Homeಮುಖಪುಟಮೋದಿ ಅದಾನಿಗಾಗಿ ಹಗಲು-ರಾತ್ರಿ ಕೆಲಸ ಮಾಡುತ್ತಾರೆ: ರಾಹುಲ್‌ ಗಾಂಧಿ

ಮೋದಿ ಅದಾನಿಗಾಗಿ ಹಗಲು-ರಾತ್ರಿ ಕೆಲಸ ಮಾಡುತ್ತಾರೆ: ರಾಹುಲ್‌ ಗಾಂಧಿ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯಮಿ ಗೌತಮ್‌ ಅದಾನಿಗಾಗಿ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದು, ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದಾರೆ.

ರಾಜಸ್ಥಾನ ವಿಧಾನಸಭೆ ಚುನಾವಣೆ ಹಿನ್ನೆಲೆ ಬುಂಡಿ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಪ್ರಧಾನಿ ಮೋದಿ ಭಾರತ್ ಮಾತಾ ಕಿ ಜೈ ಬದಲಿಗೆ ಅದಾನಿ ಜೀ ಕಿ ಜೈ ಎಂದು ಹೇಳಬೇಕು ಏಕೆಂದರೆ ಅವರು ಅದಾನಿಗಾಗಿ ಹಗಲು-ರಾತ್ರಿ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.

ಬಡವರು, ರೈತರು, ಕೂಲಿಕಾರ್ಮಿಕರು ಭಾರತ ಮಾತೆ ಎಂದ ಅವರು, ದೇಶದಲ್ಲಿ ಈ ವರ್ಗದವರ ಪಾಲ್ಗೊಳ್ಳುವಿಕೆ ಖಾತ್ರಿಯಾದಾಗ ಭಾರತ ಮಾತೆಯ ಜೈ ಎಂದಾಗುತ್ತದೆ. ಪ್ರಧಾನಿಯವರು 2 ಹಿಂದೂಸ್ಥಾನಗಳನ್ನು ಮಾಡಲು ಬಯಸುತ್ತಿದ್ದಾರೆ. ಒಂದನ್ನು ಅದಾನಿಗಾಗಿ ಮತ್ತು ಇನ್ನೊಂದು ಬಡವರಿಗಾಗಿ ಎಂದು ಹೇಳಿದ ರಾಹುಲ್‌ ಗಾಂಧಿ, ಏನೇ ಆದರೂ ಮೋದಿ ಜಾತಿ ಗಣತಿ ನಡೆಸುವುದಿಲ್ಲ. ಕಾಂಗ್ರೆಸ್ ಪಕ್ಷ ಜಾತಿ ಗಣತಿ ಮಾಡುತ್ತದೆ ಎಂದು ಹೇಳಿದ್ದಾರೆ.

ನಾವು ರಾಜಸ್ಥಾನದಲ್ಲಿ ಜಾತಿ ಗಣತಿಗೆ ಆದೇಶ ನೀಡಿದ್ದೇವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ, ನಮ್ಮ ಮೊದಲ ಕೆಲಸವು ಜಾತಿ ಗಣತಿಗೆ ಆದೇಶಿಸುವುದಾಗಿದೆ. ನಿಮ್ಮ ನಿಜವಾದ ಪಾಳ್ಗೊಳ್ಳುವಿಕೆ ಆಗ ಪ್ರಾರಂಭವಾಗುತ್ತದೆ. ಭಾರತಮಾತೆ ವಿಜಯಶಾಲಿಯಾಗುತ್ತಾಳೆ ಎಂದು ಹೇಳಿದ್ದಾರೆ.

ದೇಶದ ಯಾವುದೇ ದೊಡ್ಡ ಕೈಗಾರಿಕೋದ್ಯಮಿ ಒಬಿಸಿ, ದಲಿತ ಅಥವಾ ಬುಡಕಟ್ಟು ಜನಾಂಗದವರಿದ್ದಾರ? ಇದ್ದರೆ ಭಾಷಣ ಮಾಡುವುದನ್ನು ನಿಲ್ಲಿಸುತ್ತೇನೆ. ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗೆಹ್ಲೋಟ್ ಸರ್ಕಾರ ಪ್ರಾರಂಭಿಸಿದ ಎಲ್ಲಾ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಬಿಜೆಪಿಗರು ಸ್ಥಗಿತಗೊಳಿಸುತ್ತಾರೆ ಎಂದು ಹೇಳಿದ್ದಾರೆ.

ಮೋದಿ ಅವರು ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ತಾನು ಒಬಿಸಿ ಎಂದು ಹೇಳುತ್ತಿದ್ದರು ಆದರೆ ಸಂಸತ್ತಿನಲ್ಲಿ ಜಾತಿ ಗಣತಿಗೆ ಒತ್ತಾಯಿಸಿದ ತಕ್ಷಣ, ಪ್ರಧಾನಿ ಬೇರೆಯೇ ಹೇಳಲು ಪ್ರಾರಂಭಿಸಿದರು. ಮೋದಿ ಜೀ, ಒಂದು ಕೆಲಸ ಮಾಡಿ, ದೇಶದಲ್ಲಿ ಎಷ್ಟು ಒಬಿಸಿ ಇದ್ದಾರೆ ಎಂದು ಜಗತ್ತಿಗೆ ತಿಳಿಸಿ ಎಂದು ನಾನು ಕೇಳಿದೆ. ಅವರು ಹೊಸ ಭಾಷಣವನ್ನು ಪ್ರಾರಂಭಿಸಿ ದೇಶದಲ್ಲಿ ಬಡವರು ಮಾತ್ರ ಇದ್ದಾರೆ ಎಂದು ಹೇಳಿದರು ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಇದನ್ನು ಓದಿ: ಯಮನ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಭಾರತೀಯ ನರ್ಸ್‌ನ್ನು ರಕ್ಷಿಸಲು ತಾಯಿಯ ಪರದಾಟ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿಯ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಎನ್‌ಡಿಎ ಮೈತ್ರಿ ಪಕ್ಷ ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ರೋಹಿತ್...