Homeಮುಖಪುಟಒಳಮೀಸಲಾತಿಯೆಂಬುದು ಅಣ್ಣನ ಪಾಲು ಅಣ್ಣನಿಗೆ, ತಮ್ಮನ ಪಾಲು ತಮ್ಮನಿಗೆ ಎಂಬ ಸರಳ ಸೂತ್ರ - ಅಂಬಣ್ಣ...

ಒಳಮೀಸಲಾತಿಯೆಂಬುದು ಅಣ್ಣನ ಪಾಲು ಅಣ್ಣನಿಗೆ, ತಮ್ಮನ ಪಾಲು ತಮ್ಮನಿಗೆ ಎಂಬ ಸರಳ ಸೂತ್ರ – ಅಂಬಣ್ಣ ಅರೋಲಿಕರ್

ಬಲಾಢ್ಯರು ಹಾಗೂ ಬಡಕಲು ವ್ಯಕ್ತಿಗಳ ನಡುವೆ ಸ್ಪರ್ಧೆಗೆ ಅವಕಾಶ ನೀಡಿದರೆ ಅಂತಿಮವಾಗಿ ಅನ್ಯಾಯವಾಗುವುದು ಮಾತ್ರ ಬಡಕಲು ವ್ಯಕ್ತಿಗಳಿಗೆ ಎಂಬ ಸರಳ ಸತ್ಯವು ಬಹುತೇಕರಿಗೆ ಅರ್ಥವಾಗದಿರುವುದು ಈ ದೇಶದ ದೌರ್ಭಾಗ್ಯವೇ ಸರಿ.

- Advertisement -
- Advertisement -

ಸ್ವಾತಂತ್ರ್ಯ ನಂತರದ 70 ವರ್ಷಗಳ ಅವಧಿಯಲ್ಲಿ ಸರಿ ಸುಮಾರು ಮೂವತ್ತೈದು ವರ್ಷಗಳ ಕಾಲ, ಪರಿಶಿಷ್ಟ ಜಾತಿಗಳಿಗೆ ಮೀಸಲಿಟ್ಟ 15% ಮೀಸಲಾತಿಯನ್ನು ಆದ್ಯತೆಯನುಸಾರ ಬಲಹೀನರಿಗೆ ಹಾಗೂ ಅವಕಾಶ ವಂಚಿತರಿಗೆ ಅವರವರ ಆರ್ಥಿಕ ಅಸಮಾನತೆಗಳ ಆಧಾರದ ಮೇಲೆ, ವಿದ್ಯೆ ಹಾಗೂ ಉದ್ಯೋಗವಕಾಶಗಳಿಗೆ ಮಾತ್ರ ಉಪಯುಕ್ತವಾಗುವಂತೆ ಹಂಚುವಂತೆ ಹೋರಾಡುತ್ತಿರುವುದೇ ಬಹುದೊಡ್ಡ ಅಪರಾಧವೆಂಬಂತೆ ಚಿತ್ರೀಕರಿಸಲಾಗುತ್ತಿದೆ. ಬಹುತೇಕ ಎಲ್ಲಾ ನ್ಯಾಯಪಾಲಕರು ಹಾಗೂ ಬುದ್ಧಿಜೀವಿಗಳೆನಿಸಿಕೊಂಡ ಅಕ್ಷರಸ್ಥರು ತಮ್ಮ ತಮ್ಮ ಅವಗಾಹನೆಗೆ ತಕ್ಕಂತೆ ವಿಶ್ಲೇಷಣೆ ಮಾಡುತ್ತಾ, ಹಸಿದು ಹೌಹಾರಿದ ಸಮುದಾಯಗಳ ಮೇಲೆ ಅತಿಕ್ರಮಣ ನಡೆಸಿರುವುದು ಬಿಟ್ಟರೆ, ಆ ಸಮುದಾಯಗಳ ಹಸಿವಿನ ಬೇಗುದಿಯನ್ನು ಯಾವ ರೀತಿಯಾಗಿ ಶಮನ ಮಾಡಬೇಕೆಂಬುದರ ಬಗ್ಗೆ ಚಿಂತಿಸಲೇ ಇಲ್ಲ. ಇದು ‘ಸೋತವರ ಮೇಲೆ ಬಲಿತವರು ಬಿದ್ದರು’ ಎಂಬಂತಾಗಿದೆ. ಇದು ಈ ದೇಶದ ಪ್ರಗತಿಪರ, ಜೀವಪರ, ಜನಪರತೆಯ ಕಾಳಜಿಗೆ ಬಹುದೊಡ್ಡ ನಿದರ್ಶನವಾಗಿದೆ.

