Homeಮುಖಪುಟಅಯೋಧ್ಯೆ ಅಭಿವೃದ್ಧಿ: ಆತಂಕದಲ್ಲಿರುವ ವ್ಯಾಪಾರಿಗಳ ಕೂಗು ಬಿಜೆಪಿಗೆ ಮುಳುವಾಗುವುದೇ?

ಅಯೋಧ್ಯೆ ಅಭಿವೃದ್ಧಿ: ಆತಂಕದಲ್ಲಿರುವ ವ್ಯಾಪಾರಿಗಳ ಕೂಗು ಬಿಜೆಪಿಗೆ ಮುಳುವಾಗುವುದೇ?

- Advertisement -
- Advertisement -

ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನದಿಂದ ಸಲ್ಪ ದೂರದಲ್ಲಿ 45 ವರ್ಷದ ರಂಜಿತಾ ಗುಪ್ತಾ ಅವರು ಕಲಾಕೃತಿಗಳನ್ನು ಮಾರಾಟ ಮಾಡುವ ಸಣ್ಣ ಅಂಗಡಿಯನ್ನು ನಡೆಸುತ್ತಿದ್ದಾರೆ.

ರಾಮಮಂದಿರದ ಭಾಗವಾಗಿ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ರಸ್ತೆ ವಿಸ್ತರಣೆ ಯೋಜನೆಯಿಂದಾಗಿ ರಂಜಿತಾ ತಮ್ಮ ಅಂಗಡಿಯನ್ನು ಕಳೆದುಕೊಳ್ಳುವ ಆತಂಕದಲ್ಲಿ ಕಳೆದ ಕೆಲವು ತಿಂಗಳುಗಳಿಂದಲೂ ಇದ್ದಾರೆ.

ರಂಜಿತಾ ಅವರಿಗೆ ತೊದಲು ಸಮಸ್ಯೆ ಇದೆ. ಹೀಗಾಗಿ ಅವರು ಮದುವೆಯಾಗುವುದು ಕಷ್ಟವಾಯಿತು. ಸಹೋದರನೇ ರಂಜಿತಾ ಅವರನ್ನು ಪೋಷಣೆ ಮಾಡುತ್ತಿದ್ದು, ರಂಜಿತಾ ಅಂಗಡಿಯನ್ನು ನಡೆಸುತ್ತಿದ್ದಾರೆ.

ರಾಮಮಂದಿರಕ್ಕೆ ತೆರಳುವ ಮುನ್ನ, ಹನುಮಂತನ ಬೃಹತ್ ರಚನೆಯನ್ನು ಹೊಂದಿರುವ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಭಕ್ತರು ಮೊದಲು ಭೇಟಿ ನೀಡಬೇಕೆಂಬ ಸಂಪ್ರದಾಯ ಇಲ್ಲಿದೆ. ಹೀಗಾಗಿ ಇಲ್ಲಿನ ವ್ಯಾಪಾರಿಗಳ ಜೀವನ ನೆಮ್ಮದಿಯಾಗಿ ಇತ್ತು.

ರಂಜಿತಾ ಅವರ ಅಂಗಡಿಯನ್ನು ಅವರ ಅಜ್ಜ ನಿರ್ಮಿಸಿದರು. ನಂತರ ಅವರ ತಂದೆ ನಡೆಸುತ್ತಿದ್ದರು. ತಂದೆಯ ಮರಣದ ನಂತರ, ರಂಜಿತಾ ತನ್ನ ಸಹೋದರನೊಂದಿಗೆ ಅಂಗಡಿಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿರಿ: ಭೂ ಹಗರಣ, ಬ್ರಾಹ್ಮಣರ ಮತಗಳು ಕೈ ತಪ್ಪುವ ಭಯ: ಅಯೋಧ್ಯೆಯ ಟಿಕೆಟ್‌ ಯೋಗಿ ಕಳೆದುಕೊಳ್ಳಲು ಕಾರಣವೇ?

