Homeಕರ್ನಾಟಕಸುಷ್ಮಾ ಸ್ವರಾಜ್‍ ರಿಗೊಂದು ಕಂಬನಿ... : ಜೊತೆಗೆ ಸುಷ್ಮಾ ಸ್ವರಾಜ್ ಸುತ್ತ ಹೆಣೆಯಲ್ಪಟ್ಟ ಕತೆಗಳು

ಸುಷ್ಮಾ ಸ್ವರಾಜ್‍ ರಿಗೊಂದು ಕಂಬನಿ… : ಜೊತೆಗೆ ಸುಷ್ಮಾ ಸ್ವರಾಜ್ ಸುತ್ತ ಹೆಣೆಯಲ್ಪಟ್ಟ ಕತೆಗಳು

- Advertisement -
- Advertisement -

ಆರು ಸಲ ಸಂಸದರಾಗಿ, ನಾಲ್ಕು ಸಲ ಶಾಸಕಿಯಾಗಿ, ಎರಡು ಸಲ ಸಚಿವೆಯಾಗಿ ಕೆಲಸ ಮಾಡಿದ ಸುಷ್ಮಾ ಸ್ವರಾಜ್ ತೀರಿಕೊಂಡಿದ್ದಾರೆ. ಭಾರತದ ಪುರುಷಕೇಂದ್ರಿತ ರಾಜಕಾರಣದಲ್ಲಿ ಇಷ್ಟು ಸುದೀರ್ಘ ಕಾಲ ಮಹಿಳೆಯೊಬ್ಬರು ರಾಜಕೀಯ ಮಾಡಿದ್ದು ಪ್ರಶಂಸಾರ್ಹ. ವಿದೇಶಾಂಗ ಸಚಿವೆ ಆಗಿದ್ದಾಗ ಹಲವು ಜನರ ಚಿಕಿತ್ಸೆಗೆ ಅವರು ನೆರವಾದರು, ಅಪ್ಪಟ ದೇಶಪ್ರೇಮಿಯಾಗಿದ್ದರು ಇತ್ಯಾದಿ ವಿವರಗಳನ್ನು ನಮ್ಮ ಮಾಧ್ಯಮಗಳು ಕೊಂಚ ಉತ್ಪ್ರೇಕ್ಷೆಯಿಂದಲೇ ವರದಿ ಮಾಡುತ್ತಿವೆ ಅನಿಸುತ್ತಿದೆ.

ಅದರಲ್ಲೂ ಕರ್ನಾಟಕದ ಜೊತೆಗಿನ ಅವರ ಸಂಬಂಧದ ಕುರಿತು ‘ಅದೊಂದು ಆದರ್ಶದ ರಾಜಕೀಯ’ ಎಂಬಂತೆ ಬಿಂಬಿಸಲಾಗುತ್ತಿದೆ. ಇಂತಹ ಆತ್ಮವಂಚನೆಯ ವರದಿ, ಹೊಗಳಿಕೆಗಳು ನಾಡಿನ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಬಾರದು ಎಂಬ ಕಾರಣಕ್ಕೆ ಇಲ್ಲಿ ಕೆಲವು ವಾಸ್ತವಗಳನ್ನು ನಿಮ್ಮ ಮುಂದೆ ಇಡಲೇಬೇಕಾಗಿದೆ.

