2019ರ ಫೆಬ್ರವರಿ ತಿಂಗಳಿನಲ್ಲಿ ಕಾಶ್ಮೀರದ ಪುಲ್ವಾಮ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯನ್ನು ಪತ್ರಕರ್ತ ಅರ್ನಾಬ್ ಗೋಸ್ವಾಮಿ ಸಂಭ್ರಮಿಸಿದ್ದ ಎಂಬ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಆ ದಾಳಿಯಲ್ಲಿ 40ಕ್ಕೂ ಹೆಚ್ಚು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅಲ್ಲದೇ ತದನಂತರ ಭಾರತದ ಸೈನಿಕರು ನಡೆಸಿದ ಬಾಲಾಕೋಟ್ ದಾಳಿಯ ಬಗ್ಗೆಯೂ ಮೂರು ದಿನಗಳ ಮೊದಲೇ ಅರ್ನಾಬ್‌ಗೆ ಗೊತ್ತಿತ್ತು ಎಂಬ ವಿಷಯ ಲೀಕ್ ಆಗಿರುವ ವಾಟ್ಸಾಪ್ ಚಾಟ್‌ಗಳಿಂದ ತಿಳಿದುಬಂದಿದೆ. ಈ ಕುರಿತು ದೇಶಾದ್ಯಂತ ಅರ್ನಾಬ್ ಗೋಸ್ವಾಮಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಟಿಆರ್‌ಪಿ ಹಗರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ರಿಪಬ್ಲಿಕ್ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಮತ್ತು BARC ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ನಡುವಿನ ವಾಟ್ಸಾಪ್ ಚಾಟ್‌ಗಳ ಸುಮಾರು 500 ಪುಟಗಳನ್ನು ಬಹಿರಂಗಗೊಳಿಸಿದ್ದಾರೆ ಎಂಬ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಆದರೆ ಈ ಕುರಿತು ಯಾವುದೇ ಮುಖ್ಯವಾಹಿನಿ ಮಾಧ್ಯಮಗಳು ಸುದ್ದಿ ಮಾಡಿಲ್ಲವಾದರೂ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಮಂದಿ ಕಿಡಿಕಾರಿದ್ದಾರೆ.
This attack we have won like crazy… ಇದು ಇಡೀ ದೇಶವನ್ನು ನಡುಗಿಸಿದ ಪುಲ್ವಾಮ ದಾಳಿಯ ಬಗ್ಗೆ ಅರ್ನಾಬ್ ಗೋಸ್ವಾಮಿ ಆಡಿದ ಮಾತುಗಳು. ಇವು ಲೀಕ್ ಆದ ವಾಟ್ಸಾಪ್ ಚಾಟ್‌ಗಳಲ್ಲಿ ದಾಖಲಾಗಿದೆ. ನೇಷನ್ ವಾಂಟ್ಸ್ ಟು ನೋ ಎಂದು ಅರಚುತ್ತಿದ್ದ ಅರ್ನಾಬ್ ಗೋಸ್ವಾಮಿಯ ದೇಶಪ್ರೇಮವೆ ಇದು? ಎಂದು ಹಲವರು ಟೀಕೆ ಮಾಡಿದ್ದಾರೆ.
This is what nationalism is supposed to be?
"This attack we have won like crazy"
40 Jawans lost their lives. pic.twitter.com/LNmxyl7878
— Pratik Sinha (@free_thinker) January 15, 2021
ವಾಟ್ಸಾಪ್ ಚಾಟ್ ಪ್ರಕಾರ ಅರ್ನಾಬ್ ಗೋಸ್ವಾಮಿಗೆ ಬಾಲಾಕೋಟ್ ದಾಳಿಯ ಬಗ್ಗೆ ಮೂರು ದಿನಗಳ ಮೊದಲೇ ಗೊತ್ತಿತ್ತು. ಈ ಬಾರಿ ದೊಡ್ಡದೇನೋ ನಡೆಯುತ್ತದೆ ಎಂದು ಅರ್ನಾಬ್ ಹೇಳಿದರೆ, ಇದರಿಂದಾಗಿ ದೊಡ್ಡ ಮನುಷ್ಯನಿಗೆ (big man) ತುಂಬಾ ಒಳ್ಳೆಯದಾಗುತ್ತದೆ ಎನ್ನುತ್ತಾನೆ ಪಾರ್ಥೋ ದಾಸ್ ಗುಪ್ತ. ಅಷ್ಟೇ ಅಲ್ಲ, ಇದರಿಂದಾಗಿಯೇ ದೊಡ್ಡ ಮನುಷ್ಯ ಈ ಚುನಾವಣೆಯನ್ನು ಗುಡಿಸಿಕೊಂಡು (ದೊಡ್ಡ ಗೆಲುವು) ಬರುತ್ತಾನೆ ಎನ್ನುತ್ತಾನೆ. ಇದು ಮಾಮೂಲಿ ಸರ್ಜಿಕಲ್ ಸ್ಟ್ರೈಕ್ ಥರ ಅಲ್ಲ, ಅದಕ್ಕಿಂತ ದೊಡ್ಡದು. ಅಷ್ಟೇ ಅಲ್ಲ, ಕಾಶ್ಮೀರದಲ್ಲೂ ಸದ್ಯದಲ್ಲೇ ದೊಡ್ಡದೇನೋ ನಡೆಸಲಾಗುವುದು. ಜನರು ನಿಜಕ್ಕೂ ಖುಷಿಯಾಗುತ್ತಾರೆ ಎನ್ನುತ್ತಾನೆ ಅರ್ನಾಬ್.
