Homeಮುಖಪುಟಜಿಗ್ನೇಶ್‌ ಬಂಧನ; ಗುಜರಾತ್‌ನಾದ್ಯಂತ ಪ್ರತಿಭಟನೆಯ ಕಾವು- ದಲಿತ ಹೋರಾಟಗಾರರ ಮೇಲೂ ಪೊಲೀಸ್‌ ಕಾರ್ಯಾಚರಣೆ

ಜಿಗ್ನೇಶ್‌ ಬಂಧನ; ಗುಜರಾತ್‌ನಾದ್ಯಂತ ಪ್ರತಿಭಟನೆಯ ಕಾವು- ದಲಿತ ಹೋರಾಟಗಾರರ ಮೇಲೂ ಪೊಲೀಸ್‌ ಕಾರ್ಯಾಚರಣೆ

- Advertisement -
- Advertisement -

ಗುಜರಾತ್‌ನ ವಡ್ಗಾಮ್ ಶಾಸಕ, ದಲಿತ ನಾಯಕ ಜಿಗ್ನೇಶ್ ಮೇವಾನಿ ಅವರನ್ನು ಅಸ್ಸಾಂ ಪೊಲೀಸರು ಬನಸ್ಕಾಂತದ ಪಾಲನ್‌ಪುರ ಸರ್ಕ್ಯೂಟ್ ಹೌಸ್‌ನಿಂದ ಬಂಧಿಸಿದ ಒಂದು ದಿನದ ನಂತರ, ಗುಜರಾತ್‌ನಾದ್ಯಂತ ದಲಿತರು ಪ್ರತಿಭಟನೆಗೆ ಇಳಿದಿದ್ದಾರೆ.

ಏಪ್ರಿಲ್ 21 ರಂದು, ಅಹಮದಾಬಾದ್‌ನ ಧೋಲ್ಕಾ ತಾಲೂಕಿನ ಸರೋಡಾ ಗ್ರಾಮದಲ್ಲಿ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್ (ಆರ್‌‌ಡಿಎಎಂ) ಸದಸ್ಯರಾದ ಲಕ್ಷಿಂಬೆನ್ ಮೆಹರಿಯಾ ಮತ್ತು ಹೇಮಾಬೆನ್ ನೇತೃತ್ವದಲ್ಲಿ ದಲಿತ ಮಹಿಳೆಯರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಬಂಧಿಸಿ ಅದೇ ದಿನ ಬಿಡುಗಡೆ ಮಾಡಲಾಯಿತು.

ಅದೇ ದಿನ ಆರ್‌ಡಿಎಎಂನ ದಲಿತ ಕಾರ್ಯಕರ್ತರು ರಾಜ್‌ಕೋಟ್‌ನ ಕೊತ್ತಸಂಗನಿ ತಾಲೂಕಿನಲ್ಲಿ ಪ್ರತಿಭಟನೆಯ ಸಂಕೇತವಾಗಿ ‘ರಸ್ತಾ ರೋಕೋ’ ನಡೆಸಿದರು. ಏಪ್ರಿಲ್ 22 ಮತ್ತು 23ರಂದು ಭಾವನಗರ, ಗಧ್ರಾ, ಗಿರ್ ಸೋಮನಾಥ್‌ನ ಸೂತ್ರಪದ, ಕಚ್‌ನ ರಾಪರ್, ಬನಸ್ಕಾಂತದ ಧನೇರಾ ಮತ್ತು ಬೋಟಾಡ್‌ನಲ್ಲಿ ಪ್ರತಿಭಟನೆಗಳನ್ನು ನಡೆಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಏಪ್ರಿಲ್ 22 ರಂದು ಅಹಮದಾಬಾದ್‌ನ ಯಶೋದಾನಗರ, ಅಸರ್ವ, ಬಾಪುನಗರ ಪ್ರದೇಶಗಳಲ್ಲಿ ದಲಿತ ಕಾರ್ಯಕರ್ತರು ರ್‍ಯಾಲಿ ನಡೆಸಿದ್ದಾರೆ.

