Homeಕ್ರೀಡೆಕ್ರಿಕೆಟ್ವಿಶ್ವಕಪ್ ಫೈನಲ್‌ನಲ್ಲಿ ಭಾರತಕ್ಕೆ ಸೋಲು: 6ನೇ ಬಾರಿಗೆ ಆಸಿಸ್‌ಗೆ ಚಾಂಪಿಯನ್ ಪಟ್ಟ

ವಿಶ್ವಕಪ್ ಫೈನಲ್‌ನಲ್ಲಿ ಭಾರತಕ್ಕೆ ಸೋಲು: 6ನೇ ಬಾರಿಗೆ ಆಸಿಸ್‌ಗೆ ಚಾಂಪಿಯನ್ ಪಟ್ಟ

- Advertisement -
- Advertisement -

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾದ ವಿರುದ್ಧ 7ವಿಕೆಟ್‌ಗಳ ಸೋಲು ಕಂಡಿದ್ದು, 6ನೇ ಬಾರಿಗೆ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟಕ್ಕೇರಿದೆ.

ಕೇವಲ 47  ರನ್‌ಗಳಿಗೆ ತನ್ನ ಮೂರು ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾಗೆ ಟ್ರಾವಿಸ್ ಹೆಡ್ ಆಸರೆಯಾಗಿ ನಿಂತರು. ಅವರಿಗೆ ಲಬುಶೇನ್ ಅತ್ಯುತ್ತಮ ಸಾಥ್ ನೀಡಿದರು. ಟ್ರಾವೆಸ್‌ ಹೆಡ್‌ 120 ಎಸೆತಗಳಲ್ಲಿ 15 ಬೌಂಡರಿ 4 ಸಿಕ್ಸರ್‌ ಸಹಿತ 137 ರನ್‌ ಗಳಿಸಿ ವಿನ್ನಿಂಗ್‌ ಶಾಟ್‌ ಹೊಡೆಯುವ ಯತ್ನದಲ್ಲಿ ಮುಹಮ್ಮದ್‌ ಸಿರಾಜ್‌ ಬೌಲಿಂಗ್‌ ನಲ್ಲಿ ಶುಭಮನ್‌ ಗಿಲ್‌ ಗೆ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ಬಂದ ಗ್ಲೆನ್‌ ಮ್ಯಾಕ್ಸ್‌ವೆಲ್‌ 2 ರನ್‌ ಗಳಿಸುವ ಮೂಲಕ ಆಸ್ಟ್ರೇಲಿಯಾದ ಗೆಲುವಿಗೆ ಕಾರಣರಾಗಿದ್ದಾರೆ.

ಭಾರತದ ಪರ ಜಸ್ ಪ್ರೀತ್ ಬುಮ್ರಾ 2 ವಿಕೆಟ್ ಪಡೆದರೆ, ಶಮಿ 1 ವಿಕೆಟ್ ಪಡೆದರು.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ಆರಂಭ ಉತ್ತವಾಗಿದ್ದರೂ ನಂತರ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಆಸರೆಯಾದರು. ಈ ಇಬ್ಬರು ಆಟಗಾರರು ಅರ್ಧ ಶತಕ ಸಿಡಿಸಿ ಔಟಾದರು.

ಭಾರತ ಪರ ರೋಹಿತ್ ಶರ್ಮಾ 47 ರನ್ ಗಳಿಸಿ ಔಟಾದರೆ, ಶುಭ್ಮನ್ ಗಿಲ್ 4 ರನ್ ಗಳಿಗೆ ಔಟಾದರು. ಇನ್ನು ಶ್ರೇಯಸ್ ಅಯ್ಯರ್ 4 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ವಿರಾಟ್ ಕೊಹ್ಲಿ 54 ರನ್ ಸಿಡಿಸಿ ಔಟಾದರೆ ಕೆಎಲ್ ರಾಹುಲ್ 66 ರನ್ ಗೆ ಔಟಾದರು. ಬಳಿಕ ಬಂದ ರವೀಂದ್ರ ಜಡೇಜಾ 9 ರನ್ ಬಾರಿಸಿ ಹೆಜಲ್ವುಡ್ ಎಸೆತದಲ್ಲಿ ಕೀಪರ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ 18 ರನ್ ಗಳಿಸಿ ಔಟಾದರೆ, ಶಮಿ 6, ಜಸ್ ಪ್ರೀತ್ ಬುಮ್ರಾ 1 ಮತ್ತು ಕುಲದೀಪ್ ಯಾದವ್ 10 ರನ್ ಗಳಿಸಿ ಔಟಾದರು. ಇನ್ನು ಮೊಹಮ್ಮದ್ ಸಿರಾಜ್ 9 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ.