ಬಹುಸಂಖ್ಯಾತ ಅಸ್ಪೃಶ್ಯ ಸಮುದಾಯಗಳು ಕಳೆದ 35 ವರ್ಷಗಳಲ್ಲಿ ಸತತವಾಗಿ ಹೋರಾಡಿದ ಪರಿಣಾಮದಿಂದ ಕಾಂಗ್ರೆಸ್ ಸರ್ಕಾರವು ನ್ಯಾಯಮೂರ್ತಿ ಎ.ಜೆ ಸದಾಶಿವರವರ ಏಕಸದಸ್ಯ ಆಯೋಗವನ್ನು ನೇಮಿಸಿದರೆ, ಬಿಜೆಪಿ ಸರ್ಕಾರವು ಆಯೋಗದ ಸಮೀಕ್ಷೆಗೆ ಅನುದಾನವನ್ನು ನೀಡಿದೆ. ಇನ್ನು ಜೆಡಿಎಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವುದಾಗಿ ಲಿಖಿತ ಭರವಸೆಯನ್ನು ನೀಡಿದೆ. ಹೀಗಿರುವಾಗ ಈ ರಾಜ್ಯದ 224 ಶಾಸಕರು ಈ ಆಯೋಗದ ಶಿಫಾರಸ್ಸುಗಳನ್ನು ಸರ್ವಾನುಮತದಿಂದ ಅಂಗೀಕರಿಸಿ ಜಾರಿಗೊಳಿಸಲು ಯಾವ ಸೀಮೆಯ ಸಾಮಾಜಿಕ ನ್ಯಾಯ ಅಡ್ಡ ಬರುತ್ತದೆಯೋ? ಉತ್ತರಿಸಬೇಕಾದ ಜವಾಬ್ದಾರಿ ಸರ್ವ ಪಕ್ಷಗಳಿಗೆ ಸೇರಿದ ವಿಚಾರವಾಗಿದೆ.

ಇದನ್ನೂ ಓದಿ: ಒಳಮೀಸಲಾತಿಯ ಕುರಿತು ಡಾ. ಬಿ.ಆರ್. ಅಂಬೇಡ್ಕರ್‌ರವರ ಆಶಯ ಎನು? – ಡಾ.ನರಸಿಂಹ ಗುಂಜಹಳ್ಳಿ

