ಚರ್ಚೆಯಿಲ್ಲದೆ ಬಜೆಟ್‌ಗೆ ಅನುಮೋದನೆಗೊಂಡಿರುವುದು ಸಂಸದೀಯ ಪ್ರಜಾಪ್ರಭುತ್ವದ ”ಕೆಟ್ಟ ಸಂದೇಶ”ವಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಶುಕ್ರವಾರ ಹೇಳಿದ್ದಾರೆ.
ಏಪ್ರಿಲ್ 1ರಿಂದ ಪ್ರಾರಂಭವಾಗುವ ಆರ್ಥಿಕ ವರ್ಷಕ್ಕೆ ಸುಮಾರು 45 ಲಕ್ಷ ಕೋಟಿ ರೂಪಾಯಿಗಳ ವೆಚ್ಚದ ಕೇಂದ್ರ ಬಜೆಟ್‌ನ್ನು ಯಾವುದೇ ಚರ್ಚೆಯಿಲ್ಲದೆ ಲೋಕಸಭೆಯು ಅಂಗೀಕರಿಸಿದೆ. ಈ ಬೆಳವಣಿಗೆಯ ಒಂದು ದಿನದ ನಂತರ ಪಿ ಚಿದಂಬರಂ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
”ಸಂಸದೀಯ ಪ್ರಜಾಪ್ರಭುತ್ವದ ಕೆಟ್ಟ ಸಂದೇಶವೆಂದರೆ ಚರ್ಚೆಯಿಲ್ಲದೆ ಬಜೆಟ್‌ನ್ನು ಅಂಗೀಕರಿಸುವುದು. 2023-24ರಲ್ಲಿ 45,03,097 ಕೋಟಿ ರೂ.ಗಳನ್ನು ಸಂಗ್ರಹಿಸಲಾಗುವುದು ಮತ್ತು ಅದನ್ನು ‘ಜನ’ರಿಗೆ ಖರ್ಚು ಮಾಡಲಾಗುವುದು ಎಂದಿರುವ ಕೇಂದ್ರ ಸರ್ಕಾರ, ಜನಪ್ರತಿನಿಧಿಗಳಿಗೆ ತಮ್ಮ ಅಭಿಪ್ರಾಯಗಳನ್ನು ನೀಡಲು ಅವಕಾಶವೇ ನೀಡಲಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
The worst message from a parliamentary democracy is to approve a Budget without discussion
Rs 45,03,097 crore will be raised and spent for the 'people' in 2023-24 without the people's representatives offering their views on the Budget
— P. Chidambaram (@PChidambaram_IN) March 24, 2023
ಬಜೆಟ್ ಅಧಿವೇಶನದ ಮೊದಲ ಹಂತದಲ್ಲಿ ವಿರೋಧ ಪಕ್ಷಗಳು, ಅದಾನಿ ಹಗರಣದ ಬಗ್ಗೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಬೇಕು ಎಂದು ಆಡಳಿತ ಪಕ್ಷದ ವಿರುದ್ಧ ಸರಣಿ ಪ್ರತಿಭಟನೆ ನಡೆಸಿದವು. ಆ ಬೇಡಿಕೆಯ ಹೋರಾಟ ಇಂದಿಗೂ ಮುಂದುವರೆದಿದೆ. ಹಾಗಾಗಿ ಬಜೆಟ್ ಮೇಲೆ ಯಾವುದೇ ಚರ್ಚೆಗಳಾಗದೇ ಸದನವನ್ನು ಮುಂದೂಡುತ್ತಾ ಬರಲಾಯಿತು.
ಎರಡನೇ ಅವಧಿಗೆ ಸದನ ನಡೆಸಿದಾಗ ಆಡಳಿತ ಪಕ್ಷ ಬಿಜೆಪಿಯು, ಸಂಸದ ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ನೀಡಿದ ಹೇಳಿಕೆಗಳಿಗೆ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿತು. ಆದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು, ರಾಹುಲ್ ಗಾಂಧಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಈ ನಡುವೆ ರಾಹುಲ್ ಗಾಂಧಿಗೆ ಸದನದಲ್ಲಿ ಮಾತನಾಡಲು ಅವಕಾಶವನ್ನೇ ನೀಡಲಿಲ್ಲ ಈ ಗದ್ದಲಗಳಲ್ಲಿ ಬಜೆಟ್ ಮೇಲಿನ ಅಧೀವೇಶನ ಚರ್ಚೆಯಾಗದೇ ಮುಂದೂಡುತ್ತಾ ಹೋಯಿತು. ಇದೀಗ ಗದ್ದಲದ ನಡುವೆ ಚರ್ಚೆ ನಡೆಸದೇ ಆಡಳಿತ ಪಕ್ಷ ಬಜೆಟ್‌ಗೆ ಅನುಮೋದನೆ ಪಡೆದಿದೆ.



Always opposition parties are doing this. If the same is done by ruling party it will make issue out of it.