Homeಮುಖಪುಟಸದಾಶಿವ ಆಯೋಗದ ವರದಿಗೆ ವಿರೋಧ: ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ನಡೆಗೆ ತೀವ್ರ ಖಂಡನೆ

ಸದಾಶಿವ ಆಯೋಗದ ವರದಿಗೆ ವಿರೋಧ: ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ನಡೆಗೆ ತೀವ್ರ ಖಂಡನೆ

ಕರ್ನಾಟಕದಲ್ಲಿ ದಸಂಸದಲ್ಲಿರುವ ಮುಂಚೂಣಿ ನಾಯಕರೂ ಕೂಡ ಹೊಲೆಯರೇ ಆಗಿದ್ದು, ಅವರೆಲ್ಲರೂ ಒಳ ಮೀಸಲಾತಿ ಮತ್ತು ಸದಾಶಿವ ಆಯೋಗದ ಪರವಾಗಿದ್ದಾರೆ - ಹುಲಿಕುಂಟೆ ಮೂರ್ತಿ

- Advertisement -
- Advertisement -

ಒಳ ಮೀಸಲಾತಿಗೆ ಸಂಬಂಧಿಸಿದಂತೆ ಪರ-ವಿರೋಧದ ಚರ್ಚೆಗಳ ನಡುವೆ, ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿಯನ್ನು ರದ್ದುಪಡಿಸುವಂತೆ ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿರುವ ಛಲವಾದಿ ಸಂಘವು, “ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ. ಸದಾಶಿವ ಆಯೋಗದ ವರದಿಯು ಅವೈಜ್ಞಾನಿಕವಾಗಿದ್ದು, ತಕ್ಷಣವೇ ರದ್ದುಪಡಿಸಬೇಕು” ಎಂದು ಹೇಳಿದೆ.

ಇದನ್ನೂ ಓದಿ: ಒಳಮೀಸಲಾತಿಯ ಕುರಿತು ಡಾ. ಬಿ.ಆರ್. ಅಂಬೇಡ್ಕರ್‌ರವರ ಆಶಯ ಎನು? – ಡಾ.ನರಸಿಂಹ ಗುಂಜಹಳ್ಳಿ

“ನಮ್ಮ ಜನಾಂಗದವರನ್ನು ಆದಿ ಕರ್ನಾಟಕ, ಆದಿ ದ್ರಾವಿಡ, ಹೊಲೆಯ, ಬಲಗೈ, ಛಲವಾದಿ, ತಳವಾರ ಮತ್ತು ಮಾದರ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಆದರೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾದಿಗ ಜನಾಂಗದವರು ಸಹ ಆದಿ ಕರ್ನಾಟಕ, ಆದಿ ದ್ರಾವಿಡ, ಮಾದರ ಎಂಬ ಹೆಸರುಗಳಿಂದ ಕರೆಯಲ್ಪಡುತ್ತಿದ್ದು, ಜಾತಿ ಪ್ರಮಾಣಪತ್ರವನ್ನೂ ಪಡೆಯುತ್ತಿದ್ದಾರೆ. ಒಟ್ಟು 16 ಜಿಲ್ಲೆಗಳಲ್ಲಿ ಚಲವಾದಿ ಮತ್ತು ಮಾದಿಗ ಜನಾಂಗದವರನ್ನು ಆದಿ ಕರ್ನಾಟಕ, ಆದಿ ದ್ರಾವಿಡ ಎಂದು ಹಿಂದಿನ ಸರ್ಕಾರ ಗೊಂದಲ ಸೃಷ್ಟಿಸಿದೆ. ಸದಾಶಿವ ಆಯೋಗವು ಎರಡೂ ಜಾತಿಗಳನ್ನು ಮಾದಿಗ ಸಮುದಾಯ ಎಂದು ನಮೂದಿಸಿದೆ. ವಾಸ್ತವದಲ್ಲಿ ಮೈಸೂರು ಪ್ರಾಂತ್ಯದಲ್ಲಿ ಸುಮಾರು 30 ಲಕ್ಷ ಮಂದಿ ಆದಿ ಕರ್ನಾಟಕದವರಿದ್ದಾರೆ. ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ 15 ಲಕ್ಷವಿದ್ದು, ರಾಜ್ಯದಲ್ಲಿ 45 ಲಕ್ಷ ಮಂದಿ ಛಲವಾದಿ ಜನಾಂಗದವರಿದ್ದಾರೆ. ಈ ಗೊಂದಲವನ್ನು ಆಯೋಗವು ಸರಿಪಡಿಸಿಲ್ಲ. ಹಾಗಾಗಿ ದ್ವಿಸದಸ್ಯ ಆಯೋಗವನ್ನು ನೇಮಕ ಮಾಡಿ, ಪರಿಶಿಷ್ಟ ಜಾತಿ ಛಲವಾದಿ(ಬಲಗೈ) ಜನಾಂಗದ ಸಮೀಕ್ಷೆ ನಡೆಸುವ ಮೂಲಕ ಒಳ ಮೀಸಲಾತಿಯನ್ನು ಜಾರಿ ಮಾಡಬೇಕು” ಎಂದು ಒತ್ತಾಯಿಸಿದೆ.

