Homeಕ್ರೀಡೆಕ್ರಿಕೆಟ್ನೆದರ್ಲೆಂಡ್ಸ್ ವಿರುದ್ಧ ಸುಲಭ ಜಯ ಸಾಧಿಸಿದ ಭಾರತ: ಸೆಮಿಫೈನಲ್‌ನತ್ತ ಹೆಜ್ಜೆ

ನೆದರ್ಲೆಂಡ್ಸ್ ವಿರುದ್ಧ ಸುಲಭ ಜಯ ಸಾಧಿಸಿದ ಭಾರತ: ಸೆಮಿಫೈನಲ್‌ನತ್ತ ಹೆಜ್ಜೆ

- Advertisement -
- Advertisement -

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಎರಡನೇ ಗೆಲುವು ದಾಖಲಿಸಿದೆ. ಇಂದು ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ 56 ರನ್‌ಗಳ ಸುಲಭ ಜಯ ಕಂಡು ಸೆಮಿಫೈನಲ್‌ನತ್ತ ಹೆಜ್ಜೆಯಿಟ್ಟಿದೆ.

180 ರನ್‌ಗಳ ಗುರಿಪಡೆದ ನೆದರ್ಲೆಂಡ್ಸ್ ತಂಡವು ಭಾರತದ ವೇಗದ ಮತ್ತು ಸ್ಪಿನ್ ದಾಳಿಗೆ ನಲುಗಿ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 123 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಆ ಮೂಲಕ 56 ರನ್ ಗಳ ಸೋಲು ಕಂಡಿತು. ಸತತ ಎರಡನೇ ಗೆಲುವು ಪಡೆದ ಭಾರತ ತಂಡ ಗ್ರೂಪ್ 2ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಭುವನೇಶ್ವರ್ ಕುಮಾರ್ ಸತತ ಎರಡು ಮೇಡನ್ ಓವರ್ ಮಾಡಿದರು. 12 ಎಸೆತಗಳಲ್ಲಿ ಅವರು ಒಂದು ರನ್ ಬಿಟ್ಟುಕೊಡಲಿಲ್ಲ. ಆ ಮೂಲಕ ಭಾರತದ ಮತ್ತೊರ್ವ ಬೌಲರ್ ಜಸ್ಪ್ರೀತ್ ಬೂಮ್ರರವರ ಸಾಧನೆ ಸರಿಗಟ್ಟಿದರು. ಭುವನೇಶ್ವರ್ ಕುಮಾರ್, ಅರ್ಶದೀಪ್ ಸಿಂಗ್, ಅಕ್ಸರ್ ಪಟೇಲ್ ಮತ್ತು ಆರ್ ಅಶ್ವಿನ್ ತಲಾ 2 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 1 ವಿಕೆಟ್ ಪಡೆದರು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಆರಂಭದಲ್ಲಿಯೇ ಕೆ.ಎಲ್ ರಾಹುಲ್ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಒಳಗಾಗಿತ್ತು. ಆದರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವಿನ 73 ರನ್‌ಗಳ ಜೊತೆಯಾಟ ಭಾರತಕ್ಕೆ ಬಲ ತಂದುಕೊಟ್ಟಿತು. ಆನಂತರ ಭಾರತದ ಮೂವರು ಆಟಗಾರರು ಅರ್ಧಶತಕ ದಾಖಲಿಸಿದರು.

39 ಎಸೆತಗಳಲ್ಲಿ 53 ರನ್ (4 ಬೌಂಡರಿ 3 ಸಿಕ್ಸರ್) ಗಳಿಸಿದ ನಾಯಕ ರೋಹಿತ್ ಶರ್ಮಾ ಔಟಾದ ನಂತರ ಕ್ರೀಸ್‌ಗಿಳಿದ ಸೂರ್ಯಕುಮಾರ್ ಯಾದವ್ ಚೆಂಡನ್ನು ಅಂಗಳದ ಎಲ್ಲಾ ಮೂಲೆಗೂ ಅಟ್ಟಿದರು. ಅವರ ಜೊತೆಗೂಡಿ ವಿರಾಟ್ ಕೊಹ್ಲಿ ಸಹ ಆಕ್ರಮಣಕಾರಿ ಆಟವಾಡಿದ ಪರಿಣಾಮ ಭಾರತ ತಂಡ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 179 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ ಔಟಾಗದೆ 62 ರನ್ (3 ಬೌಂಡರಿ, 2 ಸಿಕ್ಸರ್) ಗಳಿಸಿದರೆ, ಸೂರ್ಯಕುಮಾರ್ ಯಾದವ್ ಕೇವಲ 25 ಎಸೆತಗಳಲ್ಲಿ ಔಟಾಗದೆ 51 ರನ್ (7 ಬೌಂಡರಿ, 1 ಸಿಕ್ಸರ್) ಸಿಡಿಸಿದರು. ಕೊನೆಯ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ಸೂರ್ಯಕುಮಾರ್ ತಮ್ಮ ಅರ್ಧಶತಕ ಪೂರೈಸಿದರು.

ಭಾರತವು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಅಕ್ಟೋಬರ್ 30 ರಂದು ತನ್ನ ಮುಂದಿನ ಪಂದ್ಯ ಆಡಲಿದೆ. ಆನಂತರ ಬಾಂಗ್ಲಾದೇಶ (ನವೆಂಬರ್ 2) ಮತ್ತು ಜಿಂಬಾಬ್ವೆ (ನವೆಂಬರ್ 6) ವಿರುದ್ದ ಸೆಣಸಲಿದೆ. ಈ ಮೂರು ಪಂದ್ಯಗಳನ್ನು ಗೆದ್ದಲ್ಲಿ ಅದು 10 ಪಾಯಿಂಟ್‌ಗಳೊಂದಿಗೆ ನಿರಾಂತಕವಾಗಿ ಸೆಮಿಫೈನಲ್ ತಲುಪಲಿದೆ.

ಇದನ್ನೂ ಓದಿ; ಟಿ20 ವಿಶ್ವಕಪ್ ಸೆಮಿಫೈನಲ್‌ಗೇರಲು ಭಾರತದ ಮುಂದಿನ ಹಾದಿ ಹೀಗಿದೆ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...