ಹೌದು ಇಂತಹ ಅಭಿಪ್ರಾಯವು ಒಂದಷ್ಟು ಜನರಿಗೆ ಅತಿಶಯೋಕ್ತಿ ಎನಿಸಿದರೂ ಅಕ್ಷರಶಃ ಅಸ್ಪೃಶ್ಯ ಸಮುದಾಯಗಳ ಪಾಲಿಗೆ ಹಾಗೂ ಅವಕಾಶ ವಂಚಿತರಿಗೆ ಅತಿ ಹತ್ತಿರವಾದ ಅನುಭವದ ಮಾತಾಗಿದೆ. ದೇಶದ ಯಾವುದೇ ರಾಜ್ಯಗಳಲ್ಲೂ ಅಸ್ಪೃಶ್ಯ ಸಮುದಾಯಗಳ ಪಟ್ಟಿಯಲ್ಲಿ ಅಸ್ಪೃಶ್ಯೇತರರು ಸೇರ್ಪಡೆಯಾಗದೆ ಕರ್ನಾಟಕದಲ್ಲಿ ಮಾತ್ರ ಇದು ಸಾಧ್ಯವಾಗಿದೆ. ಸ್ಪೃಶ್ಯರು ಸಹ ಆರ್ಥಿಕವಾಗಿ ಅತ್ಯಂತ ಸಬಲರು ಎನ್ನುತ್ತಿಲ್ಲ, ಆದರೆ ಬಲಾಢ್ಯರು ಹಾಗೂ ಬಡಕಲು ವ್ಯಕ್ತಿಗಳ ನಡುವೆ ಸ್ಪರ್ಧೆಗೆ ಅವಕಾಶ ನೀಡಿದರೆ ಅಂತಿಮವಾಗಿ ಅನ್ಯಾಯವಾಗುವುದು ಮಾತ್ರ ಬಡಕಲು ವ್ಯಕ್ತಿಗಳಿಗೆ ಎಂಬ ಸರಳ ಸತ್ಯವು ಅತ್ತ ಸರ್ಕಾರ ಹಾಗೂ ಸರ್ವೋಚ್ಚ ನ್ಯಾಯಾಲಯಗಳಿಗೆ ಇತ್ತ ಸಾಮಾಜಿಕ ನ್ಯಾಯದ ಪರ ಶತಮಾನಗಳ ಕಾಲ ಬೊಗಳೆ ಬಿಡುವ ಬುದ್ಧಿವಂತರಿಗೂ ಅರ್ಥವಾಗದೆ ಇರುವುದು ಈ ದೇಶದ ದೌರ್ಭಾಗ್ಯವೇ ಸರಿ. ಆರ್ಥಿಕವಾಗಿ ಬಲಹೀನರಾದವರಿಗೆಲ್ಲಾ ಮೀಸಲಾತಿಯನ್ನು ನೀಡಿದಂತೆ ಸ್ಪೃಶ್ಯ ಸಮುದಾಯಗಳಿಗೂ ಅವರ ಆರ್ಥಿಕ, ಶೈಕ್ಷಣಿಕ ಆದ್ಯತೆಗಳ ಅನುಸಾರ ವಿಶೇಷವಾದ ಮೀಸಲಾತಿಯನ್ನು ನೀಡಲು ಯಾರ ಅಭ್ಯಂತರವೂ ಇಲ್ಲ. ಆದರೆ ಇಲ್ಲಿ ಆಗಿರುವುದೆ ಬೇರೆ – ರಾಜಕೀಯ ಪಕ್ಷಗಳು ತಮ್ಮ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಡಜನ್‍ಗೂ ಅಧಿಕ ಜಾತಿಗಳನ್ನು ತಮ್ಮ ಮನಸೋ ಇಚ್ಚೆ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಮೂಲಕ ಮೂಲ ಪರಿಶಿಷ್ಟರಿಗೆ ಆಗಬಹುದಾದ ಸಹಜ ಅನ್ಯಾಯದ ಅಪಾಯವನ್ನು ಲೆಕ್ಕಿಸದೆ ಇರುವುದು ದುರಂತ.