ಅವರ ‘ಅಪ್ಪಟ ದೇಶಪ್ರೇಮ’ ಆರೆಸ್ಸೆಸ್ ಮಾದರಿಯದ್ದಾಗಿತ್ತೇ ಹೊರತು ಅದೆಂದೂ ವಿಶಾಲ ಭಾರತದ ಸರ್ವಜನರನ್ನೂ ಒಳಗೊಳ್ಳುವ ಭಾರತದ ಬಗೆಗಿನ ಪ್ರೇಮವಾಗಿರಲಿಲ್ಲ; ಅದು ಹಿಂದೂ ರಾಷ್ಟ್ರವೆಂಬ ಮತಾಂಧ ಪರಿಕಲ್ಪನೆಯ ಭಾಗವಾಗಿ ಅರಳಿದ ‘ದೇಶಪ್ರೇಮ’ವಾಗಿತ್ತಷ್ಟೇ. ಇನ್ನು ಇಷ್ಟು ಸುದೀರ್ಘ ಕಾಲ ಮಹಿಳೆಯೊಬ್ಬರು ರಾಜಕೀಯ ಮಾಡುವುದು ಕಷ್ಟಸಾಧ್ಯ. ಆದರೆ ಇತರೆಲ್ಲಾ ಪಕ್ಷಗಳ ಮಹಿಳಾ ರಾಜಕಾರಣಿಗಳಂತೆ ಮಹಿಳೆಯರ ಮೇಲೆ ತಮ್ಮ ಪಕ್ಷದವರಿಂದಲೇ ದೌರ್ಜನ್ಯ, ದಬ್ಬಾಳಿಕೆ ನಡೆದಾಗ ಅದರು ವಿರುದ್ಧ ಇವರು ದನಿಯೆತ್ತಿದ್ದು ಕಂಡುಬಂದಿಲ್ಲ.

2004ರಲ್ಲಿ ಯುಪಿಎಗೆ ಬಹುಮತ ಬಂದು ಸೋನಿಯಾ ಗಾಂಧಿಯವರಿಗೆ ಪ್ರಧಾನಿ ಹುದ್ದೆ ಸಿಗುವ ಸಾಧ್ಯತೆಯಿದ್ದಾಗ ಬಿಜೆಪಿ ಮತ್ತು ಸಂಘ ಪರಿವಾರದಿಂದ ತೀವ್ರ ವಿರೋಧ ವ್ಯಕ್ತವಾಗಿತು. ಆಗ ಸಂಘ ಪರಿವಾರ ಬಳಸಿಕೊಂಡಿದ್ದು ಹಣೆ ತುಂಬ ಕುಂಕುಮ ಇಡುವ ‘ಮಾದರಿ’ ಹಿಂದೂ ಮಹಿಳೆ ಸುಷ್ಮಾರನ್ನು. ‘ಸೋನಿಯಾ ಪ್ರಧಾನಿಯಾದರೆ ನಾನು ತಲೆ ಬೋಳಿಸಿಕೊಳ್ಳುವೆ, ಜೀವನಪರ್ಯಂತ ಬಿಳಿ ಸೀರೆ ಉಡುವೆ’ ಹೀಗೆಲ್ಲ ಅಸಹ್ಯ ಮಾತಾಡಿದ ಸುಷ್ಮಾರನ್ನು ಧೀಮಂತ ನಾಯಕಿ ಎಂದು ಹೇಗೆ ಕರೆಯುವುದು? ಸೋನಿಯಾರನ್ನು ತಡೆಯುವ ಭರದಲ್ಲಿ ಅವರು ತಮಗೆ ತಾವೇ ಅವಮಾನ ಮಾಡಿಕೊಡಿದ್ದರು.

ಕರ್ನಾಟಕದ ಜೊತೆಗೆ ಅವರಿಗೆ ತುಂಬ ಆತ್ಮೀಯ ಸಂಬಂಧ ಇತ್ತು, ಕರ್ನಾಟಕದ ಬಗ್ಗೆ ಅಪಾರ ಕಾಳಜಿ ಇತ್ತು ಎಂದೆಲ್ಲ ನಮ್ಮ ಮಾಧ್ಯಮಗಳು ಹೇಳಿವೆ, ಹೇಳುತ್ತಲೇ ಇವೆ. ಹೌದು ಅವರಿಗೆ ಬಳ್ಳಾರಿಯೊಂದಿಗೆ ಅವರಿಗೆ ‘ಆತ್ಮೀಯ’ ಒಡನಾಟವಿತ್ತೇ ವಿನಃ ಇಡೀ ಕರ್ನಾಟಕದೊಂದಿಗೆ ಅಲ್ಲ. ಬಳ್ಳಾರಿಯ ಜೊತೆಗಿನ ಒಡನಾಟ ಬಳ್ಳಾರಿಯ ಕಾಳಜಿಯಿಂದ ಮೂಡಿದ್ದಲ್ಲ, ಅದು ಸ್ವಾರ್ಥದಿಂದ ಕೂಡಿದ್ದಾಗಿತ್ತು ಅಷ್ಟೇ…