ಭಗವಾನ್ ರಾಮನ ಫೋಟೋಗಳೊಂದಿಗೆ ಫೋಟೋ ಫ್ರೇಮ್‌ಗಳು, ಬ್ಯಾಗ್‌ಗಳು, ಧೂಪದ್ರವ್ಯದ ತುಂಡುಗಳು ಮತ್ತು ಇತರ ಕೆಲವು ವರ್ಣರಂಜಿತ ಪೂಜಾ ವಸ್ತುಗಳನ್ನು ಈ ಸಣ್ಣ ಅಂಗಡಿಯಲ್ಲಿ ಕಾಣಬಹುದು. ರಂಜಿತಾ ಮಾರಾಟ ಮಾಡುತ್ತಿರುವ ಬ್ಯಾಗ್‌‌ ಒಂದರ ಮೇಲೆ ‘ಜೈ ಶ್ರೀರಾಮ್‌’ ಎಂದಿರುವುದನ್ನು ನೋಡಬಹುದು.

ರಾಮ ಮಂದಿರ ರಸ್ತೆ ವಿಸ್ತರಣೆ ಯೋಜನೆಯಿಂದಾಗಿ ತನ್ನ ಅಂಗಡಿ ಶೀಘ್ರದಲ್ಲೇ ನೆಲಸಮವಾಗಲಿದೆ ಎಂದು ರಂಜಿತಾ ನೋವು ತೋಡಿಕೊಂಡರು.

PC: The Wire, Ismat Ara

ಅಯೋಧ್ಯೆ ಅಭಿವೃದ್ಧಿ ಯೋಜನೆ

ಅಯೋಧ್ಯೆಯ ಅಭಿವೃದ್ಧಿ ಯೋಜನೆಯ ಭಾಗವಾಗಿ ಹನುಮಾನ್ ಗರ್ಹಿ ಮಾರ್ಗದಲ್ಲಿನ ನೂರಾರು ಅಂಗಡಿಗಳಿರುವ ರಸ್ತೆಯ ಅಗಲೀಕರಣ ಮಾಡಲು ಉದ್ದೇಶಿಸಲಾಗಿದೆ. ಇದರ ವಿರುದ್ಧ 2021ರಲ್ಲಿಯೇ ವ್ಯಾಪಾರಿಗಳು ಪ್ರತಿಭಟಿಸಿದರು.

ಅಂಗಡಿಗಳ ಮಾಲೀಕರು ಹಲವಾರು ಮೆರವಣಿಗೆಗಳನ್ನು ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ಹೊರಗೆ ಧರಣಿ ಕುಳಿತರು. ನಂತರ ಪತ್ರಗಳನ್ನೂ ಬರೆದರು. ಸುಮಾರು ಒಂದು ವರ್ಷ ವರ್ಷದಿಂದಲೂ ವ್ಯಾಪಾರಿಗಳು ಆಡಳಿತದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

ತೆರವುಗೊಳಿಸುವ ಅಂಗಡಿಗಳಿಗೆ ನೀಡುವ ಪರಿಹಾರದ ಬಗ್ಗೆಯಾಗಲೀ, ಸ್ಥಳಾಂತರಗೊಳ್ಳುವವರಿಗೆ ಹೊಸ ಅಂಗಡಿಗಳಾಗಲಿ ನೀಡುವ ಕುರಿತು ಸ್ಪಷ್ಟತೆ ಇಲ್ಲ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.

2019ರಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಬಾಬರಿ ಮಸೀದಿ ಭೂಮಿಯನ್ನು ಸುಪ್ರೀಂ ಕೋರ್ಟ್ ನೀಡಿದ ನಂತರ ರಾಮಮಂದಿರ ನಿರ್ಮಾಣ ಯೋಜನೆ ತ್ವರಿತವಾಗಿ ಪ್ರಗತಿಯಲ್ಲಿದೆ.

ಚುನಾವಣಾ ರಾಜಕೀಯ

ಜಿಲ್ಲೆಯಲ್ಲಿ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದ್ದು, ಪ್ರತಿಪಕ್ಷಗಳು ವ್ಯಾಪಾರಿಗಳ ಆಗ್ರಹವನ್ನು ಚುನಾವಣಾ ವಿಷಯವನ್ನಾಗಿ ಬಳಸುತ್ತಿವೆ.

ಬಿಜೆಪಿ ಅಭ್ಯರ್ಥಿ ವಿವೇಕ್ ಪ್ರಕಾಶ್ ಗುಪ್ತಾ ವಿರುದ್ಧ ಮತದಾರರನ್ನು ಒಗ್ಗೂಡಿಸಲು ಅಯೋಧ್ಯೆಯ ಇಂಡಸ್ಟ್ರಿ ಅಂಡ್ ಬ್ಯುಸಿನೆಸ್ ಟ್ರಸ್ಟ್‌ನ ಮುಖ್ಯಸ್ಥ ಸಮಾಜವಾದಿ ಪಕ್ಷದ ನಂದ್ ಕುಮಾರ್ ಗುಪ್ತಾ ಮುಂದಾಗಿದ್ದಾರೆ.

