Homeಮುಖಪುಟಯಾಕ್ಸಾರ್ ಮೋದಿ ಖಾಲಿಬಾಟ್ಳಿ ಪ್ಲಾಸ್ಟಿಕ್ ಲೋಟ ಆಯ್ತಾಯಿದ್ರು! - ಬಿ.ಚಂದ್ರೇಗೌಡ

ಯಾಕ್ಸಾರ್ ಮೋದಿ ಖಾಲಿಬಾಟ್ಳಿ ಪ್ಲಾಸ್ಟಿಕ್ ಲೋಟ ಆಯ್ತಾಯಿದ್ರು! – ಬಿ.ಚಂದ್ರೇಗೌಡ

- Advertisement -
- Advertisement -

ಶಿವಮೊಗ್ಗದಿಂದ ಮೈಸೂರಿಗೆ ರೈಲಿನಲ್ಲಿ ಹೋಗುತ್ತಿರಬೇಕಾದರೆ, ಕೆ.ಆರ್.ನಗರದ ಬಳಿ ಮೂವರು ಮುಸ್ಲಿಂ ಯುವಕರು ಓಡಿಬಂದು ರೈಲತ್ತಿಕೊಂಡರು. ಅಲ್ಲದೆ ತಾವು ಕೂರುವುದಕ್ಕೆ ಮೊದಲು ತಮ್ಮ ಕೈಚೀಲಗಳನ್ನು ಸೀಟಿನ ಮೇಲೆ ಎಸೆದು, ಒಬ್ಬರ ಮೇಲೊಬ್ಬರು ಬಿದ್ದು ಓಡಿ ಬಂದು ದಣಿವಾರಿಸಿಕೊಳ್ಳತೊಡಗಿದರು. ಈ ಶ್ರಮಜೀವಿಗಳ ಜೀವನೋತ್ಸಾಹ ನೋಡುವಂತದ್ದು. ಅದೇ ಕಂಪನಿಗಳ, ಸರಕಾರದ ಕರ್ಮಾಚಾರಿಗಳ ನಿರುತ್ಸಾಹದ ಮುಖಗಳನ್ನ ನೋಡಿದರೆ ಅಯ್ಯೋ ಪಾಪ ಎನ್ನಿಸುತ್ತದೆ. ಆದ್ದರಿಂದ ನನ್ನೆದುರು ಕುಳಿತ ಹುಡುಗರನ್ನು ಮಾತನಾಡಬೇಕೆನಿಸಿತು.

