Homeಕರ್ನಾಟಕಬೆಂಗಳೂರು: ನಾಲ್ಕು ದಿನಗಳ ಕಾಲ ವಿವಿಧ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ; ಸಂಪೂರ್ಣ ಪಟ್ಟಿ ಇಲ್ಲಿದೆ

ಬೆಂಗಳೂರು: ನಾಲ್ಕು ದಿನಗಳ ಕಾಲ ವಿವಿಧ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ; ಸಂಪೂರ್ಣ ಪಟ್ಟಿ ಇಲ್ಲಿದೆ

ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ಒಟ್ಟು ಆರು ಗಂಟೆಗಳ ಕಾಲ ವಿದ್ಯುತ್ ಕಡಿತವನ್ನು ನಿಗದಿಪಡಿಸಲಾಗಿದೆ

- Advertisement -
- Advertisement -

ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಕೈಗೊಂಡಿರುವ ಕಾಮಗಾರಿಗಳ ಹಿನ್ನಲೆಯಲ್ಲಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ನಾಲ್ಕು ದಿನಗಳ ಕಾಲ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಘೋಷಿಸಿದೆ.

ಅಕ್ಟೋಬರ್ 27ರ ಗುರುವಾರದಿಂದ ಅಕ್ಟೋಬರ್ 31 ರ ಸೋಮವಾರದ ನಡುವೆ ನಗರದ ಕೆಲವು ಭಾಗಗಳಲ್ಲಿ ಯೋಜಿತ ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ಒಟ್ಟು ಆರು ಗಂಟೆಗಳ ಕಾಲ ವಿದ್ಯುತ್ ಕಡಿತವನ್ನು ನಿಗದಿಪಡಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವಿದ್ಯುತ್ ವ್ಯತ್ಯಯಗೊಳ್ಳುವ ಪ್ರದೇಶಗಳ ಸಂಪೂರ್ಣ ಪಟ್ಟಿ ಹೀಗಿದೆ

ಅಕ್ಟೋಬರ್ 27, ಗುರುವಾರ

ಎವಿಕೆ ಕಾಲೇಜು ರಸ್ತೆ, ಕೋರ್ಟ್ ರಸ್ತೆ, ರತ್ನಮ್ಮ ಹೊಸೆಲ್, ಮುಸ್ಲಿಂ ಕಾಂಪ್ಲೆಕ್ಸ್, ಹಳೆ ಬಸ್ ನಿಲ್ದಾಣ, ಮಹಿಳಾ ಕಾಂಪ್ಲೆಕ್ಸ್, ಬಿಗ್ ಬಜಾರ್, ಜಾಯ್ ಅಲ್ಲುಕಾಸ್, ಮಹಾನಗರ ಪಾಲಿಕೆ, ಪಿಡಬ್ಲ್ಯುಡಿ ವಿಭಾಗ, ಪಂಚಾಯತ್ ರಾಜ್, ಶಾಂತಿ ಕಂಫರ್ಟ್ಸ್, ಪಿಜೆ ಎಕ್ಸ್‌ಟೆನ್ಸನ್‌‌ 1 ಮತ್ತು 2ನೇ ಮೈನ್, ರಾಮ್ ಆಂಡ್‌ ಕಂ. ವೃತ್ತ, ಪೊಲೀಸ್ ಕ್ವಾರ್ಟರ್ಸ್ ಎಂಎಸ್ ಬಿಲ್ಡಿಂಗ್, ಅರುಣಾ ಥಿಯೇಟರ್, ಪಶುವೈದ್ಯಕೀಯ ಆಸ್ಪತ್ರೆ, ಸಿತಾರಾ ಹೋಟೆಲ್ ಮತ್ತು ಪಿಸಾಲೆ ಕಾಂಪೌಂಡ್ ಪ್ರದೇಶಗಳಲ್ಲಿ ಗುರುವಾರದಂದು ವಿದ್ಯುತ್‌ ವ್ಯತ್ಯಯವಾಗಲಿದೆ.

ಇದನ್ನೂ ಓದಿ: ಬೆಂಗಳೂರು: 1,000 ಕ್ಕೂ ಹೆಚ್ಚು ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಂಡ ಟ್ರಾಫಿಕ್ ಪೊಲೀಸ್

ಅಕ್ಟೋಬರ್ 28, ಶುಕ್ರವಾರ

DCM ಟೌನ್‌ಶಿಪ್ ಮತ್ತು MCC B ಬ್ಲಾಕ್ 2ನೇ ಮೈನ್ ಪ್ರದೇಶಗಳಲ್ಲಿ ಶುಕ್ರವಾರ ವಿದ್ಯುತ್ ವ್ಯತ್ಯಯವಾಲಿದೆ.

