನುರಾಗ್ ಠಾಕೂರ್ ಗುರುವಾರ ಭಾರತದ ಖ್ಯಾತ ಕುಸ್ತಿಪಟುಗಳನ್ನು ಭೇಟಿಯಾಗಿದ್ದಾರೆ. ಆದರೆ ಸಭೆಯಲ್ಲಿ ಯಾವುದೆ ನಿರ್ಣಯವನ್ನು ತೆಗೆದುಕೊಳ್ಳದ ಕಾರಣ ಸಭೆಯು ವಿಫವಾಗಿದೆ.

ಒಲಿಂಪಿಕ್ ಕಂಚಿನ ಪದಕ ವಿಜೇತರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ಹಲವಾರು ಕ್ರೀಡಾಪಟುಗಳು ಬುಧವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಭಾರತೀಯ ಕುಸ್ತಿ ಒಕ್ಕೂಟವನ್ನು ವಿಸರ್ಜಿಸುವ ಮತ್ತು ಸಂಸ್ಥೆಯ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ತನಿಖೆ ನಡೆಸಬೇಕು ಎಂಬ ಆಟಗಾರರು ಆಗ್ರಹಿಸಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆಯನ್ನು ಹೆಚ್ಚಿಸುವುದಾಗಿ ಕುಸ್ತಿಪಟುಗಳು ಎಚ್ಚರಿಕೆ ನೀಡಿದ ಹಿನ್ನೆಲೆ ಗುರುವಾರ ಕ್ರೀಡಾ ಸಚಿವರೊಂದಿಗಿನ ಸಭೆ ನಡೆದಿದೆ ಎಂದು ವರದಿಯಾಗಿವೆ.

ಉತ್ತರ ಪ್ರದೇಶದ ಕೈಸರ್‌ಗಂಜ್‌ನ ಬಿಜೆಪಿ ಸಂಸದರಾಗಿರುವ ಬ್ರಿಜ್ ಭೂಷಣ್‌ ಕುಸ್ತಿಪಟುಗಳು ಮಾಡಿರುವ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಆದರೆ ಕ್ರೀಡಾಪಟುಗಳು ಬ್ರಿಜ್‌‌ಭೂಷಣ್ ಅವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಕನಿಷ್ಠ 10-12 ಮಹಿಳೆಯರಿದ್ದಾರೆ ಎಂದು ಹೇಳಿದ್ದಾರೆ.

ಫೋಗಟ್ ಮತ್ತು ಪುನಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಅನುರಾಗ್ ಅವರನ್ನು ಗುರುವಾರ ರಾತ್ರಿ ಅವರ ಮನೆಯಲ್ಲಿ ಭೇಟಿಯಾಗಿ ತ್ವರಿತ ಕ್ರಮಕ್ಕೆ ಕೋರಿದ್ದಾರೆ. ಕ್ರೀಡಾ ಸಚಿವಾಲಯವು ಭಾರತ ಕುಸ್ತಿ ಫೆಡರೇಶನ್‌‌ಗೆ ಆರೋಪಗಳಿಗೆ ಅಧಿಕೃತ ಪ್ರತಿಕ್ರಿಯೆ ನೀಡುವಂತೆ ಕೋರಿದ್ದು, ಅದಕ್ಕಾಗಿ ಕಾಯುವಂತೆ ಸಚಿವರು ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಸಭೆಯ ಮೊದಲು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಅನುರಾಗ್ ಠಾಕೂರ್, “ಸರ್ಕಾರವು ಕ್ರೀಡೆ ಮತ್ತು ಆಟಗಾರರ ಕಲ್ಯಾಣ ಮತ್ತು ಉನ್ನತಿಗಾಗಿ ಕೆಲಸ ಮಾಡಿದೆ. ಭಾರತವು ಸಾಕಷ್ಟು ಪದಕಗಳನ್ನು ಗೆದ್ದಿದೆ ಮತ್ತು ಜಾಗತಿಕ ಮಟ್ಟದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದೆ. ಒಕ್ಕೂಟಗಳನ್ನು ಉತ್ತಮಗೊಳಿಸುವ ಕೆಲಸ ಮಾಡಲಾಗಿದೆ. ಕುಸ್ತಿಪಟುಗಳು ಮಾಡುವ ಆರೋಪಗಳು ಗಂಭೀರ ಸ್ವರೂಪದ್ದಾಗಿರುತ್ತವೆ” ಎಂದು ಹೇಳಿದ್ದಾರೆ.

ಸಚಿವರೊಂದಿಗಿನ ಭೇಟಿಗೂ ಮುನ್ನ ಗುರುವಾರ, ಕ್ರೀಡಾಪಟುಗಳು ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಾನಿರ್ದೇಶಕ ಸಂದೀಪ್ ಪ್ರಧಾನ್ ಮತ್ತು ಕ್ರೀಡಾ ಕಾರ್ಯದರ್ಶಿ ಸುಜಾತಾ ಚತುರ್ವೇದಿ ಅವರನ್ನು ಭೇಟಿಯಾಗಿದ್ದರು.

