Homeಮುಖಪುಟಪಶ್ಚಿಮ ಬಂಗಾಳ: ಇಬ್ಬರು ಬಿಜೆಪಿ ಶಾಸಕರ ರಾಜೀನಾಮೆ-75ಕ್ಕೆ ಇಳಿದ ಸಂಖ್ಯಾಬಲ

ಪಶ್ಚಿಮ ಬಂಗಾಳ: ಇಬ್ಬರು ಬಿಜೆಪಿ ಶಾಸಕರ ರಾಜೀನಾಮೆ-75ಕ್ಕೆ ಇಳಿದ ಸಂಖ್ಯಾಬಲ

- Advertisement -
- Advertisement -

ಬಿಜೆಪಿ ಲೋಕಸಭಾ ಸಂಸದರಾದ ಜಗನ್ನಾಥ ಸರ್ಕಾರ್ ಮತ್ತು ನಿಶಿತ್ ಪ್ರಮಾಣಿಕ್ ಪಶ್ಚಿಮ ಬಂಗಾಳ ವಿಧಾನಸಭೆಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಇಬ್ಬರು ಶಾಸಕರಾಗಿ ಆಯ್ಕೆಯಾಗಿದ್ದರು.

ರಣಘಾಟ್ ಸಂಸದ ಜಗನ್ನಾಥ ಸರ್ಕಾರ್ ಮತ್ತು ಕೂಚ್ ಬೆಹಾರ್ ಸಂಸದ ನಿಶಿತ್ ಪ್ರಮಾಣಿಕ್ ಅವರು ವಿಧಾನಸಭೆಗೆ ತೆರಳಿ ತಮ್ಮ ರಾಜೀನಾಮೆ ಪತ್ರಗಳನ್ನು ಸ್ಪೀಕರ್ ಬಿಮನ್ ಬ್ಯಾನರ್ಜಿಗೆ ಸಲ್ಲಿಸಿದ್ದಾರೆ. ಬಿಜೆಪಿ ಹೈಕಮಾಂಡ್ ನಿರ್ದೇಶನದ ಮೇರೆಗೆ ಅವರು ಶಾಸಕ ಸ್ಥಾನದಿಂದ ಹೊರಗುಳಿಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಬಂಗಾಳ ಚುನಾವಣೆಯಲ್ಲಿ ಈ ಇಬ್ಬರು ಸಂಸದರನ್ನಲ್ಲದೆ, ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಮತ್ತು ಲಾಕೆಟ್ ಚಟರ್ಜಿ ಮತ್ತು ರಾಜ್ಯಸಭಾ ಸದಸ್ಯ ಸ್ವಾಪನ್ ದಾಸ್‌ಗುಪ್ತಾ ಅವರನ್ನು ಕಣಕ್ಕಿಳಿಸಿತ್ತು ಆದರೆ ಇವರೆಲ್ಲಾ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ 77 ಬಿಜೆಪಿ ಶಾಸಕರಿಗೆ ಕೇಂದ್ರದ ಭದ್ರತಾ ಪಡೆಗಳಿಂದ ರಕ್ಷಣೆ

“ಬಿಜೆಪಿ ಕೇವಲ ಮೂರು ಶಾಸಕರಿಂದ (2016 ರ ಚುನಾವಣೆಯಲ್ಲಿ) 77 ಶಾಸಕರಿಗೆ ಏರಿದೆ. ಸರ್ಕಾರವನ್ನು ನಡೆಸುವಾಗ ಅನುಭವಿಗಳು ಇರಲಿ ಎಂದು ಕೆಲವು ಸಂಸದರನ್ನು ಕಣಕ್ಕಿಳಿಸಲಾಗಿತ್ತು. ಆದರೆ ರಾಜ್ಯದಲ್ಲಿ ಸರ್ಕಾರ ರಚಿಸುವ ಗುರಿಯನ್ನು ಸಾಧಿಸಲು ಪಕ್ಷಕ್ಕೆ ಸಾಧ್ಯವವಾಗಲಿಲ್ಲ” ಎಂದು ಜಗನ್ನಾಥ ಸರ್ಕಾರ್ ಹೇಳಿದ್ದಾರೆ.

ಸಂಸದರಾಗಿದ್ದರೂ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದು ನಂತರ ಗೆದ್ದ ನಂತರ ರಾಜೀನಾಮೆ ನೀಡುವುದು ಬಿಜೆಪಿಯ ಯಾವುದೇ ಸಾಂಸ್ಥಿಕ ದೌರ್ಬಲ್ಯವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸರ್ಕಾರ್ ಪ್ರತಿಪಾದಿಸಿದ್ದಾರೆ.

ಏಕಕಾಲದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಯ ಸದಸ್ಯರಾಗಿ ಉಳಿಯಲು ಸಾಧ್ಯವಿಲ್ಲ ಎಂದು ಸಮಸದ ನಿಶಿತ್ ಪ್ರಮಾಣಿಕ್ ಹೇಳಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ನಿಶಿತ್ ಪ್ರಮಾಣಿಕ್ ಕೇವಲ 57 ಮತಗಳ ಅಂತರದಿಂದ ಟಿಎಂಸಿ ಅಭ್ಯರ್ಥಿ ಉದಯನ್ ಗುಹಾ ಅವರನ್ನು ದಿನ್ಹಾಟಾ ಸ್ಥಾನದಿಂದ ಸೋಲಿಸಿದ್ದರು. ಜಗನ್ನಾಥ ಸರ್ಕಾರ್ ಅವರು ಸಂತೀಪುರದಿಂದ 15,878 ಮತಗಳ ಅಂತರದಿಂದ ಜಯಗಳಿಸಿದ್ದರು.

ದಿನ್ಹಾಟಾ ಮತ್ತು ಸಂತೀಪುರ ವಿಧಾನಸಭೆಗಳು ಪ್ರಮಾಣಿಕ್ ಮತ್ತು ಸರ್ಕಾರ್ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುತ್ತವೆ.

ಬಿಜೆಪಿಯು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗಳಿಸಿದರೆ, ತೃಣಮೂಲ ಕಾಂಗ್ರೆಸ್ 292 ಕ್ಷೇತ್ರಗಳಲ್ಲಿ 213 ಜಯಗಳಿಸಿ ಭರ್ಜರಿ ಜಯ ಸಾಧಿಸಿ ಸರ್ಕಾರ ರಚಿಸಿದೆ.


ಇದನ್ನೂ ಓದಿ: ಸೆಂಟ್ರಲ್ ವಿಸ್ತಾ ಯೋಜನೆಗೆ ವ್ಯಾಪಕ ವಿರೋಧ: ಪೋಟೋ, ವಿಡಿಯೊ ನಿಷೇಧಿಸಿದ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...