“ಎಲ್ಲಿಂದ ಬರ್ತಾಯಿದ್ದೀರಿ” ಎಂದೆ.
“ಕೆ.ಆರ್.ನಗರದಿಂದ ಶಾರ್.”
“ಏನು ಮಾಡ್ತಿರಿ.”
“ಪೈಂಟಿಂಗ್ ಮಾಡ್ತಿವಿ ಶಾರ್.”
“ಊರ್ಯಾವುದು.”
“ಮೈಸೂರು” ಎಂದವನು ಸರಿಯಾಗಿ ಕುಳಿತು, ನನ್ನೊಡನೆ ಮಾತನಾಡುವ ಉತ್ಸಾಹ ತೋರಿದ. ಉಳಿದಿಬ್ಬರು ಬಾಗಿಲಲ್ಲಿ ನಿಂತು ಗಾಳಿಗೆ ಮೈವೊಡ್ಡಿದರು.
“ಈ ಹಾಳು ಬಿಜೆಪಿಗಳು ರೈಲಿನ ಬಣ್ಣನೂ ಬದ್ಲಾಸ್ತ ಅವೆ ಕಣಯ್ಯ” ಎಂದೆ.
“ಹೌದು ಶಾರ್, ಮದ್ಲಿಂದು ಬಣ್ಣ ಎಷ್ಟು ದೂಳು ಬಿದ್ರೂ ಕಾಣ್ತಿರಲಿಲ್ಲ. ಈಗ ರೈಲು ನೋಡಿದ್ರೆ ಮೈಮೇಲೆ ಮಣ್ಣು ಹುಯ್ಕಂಡು ಓಡಾಡ್ತವೆ.” ಎಂದ.
“ಬಿಜೆಪಿಗಳು ಬಣ್ಣ ಬದ್ಲಾಯಿಸ್ತವೆ ಅಷ್ಟೇ, ಇನ್ನೇನು ಆಗದಿಲ್ಲ ಅವುರ ಕೈಲಿ” ಎಂದೆ.
“ಈಗ ಯಾರ್ ಬರ್ತರೆ ಸಾರ್ ಸೀಟಿಗೆ.”
“ಯಾವ ಸೀಟಿಗೆ.”
“ಮೋದಿ ಸೀಟಿಗೆ ”
“ಯಾರು ಬರದಿಲ್ಲ.”
“ಮತ್ತೆ ಎಲೆಕ್ಷನ್ ಬಂದುಬಿಟ್ಟಿದೆ.”
“ಅದು ಉಪ ಚುನಾವಣೆ. ನಮ್ಮ ಸ್ಟೇಟಿಗೆ ಬಂದದೆ ಅಷ್ಟೇ.”
“ಓ ಎಡೂರಪ್ಪನ ಸೀಟಿಗೆ ಅನ್ನಿ.”
“ಹೌದು.”
“ಯಾಕ್ಸ ಮತ್ತೆ ರಿಟನ್ ಯಲಕ್ಷನ್ನು”
“ಅದೂ ನಿಮ್ಮ ಕೆ.ಆರ್.ನಗರದ ವಿಶ್ವನಾಥ್ ಗೊತ್ತ, ಅವುನಂತ ಹದಿನೇಳು ಜನನ ಬಿಜೆಪಿಗಳು ಕೊಂಡಕಂಡ್ರು.”
“ಅಂಗೆ ಮನುಸುರ್ನೆ ಕೊಳ್ಳಬವುದ ಶಾರ್.”
“ಮನುಷ್ಯರನ್ನ ಕೊಳ್ಳಕ್ಕಾಗಲ್ಲ. ಶಾಸಕರ ಕೊಳ್ಳಬವುದು.”
“ಒಳ್ಳೆ ಮಜಾ ಇದೆ ಶಾರ್ ಮ್ಯಾಟ್ರು.”
“ನಮಿಗೆ ಮಜಾ. ಸರಿ, ಅವುರ ಪಜೀತಿ ಯಾರಿಗೂ ಬ್ಯಾಡ ಅಂಗಾಗ್ಯದೆ.”
“ಯಾಕ್ ಶಾರ್ ಅಮೌಂಟು ಕೊಡ್ನಿಲ್ವಾ.”
“ಅದೇ ಡೌವುಟು.”
“ನಮ್ಗೂ ಅಂಗೆ ಆಗ್ತದೆ ಸಾ. ಪೈಂಟಿಂಗ್ ವರ್ಕು ಮಾಡಿಸಿಕ್ಯಂಡು ಕೈ ಎತ್ತಿಬಿಡ್ತರೆ. ಅದ್ಕೆ ನಾವು ಸರಿಯಾಗಿ ಅಡ್ವಾನ್ಸ್ ಕೇಳ್ತಿವಿ.”
“ಈ ಶಾಸಕರಿಗೆ ಅಡ್ವಾನ್ಸ್ ದುಡ್ಡು ಬಂದದೆ. ಆದ್ರೆ ಅಧಿಕಾರ ಬರಲಿಲ್ಲ.”
“ಯಾಕ್ಸಾ.”