“ಅನೇಕ ವ್ಯಾಪಾರಿಗಳು, ವಿಶೇಷವಾಗಿ ಸಣ್ಣ ಸಣ್ಣ ವ್ಯಾಪಾರಿಗಳು ಬಿಜೆಪಿಯಿಂದ ಭ್ರಮನಿರಸನಗೊಂಡಿದ್ದಾರೆ. ಏಕೆಂದರೆ ಅಭಿವೃದ್ಧಿ ಯೋಜನೆಯು ವ್ಯಾಪಾರಿಗಳ ಜೀವನೋಪಾಯದ ಮೇಲೆ ನೇರವಾಗಿ ದಾಳಿ ಮಾಡುತ್ತಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿರಿ: ಉತ್ತರ ಪ್ರದೇಶ: 2004ರ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ 18 ಪೊಲೀಸರ ವಿರುದ್ಧ FIR ದಾಖಲು

ಆಗಸ್ಟ್ 5, 2020ರಂದು ರಾಮ ಮಂದಿರದ ಉದ್ಘಾಟನಾ ದಿನದಂದು (ಭೂಮಿ ಪೂಜೆಯಂದು) ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ನೀಡುತ್ತಿದ್ದಾರೆಂದು ಸಣ್ಣ ಅಂಗಡಿಗಳನ್ನು ರಸ್ತೆಬದಿಯಿಂದ ತೆರವುಗೊಳಿಸಲಾಯಿತು ಎಂದು ಅವರು ದೂರುತ್ತಾರೆ.

“ಬಿಜೆಪಿ ನಿರ್ಮಿಸಲು ಬಯಸುವ ಈ ಹೊಸ ಮಾಲ್‌ನಂತಹ ಅಯೋಧ್ಯೆಯಲ್ಲಿ ವ್ಯಾಪಾರಿಗಳ ಸ್ಥಾನ ಎಲ್ಲಿದೆ?” ನಂದಕುಮಾರ್‌ ಪ್ರಶ್ನಿಸುತ್ತಾರೆ.

ವ್ಯಾಪಾರಿಗಳಿಗೆ ಪರಿಹಾರ ಸಿಗದಿರುವ ಆತಂಕ, ಆಡಳಿತದಿಂದ ಯಾವುದೇ ಅಧಿಕೃತ ಭರವಸೆ ಇಲ್ಲದಿರುವುದರಿಂದ ವ್ಯಾಪಾರಿ ವರ್ಗದ ಮತಗಳು ಬಿಜೆಪಿಯ ಕೈತಪ್ಪುವ ಸಾಧ್ಯತೆಯನ್ನು ಊಹಿಸಲಾಗಿದೆ.

ದೊಡ್ಡ ಕೈಗಾರಿಕೋದ್ಯಮಿಗಳಿಗೆ ಅಯೋಧ್ಯೆಯಲ್ಲಿ ಅವಕಾಶಗಳನ್ನು ನೀಡುವ ದೊಡ್ಡ ಯೋಜನೆ ರೂಪಿಸಲಾಗಿದೆ ಎಂದು ನಂದ್ ಕುಮಾರ್ ದೂರುತ್ತಾರೆ.

“ಅವರು ಅಯೋಧ್ಯೆಯಿಂದ ಇತರ ಆಟಗಾರರನ್ನು ಹೊರ ಹಾಕಲು ಬಯಸುತ್ತಾರೆ. ಏಕಾಂಗಿಯಾಗಿ ಆಡಳಿತ ನಡೆಸಲು ಇಚ್ಛಿಸುತ್ತಾರೆ” ಎನ್ನುವ ನಂದಕುಮಾರ್‌, “ಬುಲ್ಡೋಜರ್ ಪೆ ಸೈಕಲ್ ಭರಿ (ಬುಲ್ಡೋಜರ್‌ಅನ್ನು ಸೈಕಲ್ ಸೋಲಿಸುತ್ತದೆ)” ಎಂದಿದ್ದಾರೆ.