ಈ ಪ್ರಕ್ರಿಯೆ ಯಾವುದೇ ಪ್ರಗತಿಪರ ಕಾಳಜಿಯುಳ್ಳ ಮತಿವಂತರಿಗೆ ಅರ್ಥವಾಗದೇ ಇರುವುದು ಅತ್ಯಂತ ಘೋರ ಅಪರಾಧವೆಂದೆ ಹೇಳಬೇಕಿದೆ. ಇದ್ಯಾವುದು ಕಾನೂನಿನ ಪ್ರಕಾರ ಅಪರಾಧವಲ್ಲ. ಆದರೆ ಇರುವ ಮೀಸಲಾತಿಯನ್ನು ಕಟ್ಟಕಡೆಯ ಜನರಿಗೆ ಪ್ರಾಮಾಣಿಕವಾಗಿ ಹಂಚಬೇಕೆಂಬ ಪರಿಕಲ್ಪನೆಯನ್ನೇ ಸಂವಿಧಾನಬಾಹಿರವೆನ್ನುವ ಆಷಾಡಭೂತಿತನ ಮಾತ್ರ ಮನುವಾದ, ಕೋಮವಾದಕ್ಕಿಂತಲೂ ಕ್ರ್ರೂರತನದ್ದಾಗಿದೆ. ಇನ್ನು ಮೇಲ್ಜಾತಿಗಳಿಗೆ ಮೀಸಲಾತಿಯ ಹೆಚ್ಚಳವಾಗುವುದು ಇರಲಿ, ಎಲ್ಲಾ ವಲಯಗಳು ಕಾರ್ಪೋರೇಟ್ ಕಬಂದಬಾಹುಗಳಿಗೆ ಸಿಲುಕಿ ಖಾಸಗೀಕರಣವಾಗಿರುವುದಾಗಲಿ ಇವರಿಗೆ ಅಪಾಯಕಾರಿ ಎನಿಸುವುದಿಲ್ಲ. ಹಳ್ಳಿಗಾಡಿನ, ಅನಕ್ಷರಸ್ಥ ಸಮುದಾಯಗಳು ನಡೆಸುವ ಹಳ್ಳಿಕಟ್ಟೆ ಪಂಚಾಯ್ತಿಯಲ್ಲಿ ಬಗೆಹರಿಯಬಹುದಾದ ಪಿತ್ರಾರ್ಜಿತ ಅಸ್ತಿಯ ಹಂಚಿಕೆಯಂತೆ ಅಣ್ಣನ ಪಾಲು ಅಣ್ಣನಿಗೆ, ತಮ್ಮನ ಪಾಲು ತಮ್ಮನಿಗೆ ಎಂಬ ಸರಳ ಸೂತ್ರವು ದೆಹಲಿ ಹಂತದ ಪಂಚಾಯಿತಿಯಲ್ಲಿ ಕಳೆದ 70 ವರ್ಷಗಳಿಂದಲೂ ಬಗೆಹರಿಯದೆ, ಅನಿರ್ಧಿಷ್ಟ ಕಾಲದವರೆಗೂ ವಾದ ವಿವಾದಗಳಲ್ಲೇ ಕಾಲಹರಣವಾಗುತ್ತಿದೆ. ಇದು ಎರಡು ತಲೆಮಾರುಗಳ ಕೋಟ್ಯಾಂತರ ಜನಗಳ ವಿದ್ಯೆ ಹಾಗೂ ಉದ್ಯೋಗದ ವಂಚನೆಗೆ ಕಾರಣವಾಗಿದೆ.