ದೇಶದ ರಕ್ಷಣೆ, ಮಿಲಿಟರಿ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಅತ್ಯಂತ ರಹಸ್ಯ ಮಾಹಿತಿಗಳೆಲ್ಲ ಅರ್ನಾಬ್ ಗೋಸ್ವಾಮಿಗೆ ಹೇಗೆ ಗೊತ್ತಾಗುತ್ತಿತ್ತು? ಇದು Official secrets Act ಪ್ರಕಾರ ಕ್ರಿಮಿನಲ್ ಅಪರಾಧವಲ್ಲವೇ?
ಬೇರೆ ದೇಶಗಳಲ್ಲಿ ಇಂಥದ್ದೇನಾದರೂ ನಡೆದಿದ್ದರೆ, ಇಷ್ಟೊತ್ತಿಗೆ ಅರ್ನಾಬ್ ಜೈಲಿನಲ್ಲಿರುತ್ತಿದ್ದ. ಆದರೆ ಅವನು ದೊಡ್ಡ ಮನುಷ್ಯರ ಮುದ್ದಿನ ಕೂಸು. ಅವನು ಕಿಯ್ಯೋ ಎಂದು ಕೂಗಿದರೆ ಉನ್ನತ ನ್ಯಾಯಾಲಯಗಳ ಕರುಳು ಚುರುಕ್ ಎಂದು ರಕ್ಷಣೆಗೆ ನಿಲ್ಲುತ್ತವೆ! ಒಂದಂತೂ ಸತ್ಯ. ಇಡೀ ದೇಶದಲ್ಲಿ ಅತಿ ದೊಡ್ಡ AntiNational ಪತ್ರಕರ್ತ ಒಬ್ಬನಿದ್ದರೆ ಅದು ಅರ್ನಾಬ್ ಗೋಸ್ವಾಮಿಯೇ. ನಲವತ್ತು ಸೈನಿಕರ ಸಾವನ್ನು ತನ್ನ ಚಾನಲ್ ವಿಜಯಕ್ಕಾಗಿ ಸಂಭ್ರಮಿಸುವ ಇಂಥ ದೇಶದ್ರೋಹಿ ಇನ್ನೊಬ್ಬನಿರಲು ಸಾಧ್ಯವಿಲ್ಲ ಎಂದು ದಿನೇಶ್ ಕುಮಾರ್ ಎಸ್.ಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Dear @PMOIndia who leaked eyes only secret – Balakote strike against Pakistani to Goswami? Is this how you protect military operations & the national interest? pic.twitter.com/zq9PiyfPeF
— Swati Chaturvedi (@bainjal) January 15, 2021
BARC ಮಾಜಿ ಮುಖ್ಯಸ್ಥ ಮತ್ತು ಅರ್ನಾಬ್ ಗೋಸ್ವಾಮಿ ನಡುವೆ ನಡೆದ ವಾಟ್ಸಪ್ ಹರಟೆಗಳು ಅನೇಕ ಕಳವಳಕಾರಿ ವಿಷಯಗಳನ್ನು ಬಯಲಿಗೆಳೆದಿವೆ. ಕೆಲ ಪತ್ರಕರ್ತರು ಮತ್ತು ಸರಕಾರದ ನಡುವಣ ಅನೈತಿಕ ಸಂಬಂಧದ ಮೇಲೆ (ರಾಡಿಯಾ ಟೇಪ್ ಬಳಿಕ) ಮತ್ತೊಮ್ಮೆ ಬೆಳಕು ಚೆಲ್ಲಿದೆ. ಅರ್ನಾಬ್ ಮತ್ತು ಪ್ರಧಾನಿ ಕಚೇರಿಯ ನಡುವಣ ಸುಮಧುರ ಸಂಬಂಧ, ಅರ್ನಾಬ್ ಗೆ ಸರಕಾರದ ಮೇಲಿದ್ದ ನಿಯಂತ್ರಣ ಇವಷ್ಟೇ ಅಲ್ಲ, ನ್ಯಾಯಾಧೀಶರನ್ನು ಖರೀದಿಸುವ ಬಗ್ಗೆಯೂ ಅದರಲ್ಲಿ ಪ್ರಸ್ತಾಪವಿದೆ. ! ಇದು ತುಂಬಾ ಗಂಭೀರ ವಿಚಾರ. ಇದರ ಬಗ್ಗೆ ನ್ಯಾಯಾಲಯ ಏನು ಕ್ರಮ ತೆಗೆದುಕೊಳ್ಳುತ್ತದೆ ನೋಡಬೇಕು ಎಂದು ಶ್ರೀನಿವಾಸ ಕಾರ್ಕಳರವರು ಅಭಿಪ್ರಾಯಪಟ್ಟಿದ್ದಾರೆ.
