Homeಕರ್ನಾಟಕವಿಧಾನಸಭೆಗೆ ಯಡಿಯೂರಪ್ಪ ವಿದಾಯ: ಶಿಕಾರಿಪುರದಲ್ಲಿ ಈ ಬಾರಿ ಬಿಜೆಪಿ ಗೆಲ್ಲಬಹುದೆ?

ವಿಧಾನಸಭೆಗೆ ಯಡಿಯೂರಪ್ಪ ವಿದಾಯ: ಶಿಕಾರಿಪುರದಲ್ಲಿ ಈ ಬಾರಿ ಬಿಜೆಪಿ ಗೆಲ್ಲಬಹುದೆ?

ಬಿ.ವೈ ವಿಜಯೇಂದ್ರರಿಗೆ ಪೈಪೋಟಿ ಕೊಡಲು ಸಜ್ಜಾಗಿದ್ದಾರೆ ಸಾದಲಿಂಗಾಯಿತ ಸಮುದಾಯದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾಗರಾಜಗೌಡ...

- Advertisement -
- Advertisement -

ಶಿಕಾರಿಪುರ ಕ್ಷೇತ್ರವನ್ನು ಮಾಜಿ ಮುಖ್ಯಮಂತ್ರಿ ಬಿಜೆಪಿ ಪಕ್ಷದ ಯಡಿಯೂರಪ್ಪ ತಮ್ಮ ಮಗ ವಿಜಯೇಂದ್ರರಿಗೆ ಬಿಟ್ಟುಕೊಡುವ ಘೋಷಣೆ ಮಾಡಿದ ಕ್ಷಣದಿಂದ ಇಲ್ಲಿನ ಚಟುವಟಿಕೆಗಳು ತೀವ್ರಗೊಂಡಿದೆ. ಈ ನಡುವೆ ಟಿಕೆಟ್ ಆಕಾಂಕ್ಷಿಗಳು ಎರಡು ಲಕ್ಷ ರೂಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಕಾಂಗ್ರೆಸ್ ಸುತ್ತೋಲೆ ಹೊರಡಿಸಿದ ಮೇಲೆ ಶಿಕಾರಿಪುರದಿಂದ ಬಳ್ಳಿಗಾವಿಯ ಪುಷ್ಪ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ. ಇವರ ಪತಿ ಪಿ.ಓ ಶಿವಕುಮಾರ್ ಎಂಬ ನಿವೃತ್ತ ಪೊಲೀಸ್ ಅಧಿಕಾರಿ. ಪುಷ್ಪ ಅವರ ಮಾವ ಕಡೂರು ಕ್ಷೇತ್ರದ ಶಾಸಕರಾಗಿದ್ದ ಓಂಕಾರ ಮೂರ್ತಿಯವರು. ಪಿ.ಓ ಶಿವಕುಮಾರ್ ತಮ್ಮ ಬಹುಪಾಲು ಸರ್ವಿಸ್‌ಅನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದವರು. ಆಳುವ ಪಕ್ಷದ ನಿಷ್ಠಾವಂತ ಸೇವಕರಾದ ಇವರು ಯಡಿಯೂರಪ್ಪನವರಿಗೆ ಹಿಂದಿನಿಂದಲೂ ನಿಷ್ಠರು. ಚುನಾವಣಾ ಖರ್ಚಿಗೆ ಬೇಕಾದಕ್ಕಿಂತಲೂ ಹೆಚ್ಚಿನ ಹಣವೂ ಇವರ ಬಳಿ ಇದೆ. ಆದರೆ, ಪುಷ್ಪರ ಚುನಾವಣಾ ಖರ್ಚನ್ನು ಯಡಿಯೂರಪ್ಪನವರೇ ನಿಭಾಯಿಸಬಲ್ಲರು. ಕುತೂಹಲವೆಂದರೆ ಪುಷ್ಪ ಸಾದಲಿಂಗಾಯಿತ ಸಮುದಾಯದವರೇ ಕೂಡ. ಅವರು ಕಾಂಗ್ರೆಸ್ ಕ್ಯಾಂಡಿಡೇಟ್ ಆಗಲು ಯಡಿಯೂರಪ್ಪನವರೇ ಸಂಚು ಮಾಡಿದ್ದಾರೆ ಎನ್ನಲಾಗುತ್ತಿದೆ. ಏಕೆಂದರೆ, ಮಗನನ್ನು ಸುಲಭವಾಗಿ ಗೆಲ್ಲಿಸಿಕೊಳ್ಳಲು, ಕಾಂಗ್ರೆಸ್‌ನಿಂದ ದುರ್ಬಲ ಕ್ಯಾಂಡಿಡೇಟ್ ನಿಲ್ಲಿಸಿ ಅಖಾಡ ನಿರ್ಮಿಸುವ ಚಾಣಾಕ್ಷತನ ಯಡಿಯೂರಪ್ಪನವರದು ಎಂಬ ಗುಲ್ಲಿದೆ. ಹೇಗಿದ್ದರೂ ಸಿದ್ದರಾಮಯ್ಯ ಯಡಿಯೂರಪ್ಪನವರ ನಡುವೆ ಸಂಬಂಧ ಚೆನ್ನಾಗಿದೆ; ಇನ್ನು ಡಿ.ಕೆ ಶಿವಕುಮಾರರೊಡನೆ ವ್ಯಾವಹಾರಿಕ ಸಂಬಂಧವೂ ಇದೆಯಂತೆ. ಆದ್ದರಿಂದ ಕಾಂಗ್ರೆಸ್‌ನಿಂದ ದುರ್ಬಲವಾದ ಅಭ್ಯರ್ಥಿ ನಿಲ್ಲಿಸುತ್ತಾರೆಂಬುದು ಶಿಕಾರಿಪುರದ ಜನಗಳ ಊಹೆ.

ಶಿಕಾರಿಪುರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕುರುಬ ಜನಾಂಗದ ಗೋಣಿ ಮಾಲತೇಶ್ ಶಕ್ತಿವಂತ ಅಭ್ಯರ್ಥಿಯಾದರೂ ವಿಜಯೇಂದ್ರ ಎದುರು ಗೆಲ್ಲಲಾಗುವುದಿಲ್ಲ. ಗೆಲ್ಲಬೇಕಾದರೆ ಇಲ್ಲಿನ ಬಹುಸಂಖ್ಯಾತರಾದ ಸಾದಲಿಂಗಾಯಿತರ ಓಟು ಪಡೆಯಬೇಕು. ಸಾದರು ತಮ್ಮ ಜನಾಂಗದ ಅಭ್ಯರ್ಥಿಯನ್ನು ಬಿಟ್ಟು ಇತರರಿಗೆ ಓಟು ಮಾಡಿದ ಇತಿಹಾಸವಿಲ್ಲ. ಈ ಹಿಂದೆ ಅಂತಹದೊಂದು ಇತಿಹಾಸ ಜರುಗುವುದಿತ್ತು. ಯಡಿಯೂರಪ್ಪ ಎದುರು ನಿಂತಿದ್ದ ನಗರದ ಮಹದೇವಪ್ಪ (1989-ಪಕ್ಷೇತರ ಅಭ್ಯರ್ಥಿ) ಕಡಿಮೆ ಅಂತರದಿಂದ (2274 ಮತಗಳು) ಸೋತರು. ಕಾಂಗ್ರೆಸ್‌ನವರು ಅಂದು ಮಹದೇವಪ್ಪನವರಿಗೆ ಸಹಾಯ ಮಾಡಿದ್ದರೆ ಗೆದ್ದುಬಿಡುತ್ತಿದ್ದರು. ಅದೊಂದು ಇತಿಹಾಸವಾಗಿ ದಾಖಲಾಗುತ್ತಿತ್ತು. ಅದಾಗಲಿಲ್ಲ. ಆದರೆ, ಆ ನಂತರ ಇನ್ನೊಂದು ಪ್ರಯೋಗವನ್ನು ಬಂಗಾರಪ್ಪ ಮಾಡಿದರು.

