ವೈದ್ಯಕೀಯ ವ್ಯಾಸಂಗದ ಪ್ರವೇಶಕ್ಕೆ ಅಗತ್ಯವಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ನಿಗದಿಯಾಗಿರುವ ದಿನದಂತೆ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ರೋಡ್ ಷೋ ನಡೆಸಲಿದ್ದು, ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಮೋದಿ ಆಗಮನ ಮತ್ತು ರೋಡ್ ಷೋ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗುತ್ತದೆ. ಹೀಗಾಗಿ ಮೇ 7ರಂದು ಪರೀಕ್ಷೆ ಬರೆಯಲಿರುವವರು ಪರದಾಡಬೇಕಾಗುತ್ತದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಎರಡು ದಿನ ಮೋದಿ ರೋಡ್ ಷೋ ನಡೆಸಲಿದ್ದಾರೆ. ಈಗಾಗಲೇ ಬದಲಾವಣೆಯಾಗಿದ್ದ ರೋಡ್ ಶೋ ಮಾರ್ಗ ಮತ್ತೆ ಬದಲಾವಣೆ ಮಾಡಲಾಗಿದೆ. ಭಾನುವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋ ಮಾರ್ಗ ಶನಿವಾರಕ್ಕೆ ನಿಗದಿಯಾಗಿದೆ. ಶನಿವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋ ಭಾನುವಾರ ನಡೆಯಲಿದೆ.
ಭಾನುವಾರ ನೀಟ್ ಪರೀಕ್ಷೆ ಹಿನ್ನೆಲೆ ಪ್ರಧಾನಿ ಕಚೇರಿ ನಿರ್ದೇಶನದಂತೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ಭಾನುವಾರ ಬೆಳಗ್ಗೆ 10 ಗಂಟೆಯಿಂದ 11.30ರವರೆಗೆ ಪ್ರಧಾನಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಸುರಂಜನ್‌ದಾಸ್ ಸರ್ಕಲ್‌ನಿಂದ ಟ್ರಿನಿಟಿ ಸರ್ಕಲ್‌ವರೆಗೆ ಮೋದಿ ರ್ಯಾಲಿ ನಡೆಸಲಿದ್ದಾರೆ.
ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ರೋಡ್ ಶೋ ನಡೆಯಲಿದೆ. ಜೆ.ಪಿ.ನಗರದ ಬ್ರಿಗೇಡ್ ಮಿಲೇನಿಯಂನಿಂದ ರೋಡ್ ಶೋ ಆರಂಭವಾಗಲಿದೆ. ಮಲ್ಲೇಶ್ವರಂನ ಸರ್ಕಲ್ ಮಾರಮ್ಮ ಟೆಂಪಲ್‌ವರೆಗೆ ಕಾರ್ಯಕ್ರಮ ನಿಗದಿಯಾಗಿದೆ. ಜೆ.ಪಿ. ನಗರ ಬ್ರಿಗೇಡ್ ಮಿಲೇನಿಯಂ- ಸಾರಕ್ಕಿ ಜಂಕ್ಷನ್- ಸೌತ್ ಎಂಡ್ ಸರ್ಕಲ್-ಕೃಷ್ಣರಾವ್ ಪಾರ್ಕ್- ರಾಮಕೃಷ್ಣ ಆಶ್ರಮ- ಮಕ್ಕಳ ಕೂಟ- ಟೌನ್ ಹಾಲ್- ಕಾವೇರಿ ಭವನ- ಮೆಜೆಸ್ಟಿಕ್- ಮಾಗಡಿ ರೋಡ್-GT ವರ್ಲ್ಡ್ ಮಾಲ್- ಹೌಸಿಂಗ್ ಬೋರ್ಡ್- ಬಸವೇಶ್ವರ ನಗರ- ಶಂಕರ ಮಠ ಸರ್ಕಲ್- ಮೋದಿ ಆಸ್ಪತ್ರೆ ರಸ್ತೆ- ನವರಂಗ್ ಸರ್ಕಲ್- ಮಹಾಕವಿ ಕುವೆಂಪು ರಸ್ತೆ- ಮಲ್ಲೇಶ್ವರಂ ಸರ್ಕಲ್ -ಸಂಪಿಗೆ ರಸ್ತೆ – ಸರ್ಕಲ್ ಮಾರಮ್ಮ ದೇವಸ್ಥಾನದವರೆಗೂ ರೋಡ್ ಶೋ ನಡೆಯಲಿದೆ.
ಭಾನುವಾರದ ರೋಡ್ ಶೋ ಮಾರ್ಗ: ಬೆಮೆಲ್ ಸರ್ಕಲ್- ತಿಪ್ಪಸಂದ್ರ ಮುಖ್ಯರಸ್ತೆ- ಇಎಸ್ಐ ಆಸ್ಪತ್ರೆ, CMH ರೋಡ್- ಇಂದಿರಾನಗರ- ಹಲಸೂರು ಪೊಲೀಸ್ ಸ್ಟೇಷನ್- ಎಂ.ಜಿ ರಸ್ತೆ- ಬ್ರಿಗೇಡ್ ರೋಡ್.