ಬಾಲಾಕೋಟ್ ದಾಳಿ ಮೂರು ದಿನ ಮೊದಲೇ ಅರ್ನಾಬ್‌ಗೆ ಗೊತ್ತಿದ್ದರೆ, ಈ ದೇಶದ ಪ್ರಧಾನಿ, ರಕ್ಷಣಾ ಮಂತ್ರಿ, ಗೃಹಮಂತ್ರಿ ಯಾರು? ಎಂದು ಪ್ರಸಾದ್ ರಕ್ಷಿಧಿಯವರು ಪ್ರಶ್ನಿಸಿದ್ದಾರೆ.
ಅರ್ನಾಬ್ ವಾಟ್ಸಾಪ್ ಚಾಟ್ ಲೀಕ್ ಹೊಲಸು ರಾಡಿಯಾ ಟೇಪ್‌ಗಿಂತ ಹೆಚ್ಚು ಅಪಾಕಾರಿಯಾದುದು. ಆದರೆ ಆಗ ವಿಚಾರಗಳನ್ನು ಆಲಿಸುವ ಮತ್ತು ವಿಮರ್ಶಿಸುವ ಜನರಿದ್ದರು ಅವರು ಕಣ್ಮರೆಯಾಗಿದ್ದಾರೆ ಅಷ್ಟೇ ವ್ಯತ್ಯಾಸ ಎಂದು ಆದಿತ್ಯ ಭಾರದ್ವಾಜ್ ಆತಂಕ ವ್ಯಕ್ತಪಡಿಸಿದ್ದಾರೆ.
Arnab knew about the Balakot Air Strikes three days before it happened!
He and his friend are chatting that this will "sweep the polls". Who told him?
This is a clear criminal offence under OFFICIAL SECRETS ACT
Arnab must be immediately ARRESTED for this & tried for TREASON.
— Srivatsa (@srivatsayb) January 15, 2021
ಹಿಂದೆಯೂ ಹೇಳಿದ್ವಿ, ಇಂದೂ ಹೇಳ್ತೀವಿ, ಮುಂದೆಯೂ ಹೇಳ್ತಾನೇ ಇರ್ತೀವಿ.. ಪುಲ್ವಾಮಾ ದಾಳಿ ಒಂದು ಪೂರ್ವ ನಿಯೋಜಿತ ಕೃತ್ಯ. ಇದರಲ್ಲಿ ದೇಶದ ಪ್ರಮುಖ ವ್ಯಕ್ತಿಗಳು ಭಯೋತ್ಪಾದಕರ ಜೊತೆಗೆ ಶಾಮೀಲಾಗಿದ್ದಾರೆ. ಅದರಲ್ಲೂ ಒಂದು ನಿರ್ದಿಷ್ಟ ಪಕ್ಷದ ಪ್ರಮುಖರು ಈ ಸಂಚಿಗೆ ಮತ್ತವರ ರಾಜಕೀಯ ಹಿತಾಸಕ್ತಿಗಾಗಿ 40 ಮಂದಿ ಸೈನಿಕರನ್ನು ಬಲಿ ಪಡೆದಿದ್ದಾರೆ. 2019 ರ ಚುನಾವಣೆಯ ಗೆಲುವಿನ ಕಾರಣಕ್ಕೆ, ದೇಶದಲ್ಲಿ ಯುದ್ಧೋನ್ಮಾದ ಸೃಷ್ಟಿಸುವುದರಿಂದ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಅಂಶವನ್ನೇ ಪ್ರಮುಖವಾಗಿ ಇಟ್ಟುಕೊಂಡು ಈ ದಾಳಿಗೆ ಮುಹೂರ್ತ ಇಟ್ಟಿದ್ದಾರೆ. ಪುಲ್ವಾಮಾ ದಾಳಿಯ ನಂತರದ ಬೆಳವಣಿಗೆ ಇವೆಲ್ಲಾ ಅನುಮಾನಗಳನ್ನು ಹುಟ್ಟು ಹಾಕಿತ್ತು ಮತ್ತು ಆ ಅನುಮಾನ ಬಹುತೇಕ ನಿಜ ಕೂಡಾ ಆಗಿವೆ. ಈಗ ಸಿಕ್ಕಿರುವ ಅರ್ನಬ್ ಗೋಸ್ವಾಮಿ ಚಾಟ್ ಹಿಸ್ಟರಿ ಇವೆಲ್ಲ ಆರೋಪ, ಅನುಮಾನಗಳಿಗೆ ಪುಷ್ಟಿ ಕೊಡುವಂತಿದೆ.