ಇದರ ಕುರಿತು ನಾನುಗೌರಿ.ಕಾಂ ಗೆ ಪ್ರತಿಕ್ರಿಯಿಸಿದ ಒಳಮೀಸಲಾತಿಗಾಗಿ ಮೊದಲಿನಿಂದಲೂ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಡಾ.ಪೂರ್ಣಾನಂದ, “ಹಳೆ ಮೈಸೂರು ಪ್ರಾಂತದಲ್ಲಿ ಆದಿ ದ್ರಾವಿಡ ಎಂದರೆ, ಮಾದಿಗರು, ಆದಿ ಕರ್ನಾಟಕ ಎಂದರೆ, ಹೊಲೆಯರು ಎಂದು ಅರ್ಥ. ಇದು ಗೊಂದಲ ಇರುವುದು ನಿಜ. ಆದರೆ ಸದಾಶಿವ ಆಯೋಗದಲ್ಲಿ ಈ ಗೊಂದಲವಿಲ್ಲ. ವರದಿಯಲ್ಲಿ ನೇರವಾಗಿ ಹೊಲೆಯ, ಮಾದಿಗ ಎಂದು ನಮೂದಿಸಲಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: ಎಲ್ಲರನ್ನೂ ದಾಟಿ ಮುಂದಕ್ಕೆ ಸಾಗಬೇಕಿದೆ ಒಳಮೀಸಲಾತಿ ಹೋರಾಟ – ಭಾಸ್ಕರ್ ಪ್ರಸಾದ್

