“ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಮತ್ತು ಅವರ ಬೆಂಬಲಿಗರನ್ನು ಸಿಂಘು ಗಡಿಯಲ್ಲಿ ದೆಹಲಿ ಪೊಲೀಸರು ಬಂಧಿಸಿರುವುದು ಸ್ವೀಕಾರಾರ್ಹವಲ್ಲ” ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.
“ಪರಿಸರ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿ ಶಾಂತಿಯುತವಾಗಿ ಮೆರವಣಿಗೆ ನಡೆಸುತ್ತಿದ್ದ ಸೋನಮ್ ವಾಂಗ್ಚುಕ್ ಮತ್ತು ನೂರಾರು ಲಡಾಕಿಗಳ ಬಂಧನವು ಸ್ವೀಕಾರಾರ್ಹವಲ್ಲ” ಎಂದು ರಾಹುಲ್ ಗಾಂಧಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಲಡಾಖ್‌ನ ಭವಿಷ್ಯಕ್ಕಾಗಿ ನಿಂತಿರುವ ಹಿರಿಯ ನಾಗರಿಕರನ್ನು ದೆಹಲಿಯ ಗಡಿಯಲ್ಲಿ ಏಕೆ ಬಂಧಿಸಲಾಗುತ್ತಿದೆ? ಮೋದಿ ಜೀ, ಈ ‘ಚಕ್ರವ್ಯೂಹ’ ಮುರಿದುಹೋಗುತ್ತದೆ, ಹಾಗೆಯೇ ನಿಮ್ಮ ದುರಹಂಕಾರವೂ ಒಡೆಯುತ್ತದೆ. ನೀವು ಲಡಾಖ್‌ನ ಧ್ವನಿಯನ್ನು ಕೇಳಬೇಕಾಗುತ್ತದೆ” ಎಂದು ಅವರು ಹೇಳಿದರು.
The detention of Sonam Wangchuk ji and hundreds of Ladakhis peacefully marching for environmental and constitutional rights is unacceptable.
Why are elderly citizens being detained at Delhi’s border for standing up for Ladakh’s future?
Modi ji, like with the farmers, this…
— Rahul Gandhi (@RahulGandhi) September 30, 2024
ವಾಂಗ್ಚುಕ್ ಮತ್ತು ಅವರ ಬೆಂಬಲಿಗರನ್ನು ಸೋಮವಾರ ತಡರಾತ್ರಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಗಡಿಯಲ್ಲಿ ಬಿಎನ್‌ಎಸ್‌ನ ಸೆಕ್ಷನ್ 163 ಅನ್ನು ವಿಧಿಸಲಾಗಿದೆ ಎಂದು ದೆಹಲಿ ಪೊಲೀಸರು ಘೋಷಿಸಿದ್ದಾರೆ.
ವಾಂಗ್ಚುಕ್ ಅವರು ತಮ್ಮ ಬಂಧನದ ಸುದ್ದಿಯನ್ನು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
“ನನ್ನನ್ನು ಬಂಧಿಸಲಾಗಿದೆ.. ದೆಹಲಿ ಗಡಿಯಲ್ಲಿ 150 ಪಾದಯಾತ್ರಿಗಳ ಜೊತೆಗೆ, ನೂರಾರು ಪೋಲೀಸ್ ಪಡೆ, ಕೆಲವರು 1,000 ಎಂದು ಹೇಳುತ್ತಾರೆ. 80 ರ ಹರೆಯದ ಅನೇಕ ಹಿರಿಯ ನಾಗರಿಕರು, ಕೆಲವು ಡಜನ್ ಸೇನಾ ಯೋಧರು ನಮ್ಮನ್ನು ಬಂಧಿಸಿದ್ದು, ನಮ್ಮ ಭವಿಷ್ಯ ಏನಾಗುತ್ತದೆ ತಿಳಿದಿಲ್ಲ. ನಾವು ಬಾಪು ಅವರ ಸಮಾಧಿಯತ್ತ ಅತ್ಯಂತ ಶಾಂತಿಯುತ ಮೆರವಣಿಗೆಯಲ್ಲಿದ್ದೆವು.. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ, ಪ್ರಜಾಪ್ರಭುತ್ವದ ತಾಯಿ… ಹೇ ರಾಮ್!” ಎಂದು ಸೋನಮ್ ವಾಂಗ್ಚುಕ್ ಪೋಸ್ಟ್ ಮಾಡಿದ್ದಾರೆ.
I AM BEING DETAINED…
along with 150 padyatris
at Delhi Border, by a police force of 100s some say 1,000.
Many elderly men & women in their 80s and few dozen Army veterans…
Our fate is unknown.
