Homeಕರೋನಾ ತಲ್ಲಣಮೊದಲ ಸಲ ಕೊವ್ಯಾಕ್ಸಿನ್, ಎರಡನೆ ಸಲ ಕೊವಿಶೀಲ್ಡ್ ಲಸಿಕೆ ಪಡೆದರೆ ಅಡ್ಡ ಪರಿಣಾಮ ಆಗುತ್ತವೆಯೇ?

ಮೊದಲ ಸಲ ಕೊವ್ಯಾಕ್ಸಿನ್, ಎರಡನೆ ಸಲ ಕೊವಿಶೀಲ್ಡ್ ಲಸಿಕೆ ಪಡೆದರೆ ಅಡ್ಡ ಪರಿಣಾಮ ಆಗುತ್ತವೆಯೇ?

- Advertisement -
- Advertisement -

ಲಸಿಕೆ ಕೊರತೆಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಕಂಡುಹಿಡಿಯಲು ಕಡಿಮೆ ಮತ್ತು ಮಧ್ಯಮ-ಆದಾಯದ ಅನೇಕ ದೇಶಗಳು ಪ್ರಯತ್ನಿಸುತ್ತಿವೆ. ಕೆಲವು ಕಡೆಗಳಲ್ಲಿ ಸಂಶೋಧಕರು ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಎರಡು ವಿಭಿನ್ನ ಶಾಟ್‌ಗಳನ್ನು ಮಿಶ್ರಣ ಮಾಡುವಂತಹ ತಂತ್ರಗಳನ್ನು ಪರಿಶೀಲಿಸುತ್ತಿದ್ದಾರೆ. ಭಾರತದ ಮಟ್ಟಿಗೆ ಇದನ್ನು ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳು ಎಂದು ಪರಿಗಣಿಸಬಹುದು.

ಈಗಾಗಲೇ ದೇಶದ ಬಹು ರಾಜ್ಯಗಳಲ್ಲಿ ಕೋವಿಡ್ ಲಸಿಕೆಗಳ ಅಭಾವ ಇದೆ. 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ನೀಡುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. ಮೊದಲ ಡೋಸ್ ಒಂದು ಕಂಪನಿ ಲಸಿಕೆ ಪಡೆದವರು ಎರಡನೇ ಡೋಸ್‌ನಲ್ಲಿ ಇನ್ನೊಂದು ಕಂಪನಿ ಲಸಿಕೆ ಪಡೆದರೆ ಅಡ್ಡ ಪರಿಣಾಮ ಆಗುವ ಸಾಧ್ಯತೆಗಳಿವೆ. ಆದರೆ ಈ ಪರಿಣಾಮಗಳು ಮಾರಣಾಂತಿಕವೇನೂ ಅಲ್ಲ ಎಂದು ಆಕ್ಸ್‌ಫರ್ಡ್ ವಿವಿಯ ಸಂಶೋಧಕರು ಲ್ಯಾನ್ಸೆಟ್‌ನಲ್ಲಿ ವರದಿ ಮಾಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಆದರೆ ಇದರಲ್ಲಿ ಭಾರತದಲ್ಲಿ ವ್ಯಾಪಕವಾಗಿ ಬಳಕೆ ಆಗುವ ಕೊವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಬಗ್ಗೆ ನಿರ್ದಿಷ್ವಾಗಿ ಏನನ್ನೂ ಹೇಳಿಲ್ಲ.