ಪರಿಶಿಷ್ಟ ಜಾತಿಗಳು ಇದುವರೆಗೂ ಎತ್ತಿರುವ ಪ್ರಶ್ನೆ ಮೀಸಲಾತಿ ಹೆಚ್ಚಳವಾಗಬೇಕಂದಲ್ಲ. ಈಗಾಗಲೇ ಅಸ್ಪೃಶ್ಯರಲ್ಲೇ ಅತೀ ಬುದ್ಧಿವಂತರಾದ ಪ್ರಭಾವಿ ರಾಜಕಾರಣಿಗಳು ಹಾಗೂ ಅಕ್ರಮವಾಗಿ ನುಸುಳಲ್ಪಟ್ಟ ಅಸ್ಪೃಶ್ಯೇತರರು ಇರುವ ಎಲ್ಲಾ ಅವಕಾಶಗಳನ್ನು ಬಾಚಿ ತಿಂದು ಬಲಾಢ್ಯರಾಗಿ ಮೆರೆಯುತ್ತಿರುವಾಗ, ಇದ್ದ ಬಿದ್ದ ಹಳಸಲು ಅನ್ನವನ್ನಾದರು ನಮ್ಮ ಹಸಿದ ಹೊಟ್ಟೆಗೆ ನೀಡಿ ಎಂದು ಈ ನೆಲದ ಸಫಾಯಿ ಕರ್ಮಚಾರಿಗಳು ಹಾಗೂ ಮಲ ಬಳೆಯುವ ಪೌರಕಾರ್ಮಿಕರು ಕಳೆದ ಮೂರು ದಶಕಗಳಿಂದ ಅಂಗಲಾಚಿ ಪರಿತಪಿಸುತ್ತಿದ್ದರೂ ಯಾವ ಸರ್ಕಾರಗಳಿಗೂ ಹಾಗೂ ಯಾವ ನ್ಯಾಯಾಲಯಗಳಿಗೂ ಕಿಂಚಿತ್ತೂ ಅಲುಗಾಡುತ್ತಿಲ್ಲ. ಇದರ ಹಿಂದೆ ಅಸ್ಪೃಶ್ಯತೆಯು ಇನ್ನು ಹಲವಾರು ಶತಮಾನಗಳ ಕಾಲ ಅಸ್ತಿತ್ವದಲ್ಲಿರಬೇಕೆಂಬ ಉದ್ದೇಶ ಅಡಗಿದೆ ಎಂದು ಎನಿಸುತ್ತಿದೆ. ಕಸ ಬಳಿಯುವವರು ಕಾಲಾನುಕಾಲದಿಂದ ಕಸಬಳಿಯುತ್ತಲೇ ಇರಬೇಕೆಂಬ ಶ್ರೇಣಿಕೃತ ವ್ಯವಸ್ಥೆಯ ಹುನ್ನಾರದ ಮುಂದುವರೆದ ಭಾಗವೇ ಇದು ಎಂಬುದನ್ನು ಈ ದೇಶದ ಪ್ರಜಾತಂತ್ರವಾದಿಗಳು ಹಾಗೂ ಪ್ರಗತಿಪರವಾದದ ಪೊರೆ ಆವರಿಸಿದ ಅಣ್ಣಂದಿರು ಅರ್ಥಮಾಡಿಕೊಂಡರೆ, ಅರೆಗಳಿಗೆಯಲ್ಲಿ ಹಸಿದ ಜನಗಳಿಗೆ ಹಳಸಿದ ಅನ್ನವನ್ನಾದರೂ ನೀಡಿ, ಅರೆ ಜೀವದಲ್ಲಿರುವ ಅಸಂಖ್ಯಾತ ಅಸ್ಪೃಶ್ಯ ಸಮುದಾಯಗಳನ್ನು ಅರೆಕಾಲಿಕವಾಗಿಯಾದರೂ ಐಸಿಯುನಿಂದ ಜನರಲ್ ವಾರ್ಡ್‍ಗೆ ಸ್ಥಳಾಂತರಿಸಬಹುದಾಗಿದೆ ಎಂದು ನಂಬಿದ್ದೇನೆ.

ಅಂಬಣ್ಣ ಅರೋಲಿಕರ್

(ತಮ್ಮ ಹೋರಾಟದ ಹಾಡುಗಳ ಗಾಯನದಿಂದ ಪ್ರಖ್ಯಾತವಾಗಿದ್ದ ಅಂಬಣ್ಣ ಅರೋಲಿಕರ್ ಈಗ ಮಾದಿಗ ಮೀಸಲಾತಿ ಹೋರಾಟದ ರಾಜ್ಯ ಮಟ್ಟದ ನಾಯಕರಲ್ಲೊಬ್ಬರು. ರಾಯಚೂರಿನಲ್ಲಿ ಜನಬಲ ಟೈಮ್ಸ್ ದಿನಪತ್ರಿಕೆಯನ್ನು ನಡೆಸುತ್ತಿರುವ ಅಂಬಣ್ಣ ಕಳೆದ ಮೂರು ದಶಕಗಳಿಗಿಂತ ಹೆಚ್ಚು ಸಮಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಕ್ರಿಯಾಶೀಲ ವ್ಯಕ್ತಿ.)


ಇದನ್ನೂ ಓದಿ: ಒಳ ಮೀಸಲಾತಿ: ಕಣ್ಣ ಗಾಯವನರಿಯುವ ಕ್ರಮ – ಹುಲಿಕುಂಟೆ ಮೂರ್ತಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...