370ನೇ ವಿಧಿಯನ್ನು ರದ್ದುಗೊಳಿಸಿ ಈ ಹಿಂದಿನ ಜಮ್ಮು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಕೆಳದರ್ಜೆಗಿಳಿಸಲು ಪಿಡಿಪಿಯ ಮೆಹಬೂಬಾ ಮುಫ್ತಿ ಮತ್ತು ಅವರ ದಿವಂಗತ ತಂದೆ ಮುಫ್ತಿ ಮೊಹಮ್ಮದ್ ಸಯೀದ್ ಕಾರಣ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಆರೋಪಿಸಿದೆ. 370ನೇ ವಿಧಿ
ಪಿಡಿಪಿಯನ್ನು ಟೀಕಿಸಿದ ಎನ್‌ಸಿ ನಾಯಕ, ಶಾಸಕ ತನ್ವೀರ್ ಸಾದಿಕ್ ಅವರು, ಮೆಹಬೂಬಾ ಮತ್ತು ಅವರ ದಿವಂಗತ ತಂದೆಯಿಂದಾಗಿ ಆಗಸ್ಟ್ 5, 2019ರ ಘಟನೆ ಸಂಭವಿಸಿತು ಮತ್ತು ಜಮ್ಮು ಕಾಶ್ಮೀರ “ತನ್ನ ಗುರುತನ್ನು ಕಳೆದುಕೊಂಡಿತು” ಎಂದು ಹೇಳಿದ್ದಾರೆ.
ಆಗಸ್ಟ್ 5, 2019 ರಂದು ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತ್ತು. ಜೊತೆಗೆ ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಕೆಳದರ್ಜೆಗಿಳಿಸಿ ವಿಭಜಿಸಿತು. ಜಮ್ಮು ಕಾಶ್ಮೀರವನ್ನು ವಿಧಾನಸಭೆಯಿರುವ ಮತ್ತು ಲಡಾಖ್ ಅನ್ನು ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು. 370ನೇ ವಿಧಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪಿಡಿಪಿ 2014 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಿತ್ತು ಆದರೆ ಫಲಿತಾಂಶಗಳು ಅತಂತ್ರ ಸದನವನ್ನು ಸೃಷ್ಟಿಸಿದ ನಂತರ ಪಕ್ಷವೂ ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿತ್ತು. ಅದಾಗ್ಯೂ, ಸ್ವಲ್ಪ ಕಾಲದಲ್ಲೆ ಬಿಜೆಪಿಯು ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡ ಕಾರಣ ಸರ್ಕಾರ ಪತನಗೊಂಡಿತ್ತು.
“ಆಗಸ್ಟ್ 5, 2019ರ ಘಟನೆ ನಡೆಯದಿದ್ದರೆ, ಬಹುಶಃ ನಾವು ನಮ್ಮ ರಾಜ್ಯತ್ವವನ್ನು ಕಳೆದುಕೊಳ್ಳುತ್ತಿರಲಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಇಲಾಖೆ ಚುನಾಯಿತ ಸರ್ಕಾರದ ಜೊತೆ ಇರುತ್ತಿತ್ತು” ಎಂದು ಎನ್‌ಸಿ ಶಾಸಕ ತನ್ವೀರ್ ಹೇಳಿದ್ದಾರೆ.
“ಜಮ್ಮು ಕಾಶ್ಮೀರದಲ್ಲಿ ಚುನಾಯಿತ ಸರ್ಕಾರವು ಪ್ರಸ್ತುತ ಕಾನೂನು ಮತ್ತು ಸುವ್ಯವಸ್ಥೆಯನ್ನು ನೇರವಾಗಿ ನಿಭಾಯಿಸಲು ಸಾಧ್ಯವಿಲ್ಲ. ಏಕೆಂದರೆ ಅದರ ನಿಯಂತ್ರಣ ಲೆಫ್ಟಿನೆಂಟ್-ಗವರ್ನರ್ ಅವರ ಕೈಯಲ್ಲಿದೆ. ಇದಕ್ಕೆ ಕಾರಣ ಪಿಡಿಪಿ” ಎಂದು ಅವರು ಹೇಳಿದ್ದಾರೆ.
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಂತರ, ವಿಶೇಷವಾಗಿ ಎನ್‌ಸಿ ಬಿಜೆಪಿಗೆ ಹತ್ತಿರವಾಗುತ್ತಿದೆ ಎಂಬ ಊಹಾಪೋಹವೆದ್ದಿದೆ. ಆದಾಗ್ಯೂ, ಇದನ್ನು ಅಲ್ಲಗೆಳೆದಿರುವ ತನ್ವೀರ್, “ಪಕ್ಷವು ಬಿಜೆಪಿ ವಿರುದ್ಧ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜನರ ಆದೇಶವನ್ನು ಪಡೆದುಕೊಂಡಿತು. ನಾವು ಬಿಜೆಪಿಯ ನೀತಿಗಳನ್ನು ವಿರೋಧಿಸುತ್ತೇವೆ” ಎಂದು ಹೇಳಿದ್ದಾರೆ.
ಸೋಮವಾರ ದೆಹಲಿಯಲ್ಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಗೃಹ ಸಚಿವ ಅಮಿತ್ ಶಾ ನಡುವಿನ ಸಭೆಗೆ ಸಂಬಂಧಿಸಿದಂತೆ ಎರಡೂ ಪಕ್ಷಗಳ ನಡುವಿನ ನಿಕಟತೆ ಇತ್ತು. ತನ್ವೀರ್, “ಗೃಹ ಸಚಿವರೊಂದಿಗಿನ ಸಭೆಗೆ ಅವರಿಗೆ (ಒಮರ್) ಯಾವುದೇ ವ್ಯವಸ್ಥೆಯ ಅಗತ್ಯವಿದೆಯೇ?” ಎಂದು ಕೇಳಿದ್ದಾರೆ.
ಇದನ್ನೂಓದಿ: ದೆಹಲಿಯಲ್ಲಿ ಕುಳಿತು ಗುಂಪು ಹಲ್ಲೆ, ಗೋರಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ – ಸುಪ್ರೀಂಕೋರ್ಟ್
ದೆಹಲಿಯಲ್ಲಿ ಕುಳಿತು ಗುಂಪು ಹಲ್ಲೆ, ಗೋರಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ – ಸುಪ್ರೀಂಕೋರ್ಟ್