1999ರಲ್ಲಿ ಸೋನಿಯಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧಿಸಿದಾಗ ಅವರ ವಿರುದ್ಧ ಸುಷ್ಮಾರನ್ನು ಕಣಕ್ಕಿಳಿಸಲಾಗಿತು. ‘ಸೋನಿಯಾ ವಿದೇಶಿ ಮಹಿಳೆ’ ಎಂದೆಲ್ಲ ಈ ‘ಅಪ್ಪಟ’ ದೇಶೀ ನಾರಿ ಕೂಗಾಡಿಕೊಂಡರೂ 56 ಸಾವಿರ ಮತಗಳಿಂದ ಸೋತರು. ಆಗಲೇ ಅವರಿಗೆ ಬಳ್ಳಾರಿಯ ಜನಾರ್ಧನರೆಡ್ಡಿ ಮತ್ತು ಶ್ರೀರಾಮುಲು ಥರದವರ ಸಂಪರ್ಕ ಪ್ರಾಪ್ತವಾಗಿತು. ಆಗಿನ್ನೂ ಗಣಿ ದಂಧೆ ತಾರಕಕ್ಕೆ ಏರಿರಲಿಲ್ಲ. ‘ಎನ್ನೋಬಲ್’ ಎಂಬ ಹಣಕಾಸಿನ ಸಂಸ್ಥೆಯ ಮೂಲಕ ಸಾವಿರಾರು ಜನರಿಗೆ ಟೋಪಿ ಹಾಕಿದ್ದ ರೆಡ್ಡಿಗಳು ಬಿಜೆಪಿಯಲ್ಲಿ ನೆಲೆ ಕಂಡುಕೊಂಡಿದ್ದರು.

1999-2004ರ ವಾಜಪೇಯಿ ಸರ್ಕಾರದಲ್ಲಿ ಸುಷ್ಮಾ ಸಚಿವೆಯಾಗಿದ್ದರು. 2003ರ ವೇಳೆಗೆ ಕಬ್ಬಿಣ ಅದಿರಿಗೆ ಹೊರದೇಶಗಳಲ್ಲಿ, ಅದರಲ್ಲೂ ಮುಖ್ಯವಾಗಿ ಚೀನಾದಲ್ಲಿ ದೊಡ್ಡ ಬೇಡಿಕೆ ಉಂಟಾಗಿತು. ಅಷ್ಟೊತ್ತಿಗೆ ಸುಷ್ಮಾ ಕೃಪೆಯಿಂದ ಗಣಿ ದಂಧೆಗಿಳಿದಿದ್ದ ರೆಡ್ಡಿಗಳು ಅಕ್ರಮ ಗಣಿಗಾರಿಕೆ ನಡೆಸುವ ಮೂಲಕ ಕರ್ನಾಟಕದ ಸಾರ್ವಜನಿಕ ಸಂಪತ್ತನ್ನೆಲ್ಲ ಲೂಟಿ ಮಾಡಿದ್ದರು.