ಆಸ್ಟ್ರೇಲಿಯಾ ಪರ ಬೌಲಿಂಗ್‌ನಲ್ಲಿ ಮಿಚೆಲ್ ಸ್ಟಾರ್ಕ್ 3, ಪ್ಯಾಟ್ ಕಮಿನ್ಸ್ ಮತ್ತು ಹೆಜಲ್ವುಡ್ ತಲಾ 2 ವಿಕೆಟ್, ಗ್ಲೇನ್ ಮ್ಯಾಕ್ಸ್ ವೇಲ್ ಮತ್ತ ಜಂಪಾ ತಲಾ 1 ವಿಕೆಟ್ ಪಡೆದಿದ್ದಾರೆ.

ಆಸ್ಟ್ರೇಲಿಯಾ ವಿಜಯದ ರನ್ ಹೊಡೆಯುತ್ತಿದ್ದಂತೆ ಭಾರತದ ಆಟಗಾರರ ಕಣ್ಣಾಲಿಗಳು ತುಂಬಿದ್ದವು. ರೋಹಿತ್ ಶರ್ಮಾ ತಲೆ ತಗ್ಗಿಸಿಕೊಂಡು ಪೆವಿಲಿಯನ್‌ನತ್ತ ಹೊರಟರು. ಸಿರಾಜ್ ಅವರನ್ನು ಬೂಮ್ರಾ ಸಮಾಧಾನ ಪಡಿಸುತ್ತಾ ತಮ್ಮ ಕಣ್ಣುಗಳನ್ನೂ ಒರೆಸಿಕೊಂಡರು. ವಿರಾಟ್ ಮುಖದಲ್ಲಿಯೂ ಜೀವಕಳೆ ಬತ್ತಿಹೋಗಿತ್ತು. ಕೆ.ಎಲ್. ರಾಹುಲ್ ಕುಸಿದು ಕುಳಿತಿದ್ದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೈಕ್ ಮುಂದೆ ಬಂದು ನಿಂತ ರೋಹಿತ್, ’ಇವತ್ತಿನ ದಿನದಲ್ಲಿ ನಾವು ನಿರೀಕ್ಷಿಸಿದಷ್ಟು ಚೆನ್ನಾಗಿ ಆಡಲಿಲ್ಲ. ಇನ್ನೂ 20–30 ರನ್‌ಗಳನ್ನು ಹೆಚ್ಚು ಗಳಿಸಿದ್ದರೆ ಚೆನ್ನಾಗಿತ್ತು. ಬ್ಯಾಟಿಂಗ್ ಚೆನ್ನಾಗಿರಲಿಲ್ಲ ಎಂದು ಹೇಳಿದ್ದಾರೆ. 280 ರನ್‌ಗಳ ಗುರಿಯನ್ನು ಒಡ್ಡುವುದು ನಮ್ಮ ಗುರಿಯಾಗಿತ್ತು. ವಿರಾಟ್ ಮತ್ತು ರಾಹುಲ್ ಬ್ಯಾಟಿಂಗ್ ಮಾಡುವಾಗ ಇದು ಸಾಧ್ಯ ಎನಿಸಿತ್ತು. ನಾಲ್ಕನೇ ವಿಕೆಟ್‌ಗೆ ಅವರು ಉತ್ತಮ ಜೊತೆಯಾಟ ಹೆಣೆದಿದ್ದರು. ಆದರೆ ನಂತರ ವಿಕೆಟ್‌ಗಳು ಉರುಳತೊಡಗಿದಾಗ ಹಿನ್ನಡೆಯಾಯಿತು ಎಂದು ಹೇಳಿದ್ದಾರೆ.