“ಆಗಿನ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಈ ಖರೀದಿ ವ್ಯವಾರನೆ ರದ್ದು ಮಾಡಿಬುಟ್ರು. ಅದ್ಕೆ ಇವುರ್ಯಲ್ಲ ಎಂಎಲ್ಲೆಯೆ ಗಿರಿ ಕಳಕಂಡ್ರು.”
“ನಮಕ್ ಹರಾಮ್‍ಗಳಿಗೆ ಸರಿಯಾಗಿ ಆಗಿದೆ ಬುಡಿ ಶಾರ್.”
ಇದು ಒಟ್ಟರಾಶಿ ಅವನ ಅಭಿಪ್ರಾಯವಿದ್ದಂತೆ ಅನಿಸಿತು. ಶಾಸಕರ ಖರೀದಿ, ಸರಕಾರ ಬೀಳಿಸಿ ಅದರಿಂದಾದ ಅನಾಹುತಗಳು, ಈ ವಿವರವೆಲ್ಲಾ ಅವನ ಅಭಿಪ್ರಾಯದೊಳಗೆ ಸೇರಿರದೆ ಬಿಜೆಪಿಗೆ ಮಾರಾಟದ ವ್ಯವಹಾರದಲ್ಲಿ ಮೋಸಹೋದವರನ್ನ ಬೈದಂತೆ ಕಂಡಿತು.
“ಮೋದಿಗೆ ಏನೊ ಒಳ್ಳೆ ಎಜುಕೇಶನ್ ಇ¯ವಂತಲ್ಲ ಶಾರ್.”
“ಹೌದು.”
“ಎಗ್ಸಾಂಗೆ ಹೋಗಿಲವಂತೆ ಶಾರ್. ಪ್ರೈವೇಟ್ ಇಸ್ಕೂಲ್‍ಗೆ ಹೋಗಿ ಮಾರ್ಕ್ಸ್‌ ಕಾರ್ಡು ತಂದುಬಿಟ್ಟಿದ್ದಾರಂತೆ.”
“ಅವುರು ಪಡದಿರೋ ಶಿಕ್ಷಣದ ಬಗ್ಗೆ ಯಲ್ಲಾರಿಗೂ ಡೌಟಿದೆ.”
“ಮತ್ತೆ ಯಂಗೆ ಶಾರ್ ಪ್ರಧಾನಿ ಸೀಟು ಮ್ಯಾಲೆ ಕುಂತವುರೆ.”
“ಪ್ರಧಾನಿಯಾಗಕ್ಕೆ ತುಂಬ ಓದಿರಬೇಕು ಅಂತ ಇಲ್ಲ. ಅನುಭವ, ಹೃದಯವಂತಿಕೆ ಇರಬೇಕು. ಅಂಗೆ ನೋಡಿದ್ರೆ ನಮ್ಮ ದ್ಯಾವೇಗೌಡ್ರು ಡಿಪ್ಲಮೋ ಇಂಜಿನಿಯರ್. ಮುಖ್ಯಮಂತ್ರಿಯಾಗಿ ಎಷ್ಟು ಚನ್ನಾಗಿ ಆಡಳಿತ ಮಾಡಿದ್ರು, ಪ್ರಧಾನಿಯಾಗಿ ಕಾಶ್ಮೀರದ ಚುನಾವಣೆ ಮಾಡಿದ್ರು.”
“ಅವುರೆ ಇರಬೇಕಿತ್ತು ಶಾರ್. ಈ ಮೋದಿ ಬರ್ತಾನೆ ಇರಲಿಲ್ಲ.”
“ಬಂದುಬುಟ್ಟವುನಲ್ಲ ಸಯಿಸಗಬೇಕು.”
“ನಮ್ದು ರಫೀಕ್ ಮೊಬೈಲಿಗೆ ಒಂದು ಫಿಲಂ ಬಂದಿದೆ ಶಾರ್. ಮೋದಿ ನಮ್ಮ ಜುಬೇರ್ ಸಾಬರ ತರ ಹಳೆ ಸೀಸ, ಪ್ಲಾಸ್ಟಿಕ್ ಡಬ್ಬನೆಲ್ಲಾ ತಗ್ದಿ ತಗ್ದಿ ಚೀಲ್ದವಳಗೆ ತುಂಬಿಕಂಡು ಹೋಗ್ತಾಯಿದ್ರು. ಯಾಕ್ ಶಾರ್ ಅಂಗೆ ಮಾಡಿದಾರೆ.”
“ನೀನಾಗ್ಲೆ ಹೇಳಿದಲ್ಲಯ್ಯ ಎಜುಕೇಶನ್ ಇಲ್ಲ ಅಂತ, ಅದರ ಕೊರತೆ ಇದು. ಅಂತ ಕೆಲ್ಸ ಮಾಡಿ ಪೋಟೊ ವಡಿಸಿಗ್ಯಂಡು ಪೇಪರ್‍ಗಾಕ್ಸಿದ್ರೆ ಪ್ರಧಾನಿ ಎಷ್ಟು ಒಳ್ಳೆಯವರು, ಇಂತ ಮನ್ಸ ಹಿಂದೆ ಪ್ರಧಾನಿಯಾಗಿರಲಿಲ್ಲ ಅಂತ ತಿಳಕತಾರೆ ಅನ್ನಕಂಡು ಗಿಮಿಕ್ ಮಾಡ್ತ ಅವುರೆ.”
“ಅಂಗೆ ಮಾಡಬಾರ್ದು ಶಾರ್. ಆ ಸೀಟ್‍ಮೇಲೆ ಕುಂತಗಂಡಿ ಹಳೇ ಪೇಪರ್, ಖಾಲಿ ಸೀಸದ ಯವಾರ ಮಾಡಬಾರ್ದು.”