“ಸದಾಶಿವ ಆಯೊಗವನ್ನು ರದ್ದು ಮಾಡಿ ಎಂದು ಹೇಳುತ್ತಿರುವವರು ನಿಜವಾಗಿಯೂ ಆಘುಂತಕರು. ಪ್ರಬಲರಾಗಿರುವವರು ತಮಗೆ ಸಿಗುತ್ತಿರುವ ಸೌಲಭ್ಯಗಳನ್ನು ಹಂಚಿಕೊಳ್ಳಲು ಮನಸ್ಸು ಮಾಡುತ್ತಿಲ್ಲ. ಈ ಮೂಲಕವಾದರೂ ಇನ್ನೊಂದಷ್ಟು ವರ್ಷ ಈ ಒಳ ಮೀಸಲಾತಿ ಪ್ರಕ್ರಿಯೆ ಮುಂದೆ ಹೋಗಲಿ ಎಂಬುದು ಅವರ ಆಶಯವಾಗಿದೆ. ಈಗಾಗಲೇ ಮಾದಿಗರು ಕಳೆದ 25 ವರ್ಷಗಳಿಂದ ಯಾವುದೇ ಸೌಲಭ್ಯಗಳು ಸಿಗದೇ ವಂಚಿತರಾಗಿದ್ದಾರೆ. ಕಳೆದ 10-15 ವರ್ಷಗಳಲ್ಲಿ ಮೀಸಲಾತಿ ಅಡಿಯಲ್ಲಿ ಸರ್ಕಾರಿ ಕೆಲಸ ತೆಗೆದುಕೊಂಡಿರುವವರ ಪಟ್ಟಿಯನ್ನು ಗಮನಿಸಿದಾಗ ಮಾದಿಗರ ಸಂಖ್ಯೆ ತೀರಾ ಕಡಿಮೆಯಿದೆ. ಹಾಗಾಗಿ, ಇವರಿಗೆ ನ್ಯಾಯ ಸಿಗಬೇಕು ಎನ್ನುವುದಾದರೆ, ಸದಾಶಿವ ಆಯೋಗವನ್ನು ಜಾರಿಗೊಳಿಸಿ, ಒಳ ಮೀಸಲಾತಿಯನ್ನು ಜಾರಿಗೆ ತರಬೇಕು. ಇದು ನಡೆದರೆ ಎಡಗೈ ಮತ್ತು ಬಲಗೈ ಇಬ್ಬರಿಗೂ ಸಮಾನ ಅವಕಾಶಗಳು ಸಿಗುತ್ತದೆ. ಇದರ ಜೊತೆಗೆ ಈಗಾಗಲೆ ನಡೆದಿರುವ ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡಿದರೆ ಈ ಗೊಂದಲಗಳೂ ಪರಿಹಾರವಾಗುತ್ತದೆ. ಆದರೆ ಈ ಸಮಾನ ಅವಕಾಶಗಳನ್ನು ಹಂಚಿಕೊಳ್ಳಲು ಪ್ರಬಲರು ಇಚ್ಚಿಸುತ್ತಿಲ್ಲ. ಹಾಗಾಗಿಯೇ ಹೀಗೆ ಆಯೋಗದ ವರದಿಯನ್ನು ರದ್ದುಗೊಳಿಸಿ ಎಂದು ಹೇಳುತ್ತಿದ್ದಾರೆ” ಎಂದು ಹೇಳಿದರು.

“ಪ್ರತಿಯೊಂದು ಮೀಸಲಾತಿ ವರ್ಗದಲ್ಲಿಯೂ (ಇತರೆ ಹಿಂದುಳಿದ ವರ್ಗಗಳು ಸೇರಿದಂತೆ) ಈ ಒಳ ಮೀಸಲಾತಿ ಜಾರಿಗೆ ಬರಬೇಕು. ಇಲ್ಲವಾದರೆ ಕೇವಲ ಮುಂಚೂಣಿಯಲ್ಲಿರುವ 2-3 ಜಾತಿಗಳು ಮಾತ್ರ ಸೌಲಭ್ಯ ಪಡೆದುಕೊಂಡು ಮುಂದುವರಿಯುತ್ತವೆ. ಉದಾ: 2ಎ ವರ್ಗದಲ್ಲಿ ಹತ್ತಾರು ಜಾತಿಗಳಿವೆ. ಆದರೆ ಕೇವಲ ಕುರುಬರು ಮಾತ್ರ ಬಹುತೇಕ ಮೀಸಲಾಗಿ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಉಳಿದ ಜಾತಿಗಳಿಗೆ ಅನ್ಯಾಯ ಆಗುತ್ತಿದೆ. ಈ ಕಾರಣದಿಂದಲೆ ಒಳ ಮೀಸಲಾತಿ ಎಲ್ಲಾ ವರ್ಗಗಳಲ್ಲಿಯೂ ಜಾರಿಯಾಗಬೇಕು ಎನ್ನುವುದು ನನ್ನ ಆಶಯ” ಎಂದು ವಿವರಿಸಿದರು.

ಇದನ್ನೂ ಓದಿ: ಒಳಮೀಸಲಾತಿಯು ಒಳಗೇ ಕುಯ್ಯದಂತಿರಲು…….