1999ರಲ್ಲಿ ಬಳ್ಳಾರಿಯಲ್ಲಿ ಸೋತ ಮೇಲೆಯೂ 2010ರವರೆಗೂ ಸುಷ್ಮಾರವರು ಕರ್ನಾಟಕದ ನಂಟು ಬಿಡಲೇ ಇಲ್ಲ ಎಂದು ಬಹುಪಾಲು ಮಾಧ್ಯಮಗಳು ಹೇಳುತ್ತಿವೆ. ನಿಜ, ಅದು ನಂಟಲ್ಲ, ಗಂಟಿನ ಕತೆ… ಸುಷ್ಮಾರವರು 1999ರಲ್ಲಿ ಸೋತ ನಂತರ ಪ್ರತಿವರ್ಷವೂ ಬಳ್ಳಾರಿಗೆ ಬಂದು ವರ ಮಹಾಲಕ್ಷ್ಮೀ ಹಬ್ಬ ಆಚರಿಸುತ್ತಿದ್ದರು. ರೆಡ್ಡಿ-ಶ್ರೀರಾಮುಲುಗಳನ್ನು ಅವರು ಮಕ್ಕಳೆನ್ನುವುದು, ಈ ಗಣಿಗಳ್ಳರು ಅವರನ್ನು ‘ಅಮ್ಮ’ ಎನ್ನುವುದು ಕೆಲವು ತೆಲುಗು ಸಿನಿಮಾದ ವಿಲಕ್ಷಣ ನಡವಳಿಕೆಗಳಂತೆ ಕಾಣುತ್ತಿದ್ದವು.

ಬಳ್ಳಾರಿಗೆ ಬರುತ್ತಿದ್ದ ‘ಅಮ್ಮ’ ಮಕ್ಕಳ ಮನೆಯಲ್ಲಿ ವರ ಮಹಾಲಕ್ಷ್ಮಿ ಹಬ್ಬ ಮಾಡುತ್ತಿರಲಿಲ್ಲ! ಬದಲಿಗೆ ಬಳ್ಳಾರಿಯ ಬ್ರಾಹ್ಮಣ ಕುಟುಂಬವೊಂದರ ಮನೆಯಲ್ಲಿ ಈ ಡ್ರಾಮಾ ಜರುಗುತ್ತಿತ್ತು! ಇದರಿಂದ ಎಂತಹ ಜಾತಿ ಮನಸ್ಸು ಸುಷ್ಮಾ ಅವರದ್ದು ಎಂದು ವಿವರಿಸುವ ಅಗತ್ಯವಿಲ್ಲ ಅಲ್ಲವೇ? ಆದರೆ ಆ ಬ್ರಾಹ್ಮಣರ ಮನೆಯಲ್ಲಿ ಎಲೆ, ಅಡಿಕೆ, ಕುಂಕುಮ, ಅರಿಷಿಣ, ಸೀರೆಗಳ ಉಡಿ ತುಂಬಿಕೊಳ್ಳುತ್ತಿದ್ದ ನಂತರ ಅವರ ಸವಾರಿ ಸೀದಾ ರೆಡ್ಡಿಗಳ ಮನೆ ಕಡೆ ಹೊರಡುತ್ತಿತ್ತು. ಅಲ್ಲಿ ನಿಜವಾದ ಉಡಿ ತುಂಬುವ ಕಾರ್ಯ ನಡೆಯುತ್ತಿತ್ತು. ಈ ನಾಡಿನ ಸಂಪತ್ತಿನ ಲೂಟಿಯ ಒಂದು ಭಾಗ ಅದಿರಿನ ಧೂಳಿನ ಹಾಗೆ ದೆಹಲಿ ಕಡೆ ಹಾರಿ ಹೋಗುತ್ತಿತ್ತು.

2008ರಲ್ಲಿ ಯಡಿಯೂರಪ್ಪ ಸರ್ಕಾರವಿದ್ದಾಗಲಂತೂ ರೆಡ್ಡಿ-ಶ್ರೀರಾಮುಲುಗಳ ಕಾರುಬಾರು ಭಾರೀ ಜೋರಾಗಿತ್ತಲ್ಲ? ಒಮ್ಮೆ ಯಡಿಯೂರಪ್ಪರನ್ನೇ ಕೆಡವಲು ಈ ಅಡವಿ-ದೊಂಗುಲುಗಳು ಕೈ ಹಾಕಿದಾಗ ಉಡಿ ತುಂಬಿಸಿಕೊಂಡವರ ಸಪೋರ್ಟೂ ಅದಕ್ಕಿತ್ತು! ಮುಂದೆ ಅಡ್ವಾಣಿ ಸಮ್ಮುಖದಲ್ಲಿ ಯಡಿಯೂರಪ್ಪ ಮತ್ತು ರೆಡ್ಡಿ – ರಾಮುಲಗಳ ನಡುವೆ ರಾಜಿ ಮಾಡಿಸಿದ್ದು ಇದೇ ಸುಷ್ಮಾ ಮೇಡಮ್ಮು.

