Homeಮುಖಪುಟಹೆಣ್ಣನ್ನು ‘ಐಟಂ’ ಎಂದು ಕರೆಯುವುದು ಅವಹೇಳನಕಾರಿ: ಮುಂಬೈ ಹೈಕೋರ್ಟ್

ಹೆಣ್ಣನ್ನು ‘ಐಟಂ’ ಎಂದು ಕರೆಯುವುದು ಅವಹೇಳನಕಾರಿ: ಮುಂಬೈ ಹೈಕೋರ್ಟ್

- Advertisement -
- Advertisement -

ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದಕ್ಕಾಗಿ ಒಬ್ಬ ವ್ಯಕ್ತಿಗೆ ಒಂದೂವರೆ ವರ್ಷಗಳ ಜೈಲು ಶಿಕ್ಷೆಯನ್ನು ಮುಂಬೈನ ವಿಶೇಷ ನ್ಯಾಯಾಲಯವು ವಿಧಿಸಿದೆ. ಹೆಣ್ಣನ್ನು ‘ಐಟಂ’ ಎಂದು ಕರೆಯುವುದು ಅವಹೇಳನಕಾರಿಯಾಗಿದ್ದು, ಆಕೆಯನ್ನು ಲೈಂಗಿಕ ದೃಷ್ಟಿಯಲ್ಲಿ ಚಿತ್ರಿಸುತ್ತದೆ ಎಂದು ಎಚ್ಚರಿಸಿದೆ.

ಅಕ್ಟೋಬರ್ 20ರಂದು ನೀಡಲಾದ ಆದೇಶದಲ್ಲಿ, ನ್ಯಾಯಾಲಯವು ಆರೋಪಿಗೆ ಕರುಣೆ ತೋರಿಸಲು ಕೋರ್ಟ್ ನಿರಾಕರಿಸಿತು. ಇಂತಹ ಅನೈತಿಕ ನಡವಳಿಕೆ‌ ತಪ್ಪಿಸಿ ಮಹಿಳೆಯರನ್ನು ರಕ್ಷಿಸಲು “ರೋಡ್‌ ರೋಮಿಯೊ”ಗಳಿಗೆ ಪಾಠ ಕಲಿಸುವ ಅಗತ್ಯವಿದೆ ಎಂದು ಕೋರ್ಟ್ ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಪ್ರಕರಣಗಳ ವಿಚಾರಣೆಗೆ ನಿಯೋಜಿತವಾಗಿರುವ ವಿಶೇಷ ನ್ಯಾಯಾಧೀಶ ಎ ಜೆ ಅನ್ಸಾರಿ, 2015ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ. ಯುವತಿಯನ್ನು ‘ಐಟಂ’ ಎಂದ ಅಪರಾಧಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ಆರೋಪಿಯು ಉದ್ದೇಶಪೂರ್ವಕವಾಗಿ ಸಂತ್ರಸ್ತೆಯ ಕೂದಲನ್ನು ಹಿಡಿದು ಎಳೆದು ಆಕೆಯನ್ನು ‘ಐಟಂ’ ಎಂದು ಕರೆದಿದ್ದಾನೆ. ನನ್ನ ಅಭಿಪ್ರಾಯದಲ್ಲಿ ಇದು ಸಂತ್ರಸ್ತೆಯ ಮೇಲಿನ ದೌರ್ಜನ್ಯವನ್ನು ಸಾಬೀತುಪಡಿಸುತ್ತದೆ” ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಆರೋಪಿಯ ವರ್ತನೆಯು “ಸಂಪೂರ್ಣವಾಗಿ ಅನುಚಿತವಾಗಿದೆ” ಎಂದು ನ್ಯಾಯಾಲಯವು ಗಮನಿಸಿದೆ.

ಆರೋಪಿಯು ಸಂತ್ರಸ್ತೆಯನ್ನು ಉದ್ದೇಶಿಸಿ ‘ಐಟಂ’ ಎಂಬ ಪದವನ್ನು ಬಳಸಿದ್ದಾನೆ. ಇದು ಸಾಮಾನ್ಯವಾಗಿ ಹೆಣ್ಣನ್ನು ಅವಹೇಳನಕಾರಿ ಶೈಲಿಯಲ್ಲಿ ಸಂಬೋಧಿಸಲು ಬಳಸುವ ಪದವಾಗಿದೆ. ಜೊತೆಗೆ ಲೈಂಗಿಕ ದೃಷ್ಟಿಕೋನದ್ದಾಗಿದೆ. ಇದು ಆಕೆಯ ನಮ್ರತೆಯನ್ನು ಕೆರಳಿಸುವ ಉದ್ದೇಶವನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

“ಯಾವುದೇ ಹೆಣ್ಣನ್ನು ಸಂಬೋಧಿಸಲು ‘ಐಟಂ’ ಎಂಬ ಪದವನ್ನು ಬಳಸುವುದು ನಿಸ್ಸಂಶಯವಾಗಿ ಅವಮಾನಕರವಾಗಿದೆ” ಎಂದು ಕೋರ್ಟ್ ಎಚ್ಚರಿಸಿದೆ.

ಅಪ್ರಾಪ್ತ ಬಾಲಕಿಗೆ ಬೀದಿಯಲ್ಲಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ವಿನಾಯಿತಿ ತೋರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

“ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ ರಸ್ತೆಬದಿಯ ರೋಮಿಯೋಗಳಿಗೆ ಪಾಠವನ್ನು ಕಲಿಸಬೇಕಾಗಿದೆ. ಇಂಥವರ ಅನೈತಿಕ ನಡವಳಿಕೆಯನ್ನು ತಪ್ಪಿಸಿ ಮಹಿಳೆಯರನ್ನು ರಕ್ಷಿಸಬೇಕಾಗಿದೆ” ಎಂದಿದೆ.

ಇದನ್ನೂ ಓದಿರಿ: ಋತುಮತಿಯಾಗದ ಬಾಲಕಿ ಮೇಲೆ ಅತ್ಯಾಚಾರ; ಮತ್ತೊಂದು ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶರಣರ ಮತ್ತಷ್ಟು ವಿಕೃತಿ ಬಯಲು

ಜುಲೈ 14, 2015ರಂದು ಸಂತ್ರಸ್ತೆ ಶಾಲೆಯಿಂದ ಹಿಂತಿರುಗುತ್ತಿದ್ದಾಗ, ಆರೋಪಿಯು ಆಕೆಯನ್ನು ‘ಐಟಂ’ ಎಂದು ಕರೆದಿದ್ದನು.

ತನಗೆ ಕಿರುಕುಳ ನೀಡಬೇಡಿ ಎಂದು ಬಾಲಕಿ ಕೋರಿದಾಗಲೂ, ಅವನು ಬಾಲಕಿಯನ್ನು ನಿಂದಿಸಲು ಪ್ರಾರಂಭಿಸಿದ್ದನು. ಜೊತೆಗೆ ಆಕೆಯ ತಲೆಗೂದಲನ್ನು ಎಳೆದಿದ್ದನು. ನಂತರ ಪೊಲೀಸ್ ಸಹಾಯವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿ ಸಂತ್ರಸ್ತ ಬಾಲಕಿ ಸಹಾಯ ಕೋರಿದ್ದಳು.

ಪೊಲೀಸರು ಸ್ಥಳಕ್ಕೆ ಧಾವಿಸಿದರೂ ಆರೋಪಿ ಪರಾರಿಯಾಗಿದ್ದನು. ಬಾಲಕಿ ಮನೆಗೆ ತೆರಳಿ ತನ್ನ ತಂದೆಗೆ ವಿಷಯ ತಿಳಿಸಿದ್ದು, ಮುಂಬೈನ ಸಕಿನಾಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಆರೋಪಿಯನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...