ಅರ್ನಬ್ ಕ್ಯಾಮೆರಾ ಮುಂದೆ ಕೂತಾಗ ದೇಶ, ಸೈನ್ಯ, ಸೈನಿಕರು, ಪಾಕಿಸ್ತಾನ, ಭಯೋತ್ಪಾದಕ, ತುಕ್ಡೆ ತುಕ್ಡೆ ಅಂತ ಅರಚಾಡುವವನು ಕ್ಯಾಮೆರಾ ಹಿಂದೆ ನಿಜವಾದ ಭಯೋತ್ಪಾದಕನಂತೆಯೇ ವರ್ತಿಸಿದ್ದಾನೆ. ಇಡೀ ದೇಶಕ್ಕೆ ದೇಶವೇ 40 ಮಂದಿ ಸೈನಿಕರ ಸಾವಿಗೆ ಮರುಗುತ್ತಿರುವಾಗ ಈತ ಇದನ್ನು “ವಿಕ್ಟರಿ” ಎಂಬಂತೆ ಸಂಭ್ರಮಿಸಿದ್ದಾನೆ. ಇಲ್ಲಿ ಅರ್ನಬ್ ಗೋಸ್ವಾಮಿ, ಆತನ ಬೆಂಬಲಿಸುವವರು, ಆತನ ಧೋರಣೆಗಳನ್ನು ಒಪ್ಪುವ ಪಕ್ಷದವರ ಉದ್ದೇಶ ಸ್ಪಷ್ಟವಾಗಿದೆ ಎಂದು ಪ್ರಗತ್ ಕೆ.ಆರ್ ಅಭಿಪ್ರಾಯಪಟ್ಟಿದ್ದಾರೆ.
ಸೋರಿಕೆಯಾದ ಚಾಟ್‌ಗಳು ಸುಮಾರು 500 ಪುಟಗಳು ಮತ್ತು 80MB ಡೇಟಾವನ್ನು ಹೊಂದಿವೆ. ಚಾಟ್‌ಗಳಲ್ಲಿ, ಪಾರ್ಥೋ ದಾಸ್ ಗುಪ್ತಾ ಅರ್ನಾಬ್‌ಗೆ ಪಿಎಂಒ ಸಹಾಯವನ್ನು ಕೇಳುವಂತೆ ಮತ್ತು ಅವರ ವ್ಯವಹಾರಕ್ಕೆ ಸಹಾಯ ಮಾಡಲು ಉನ್ನತ ಮಂತ್ರಿಗಳೊಂದಿಗೆ ಭೇಟಿಯಾಗುವಂತಗೆ ಮಾತುಕತೆ ನಡೆಸಿದ ವಿವರಗಳಿವೆ.
ಇದನ್ನೂ ಓದಿ: PMO ಕಚೇರಿಯಿಂದಲೇ ಸಹಾಯ ಕೇಳಿದ್ದ ಅರ್ನಾಬ್?: BARC ಸಿಇಒ ಜೊತೆಗಿನ ವಾಟ್ಸಾಪ್ ಚಾಟ್‌ಗಳು ಲೀಕ್!



ಯಾವುದೇ ದೇಶದ್ರೋಹಿ ಕೆಲಸ ಮಾಡಿದರೂ ಪರವಾಗಿಲ್ಲ ……
ಆದರೆ ಅವನು BJP ಗೆ ಬಕೆಟ್ ಹಿಡಿದ್ರೆ ಅವನು ದೇಶಪ್ರೇಮಿ…
RSS..BJP…ಆಟವಿದು…