ಯಾವಾಗ ಜನಾರ್ಧನರೆಡ್ಡಿ ಜೈಲು ಪಾಲಾದರೋ ಆಗ ಯು ಟರ್ನ್ ತೆಗೆದುಕೊಂಡ ಸುಷ್ಮಾರವರು, ‘ರೆಡ್ಡಿ-ರಾಮುಲು ಇತ್ಯಾದಿ ಎಲ್ಲ ನನಗೆ ವಿಶೇಷವಾಗಿ ಗೊತ್ತಿಲ್ಲ. ಎಲ್ಲ ಬಿಜೆಪಿ ಕಾರ್ಯಕರ್ತರಂತೆ ಅವರೂ ಪರಿಚಯ ಅಷ್ಟೇ’ ಎಂದು ಕೈ ಎತ್ತಿಬಿಟ್ಟರು! ಈಗ ಹೇಳಿ, ಸುಷ್ಮಾ ಧೀಮಂತ ನಾಯಕಿ ಆಗಿದ್ದರೇ? ಆದರೆ ಅವರ ನಂತರದಲ್ಲಿ ಪ್ರವರ್ಧಮಾನಕ್ಕೆ ಬಂದ ನರೇಂದ್ರಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಥರಹದ ತೀವ್ರಗಾಮಿ ನಾಯಕರನ್ನು ನೋಡಿದಾಗ ಸುಷ್ಮಾರವರಂತವರು ಸಭ್ಯರಂತೆ ಕಂಡುಬರುವುದು ಈ ಕಾಲದ ದುರಂತಗಳಲ್ಲೊಂದು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ವಸ್ತುನಿಷ್ಟ ವಿಶ್ಲೇಷಣೆ.
    ವ್ಯಕ್ತಿಯೋರ್ವ ಇಲ್ಲವಾದಾಗ ಔಪೋಚಾರಿಕ ಸ್ಮರಣೆ ನಾಗರೀಕ ಲಕ್ಷಣ ನಿಜ, ಆದರೆ ಅತಿಶಯ ಗುಣಗಾನ ಆತ್ಮವಂಚನೆ ಮತ್ತು ಸುಳ್ಳುಗಳ ಮಾದರಿ ಕಟ್ಟಿಕೊಡುವ ಕೆಲಸವೇ ಆಗಿರುತ್ತದೆ.
    ಚರಿತ್ರೆಯೇ ಅರಿವಿಲ್ಲದ ಮಾಧ್ಯಮಗಳು ಸಮೂಹ ಸನ್ನಿಯಂತೆ ಪರಾಕು ಹಾಕುತ್ತಿರುವುದು ಅಸಹ್ಯವಷ್ಟೆ.
    ಇದರ ನಡುವೆ ಮಲ್ಲನಗೌಡರು ಅಸಲಿ ಸುಷ್ಮಾ ಅವರನ್ನು ಮತ್ತೆ ಪರಿಚಯಿಸಿದ್ದಾರೆ.

  2. ತಲೆ ಬೋಲಸಕೋತಿನಿ ಅಂತ ಹೇಳಿದ್ದು ಉಮಾ ಭಾರತಿ ಇವರಲ್ಲ . ಉಳಿದೆರೋ ನಿಮ್ಮ ಮಾತು ನಿಜವಾಗಿದೆ .

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...