Homeಕ್ರೀಡೆಕ್ರಿಕೆಟ್ವಿಶ್ವಕಪ್ ಫೈನಲ್‌ನಲ್ಲಿ ಭಾರತಕ್ಕೆ ಸೋಲು: 6ನೇ ಬಾರಿಗೆ ಆಸಿಸ್‌ಗೆ ಚಾಂಪಿಯನ್ ಪಟ್ಟ

ವಿಶ್ವಕಪ್ ಫೈನಲ್‌ನಲ್ಲಿ ಭಾರತಕ್ಕೆ ಸೋಲು: 6ನೇ ಬಾರಿಗೆ ಆಸಿಸ್‌ಗೆ ಚಾಂಪಿಯನ್ ಪಟ್ಟ

- Advertisement -
- Advertisement -

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾದ ವಿರುದ್ಧ 7ವಿಕೆಟ್‌ಗಳ ಸೋಲು ಕಂಡಿದ್ದು, 6ನೇ ಬಾರಿಗೆ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟಕ್ಕೇರಿದೆ.

ಕೇವಲ 47  ರನ್‌ಗಳಿಗೆ ತನ್ನ ಮೂರು ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾಗೆ ಟ್ರಾವಿಸ್ ಹೆಡ್ ಆಸರೆಯಾಗಿ ನಿಂತರು. ಅವರಿಗೆ ಲಬುಶೇನ್ ಅತ್ಯುತ್ತಮ ಸಾಥ್ ನೀಡಿದರು. ಟ್ರಾವೆಸ್‌ ಹೆಡ್‌ 120 ಎಸೆತಗಳಲ್ಲಿ 15 ಬೌಂಡರಿ 4 ಸಿಕ್ಸರ್‌ ಸಹಿತ 137 ರನ್‌ ಗಳಿಸಿ ವಿನ್ನಿಂಗ್‌ ಶಾಟ್‌ ಹೊಡೆಯುವ ಯತ್ನದಲ್ಲಿ ಮುಹಮ್ಮದ್‌ ಸಿರಾಜ್‌ ಬೌಲಿಂಗ್‌ ನಲ್ಲಿ ಶುಭಮನ್‌ ಗಿಲ್‌ ಗೆ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ಬಂದ ಗ್ಲೆನ್‌ ಮ್ಯಾಕ್ಸ್‌ವೆಲ್‌ 2 ರನ್‌ ಗಳಿಸುವ ಮೂಲಕ ಆಸ್ಟ್ರೇಲಿಯಾದ ಗೆಲುವಿಗೆ ಕಾರಣರಾಗಿದ್ದಾರೆ.

ಭಾರತದ ಪರ ಜಸ್ ಪ್ರೀತ್ ಬುಮ್ರಾ 2 ವಿಕೆಟ್ ಪಡೆದರೆ, ಶಮಿ 1 ವಿಕೆಟ್ ಪಡೆದರು.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ಆರಂಭ ಉತ್ತವಾಗಿದ್ದರೂ ನಂತರ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಆಸರೆಯಾದರು. ಈ ಇಬ್ಬರು ಆಟಗಾರರು ಅರ್ಧ ಶತಕ ಸಿಡಿಸಿ ಔಟಾದರು.

ಭಾರತ ಪರ ರೋಹಿತ್ ಶರ್ಮಾ 47 ರನ್ ಗಳಿಸಿ ಔಟಾದರೆ, ಶುಭ್ಮನ್ ಗಿಲ್ 4 ರನ್ ಗಳಿಗೆ ಔಟಾದರು. ಇನ್ನು ಶ್ರೇಯಸ್ ಅಯ್ಯರ್ 4 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ವಿರಾಟ್ ಕೊಹ್ಲಿ 54 ರನ್ ಸಿಡಿಸಿ ಔಟಾದರೆ ಕೆಎಲ್ ರಾಹುಲ್ 66 ರನ್ ಗೆ ಔಟಾದರು. ಬಳಿಕ ಬಂದ ರವೀಂದ್ರ ಜಡೇಜಾ 9 ರನ್ ಬಾರಿಸಿ ಹೆಜಲ್ವುಡ್ ಎಸೆತದಲ್ಲಿ ಕೀಪರ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ 18 ರನ್ ಗಳಿಸಿ ಔಟಾದರೆ, ಶಮಿ 6, ಜಸ್ ಪ್ರೀತ್ ಬುಮ್ರಾ 1 ಮತ್ತು ಕುಲದೀಪ್ ಯಾದವ್ 10 ರನ್ ಗಳಿಸಿ ಔಟಾದರು. ಇನ್ನು ಮೊಹಮ್ಮದ್ ಸಿರಾಜ್ 9 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ.

