ದೇಶದ ಅನ್ನದಾತರು ತಮ್ಮ ಹಕ್ಕುಗಳಿಗಾಗಿ ಅಹಂಕಾರಿ ಮೋದಿ ಸರ್ಕಾರದ ವಿರುದ್ಧ ಸತ್ಯಾಗ್ರಹ ಮಾಡುತ್ತಿದ್ದಾರೆ. ಈ ಸತ್ಯಾಗ್ರಹದಲ್ಲಿ ನೀವೂ ಭಾಗಿಯಾಗಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿನಂತಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಆಂಭಿಸಿರುವ ’ಸ್ಪೀಕ್‌ಅಪ್ ಇಂಡಿಯಾ’ ಅಭಿಯಾನದ ಭಾಗವಾಗಿ ಪ್ರಾರಂಭಿಸಿರುವ, ’ಸ್ಪೀಕ್‌ಅಪ್ ಫಾರ್ ಕಿಸಾನ್ ಅಧಿಕಾರ್’(#SpeakUpForKisanAdhikar) ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ದೇಶದ ಅನ್ನದಾತರು ತಮ್ಮ ಹಕ್ಕುಗಳಿಗಾಗಿ ಅಹಂಕಾರಿ ಮೋದಿ ಸರ್ಕಾರದ ವಿರುದ್ಧ ಸತ್ಯಾಗ್ರಹ ಮಾಡುತ್ತಿದ್ದಾರೆ. ಇಡೀ ಭಾರತವೆ ರೈತರ ಮೇಲಿನ ದೌರ್ಜನ್ಯ ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ವಿರುದ್ಧ ಧ್ವನಿ ಎತ್ತುತ್ತಿದೆ. ನೀವೂ ಸೇರಿ ಈ ಸತ್ಯಾಗ್ರಹದ ಭಾಗವಾಗಿ” ಎಂದು ವಿನಂತಿಸಿದ್ದಾರೆ.
ಇದನ್ನೂ ಓದಿ: ಇನ್ನೂ ಸಮಯವಿದೆ ಮೋದಿಜಿ…! – ಪ್ರಧಾನಿಯವರಲ್ಲಿ ಮನವಿ ಮಾಡಿದ ರಾಹುಲ್ ಗಾಂಧಿ
देश के अन्नदाता अपने अधिकार के लिए अहंकारी मोदी सरकार के ख़िलाफ़ सत्याग्रह कर रहे हैं।
आज पूरा भारत किसानों पर अत्याचार व पेट्रोल-डीज़ल के बढ़ते दामों के विरुद्ध आवाज़ बुलंद कर रहा है।
आप भी जुड़िये और इस सत्याग्रह का हिस्सा बनिये।#SpeakUpForKisanAdhikar pic.twitter.com/3EG34bUQxm
— Rahul Gandhi (@RahulGandhi) January 15, 2021
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾನೂನಿನ ವಿರುದ್ದ ರೈತರ ಹೋರಾಟ 51 ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸರ್ಕಾರ ರೈತರೊಂದಿಗೆ ಇದುವರೆಗೂ ಎಂಟು ಸುತ್ತಿನ ಮಾತುಕತೆ ನಡೆಸಿದೆ. ಆದರೆ ಎಲ್ಲವೂ ವಿಫಲವಾಗಿರುವುದರಿಂದ ಮತ್ತು ಹೋರಾಟವನ್ನು ತೀವ್ರಗೊಳಿಸಲು ರೈತರು ಜನವರಿ 26 ಕ್ಕೆ ಗಣರಾಜ್ಯೋತ್ಸವದಂದು ಟ್ರಾಕ್ಟರ್ ರ್‍ಯಾಲಿ ನಡೆಸಲಿದ್ದೇವೆಂದು ಘೋಷಿಸಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ ಇಂದು ಒಂಬತ್ತನೇ ಸುತ್ತಿನ ಮಾತುಕತೆಗೆ ರೈತರನ್ನು ಆಹ್ವಾನಿಸಿದೆ.
ಇದನ್ನೂ ಓದಿ: ದೇಶದ ಪ್ರಧಾನಿ ರಾಹುಲ್ ಗಾಂಧಿಯೋ, ಮೋದಿಯೋ?: ಸುವರ್ಣ ನ್ಯೂಸ್, ಕನ್ನಡಪ್ರಭ ವಿರುದ್ಧ ಸ್ಪೋಟಗೊಂಡ ಆಕ್ರೋಶ