ಸಾದಲಿಂಗಾಯಿತರ ಮಹಾಲಿಂಗಪ್ಪನವರನ್ನು (1999-ಕಾಂಗ್ರೆಸ್) ಗೆಲ್ಲಿಸಿ ಎಸ್‌ಎಂ ಕೃಷ್ಣರಿಗೆ ವಿರೋಧ ಪಕ್ಷವೇ ಇಲ್ಲದಂತೆ ಮಾಡಿದ್ದರು. ಈಗ ಕಾಲ ಸರಿದಿದೆ; ಮತದಾರ ಹಳೆ ಕ್ಯಾಂಡಿಡೇಟ್‌ಗಳನ್ನ ಗುಜರಿಗೆ ಹಾಕಿ ಹೊಸ ಮುಖಗಳಿಗಾಗಿ ಹಂಬಲಿಸುತ್ತಿದ್ದಾರೆ. ಇಂತಹ ವೇಳೆಯಲ್ಲಿ ಯಡಿಯೂರಪ್ಪ ಭ್ರಷ್ಟ ಆರೋಪಗಳನ್ನು ಹಾಸುಹೊದ್ದಿರುವ ವಿಜಯೇಂದ್ರರನ್ನು ಶಿಕಾರಿಪುರಕ್ಕೆ ತಂದಿದ್ದಾರೆ. ಯಡಿಯೂರಪ್ಪ ಶಿಕಾರಿಪುರಕ್ಕೆ ತಂದಿರುವ ಕಟ್ಟಡಗಳನ್ನ ನೋಡಿದರೆ ವಿಜಯೇಂದ್ರ ಅನಾಯಾಸವಾಗಿ ಗೆಲ್ಲಬಹುದು. ಆದರೆ ಅದಾಗುವುದಿಲ್ಲ ಏಕೆಂದರೆ ವಿಜಯೇಂದ್ರ ಶಾಸಕ, ಮಂತ್ರಿ ಇದ್ಯಾವುದೂ ಆಗದೆ ಭ್ರಷ್ಟತೆಯ ಆರೋಪ ಹೊತ್ತಿದ್ದಾರೆ. ನಲವತ್ತು ಪರಸೆಂಟ್ ಕಮಿಷನ್ ದೂರು ಇವರ ಕೈಗೂ ಅಂಟಿದೆ. ಅದಕ್ಕಿಂತಲೂ ಸರಕಾರದ ಮಟ್ಟದ ಬಹುದೊಡ್ಡ ಹಗರಣಗಳಲ್ಲೂ ಇವರ ಹೆಸರು ಕೇಳಿಬಂದಿದೆ. ಕ್ಷೇತ್ರದ ಅನುದಾನಕ್ಕಾಗಿ ಶಾಸಕರು ಇವರೆದುರು ಕೈಕಟ್ಟಿ ವಿಧೇಯತೆಯಿಂದ ನಿಂತ ಉದಾಹರಣೆಗಳಿವೆ. ಆದ್ದರಿಂದ ಇವರ ಗೆಲುವು ಸ್ವಪಕ್ಷೀಯರಿಗೇ ಬೇಕಿಲ್ಲ. ಇನ್ನು ಕ್ಷೇತ್ರದ ಮತದಾರರ ಅಭಿಪ್ರಾಯ ಕೇಳಿದರೆ, ’ಎಲ್ಲೊ ಹೋಗುತ್ತಿದ್ದವರು ಇಲ್ಲಿ ಇಳಿದುಹೋಗಬಲ್ಲರೇ ಹೊರತು ಶಿಕಾರಿಪುರಕ್ಕೂ ಇವರಿಗೂ ಸಂಬಂಧ ಬೆಳೆಯಲಾರದು’ ಎನ್ನುತ್ತಾರೆ.