ಇದನ್ನು ಓದಿ: ಯಮನ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಭಾರತೀಯ ನರ್ಸ್‌ನ್ನು ರಕ್ಷಿಸಲು ತಾಯಿಯ ಪರದಾಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್ ವಿಶೇಷ ಆರ್ಥಿಕ ವಲಯದಿಂದ ಪಡೆದ ವಿದ್ಯುತ್‌ಗಾಗಿ ಅದಾನಿ ಕಂಪನಿಗೆ ಕಸ್ಟಮ್ಸ್ ಸುಂಕ ವಿನಾಯಿತಿ ನೀಡಲು ಸುಪ್ರೀಂ ಅನುಮತಿ

ಮುಂದ್ರಾದಲ್ಲಿರುವ ತನ್ನ SEZ ಘಟಕದಿಂದ ದೇಶೀಯ ಸುಂಕ ಪ್ರದೇಶಕ್ಕೆ (DTA) ಸರಬರಾಜು ಮಾಡುವ ವಿದ್ಯುತ್ ಮೇಲಿನ ಕಸ್ಟಮ್ಸ್ ಸುಂಕವನ್ನು ವಿಧಿಸುವುದರಿಂದ ಅದಾನಿ ಪವರ್‌ಗೆ ವಿನಾಯಿತಿ ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್‌ನ ಜೂನ್ 28, 2019...

ಅರಣ್ಯ ಭೂಮಿ ಒತ್ತುವರಿ ಆರೋಪ; ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಕಾಂಗ್ರೆಸ್, ಬಿಜೆಪಿ ಶಾಸಕರು

ಬೀದರ್ ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಹುಮನಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಪಾಟೀಲ್ ಹಾಗೂ ಕಾಂಗ್ರೆಸ್ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್...

ಅಮೆರಿಕಾ: ಭಾರತೀಯ ಮಹಿಳೆ ಶವವಾಗಿ ಪತ್ತೆ, ಮಾಜಿ ಗೆಳೆಯ ಹತ್ಯೆ ಮಾಡಿ ಭಾರತಕ್ಕೆ ಪರಾರಿಯಾಗಿರುವ ಶಂಕೆ

ಕಳೆದ ವಾರ ನಾಪತ್ತೆಯಾಗಿದ್ದ 27 ವರ್ಷದ ಭಾರತೀಯ ಮಹಿಳೆ ನಿಕಿತಾ ಗೋಡಿಶಾಲಾ ಅಮೆರಿಕಾದ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಆಕೆಯ ಮಾಜಿ ಗೆಳೆಯನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆತ ಆಕೆಯನ್ನು ಕೊಂದು ಭಾರತಕ್ಕೆ...

ಐಪಿಎಲ್ ಪ್ರಸಾರ ಅನಿರ್ದಿಷ್ಟಾವಧಿಗೆ ನಿಷೇಧಿಸಲು ಆದೇಶಿಸಿದ ಬಾಂಗ್ಲಾದೇಶ ಸರ್ಕಾರ

2026 ರ ಋತುವಿನ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ (ಐಪಿಎಲ್‌) ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೆಕೆಆರ್‌ ಕೈಬಿಟ್ಟ ಬಳಿಕ, ಐಪಿಎಲ್‌ ಪ್ರಸಾರ ಮತ್ತು ಪ್ರಚಾರದ ಮೇಲೆ ಬಾಂಗ್ಲಾದೇಶ ಸರ್ಕಾರ ಅನಿರ್ದಿಷ್ಟಾವಧಿ ನಿಷೇಧ ಹೇರಿದೆ. ಈ ನಿರ್ಧಾರವನ್ನು...

‘ನನ್ನನ್ನು ಸಂತೋಷಗೊಳಿಸುವುದು ಮುಖ್ಯ’: ಭಾರತದ ಮೇಲೆ ಸುಂಕ ಏರಿಸುವ ಬೆದರಿಕೆ ಹಾಕಿದ ಟ್ರಂಪ್

‘ರಷ್ಯಾದ ತೈಲ ಸಮಸ್ಯೆಯನ್ನು ಬಗೆಹರಿಸಲು ಸಹಾಯ ಮಾಡದಿದ್ದಲ್ಲಿ ಭಾರತದ ಮೇಲಿನ ಸುಂಕ ಹೆಚ್ಚಿಸುತ್ತೇವೆ’ ಎಂದು ಟ್ರಂಪ್ ಏರ್‌ಫೋರ್ಸ್ ಒನ್ ವಿಮಾನ ಪ್ರಯಾಣದ ವೇಳೆ ವರದಿಗಾರರೊಂದಿಗೆ ತಿಳಿಸಿದ್ದನ್ನು ‘ಎಎನ್‌ಐ’ ಸುದ್ದಿ ಸಂಸ್ಥೆ ‘ಎಕ್ಸ್’ನಲ್ಲಿ ಪ್ರಕಟಿಸಿದೆ. ರಷ್ಯಾ...

ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್-ಶಾರ್ಜೀಲ್ ಇಮಾಮ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದ್ದು ಯಾಕೆ?

2020 ರ ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ನಿರಾಕರಿಸಿದೆ. ಆದರೆ, ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ ಉರ್ ರೆಹಮಾನ್,...

ವೆನೆಜುವೆಲಾ-ಅಮೇರಿಕಾ ಸಂಘರ್ಷ: ಭಾರತದ ಆರ್ಥಿಕತೆಯ ಮೇಲಾಗುವ ಪರಿಣಾಮಗಳೇನು?

ಅಮೆರಿಕ ಮತ್ತು ವೆನೆಜುವೆಲಾ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಂತೆ, ಈ ಸಂಘರ್ಷವು ಭಾರತದ ತೈಲ ಆಮದು ಮಸೂದೆ ಮತ್ತು ವ್ಯಾಪಾರ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದೇ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ. ವೆನೆಜುವೆಲಾ ದೇಶದ ಅಧ್ಯಕ್ಷ...

ಮಹಾರಾಷ್ಟ್ರ| ಬಂಗಾಳಿ ಭಾಷೆ ಮಾತನಾಡಿದ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರ ಮೇಲೆ ಹಲ್ಲೆ

ತಮ್ಮ ಮಾತೃ ಭಾಷೆ ಬಂಗಾಳಿಯಲ್ಲಿ ಮಾತನಾಡಿದ್ದಕ್ಕಾಗಿ ಬಾಂಗ್ಲಾದೇಶೀಯರು ಎಂದು ಶಂಕಿಸಿ ಪಶ್ಚಿಮ ಬಂಗಾಳದ ಪಶ್ಚಿಮ ಬರ್ಧಮಾನ್ ಜಿಲ್ಲೆಯ ಮೂವರು ವಲಸೆ ಕಾರ್ಮಿಕರ ಮೇಲೆ ಮಹಾರಾಷ್ಟ್ರದಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಕಾರ್ಮಿಕರು ತಮ್ಮ...

ವೆನೆಜುವೆಲಾ ದಾಳಿಯ ನಂತರ ಕೊಲಂಬಿಯಾ, ಕ್ಯೂಬಾ, ಮೆಕ್ಸಿಕೊ, ಗ್ರೀನ್‌ಲ್ಯಾಂಡ್‌ಗೆ ಟ್ರಂಪ್ ಬೆದರಿಕೆ

ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡೊರೊ ಅವರನ್ನು ವಾಷಿಂಗ್ಟನ್ ಅಪಹರಿಸಿದ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಮತ್ತು ಕ್ಯೂಬಾ ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ. ಏರ್ ಫೋರ್ಸ್ ಒನ್‌ನಲ್ಲಿ ವರದಿಗಾರರನ್ನು...

ಯುಎಸ್‌| ಐತಿಹಾಸಿಕ ಪಾರ್ಸಿಪ್ಪಾನಿ ನಗರದ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಭಾರತೀಯ-ಅಮೆರಿಕನ್ ಪ್ರಜೆ ಪುಲ್ಕಿತ್ ದೇಸಾಯಿ

ಅಮೆರಿಕದ ನೌಕಾಪಡೆಯ ಅನುಭವಿ ಮತ್ತು ತಂತ್ರಜ್ಞಾನ ವೃತ್ತಿಪರ ಪುಲ್ಕಿತ್ ದೇಸಾಯಿ ಅವರು ನ್ಯೂಜೆರ್ಸಿಯ ಪಾರ್ಸಿಪ್ಪಾನಿಯ ಮೇಯರ್ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಭಾರೀ ಪೈಪೋಟಿಯ ಸ್ಪರ್ಧೆಯ ಚುನಾವಣೆಯ ನಂತರ ಅಧಿಕಾರ ವಹಿಸಿಕೊಂಡ ಮೊದಲ ಭಾರತೀಯ-ಅಮೆರಿಕನ್...