Homeರಾಷ್ಟ್ರೀಯತೆಲಂಗಾಣ: ಪ್ರೀತಿಗೆ ವಿರೋಧ; ಹದಿಹರೆಯದ ಮಗಳನ್ನು ಕೊಂದ ತಂದೆ

ತೆಲಂಗಾಣ: ಪ್ರೀತಿಗೆ ವಿರೋಧ; ಹದಿಹರೆಯದ ಮಗಳನ್ನು ಕೊಂದ ತಂದೆ

- Advertisement -
- Advertisement -

ತನ್ನ 15 ವರ್ಷದ ಮಗಳು ಹುಡುಗನೊಬ್ಬನನ್ನು ಪ್ರೀತಿಸಿದ ಕಾರಣಕ್ಕೆ ಸ್ವಂತ ತಂದೆಯೇ ಬಾಲಕಿಯನ್ನು ಕಡಿದು ಕೊಂದಿರುವ ಘಟನೆ ತೆಲಂಗಾಣದ ವನಪರ್ತಿ ಜಿಲ್ಲೆಯ ಪಥಪಲ್ಲಿ ಗ್ರಾಮದಲ್ಲಿ ನಡೆದಿದೆ. ಅಕ್ಟೋಬರ್ 25ರ ಮಂಗಳವಾರ ಮಧ್ಯಾಹ್ನ ಈ ಅಮಾನವೀಯ ಘಟನೆ ನಡೆದಿದೆ.

ಹತ್ಯೆಗೀಡಾದ ಬಾಲಕಿಯನ್ನು 10 ನೇ ತರಗತಿಯ ವಿದ್ಯಾರ್ಥಿನಿ ಆರ್‌‌. ಗೀತಾ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ರಾಜಶೇಖರ್‌ ಎಂದು ಗುರುತಿಸಲಾಗಿದೆ. ಬಾಲಕಿಯು ತನ್ನದೆ ಗ್ರಾಮದ ಹುಡುಗನನ್ನು ಪ್ರೀತಿಸುತ್ತಿದ್ದರು ಎಂದು ವರದಿಗಳು ಹೇಳಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಾಲಕಿಯ ತಂದೆ ಹುಡುಗನ ವಿಚಾರದ ಬಗ್ಗೆ ಎಚ್ಚರಿಸಿದ್ದರು. ಆದರೂ ಹದಿಹರೆಯದ ಹುಡುಗ-ಹುಡುಗಿ ಸಂಪರ್ಕದಲ್ಲಿ ಇರುವುದನ್ನು ಕಂಡು ಕೋಪಗೊಂಡಿದ್ದಾರೆ. ಮಂಗಳವಾರದಂದು ರಾಜಶೇಖರ್ ತನ್ನ ಮಗಳು ಕುಟುಂಬಕ್ಕೆ ಕಳಂಕ ತಂದಿದ್ದಾಳೆ ಎಂದು ಆರೋಪಿಸಿ ಕಡಿದು ಕೊಂದಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಮರ್ಯಾದೆಗೇಡು ಹತ್ಯೆ: ತಂಗಿ-ಬಾವನನ್ನು ಊಟಕ್ಕೆ ಕರೆದು ಕೊಲೆ ಮಾಡಿದ ಅಣ್ಣ

“ಕೋಪದಲ್ಲಿ ರಾಜಶೇಖರ್‌ ತನ್ನ ಮಗಳನ್ನು ಹರಿತವಾದ ವಸ್ತುವಿನಿಂದ ಕಡಿದು ಕೊಂದಿದ್ದಾರೆ” ಎಂದು ವನಪರ್ತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಪೂರ್ವ‌ ತಿಳಿಸಿದ್ದಾರೆ.