ನಾಗರಾಜಗೌಡ

ಯಡಿಯೂರಪ್ಪ ಕ್ಷೇತ್ರಕ್ಕೆ ಮಂಜೂರು ಮಾಡಿದ ಕಾರ್ಯಕ್ರಮಗಳು, ಒಂದು ಪಾರ್ಟಿ ಮತ್ತು ಒಂದು ವರ್ಗಕ್ಕೆ ಸೀಮಿತವಾಗಿ ಹಂಚಿಕೆಯಾಗಿದೆ. ಅದರಲ್ಲೂ ಲಂಚ ನಡೆದಿದೆಯೆಂದ ಆರೋಪವಿದೆ; ಗಂಗಾಕಲ್ಯಾಣದಂತಹ ಕಾರ್ಯಕ್ರಮದಲ್ಲೂ ಕೂಡ. ಯಡಿಯೂರಪ್ಪನವರ ಬಗ್ಗೆ ನೀವೆಂತಹ ಆಪಾದನೆ ಮಾಡಿದರೂ ಅದವರಿಗೆ ತಾಗುವುದಿಲ್ಲ. ಏಕೆಂದರೆ ಅವರ ರಾಜಕಾರಣದ ಹಿನ್ನೆಲೆಯೇ ಹಾಗಿದೆ. ಶಿಕಾರಿಪುರ, ಶಿವಮೊಗ್ಗ, ಬೆಂಗಳೂರಿನಿಂದ ಹಿಡಿದು ವಿದೇಶದವರೆಗೂ ಅವರ ಆಸ್ತಿ ಬೆಳೆದಿದೆ. ಆದ್ದರಿಂದ ನಮ್ಮ ಕಷ್ಟಸುಖದ ವಿಷಯಕ್ಕೆ ಸ್ಥಳೀಯ ನಾಯಕ ಬೇಕು ಎಂಬುದು ಸ್ಥಳೀಯರ ವಾದ. ಅದಕ್ಕಾಗಿ ಸ್ಥಳೀಯವಾಗಿ ನಾಗರಾಜಗೌಡ ಎಂಬ ಯುವಕನನ್ನು ಪ್ರಜ್ಞಾವಂತ ಮತದಾರರು ಮುಂದುಮಾಡಿದ್ದಾರೆ.

ನಾಗರಾಜಗೌಡ ಸಾದಲಿಂಗಾಯಿತ ಸಮುದಾಯದವರಾಗಿದ್ದು ಮೂರು ಬಾರಿ ಕೌನ್ಸಿಲರ್ ಆಗಿದ್ದರು; ಈಗ ಕಾಂಗ್ರೆಸ್ಸಿನ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ನಾಗರಾಜಗೌಡರ ತಂದೆ ಹಾಗೂ ಚಿಕ್ಕಪ್ಪ ಶಾಂತವೀರಪ್ಪಗೌಡ ಯಡಿಯೂರಪ್ಪನವರ ಜೊತೆಯಲ್ಲೇ ರಾಜಕಾರಣ ಮಾಡಿದವರು; ಮತ್ತು ಅವರ ಸಂಚುಗಳಿಗೆ ಬಲಿಯಾದವರು ಎಂದು ಆರೋಪಿಸಲಾಗುತ್ತದೆ. ಈಗ ತಮ್ಮ ಮಗನನ್ನೇ ತಂದು ಪ್ರತಿಷ್ಠಾಪಿಸುವುದರ ವಿರುದ್ಧ ಇವರೆಲ್ಲಾ ತಿರುಗಿಬಿದ್ದಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೊಡಬೇಕಾದರೆ ಕ್ಷೇತ್ರದ ಸಮೀಕ್ಷೆ ಮಾಡಿ ಜನಾಭಿಪ್ರಾಯ ಸಂಗ್ರಹಿಸುತ್ತದೆ ಎಂಬ ಸುದ್ದಿಯಿಂದ ಸೌಮ್ಯ ಸ್ವಭಾವದ ನಾಗರಾಜಗೌಡ ಈಗಾಗಲೇ ಕ್ಷೇತ್ರ ಸುತ್ತಿ ಸಮೀಕ್ಷಕರ ತೀರ್ಪಿಗಾಗಿ ಕಾಯುತ್ತಿದ್ದಾರೆ. ಶಿಕಾರಿಪುರದಲ್ಲಿ ಸಾದಲಿಂಗಾಯಿತರು, ಕುರುಬರು ಮತ್ತು ಮುಸ್ಲಿಮರು ಒಮ್ಮುಖವಾಗಿ ಮತಚಲಾಯಿಸಿದರೆ ಸಾಕು ಆ ಅಭ್ಯರ್ಥಿ ಗೆಲುವು ಸಲೀಸಾದಂತೆಯೇ!