ಅಕ್ಟೋಬರ್ 29, ಶನಿವಾರ

ಮಹಿಳಾ ಕಾಂಪ್ಲೆಕ್ಸ್, ಬಿಗ್ ಬಜಾರ್, ಜಾಯ್ ಅಲ್ಲುಕಾಸ್, ಮಹಾನಗರ ಪಾಲಿಕೆ, ಗುಂಡಿ ಚೌಲ್ಟ್ರಿ ಹಿಂಭಾಗ, ಎಂಸಿಸಿಬಿ ಬ್ಲಾಕ್, ಎವಿಕೆ ಕಾಲೇಜು ರಸ್ತೆ, ಕೋರ್ಟ್ ರಸ್ತೆ, ರತ್ನಮ್ಮ ಹೊಸ್ಟೆಲ್, ಮುಸ್ಲಿಂ ಕಾಂಪ್ಲೆಕ್ಸ್, ಹಳೆಯ ಬಸ್ ನಿಲ್ದಾಣ, ಪಿಡಬ್ಲ್ಯೂಡಿ ವಿಭಾಗ, ಪಂಚಾಯತ್ ರಾಜ್, ಶಾಂತಿ ಕಂಫರ್ಟ್ಸ್, ಪಿಜೆ ಎಕ್ಸ್‌ಟೆನ್ಸನ್‌ 1ನೇ ಮತ್ತು 2ನೇ ಮೈನ್, ರಾಮ್ ಆಂಡ್‌ ಕೋ ಸರ್ಕಲ್, ಪೊಲೀಸ್ ಕ್ವಾರ್ಟರ್ಸ್ ಎಂಎಸ್ ಬಿಲ್ಡಿಂಗ್, ಅರುಣಾ ಥಿಯೇಟರ್, ಪಶುವೈದ್ಯಕೀಯ ಆಸ್ಪತ್ರೆ, ಸಿತಾರಾ ಹೋಟೆಲ್ ಮತ್ತು ಪಿಸಾಲೆ ಕಾಂಪೌಂಡ್ ಪ್ರದೇಶಗಳಲ್ಲಿ ಶನಿವಾರ ವಿದ್ಯುತ್‌ ವ್ಯತ್ಯಯವಾಗಲಿದೆ.

ಇಷ್ಟೆ ಅಲ್ಲದೆ, ಶಂಕರ್ ವಿಹಾರ್‌ ಲೇಔಟ್, ಪಿಬಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಬಿಎಸ್ಎನ್ಎಲ್ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ, ವಿನಾಯಕ ನಗರ, ಸಾಯಿ ಇಂಟರ್ನ್ಯಾಷನಲ್ ಹೋಟೆಲ್, ಪೂಜಾ ಇಂಟರ್‌ನ್ಯಾಶನಲ್ ಹೋಟೆಲ್, ದೇವರಾಜ್ ಅರಸ್ ಲೇಔಟ್ ಬಿ ಬ್ಲಾಕ್, ಗಿರಿಯಪ್ಪ ಲೇಔಟ್ ಮತ್ತು ಜಿಎಂಐಟಿ ಕಾಲೇಜು, 6ನೇ ಮುಖ್ಯರಸ್ತೆ ಎಂಸಿಸಿ ಬಿ ಬ್ಲಾಕ್, ಲಕ್ಷ್ಮೀ ಫ್ಲೋರ್ ಮಿಲ್, ಕುವೆಂಪು ನಗರ, ಎಸ್‌ಎಸ್ ಲೇಔಟ್ ಎ ಬ್ಲಾಕ್, ಎಸ್‌ಎಸ್ ಮಹಲ್, ಮಾವಿಂತೋಪು ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶಗಳು, ಕರ್ನಾಟಕ ಬ್ಯಾಂಕ್ ಬಲಭಾಗ, ಅಂಗವಿಕಲ ಹಾಸ್ಟೆಲ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೂಡಾ ಶನಿವಾರ ವಿದ್ಯುತ್‌ ವ್ಯತ್ಯಯವಾಗಲಿದೆ.

ಇದನ್ನೂ ಓದಿ: ಬೆಂಗಳೂರು: ಹೈಕೋರ್ಟ್‌‌ ಆದೇಶದ ನಂತರ ತನ್ನ ಕನಿಷ್ಠ ಆಟೋ ದರವನ್ನು ರೂ. 35 ಕ್ಕೆ ಇಳಿಸಿದ ಉಬರ್‌‌

ಅಕ್ಟೋಬರ್ 30, ಭಾನುವಾರ

ದಾವಣಗೆರೆ ಬೆಸ್ಕಾಂ ವೃತ್ತದ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶ ಮತ್ತು ದಾವಣಗೆರೆ 220/66/11 ಕಿಲೋವೋಲ್ಟ್ ರಸೀವಿಂಗ್‌ ಸ್ಟೇಷನ್‌ಗಳಲ್ಲಿ ಭಾನುವಾರ ವಿದ್ಯುತ್ ಕಡಿತಗೊಳ್ಳಲಿದೆ.

ಅಕ್ಟೋಬರ್ 31, ಸೋಮವಾರ

ಶಂಕರ್ ವಿಹಾರ್ ಲೇಔಟ್, ಪಿಬಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಬಿಎಸ್‌ಎನ್‌ಎಲ್ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ, ವಿನಾಯಕ ನಗರ, ಸಾಯಿ ಇಂಟರ್‌ನ್ಯಾಶನಲ್ ಹೋಟೆಲ್, ಪೂಜಾ ಇಂಟರ್‌ನ್ಯಾಶನಲ್ ಹೋಟೆಲ್, ದೇವರಾಜ್ ಅರಸ್ ಲೇಔಟ್ ಬಿ ಬ್ಲಾಕ್, ಗಿರಿಯಪ್ಪ ಲೇಔಟ್ ಮತ್ತು ಜಿಎಂಐಟಿ ಕಾಲೇಜು ಪ್ರದೇಶಗಳಲ್ಲಿ ಸೋಮವಾರ ವಿದ್ಯುತ್‌ ವ್ಯತ್ಯಯಗೊಳ್ಳಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...