ಎರಡು ಪ್ರಮುಖ ಕೋವಿಡ್ ಲಸಿಕೆಗಳ ಪ್ರಮಾಣವನ್ನು ಬೆರೆಸುವುದು (ಅಂದರೆ ಎರಡು ಭಿನ್ನ ಕಂಪನಿಗಳ ಡೋಸ್‌ಗಳು) ರೋಗಿಗಳಲ್ಲಿ ಆಯಾಸ ಮತ್ತು ತಲೆನೋವಿನಂತಹ ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತದೆ ಎಂಬ ಅಂಶವನ್ನು ಆ ಆರಂಭಿಕ ಅಧ್ಯಯನಗಳಲ್ಲಿ ಕಂಡುಕೊಳ್ಳಲಾಗಿದೆ. ಆದರೆ, ಈ ಬಗ್ಗೆ ವಿವರವಾದ ಅಧ್ಯಯನ ಇನ್ನೂ ನಡೆಯಲಿದೆ ಎನ್ನಲಾಗಿದೆ.

ಅಸ್ಟ್ರಾಜೆನೆಕಾ ಶಾಟ್‌ನ ಮೊದಲ ಡೋಸ್ ಪಡೆದ ಜನರು ಎರಡನೇ ಸಂದರ್ಭದಲ್ಲಿ ಫಿಜರ್ ಕಂಪನಿಯ ಲಸಿಕೆ ಪಡೆದಾಗ ಅಲ್ಪಾವಧಿಯ ಅಡ್ಡಪರಿಣಾಮಗಳು ಕಂಡು ಬಂದಿವೆ ಎನ್ನಲಾಗಿದೆ. ಅವುಗಳಲ್ಲಿ ಹೆಚ್ಚಿನವು ಸೌಮ್ಯವಾಗಿವೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ದಿ ಲ್ಯಾನ್ಸೆಟ್ ವೈದ್ಯಕೀಯ ಜರ್ನಲ್‌ನಲ್ಲಿ ವರದಿ ಮಾಡಿದ್ದಾರೆ.

ಇಲ್ಲಿನ ವೈದ್ಯರ ಪ್ರಕಾರ, ಒಂದು ಆಸ್ಪತ್ರೆಗೆ ಒಂದೇ ಕಂಪನಿಯ ಲಸಿಕೆ ಪೂರೈಕೆ ಆಗುತ್ತದೆ. ಹೀಗಾಗಿ ಅದೇ ಆಸ್ಪತ್ರೆಯಲ್ಲಿ ಎರಡನೇ ಲಸಿಕೆ ತೆಗೆದುಕೊಂಡರೆ ಸಮಸ್ಯೆ ಇಲ್ಲ. ಕೆಲವು ಜಿಲ್ಲೆಗಳಲ್ಲಿ ಎರಡೂ ಕಂಪನಿಗಳ ಲಸಿಕೆಗಳು ಪೂರೈಕೆಯಾಗುತ್ತಿದ್ದು, ಎರಡನೇ ಡೋಸ್ ಪಡೆಯುವಾಗ ಬೇರೆ ಆಸ್ಪತ್ರೆಗೆ ಹೋದಾಗ, ಮೊದಲನೆ ಲಸಿಕೆ ಡೋಸ್ ತೆಗೆದುಕೊಂಡ ರಶೀದಿ ತೋರಿಸುವುದು ಒಳ್ಳೆಯದು ಎಂದು ಸರ್ಕಾರಿ ವೈದ್ಯ ಡಾ. ಸಂತೋಷ್ ತಿಳಿಸಿದರು.

ಭಾರತದಲ್ಲಿ ಲಸಿಕಾ ನೀತಿಯೇ ಅಸ್ಪಷ್ಟವಾಗಿದೆ. ಈ ಬಗ್ಗೆ ಸರ್ಕಾರಗಳು ಜನರಿಗೆ ಹೆಚ್ಚಿನ ಮಾಹಿತಿ ಒದಗಿಸಬೇಕಾಗಿದೆ.


ಇದನ್ನೂ ಓದಿ: ಕೊರೊನಾ ಉಲ್ಬಣವಾಗದಂತೆ ತಡೆಯಲು ಸಜ್ಜುಗೊಂಡ ಕೆಸಿವಿಟಿ ಜನಸಹಾಯ – ಬಿಎಂಸಿ 92 ಡಾಕ್ಟರ್ಸ್‌ ತಂಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...