“ಜಿಗ್ನೇಶ್ ಮೇವಾನಿಯವರ ಬಂಧನದಿಂದ ದಲಿತರು ನಿರಾಶೆಗೊಂಡಿದ್ದಾರೆ. ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವಿದೆ. ಆದರೆ ರಾಜ್ಯದ ವಿಧಾನಸಭೆಯ ಚುನಾಯಿತ ಸದಸ್ಯರಿಗೆಯೇ ಇಂತಹ ಸ್ಥಿತಿ ಬಂದರೆ ಇತರ ದಲಿತ ಕಾರ್ಯಕರ್ತರ ಪರಿಸ್ಥಿತಿ ಬಂದೆ ಯೋಚಿಸಿದರೂ ಭಯವಾಗುತ್ತದೆ. ಅವರು (ಮೇವಾನಿ) ನಮಗೆ ಶಾಸಕರಿಗಿಂತ ಹೆಚ್ಚು; ಅವರು ನಮ್ಮ ಸಹ ಕಾರ್ಯಕರ್ತ. ಗುಜರಾತ್‌ನ ದಲಿತರು ಮೇವಾನಿ ಬಂಧನದಿಂದ ಮಾತ್ರವಲ್ಲ, ನಮ್ಮ ಆರ್‌‌ಡಿಎಎಂ ಸದಸ್ಯರಾದ ಜಗದೀಶ್ ಚಾವ್ಡಾ ಮತ್ತು ಕಮಲೇಶ್ ಕಟಾರಿಯಾ ಅವರಿಗೆ ಗುಜರಾತ್ ಪೊಲೀಸರು ನೀಡಿರುವ ಕಿರುಕುಳದಿಂದಲೂ ವಿಚಲಿತರಾಗಿದ್ದಾರೆ” ಎಂದು ಆರ್‌‌ಡಿಎಎಂನ ಸದಸ್ಯ ಯಶ್ ಮಕ್ವಾನಾ ‘ನ್ಯೂಸ್‌ಕ್ಲಿಕ್‌’ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.

ಇದನ್ನೂ ಓದಿರಿ: ಜಾಮೀನು ದೊರೆತ ಬಳಿಕ ಮತ್ತೊಮ್ಮೆ ಜಿಗ್ನೇಶ್‌ ಮೇವಾನಿಯ ಬಂಧನ

“ಯಶೋದಾನಗರದಲ್ಲಿ ನಡೆದ ನಮ್ಮ ಪ್ರತಿಭಟನೆಯ ನಂತರ ಸುಮಾರು 150 ಪ್ರತಿಭಟನಾಕಾರರನ್ನು ಸ್ಥಳೀಯ ಪೊಲೀಸರು ಬಂಧಿಸಿದರು. ಕೆಲವು ಗಂಟೆಗಳ ನಂತರ ಬಿಡುಗಡೆ ಮಾಡಿದರು. ಆದರೆ, ಪ್ರತಿಭಟನೆಗಳು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿವೆ. 2016ರ ಊನಾ ಘಟನೆಯ ಬಳಿಕ ಬೀದಿಗಿಳಿದಂತೆ ಮತ್ತೊಮ್ಮೆ ದೊಡ್ಡ ಸಂಖ್ಯೆಯಲ್ಲಿ ದಲಿತರು ಮತ್ತೆ ಹೋರಾಟಕ್ಕೆ ಧುಮುಕಬಹುದು” ಎಂದು ಮಕ್ವಾನಾ ಎಚ್ಚರಿಸಿದ್ದಾರೆ.

PC: NewsClick

ಮೆವಾನಿಯ ಆಪ್ತ ಸಹಾಯಕ ಮತ್ತು ಆರ್‌ಡಿಎಎಂ ಸದಸ್ಯ ಕಮಲೇಶ್ ಕಟಾರಿಯಾ ಅವರನ್ನು ಯಶೋದಾನಗರದಲ್ಲಿ ನಡೆದ ಪ್ರತಿಭಟನೆಯ ನಡುವೆ ಅಹಮದಾಬಾದ್ ಕ್ರೈಂ ಬ್ರಾಂಚ್ ವಶಕ್ಕೆ ಪಡೆದಿತ್ತು. ಅದೇ ಸಮಯದಲ್ಲಿ, ಅಹಮದಾಬಾದ್‌ನ ರಾಖಿಯಾಲ್‌ನಲ್ಲಿರುವ ಕಮಲೇಶ್‌ ಅವರ ಮನೆಯನ್ನು ಪೊಲೀಸರ ತಂಡ ಶೋಧಿಸಿದೆ.