We were on a most peaceful march to Bapu’s Samadhi… in the largest democracy… pic.twitter.com/iPZOJE5uuM— Sonam Wangchuk (@Wangchuk66) September 30, 2024
ಹವಾಮಾನ ಕಾರ್ಯಕರ್ತ ವಾಂಗ್‌ಚುಕ್ ಮತ್ತು ಇತರ ಸ್ವಯಂಸೇವಕರು ತಮ್ಮ ಬೇಡಿಕೆಗಳಿಗೆ ಸಂಬಂಧಿಸಿದಂತೆ ಲಡಾಖ್‌ನ ನಾಯಕತ್ವದೊಂದಿಗೆ ಸಂವಾದವನ್ನು ಪುನರಾರಂಭಿಸುವಂತೆ ಕೇಂದ್ರವನ್ನು ಒತ್ತಾಯಿಸಲು ಲೇಹ್‌ನಿಂದ ನವದೆಹಲಿಗೆ ಕಾಲ್ನಡಿಗೆಯ ಮೆರವಣಿಗೆಯನ್ನು ಕೈಗೊಂಡರು.
ಲಡಾಖ್ ಅನ್ನು ಸಂವಿಧಾನದ ಆರನೇ ಶೆಡ್ಯೂಲ್‌ಗೆ ಸೇರಿಸುವುದು ಅವರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ, ಇದು ಸ್ಥಳೀಯ ಜನಸಂಖ್ಯೆಗೆ ತಮ್ಮ ಭೂಮಿ ಮತ್ತು ಸಾಂಸ್ಕೃತಿಕ ಗುರುತನ್ನು ರಕ್ಷಿಸಲು ಕಾನೂನು ಮಾಡುವ ಅಧಿಕಾರವನ್ನು ನೀಡುತ್ತದೆ.
ಮಾರ್ಚ್ 1 ರಂದು ಲೇಹ್‌ನಲ್ಲಿ ಈ ಯಾತ್ರೆ ಪ್ರಾರಂಭವಾಯಿತು. ಇದಕ್ಕೂ ಮೊದಲು, ಸೆಪ್ಟೆಂಬರ್ 14 ರಂದು ಹಿಮಾಚಲ ಪ್ರದೇಶವನ್ನು ತಲುಪಿದಾಗ, ವಾಂಗ್‌ಚುಕ್ ತಮ್ಮ ಪಾದಯಾತ್ರೆ ಉದ್ದೇಶವನ್ನು ಒತ್ತಿ ಹೇಳಿದರು. “ಐದು ವರ್ಷಗಳ ಹಿಂದೆ ಸರ್ಕಾರವು ನಮಗೆ ನೀಡಿದ ಭರವಸೆಯನ್ನು ನೆನಪಿಸುವ ಕಾರ್ಯಾಚರಣೆಯಲ್ಲಿದ್ದೇವೆ” ಎಂದು ಅವರು ಹೇಳಿದರು.
ಸೋನಮ್ ವಾಂಗ್‌ಚುಕ್ ಅವರು ಲಡಾಖ್‌ನ ರಾಜ್ಯತ್ವಕ್ಕಾಗಿ, ಭಾರತೀಯ ಸಂವಿಧಾನದ ಆರನೇ ಶೆಡ್ಯೂಲ್‌ನಡಿಯಲ್ಲಿ ಸೇರ್ಪಡೆಗೊಳ್ಳಲು ಪ್ರತಿಪಾದಿಸಿದ್ದಾರೆ. ಇದು ಬುಡಕಟ್ಟು ಸಮುದಾಯಗಳಿಗೆ ವಿಶೇಷ ಹಕ್ಕುಗಳನ್ನು ನೀಡುತ್ತದೆ. ಮತ್ತು ಲಡಾಖ್‌ಗೆ ಬಲವಾದ ಪರಿಸರ ರಕ್ಷಣೆಗಳನ್ನು ನೀಡುತ್ತದೆ.
ಈ ಹಿಂದೆ, ಲಡಾಖ್‌ನ ದುರ್ಬಲವಾದ ಪರ್ವತ ಪರಿಸರ ಮತ್ತು ಸ್ಥಳೀಯ ಜನರನ್ನು ರಕ್ಷಿಸುವ ಮಹತ್ವದ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲು ಸೋನಮ್ ವಾಂಗ್‌ಚುಕ್ ಲೇಹ್‌ನಲ್ಲಿ ಒಂಬತ್ತು ದಿನಗಳ ಉಪವಾಸವನ್ನು ಪೂರ್ಣಗೊಳಿಸಿದರು.
ಆಗಸ್ಟ್ 2019 ರಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಜಮ್ಮು ಮತ್ತು ಕಾಶ್ಮೀರವನ್ನು ‘ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್’ ಪ್ರತ್ಯೇಕಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು.
ಇದನ್ನೂ ಓದಿ; ‘ಪ್ರತಿಭೆ ವ್ಯರ್ಥವಾಗಲು ಬಿಡುವುದಿಲ್ಲ..’; ದಲಿತ ವಿದ್ಯಾರ್ಥಿ ಪರವಾಗಿ ಐಐಟಿಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ


