Homeಅಂತರಾಷ್ಟ್ರೀಯಕೊರೊನಾ: ಜಗತ್ತಿನಲ್ಲಿ 20 ಲಕ್ಷ ದಾಟಿದ ಸಾವಿನ ಸಂಖ್ಯೆ!

ಕೊರೊನಾ: ಜಗತ್ತಿನಲ್ಲಿ 20 ಲಕ್ಷ ದಾಟಿದ ಸಾವಿನ ಸಂಖ್ಯೆ!

ಮೊದಲ 8 ತಿಂಗಳಲ್ಲಿ 10 ಲಕ್ಷ ಕೋವಿಡ್ ಸೋಂಕಿತರು ಸಾವನ್ನಪ್ಪಿದರೆ, ನಂತರದ 4 ತಿಂಗಳಲ್ಲಿ 10 ಲಕ್ಷ ಸೋಂಕಿತರು ಸಾವನ್ನಪ್ಪಿದ್ದಾರೆ.

- Advertisement -
- Advertisement -

ಕೊರೊನಾ ಸೋಂಕನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಜಗತ್ತಿನಾದ್ಯಂತ ಲಸಿಕೆ ಅಭಿವೃದ್ಧಿಪಡಿಸುವ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದ್ದು, ಈಗಾಗಲೆ ಕೆಲವು ದೇಶಗಳು ಲಸಿಕೆ ವಿತರಿಸಲು ಮುಂದಾಗಿವೆ. ಈ ಸಂದರ್ಭದಲ್ಲಿ ಕೊರೊನಾ ಸೋಂಕಿನಿಂದ ಮೃತರಾದವರ ಸಂಖ್ಯೆ 20 ಲಕ್ಷ ದಾಟಿದೆ.

ಚೀನಾದ ನಗರ ವುಹಾನ್‌ನಲ್ಲಿ ಕೊರೊನಾ ಸೋಂಕು ಪತ್ತೆಯಾದ ಒಂದು ವರ್ಷದಲ್ಲಿ ಇಡೀ ಜಗತ್ತನ್ನು ಆವರಿಸಿದ್ದು ಇದುವರೆಗೂ 20 ಲಕ್ಷ ಜನರನ್ನು ಬಲಿ ಪಡೆದಿದೆ. “ಇದುವರೆಗೆ ಸತ್ತವರ ಸಂಖ್ಯೆ ಬ್ರಸೆಲ್ಸ್, ಮೆಕ್ಕಾ, ಮಿನ್ಸ್ಕ್ ಅಥವಾ ವಿಯೆನ್ನಾದ ಜನಸಂಖ್ಯೆಗೆ ಸಮನಾಗಿದೆ” ಎಂದು ಮೃತರ ಕುರಿತಾದ ಅಂಕಿ ಅಂಶಗಳನ್ನು ಸಂಗ್ರಹಿಸಿರುವ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯವು ಹೇಳಿದೆ.

ಇದನ್ನೂ ಓದಿ: ಮುಖ್ಯಮಂತ್ರಿ ಉಪಸ್ಥಿತಿಯಲ್ಲೆ ಬಿಜೆಪಿ ಸಮಾವೇಶದಲ್ಲಿ ಕೊರೊನಾ ನಿಯಮ ಉಲ್ಲಂಘನೆ!

ಈ ಮಾಹಿತಿ ಪ್ರಪಂಚದಾದ್ಯಂತದ ಕೇವಲ ಸರ್ಕಾರಿ ಸಂಸ್ಥೆಗಳು ಒದಗಿಸಲಾದ ಅಂಕಿಅಂಶಗಳನ್ನು ಮಾತ್ರ ಆಧರಿಸಿದ್ದು, ವಾಸ್ತವ ಸಂಖ್ಯೆಯು ಇನ್ನೂ ಹೆಚ್ಚಿದೆ ಎಂದು ಊಹಿಸಲಾಗಿದೆ.

ಮೊದಲ 8 ತಿಂಗಳಲ್ಲಿ 10 ಲಕ್ಷ ಕೋವಿಡ್ ಸೋಂಕಿತರು ಸಾವನ್ನಪ್ಪಿದರೆ, ನಂತರದ 4 ತಿಂಗಳಲ್ಲಿ 10 ಲಕ್ಷ ಸೋಂಕಿತರು ಸಾವನ್ನಪ್ಪಿದ್ದಾರೆ.

“ಈ ಭಯಾನಕ ಸಂಖ್ಯೆಯ ಹಿಂದೆ ಮರೆಯಲಾಗದ ಹೆಸರುಗಳು ಮತ್ತು ಮುಖಗಳಿವೆ. ಊಟದ ಮೇಜಿನ ಬಳಿ ಸದಾ ಖಾಲಿ ಇರುವ ಆಸನ, ಪ್ರೀತಿಪಾತ್ರರ ಮೌನದೊಂದಿಗೆ ಪ್ರತಿಧ್ವನಿಸುವ ಕೋಣೆ, ಅವರ ನಗು ಸ್ಮರಣೆಯಾಗಿ ಉಳಿದಿದೆ. ಆದರೆ ಜಾಗತಿಕ ಸಂಘಟಿತ ಪ್ರಯತ್ನದ ಕೊರತೆಯಿಂದಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ವಿಜ್ಞಾನ ಯಶಸ್ವಿಯಾಗಿದೆ, ಆದರೆ ಒಗ್ಗಟ್ಟು ವಿಫಲವಾಗಿದೆ” ಎಂದು ವಿಶ್ವಸಂಸ್ಥೆ ಕಾರ್ಯದರ್ಶಿ ಆಂಟೋನಿಯೊ ಗುಟರೆಸ್ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.


ಇದನ್ನೂ ಓದಿ: ಕೊರೊನಾ ಸಮಯದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೇವೆ ಎಂದು ನನಗೆ ತೃಪ್ತಿ ಇದೆ: ಮೋದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...