ಹುಲಿಕುಂಟೆ ಮೂರ್ತಿಯವರು ಮಾತನಾಡಿ, “ಇದು ಸಮುದಾಯಗಳ ಬಗ್ಗೆ ಅವರಿಗಿರುವ ಅಜ್ಞಾನವನ್ನು ಎತ್ತಿತೋರಿಸುತ್ತದೆ. ಜೊತೆಗೆ ಮೀಸಲಾತಿಯ ಪರಿಕಲ್ಪನೆ ಮತ್ತು ಒಳ ಮೀಸಲಾತಿಯ ಪರಿಕಲ್ಪನೆಯನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂಬುದು ತಿಳಿದುಬರುತ್ತದೆ. ಯಾವುದೇ ಒಂದು ಸಮುದಾಯ ತನಗಾಗುತ್ತಿರುವ ಅನ್ಯಾಯದ ವಿರುದ್ಧ ದನಿಯೆತ್ತುತ್ತಿದೆ ಎಂದಾಗ, ಅದಕ್ಕೆ ಸಹಕರಿಸುವ ಗುಣ ಇರಬೇಕು. ಇಲ್ಲವಾದರೆ ಇಂತಹ ಅಭಿಪ್ರಾಯಗಳು ಸಮುದಾಯಗಳ ಒಳಗೆ ಬಿರುಕನ್ನುಂಟುಮಾಡುತ್ತದೆ. ಇದರಿಂದ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ನಿಶ್ಚಿತ” ಎಂದು ಹೇಳಿದರು.

“ಬೇಕಿದ್ದರೆ ಸದಾಶಿವ ಆಯೋಗದ ವರದಿಯನ್ನು ಚರ್ಚೆಗೆ ಒಳಪಡಿಸಿ ಎಂದು ಕೇಳಲಿ. ಆದರೆ ಇವರು ಹೇಳುತ್ತಿರುವಂತೆ ಏಕಾಏಕಿ ಆಯೋಗದ ವರದಿಯನ್ನು ರದ್ದುಪಡಿಸಿ ಎಂದು ಹೇಳುವುದು ಸರಿಯಲ್ಲ. ನಿಜವಾಗಿ ಹೇಳಬೇಕೆಂದರೆ, ಈ ಛಲವಾದಿ ಕ್ಷೇಮಾಭಿವೃದ್ಧಿ ಸಂಘ ಹೊಲೆಯರ ಪ್ರತಿನಿಧಿಯ ಸಂಘವೇ ಅಲ್ಲ. ಏಕೆಂದರೆ ತುಂಬಾ ಜನ ಹೊಲೆಯರು ತಾವು ಛಲವಾದಿಗಳು ಎಂದು ಕರೆದುಕೊಳ್ಳುವುದಿಲ್ಲ. ಕರ್ನಾಟಕದಲ್ಲಿ ದಸಂಸದಲ್ಲಿರುವ ಮುಂಚೂಣಿ ನಾಯಕರೂ ಕೂಡ ಹೊಲೆಯರೇ ಆಗಿದ್ದು, ಅವರೆಲ್ಲರೂ ಒಳ ಮೀಸಲಾತಿ ಮತ್ತು ಸದಾಶಿವ ಆಯೋಗದ ಪರವಾಗಿದ್ದಾರೆ. ಹಾಗಾಗಿ ಖಂಡಿತ ಇದನ್ನು ನಾನು ವಿರೋಧಿಸುತ್ತೇನೆ. ವರದಿಯಲ್ಲಿ ಏನಿದೆ ಎಂಬುದನ್ನು ತಿಳಿಯುವ ಮೊದಲೇ, ಇವರು ಈ ವರದಿಯನ್ನು ವಿರೋಧಿಸುತ್ತಿರುವುದಕ್ಕೆ ಪ್ರಮುಖ ಕಾರಣ, ಇದರ ಕುರಿತು ಹಬ್ಬಿಸಿರುವ ‘ಹೊಲೆಯ ಮತ್ತು ಲಂಬಾಣಿಗಳಿಗೆ ಅನ್ಯಾಯವಾಗುತ್ತದೆ ಎನ್ನುವ ತಪ್ಪುಕಲ್ಪನೆ ಮತ್ತು ಪೂರ್ವಗ್ರಹವಾಗಿದೆ. ಜೊತೆಗೆ ಇದರ ಹಿಂದೆ ಕೋಮುವಾದಿಗಳ ಒಡೆದು ಆಳುವ ರಾಜಕೀಯ ದುರುದ್ದೇಶವಂತೂ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ” ಎಂದು ಹೇಳಿದರು.


ಇದನ್ನೂ ಓದಿ: ಜಾತಿ ಮತ್ತು ಮೀಸಲಾತಿ ಬಗ್ಗೆ ನಟಿ ಕಂಗನಾ ರಣಾವತ್‌ಗೊಂದು ಪತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...