“ಇನ್ನೂ ನೋಡಿವಿರು. ಹೋಟ್ಳಿಗೆ ಬಂದು ಕಡಕ್ ಟೀ ಮಾಡಿ, ಯಲ್ಲಾರಿಗೂ ಕೊಟ್ಟು ಪೋಟೊ ವಡಿಸಿಗ್ಯಂಡು ಪೇಪರ್‍ಗಾಕುಸ್ತರೆ.”
“ಎಜುಕೇಶನ್ ಇಲ್ಲ ಅಂದ್ರೆ ಇಂಗೆ ಅಲವ ಶಾರ್. ಮೋದಿ ಹಿಂಗೆ ಮಾಡ್ತ ಹೋದ್ರೆ ಪುನ ಇಂಗ್ಲಿಸ್‍ನೋರು ಬಂದು ಸೀಟ್ ಮೇಲೆ ಕೂರ್ತರೆ ಅಷ್ಟೇ.”
“ಅವುರೀಗ ಬರಲ್ಲ.”
“ಯಾಕ್ ಬರಲ್ಲ ಶಾರ್. ನಮ್ ನಮ್ಗೆ ಜಗಳ ತಂದುಹಾಕಿ ನಾವೆಲ್ಲ ಹಿಂಗೆ ಜಗಳ ಮಾಡ್ತಯಿದ್ರೆ ಸೈಲೆಂಟಾಗಿ ಬಂದು ಬ್ರಿಟಿಷ್ ಜನ ಸೀಟ್ ಮೇಲೆ ಕೂರ್ತರೆ. ಆಗ ನಮ್ದು ಕತೆ ಹೋಗ್ಲಿ, ಮೋದಿಗೆ ಹಳೆ ಪೇಪರ್ ಪ್ಲಾಸ್ಟಿಕ್ ಸೀಸ ಬಾಟ್ಳಿನೆ ಗತಿ” ಎಂದು ನಕ್ಕ. ಈ ಮಾತಿಗೆ ಎಲ್ಲರೂ ನಕ್ಕರು.

ಚಿಕ್ಕಮಗಳೂರು ಕಡೆಯಿಂದ ದಸರಾ ನೋಡಲು ಹೋಗುತ್ತಿದ್ದ ಕೆಲವರಿಗೆ ಈ ಸಾಬರ ಹುಡುಗ ಮಾಡುತ್ತಿರುವ ಟೀಕೆ ಸಹಿಸಲಾಗದ್ದನ್ನು ಅವರ ಮುಖಗಳೇ ಹೇಳುತ್ತಿದ್ದವು. ಅಷ್ಟರಲ್ಲಿ ಸೀತಾಫಲ ಮಾರುವ ವ್ಯಕ್ತಿ ಬಂದ. ಹುಡುಗ ಸೀತಾಫಲ ತೆಗೆದುಕೊಂಡು ಅರ್ಧರ್ಧ ಹಿಸಿದು ಎದುರು ಕುಳಿತವರಿಗೆ ಕೊಟ್ಟ. ನಂತರ ಬಂದ ಸಪೋಟವನ್ನು ತೆಗೆದುಕೊಂಡು ಕೊಡಲು ಬಂದ “ಬ್ಯಾಡ ಕಣಪ್ಪ, ಅದು ತುಂಬ ಶುಗರು” ಎಂದೆ. “ತಿನ್ನಿ ಶಾರ್ ಹಣ್ಣು ತಿಂದ್ರೆ ವಳ್ಳೇದು.” ಎಂದು ಅರ್ಧ ಭಾಗಕೊಟ್ಟ. ಅವನ ಆಂತರ್ಯದಲ್ಲಿ ಬಿಜೆಪಿ ಜನ, ಜನಾಂಗೀಯ ದ್ವೇಷವನ್ನು ಹುಟ್ಟುಹಾಕುವುದಕ್ಕೆ ದಿಗಲುಗೊಂಡು ಸಾಮರಸ್ಯದಿಂದ ಬದುಕುವ ಮನಸ್ಸು, ಹಣ್ಣು ಹಂಚಿಕೆಯ ಹಿಂದೆ ಗೋಚರಿಸಿತು. ಅಷ್ಟರಲ್ಲಿ ಎಲ್ಲ ಜನಾಂಗವೂ ಸೇರಿ ಸಂಭ್ರಮದಿಂದ ಆಚರಿಸುವ ದಸರಾ ತಾಣ ಮೈಸೂರು ಬಂತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...