ಇದನ್ನೂ ಓದಿ: ವಿಚಾರಕ್ರಾಂತಿಗೆ ಆಹ್ವಾನ: ಆಗ- ಈಗ

ಯಡಿಯೂರಪ್ಪರ ಬಗೆಗಿನ ಭ್ರಮನಿರಸನಕ್ಕೆ ಕಾರಣಗಳಿವೆ; ಅವರ ಅಧಿಕಾರಾವಧಿಯಲ್ಲಿ ಬೃಹತ್ ಕಟ್ಟಡಗಳು ಬಂದಿವೆ. ರಸ್ತೆ ಅಗಲೀಕರಣಗೊಂಡಿದೆ. ಆಸ್ಪತ್ರೆ ಕಟ್ಟಡವೂ ಇದೆ. ಕಲೆ ಸಾಹಿತ್ಯ ಸಂಗೀತದಿಂದ ದೂರವಿರುವ ಯಡಿಯರಪ್ಪನವರಿಗೂ ಇವುಗಳಿಗೆ ಸಂಬಂಧಿಸಿದ ಮಂದಿರಗಳಿಗೂ ಸಂಬಂಧವಿಲ್ಲ, ಹಾಗಾಗಿ ಇವೆಲ್ಲಾ ಹಾಳುಬಿದ್ದಿವೆ. ಅಲ್ಲದೆ, ಯಡಿಯೂರಪ್ಪ ರೈತರನ್ನು ಮುಂದಿಟ್ಟುಕೊಂಡು ಮಾಡಿದ ಚಳವಳಿ ಮಣ್ಣು ಸೇರಿದೆ; ಯಾವ ಬಗರ್ ಹುಕುಂ ರೈತರನ್ನ ಸಂಘಟಿಸಿ ಒಮ್ಮೆ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಜಾಥ ತೆಗೆದರೋ, ಅವರೇ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಕಡೆ ತಿರುಗಿಯೂ ನೋಡಲಿಲ್ಲ. ಆಗ ರೈತನಾಯಕ ಕಡಿದಾಳು ಶಾಮಣ್ಣನವರ ನೇತೃತ್ವದಲ್ಲಿ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಕಾಲ್ನಡಿಗೆಯಲ್ಲ ರೈತರ ಜಾಥ ನಡೆಯಿತು. ಈಗೇನಾಗಿದೆ ಎಂದರೆ ಬಗರ್ ಹುಕುಂ ರೈತರು ಒಕ್ಕಲೇಳುವಂತಾಗಿದೆ. ಇವರನ್ನು ಭೂಗಳ್ಳರು ಎಂದು ಪಟ್ಟಿಮಾಡಿ ನೋಟಿಸ್ ಜಾರಿಮಾಡಲು ತಯಾರಿ ನಡೆದಿತ್ತು. ಆದರೆ ರಾಜಕೀಯ ಕಾರಣಕ್ಕಾಗಿ ಅಪ್ಪಮಕ್ಕಳು ತಡೆಹಿಡಿಸಿದ್ದಾರೆ. ಈ ತಾತ್ಕಾಲಿಕ ತಡೆಯಿದ್ದರೂ ರೈತರ ಭಯವೇನೂ ಕಮ್ಮಿಯಾಗಿಲ್ಲ. ಇದು ಯಡಿಯೂರಪ್ಪನವರ ಮಗನ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ. ಶರಾವತಿ ಮುಳುಗಡೆಯ ರೈತರೂ ಇಲ್ಲಿದ್ದಾರೆ. ಅಲ್ಲಿ ಹತ್ತು ಎಕರೆ ಕಳೆದುಕೊಂಡವರು ಇಲ್ಲಿ ಎರಡು ಎಕರೆ ಮಾಲೀಕರು; ಅದೂ ಸರಕಾರಿ ಭೂಮಿ. ಮತ್ತು ಕೂಡ್ಲಿ ಶೃಂಗೇರಿ ಮಠದ ಆರುನೂರು ಎಕರೆ ಭೂಮಿಯಲ್ಲಿ ಸಂತ್ರಸ್ತರು ಬಗರ್ ಹುಕುಂ ಬೇಸಾಯ ಮಾಡುತ್ತಿದ್ದಾರೆ. ಶಿಕಾರಿಪುರ ಫಲವತ್ತಾದ ಭೂಪ್ರದೇಶ. ಇಲ್ಲಿ ಭೂಮಿ ನೀಡಿದರೆ ಸಾಕು, ಎರಡು ಎಕರೆಯಲ್ಲಿ ಬೇಕಾದರೂ ಜೀವಿಸಬಹುದು; ಆದರೆ ಅದಕ್ಕೂ ಸಂಚಕಾರ ಬಂದಿದೆ. ತಮ್ಮ ಬಹುದೀರ್ಘ ರಾಜಕಾರಣಕ್ಕೆ ಇಲ್ಲಿನ ರೈತರನ್ನು ಬಳಸಿಕೊಂಡು ಮೇಲೆ ಬಂದು ನಾಲ್ಕು ಬಾರಿ ಮುಖ್ಯಮಂತ್ರಿಯಾದ ಯಡಿಯೂರಪ್ಪ ತಮ್ಮ ಬಗರ್ ಹುಕುಂ ಕ್ಷೇತ್ರಕ್ಕೆ ವಾರಸುದಾರನನ್ನು ಸ್ಥಾಪಿಸಿ, ಆತನ ಖಾತೆಗೆ ಶಿಕಾರಿಪುರ ಕ್ಷೇತ್ರವನ್ನು ಸೇರಿಸುವ ಸಂಚಿನ ವಿರುದ್ಧ ಇಲ್ಲಿನ ಮತದಾರ ಸಿಡಿದೆದ್ದಿದ್ದಾನೆ. ಈ ಸಮಯದಲ್ಲಿ ಕಾಂಗ್ರೆಸ್ ಎಚ್ಚರಿಕೆಯಿಂದ ನಡೆದುಕೊಳ್ಳಬಹುದಾಗಿದೆ; ಏಕೆಂದರೆ ವಿಜಯೇಂದ್ರ ಮತ್ತು ನಾಗರಾಜಗೌಡ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟರೆ, ಮಧ್ಯೆ ಒಬ್ಬ ಸೋಲುವ ನಾಮಕಾವಸ್ಥೆಯ ಅಭ್ಯರ್ಥಿಯನ್ನು ಹಾಕಲು ಕುಮಾರಸ್ವಾಮಿ ಸಿದ್ಧವಾಗುವ ಸಾಧ್ಯತೆಯಿದೆ.

ಶಿಕಾರಿಪುರದ ಸಂಪೂರ್ಣ ಸಮೀಕ್ಷೆ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿಕಾರಿಪುರ: ಯಡಿಯೂರಪ್ಪ ಸಂಸ್ಥಾನದಲ್ಲಿ ಬಿಜೆಪಿಯೇ ಕಾಣೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...