ಕೆಲವು ಸುದ್ದಿವಾಹಿನಿಗಳು ಈ ಘಟನೆಯನ್ನು “ಮರ್ಯಾದಗೇಡು ಹತ್ಯೆ” ಪ್ರಕರಣವೆಂದು ವರದಿ ಮಾಡಿವೆ. ಜಾತಿಯ ಕಾರಣಕ್ಕೆ ಹತ್ಯೆಯಾಗಿದ್ದರೆ ಮರ್ಯಾದಗೇಡು ಹತ್ಯೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದು, ಸಂತ್ರಸ್ತೆ ಮತ್ತು ಹುಡುಗ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರು ಎಂದು ಸ್ಪಷ್ಟಪಡಿಸಿದ್ದಾರೆ. “ಸಂತ್ರಸ್ತ ಬಾಲಕಿ ಮತ್ತು ಬಾಲಕ ಇಬ್ಬರೂ ಬೋಯ ಜಾತಿಗೆ ಸೇರಿದವರು. ಹಾಗಾಗಿ ಇದು ಜಾತಿ ಹತ್ಯೆ ಪ್ರಕರಣವಲ್ಲ” ಎಂದು ಡಿಎಸ್ಪಿ ಹೇಳಿದ್ದಾರೆ.

ಈ ಮಧ್ಯೆ, ಪೊಲೀಸರು ಆರೋಪಿ ರಾಜಶೇಖರ್‌ನನ್ನು ಬಂಧಿಸಿದ್ದು, ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.

ಜೂನ್‌ ತಿಂಗಳಲ್ಲಿ ಕರ್ನಾಟಕದಲ್ಲಿ ಕೂಡಾ ಇದೇ ರೀತಿಯ ಅಪರಾಧ ನಡೆದಿತ್ತು. ದಲಿತ ಸಮುದಾಯದ ಯುವಕನನ್ನು ಪ್ರೀತಿಸಿದ್ದಕ್ಕಾಗಿ ತನ್ನ 17 ವರ್ಷದ ಮಗಳು ಶಾಲಿನಿಯನ್ನು ಅವರ ತಂದೆಯೆ ಕೊಂದು ಹಾಕಿದ್ದರು. ಮೇಲ್ಜಾತಿ ಸಮುದಾಯವೆಂದು ಪರಿಗಣಿಸಲ್ಪಟ್ಟಿರುವ ಒಕ್ಕಲಿಗ ಸಮುದಾಯಕ್ಕೆ ಸೇರಿದ ಆಕೆಯ ತಂದೆ ಸುರೇಶ್‌‌, ಬಾಲಕಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಶಾಲಿನಿಯನ್ನು ಕೊಂದ ನಂತರ ಸುರೇಶ್ ಶವವನ್ನು ದಲಿತ ವ್ಯಕ್ತಿಗೆ ಸೇರಿದ ಜಮೀನಿನಲ್ಲಿ ಶವವನ್ನು ಎಸೆದಿದ್ದರು.

ಇದನ್ನೂ ಓದಿ: ಮರ್ಯಾದೆಗೇಡು ಹತ್ಯೆ: ಸಾವಿನ ಕುರಿತು ಮೊದಲೇ ಬರೆದಿದ್ದ ಯುವತಿ; ಪತ್ರದಲ್ಲೇನಿದೆ?

ಇದೇ ವರ್ಷ ಹೈದರಾಬಾದ್‌ನಲ್ಲಿ ಕೂಡಾ ಅಂತಹ ಘಟನೆ ನಡೆದಿತ್ತು. ಮುಸ್ಲಿಂ ಸಮುದಾಯದ ಯುವತಿಯನ್ನು ಆಕೆಯ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕಾಗಿ ದಲಿತ ವ್ಯಕ್ತಿ ಬಿ. ನಾಗರಾಜು ಎಂಬ ಯುವಕನನ್ನು ನಗರದ ಸರೂರ್‌ನಗರದಲ್ಲಿ ಕೊಲ್ಲಲಾಗಿತ್ತು. ಈ ಘಟನೆ ಕೋಮುಗಲಭೆಗೆ ಕಾರಣವಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...