“ಮಧ್ಯಾಹ್ನ 3.30ರ ಸುಮಾರಿಗೆ ನನ್ನ ಮನೆಗೆ ಪೊಲೀಸರು ಬಂದಿದ್ದಾರೆ ಎಂದು ನನ್ನ ಹೆಂಡತಿ ಕರೆ ಮಾಡಿ ನನಗೆ ತಿಳಿಸಿದಳು. ಆದರೆ ನಾನು ಮನೆಗೆ ತಲುಪುವ ಮೊದಲೇ ನನ್ನನ್ನು ಪೋಲೀಸರು ಅಸರ್ವಾ ಬಳಿ ಕರೆದೊಯ್ದರು. ಅದೇ ರಾತ್ರಿ ನನ್ನನ್ನು ಬಿಡುಗಡೆ ಮಾಡಲಾಯಿತು. ನನ್ನ ಸುರಕ್ಷತೆಯನ್ನು ನೆನೆಸಿಕೊಂಡು ನನ್ನ ಮನೆಯವರು ಹೆದರುತ್ತಿದ್ದರು. ಪೊಲೀಸರು ನನ್ನ ಮನೆಯ ಪ್ರತಿಯೊಂದು ಮೂಲೆಯನ್ನು ಪರಿಶೀಲಿಸಿದ್ದಾರೆ ಎಂದು ನನಗೆ ತಿಳಿಸಲಾಯಿತು. ಗೋಡೆಗಳು ಟೊಳ್ಳಾಗಿವೆಯೇ ಎಂದು ಪರೀಕ್ಷಿಸಲು ಅವರು ಗೋಡೆಗಳನ್ನು ಬಡಿದರು, ಹಾಸಿಗೆಯನ್ನು ಹೊರತೆಗೆದರು. ಸ್ನಾನಗೃಹ, ಪಾತ್ರೆಗಳು ಮತ್ತು ನಮ್ಮ ಮಕ್ಕಳ ಶಾಲಾ ಬ್ಯಾಗ್‌ಗಳನ್ನು ಸಹ ಬಿಡದೆ ಪರಿಶೀಲಿಸಿದರು” ಎಂದು ಕಮಲೇಶ್ ಕಟಾರಿಯಾ ‘ನ್ಯೂಸ್‌ಕ್ಲಿಕ್‌’ಗೆ ತಿಳಿಸಿದ್ದಾರೆ.

ಅಹಮದಾಬಾದ್ ಕ್ರೈಂ ಬ್ರಾಂಚ್ ಆವರಣದಲ್ಲಿ ನಾನು ಕುಳಿತಿರುವಾಗಲೇ ಅವರು ನನ್ನ ಮೊಬೈಲ್ ವಶಕ್ಕೆ ಪಡೆದಿದ್ದಾರೆ ಎಂದು ಕಟಾರಿಯಾ ಮಾಹಿತಿ ಹಂಚಿಕೊಂಡಿದ್ದಾರೆ. ಪೊಲೀಸರ ಮತ್ತೊಂದು ತಂಡವು ಅದೇ ಸಮಯದಲ್ಲಿ, ಅದೇ ದಿನ ಮೇಘನಿನಗರದಲ್ಲಿರುವ ಜಗದೀಶ್ ಚಾವ್ಡಾ ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಿದೆ.

ಇದನ್ನೂ ಓದಿರಿ: ಗ್ರೌಂಡ್‌ ರಿಪೋರ್ಟ್: ಪೆದ್ದನಹಳ್ಳಿಯಲ್ಲಿ ದಲಿತರ ಹತ್ಯೆ; ನೊಂದ ಕುಟುಂಬಗಳ ನೋವಿನ ಕಥೆ ಇದು

“ನಾನು ಕೆಲವು ಕೆಲಸದ ನಿಮಿತ್ತ ನೆರೆಹೊರೆಯಲ್ಲಿದ್ದೆ. ನಮ್ಮ ಮನೆಗೆ ಸುಮಾರು 18 ರಿಂದ 20 ಪೊಲೀಸ್ ಸಿಬ್ಬಂದಿ ಬಂದಿದ್ದಾರೆ ಎಂದು ನನ್ನ ಸಹೋದರ ನಮಗೆ ತಿಳಿಸಲು ಕರೆ ಮಾಡಿದ. ನನ್ನ ಮನೆಗೆ ಬರುವ ಪೊಲೀಸರ ದೊಡ್ಡ ಸಂಖ್ಯೆಯನ್ನು ನೋಡಿ ನನ್ನ ಕುಟುಂಬ ಮತ್ತು ನೆರೆಹೊರೆಯವರು ಭಯಗೊಂಡರು. ಪೊಲೀಸರು ನನ್ನ ಮನೆಯಲ್ಲಿ ಹುಡುಕಾಟ ನಡೆಸಿದರು. ಸುಮಾರು 40 ನಿಮಿಷಗಳ ಕಾಲ ನಾವು ಕೇಳಿದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಜಿಗ್ನೇಶ್ ಮೇವಾನಿ, ಕಮಲೇಶ್ ಕಟಾರಿಯಾ ಮತ್ತು ನನ್ನ ಹೆಸರನ್ನು ಹೊಂದಿರುವ ಸರ್ಚ್‌ ಆರ್ಡರ್‌‌ ಮಾತ್ರ ನನಗೆ ತೋರಿಸಲಾಯಿತು. ಅವರು ನನ್ನ ಚಂದ್‌ಖೇಡಾದ ಮನೆಯ ಪ್ರತಿಯೊಂದು ಮೂಲೆಯನ್ನು ಹುಡುಕಿದರು. ಕಂಪ್ಯೂಟರ್ ವಶಪಡಿಸಿಕೊಂಡರು” ಎಂದು ಜಗದೀಶ್ ಚಾವ್ಡಾ ಮಾಹಿತಿ ನೀಡಿದ್ದಾರೆ.