ಆಸ್ಟ್ರೇಲಿಯಾ ಪರ ಬೌಲಿಂಗ್‌ನಲ್ಲಿ ಮಿಚೆಲ್ ಸ್ಟಾರ್ಕ್ 3, ಪ್ಯಾಟ್ ಕಮಿನ್ಸ್ ಮತ್ತು ಹೆಜಲ್ವುಡ್ ತಲಾ 2 ವಿಕೆಟ್, ಗ್ಲೇನ್ ಮ್ಯಾಕ್ಸ್ ವೇಲ್ ಮತ್ತ ಜಂಪಾ ತಲಾ 1 ವಿಕೆಟ್ ಪಡೆದಿದ್ದಾರೆ.

ಆಸ್ಟ್ರೇಲಿಯಾ ವಿಜಯದ ರನ್ ಹೊಡೆಯುತ್ತಿದ್ದಂತೆ ಭಾರತದ ಆಟಗಾರರ ಕಣ್ಣಾಲಿಗಳು ತುಂಬಿದ್ದವು. ರೋಹಿತ್ ಶರ್ಮಾ ತಲೆ ತಗ್ಗಿಸಿಕೊಂಡು ಪೆವಿಲಿಯನ್‌ನತ್ತ ಹೊರಟರು. ಸಿರಾಜ್ ಅವರನ್ನು ಬೂಮ್ರಾ ಸಮಾಧಾನ ಪಡಿಸುತ್ತಾ ತಮ್ಮ ಕಣ್ಣುಗಳನ್ನೂ ಒರೆಸಿಕೊಂಡರು. ವಿರಾಟ್ ಮುಖದಲ್ಲಿಯೂ ಜೀವಕಳೆ ಬತ್ತಿಹೋಗಿತ್ತು. ಕೆ.ಎಲ್. ರಾಹುಲ್ ಕುಸಿದು ಕುಳಿತಿದ್ದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೈಕ್ ಮುಂದೆ ಬಂದು ನಿಂತ ರೋಹಿತ್, ’ಇವತ್ತಿನ ದಿನದಲ್ಲಿ ನಾವು ನಿರೀಕ್ಷಿಸಿದಷ್ಟು ಚೆನ್ನಾಗಿ ಆಡಲಿಲ್ಲ. ಇನ್ನೂ 20–30 ರನ್‌ಗಳನ್ನು ಹೆಚ್ಚು ಗಳಿಸಿದ್ದರೆ ಚೆನ್ನಾಗಿತ್ತು. ಬ್ಯಾಟಿಂಗ್ ಚೆನ್ನಾಗಿರಲಿಲ್ಲ ಎಂದು ಹೇಳಿದ್ದಾರೆ. 280 ರನ್‌ಗಳ ಗುರಿಯನ್ನು ಒಡ್ಡುವುದು ನಮ್ಮ ಗುರಿಯಾಗಿತ್ತು. ವಿರಾಟ್ ಮತ್ತು ರಾಹುಲ್ ಬ್ಯಾಟಿಂಗ್ ಮಾಡುವಾಗ ಇದು ಸಾಧ್ಯ ಎನಿಸಿತ್ತು. ನಾಲ್ಕನೇ ವಿಕೆಟ್‌ಗೆ ಅವರು ಉತ್ತಮ ಜೊತೆಯಾಟ ಹೆಣೆದಿದ್ದರು. ಆದರೆ ನಂತರ ವಿಕೆಟ್‌ಗಳು ಉರುಳತೊಡಗಿದಾಗ ಹಿನ್ನಡೆಯಾಯಿತು ಎಂದು ಹೇಳಿದ್ದಾರೆ.

ಇದನ್ನು ಓದಿ: ಯಮನ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಭಾರತೀಯ ನರ್ಸ್‌ನ್ನು ರಕ್ಷಿಸಲು ತಾಯಿಯ ಪರದಾಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಕ್ಷೌರ ಮಾಡಲು ತಡವಾಗಿ ಬಂದ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿದ ಪೊಲೀಸ್‌ ಅಧಿಕಾರಿ

0
ಕ್ಷೌರಕ್ಕಾಗಿ ಮನೆಗೆ ಕ್ಷೌರಿಕ ತಡವಾಗಿ ಬಂದ ಎಂದು ಪೊಲೀಸ್‌ ಅಧಿಕಾರಿಯೋರ್ವ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಬುದೌನ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಸರ್ಕಲ್ ಆಫೀಸರ್(ಸಿಒ) ಸುನೀಲ್ ಕುಮಾರ್...