ಸರ್ಕಾರದಿಂದ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಬಂದಿಲ್ಲ ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಕುಸ್ತಿಯಾಡುವುದಿಲ್ಲ ಎಂದು ಕುಸ್ತಿಪಟುಗಳು ಹೇಳಿದ್ದು, “ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಅವರನ್ನು ತೆಗೆದುಹಾಕಿ, ಅದರು ಜೈಲಿಗೆ ಹೋಗುವವರೆಗೂ ನಾವು ಬಿಡುವುದಿಲ್ಲ. ಒಂದು ವೇಳೆ ಸರಕಾರ ಕ್ರಮ ಕೈಗೊಳ್ಳದಿದ್ದರೆ ಪೊಲೀಸರ ಮೊರೆ ಹೋಗುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನಾಕಾರರು ಗುರುವಾರ ಕುಸ್ತಿಪಟು ಹಾಗೂ ಬಿಜೆಪಿ ನಾಯಕಿಯು ಆಗಿರುವ ಬಬಿತಾ ಫೋಗಟ್‌ ಅವರನ್ನು ಭೇಟಿಯಾಗಿದ್ದು ಅವರಿಂದಲೂ ಬೆಂಬಲ ಪಡೆದಿದ್ದಾರೆ. “ಕುಸ್ತಿಪಟುವಾಗಿ ನನ್ನ ವೃತ್ತಿಜೀವನದಲ್ಲಿ ನಿಂದನೆಯ ನಿದರ್ಶನಗಳನ್ನು ಅನುಭವಿಸಿದ್ದೇನೆ. ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ. ಈಗ ಎದ್ದಿರುವ ಧ್ವನಿಗಳು ಬಹಳ  ಮುಖ್ಯ” ಎಂದು ಫೋಗಟ್ ಹೇಳಿದ್ದಾರೆ

ಕುಸ್ತಿಪಟುಗಳು ತಮ್ಮ ಸ್ವಾಭಿಮಾನಕ್ಕಾಗಿ ಹೋರಾಡುತ್ತಿದ್ದಾರೆ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಗಾದ ಕ್ರೀಡಾಪಟುಗಳೊಂದಿಗೆ ತಮ್ಮ ಗುರುತನ್ನು ಬಹಿರಂಗಪಡಿಸಲು ಒತ್ತಾಯಿಸಬೇಡಿ ಎಂದು ವಿನೇಶ್ ಫೋಗಟ್ ಹೇಳಿದ್ದಾರೆ.

“ನಾವು ಮುಂದೆ ಬಂದು ನಮಗೆ ಏನಾಯಿತು ಎಂದು ಹೇಳಲು ಬಯಸುವುದಿಲ್ಲ. ನಮ್ಮನ್ನು ಬಲವಂತಪಡಿಸಿದರೆ ನಮಗೆ ಹೀಗಾಯಿತು ಎಂದು ದೇಶದ ಹೆಣ್ಣುಮಕ್ಕಳು ಮಾಧ್ಯಮಗಳ ಮುಂದೆ ಪುರಾವೆಯೊಂದಿಗೆ ಬರಬೇಕಾಗಿರುವುದು ನಾಚಿಕೆಗೇಡಿನ ಸಂಗತಿ. ಆ ಕರಾಳ ದಿನವನ್ನು ನಾವು ನೋಡ ಬಯಸುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಹಿರಿಯ ಮಹಿಳಾ ಅಥ್ಲೆಟಿಕ್ಸ್ ತರಬೇತುದಾರರು ಹರಿಯಾಣ ಕ್ರೀಡಾ ಸಚಿವ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ವಾರಗಳ ನಂತರ ಬ್ರಿಜ್‌ಭೂಷಣ್‌ ಸಿಂಗ್ ವಿರುದ್ಧ ಕುಸ್ತಿಪಟುಗಳು ಆರೋಪ ಮಾಡಿದ್ದಾರೆ. ಜನವರಿ 1 ರಂದು, ಚಂಡೀಗಢ ಪೊಲೀಸರು ಕುರುಕ್ಷೇತ್ರದ ಪೆಹೋವಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಸಂದೀಪ್‌ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: ಬಿಜೆಪಿ ಸಂಸದನಿಂದ ಕ್ರೀಡಾಪಟು & ತರಬೇತುದಾರರಿಗೆ ಲೈಂಗಿಕ ಕಿರುಕುಳ: ಪದಕ ವಿಜೇತ ಕುಸ್ತಿಪಟುಗಳಿಂದ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಮಾಸ್ ನಾಯಕ ಸಿನ್ವಾರ್, ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ದ ಬಂಧನ ವಾರೆಂಟ್‌ಗೆ ಆಗ್ರಹ

0
ಗಾಝಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ (ಐಸಿಸಿ) ಕೋರ್ಟ್‌ನಿಂದ ಬಂಧನ ವಾರೆಂಟ್ ಕೋರುವುದಾಗಿ ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಮ್ ಖಾನ್ ಸೋಮವಾರ ಸಿಎನ್‌ಎನ್‌ಗೆ...