“ಅದಾದ ನಂತರ, ಅವರು ನನ್ನನ್ನು ಅಹಮದಾಬಾದ್‌ನ ಗಾಯಕ್ವಾಡ್ ಹವೇಲಿಯಲ್ಲಿರುವ ಅಪರಾಧ ವಿಭಾಗದ ಆವರಣಕ್ಕೆ ಕರೆದೊಯ್ದರು. ನನ್ನನ್ನು ಕತ್ತಲೆಯ ಕೋಣೆಯಲ್ಲಿ ದೀರ್ಘಕಾಲ ಕೂರಿಸಿದರು. ಸುಮಾರು ಒಂದು ಗಂಟೆಯ ನಂತರ ಕೆಲವು ಪೊಲೀಸ್ ಸಿಬ್ಬಂದಿ ಪ್ರಶ್ನೆಗಳನ್ನು ಕೇಳಿದರು. ಮೇವಾನಿಯವರ ಜೊತೆಗಿನ ನನ್ನ ಒಡನಾಟದ ಬಗ್ಗೆ ವಿಚಾರಿಸಿದರು. ಮೊಬೈಲ್‌ ವಶಕ್ಕೆ ಪಡೆದುಕೊಂಡರು” ಎಂದು ತಿಳಿಸಿದ್ದಾರೆ.

ತಮ್ಮ ಮೊಬೈಲ್ ಫೋನ್‌ಗಳು, ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ವಶಪಡಿಸಿಕೊಂಡಿರುವುದನ್ನು ಅಂಗೀಕರಿಸುವ ದಾಖಲೆಗಳಿಗೆ ಕಟಾರಿಯಾ ಮತ್ತು ಚಾವ್ಡಾ ಇಬ್ಬರೂ ಸಹಿ ಹಾಕಬೇಕಾಯಿತು. ಸುಮಾರು ಒಂದು ತಿಂಗಳ ನಂತರ ಫೋನ್‌ಗಳನ್ನು ಅಸ್ಸಾಂನಿಂದ ವಾಪಸ್‌ ಪಡೆಯುವಂತೆ ಸೂಚಿಸಲಾಗಿದೆ.

“ನಾಳೆ, ನಾವು ಅಹಮದಾಬಾದ್‌ನಲ್ಲಿ ಮತ್ತೊಂದು ಪ್ರತಿಭಟನೆಯನ್ನು ಯೋಜಿಸುತ್ತಿದ್ದೇವೆ. ನಾವು ವಡಾಜ್‌ನಲ್ಲಿರುವ ಕಲೆಕ್ಟರ್ ಕಚೇರಿಗೆ ಮೆರವಣಿಗೆ ಮಾಡುತ್ತೇವೆ, ಧರಣಿ ನಡೆಸುತ್ತೇವೆ” ಎಂದು ಯಶ್ ಮಕ್ವಾನಾ ತಿಳಿಸಿದ್ದಾರೆ.

ಜಾಮೀನು ದೊರೆತ ಬಳಿಕವೂ ಪೊಲೀಸರು ಮತ್ತೆ ಜಿಗ್ನೇಶ್ ಅವರನ್ನು ಬಂಧಿಸಿದ್ದಾರೆ. ಗುಜರಾತ್‌ನಲ್ಲಿ ದಲಿತ ಸಂಘಟನೆಗಳು ಬೃಹತ್‌ ಪ್ರತಿಭಟನೆಗೆ ಮುಂದಾಗಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...