“ನಾವೂ ರಾಮನ ಸೇವೆ ಮಾಡಿದ್ದೇವೆ…”

ರಾಮಮಂದಿರ ಚಳವಳಿಯ ನಂತರ ಅಯೋಧ್ಯೆ ಅವಕಾಶಗಳ ಕೇಂದ್ರವಾಗಿದೆ ಎಂದು ಮುಖಂಡ ಅಭಯ್ ಕುಮಾರ್ ಪಾಂಡೆ ಅಭಿಪ್ರಾಯಪಡುತ್ತಾರೆ.

ಹಲವು ತಲೆಮಾರಿನ ಕುಟುಂಬಗಳ ಒಡೆತನದ ಈ ಅಂಗಡಿಗಳ ಭಾವನಾತ್ಮಕ ಮೌಲ್ಯವನ್ನು ಹಣದಿಂದ ಸರಿದೂಗಿಸಲು ಸಾಧ್ಯವಿಲ್ಲವಾದರೂ, ಅಯೋಧ್ಯೆಯ ಅಭಿವೃದ್ಧಿಯಿಂದ ವ್ಯಾಪಾರಿಗಳು ಸಹ ಪ್ರಯೋಜನ ಪಡೆಯುವಂತೆ ಆಡಳಿತವು ಖಾತ್ರಿಪಡಿಸಬೇಕು ಎಂದು ಪಾಂಡೆ ಹೇಳುತ್ತಾರೆ.

“ರಾಮಜನ್ಮಭೂಮಿ ಆಂದೋಲನದ ಸಂದರ್ಭದಲ್ಲಿ ಕರಸೇವಕರಿಗೆ ನೀರು, ಅನ್ನ ಬಡಿಸಿದ್ದು ನಾವು. ಶ್ರೀರಾಮನನ್ನು ಗೌರವಿಸಿದ ಜನರಿಗೆ ಜೀವನೋಪಾಯದ ಮಾರ್ಗವಿಲ್ಲವಾದರೆ, ಅವರು ಬಿಜೆಪಿಗೆ ಏಕೆ ಮತ ಹಾಕುತ್ತಾರೆ?” ಎಂದು ಅವರು ಪ್ರಶ್ನಿಸುತ್ತಾರೆ.

“ಮೆಹೆಂಗಾಯಿ ತೋ ರೋಕ್ ನಹೀಂ ಪಯೇಂಗೇ, ಮಗರ್ ಹುಮಾರಾ ಉತ್ಪಿದನ್ ರೋಕ್ ಸಕ್ತೇ ಹೈಂ (ಅವರು ಯಾವಾಗಲೂ ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಅವರು ಮಾಡಬಹುದಾದ ಕೆಲಸವೆಂದರೆ ನಮ್ಮ ಸಂಕಟವನ್ನು ತಡೆಯುವುದು)” ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಅಯೋಧ್ಯೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ವಿವೇಕ್ ಪ್ರಕಾಶ್ ಗುಪ್ತಾ, ಎಸ್‌ಪಿಯ ತೇಜ್ ನಾರಾಯಣ ಪಾಂಡೆ ಮತ್ತು ಬಿಎಸ್‌ಪಿಯ ರವಿ ಮೌರ್ಯ ನಡುವೆ ಹಣಾಹಣಿ ನಡೆಯಲಿದೆ. ಕಾಂಗ್ರೆಸ್‌ನ ರೀತಾ ಮೌರ್ಯ ಮತ್ತು ಆಪ್‌ನ ಶುಭಂ ಶ್ರೀವಾಸ್ತವ ಕೂಡ ಕಣದಲ್ಲಿದ್ದಾರೆ.

ಮೂಲ: ದಿ ವೈರ್‌ (ಇಸ್ಮತ್ ಅರಾ)


ಇದನ್ನೂ ಓದಿರಿ: ಯೋಗಿ ಆದಿತ್ಯನಾಥ್‌ಗೆ ಅಯೋಧ್ಯೆಯಲ್ಲಿ ಹೆಚ್ಚು ವಿರೋಧವಿದೆ: ರಾಮ ಮಂದಿರದ ಪ್ರಧಾನ ಅರ್ಚಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬಾಬ್ರಿ ಮಸೀದಿ ಧ್ವಂಸ ಮಾಡಿದ ಕರಸೇವಕರಿಗೆ ಸಕಲ ಸವಲತ್ತು ಪೂರೈಸಿದ ಬೀದಿ ವ್ಯಾಪಾರಿಗಳಿಗೆ ಶ್ರೀ ರಾಮನೇ ಶಿಕ್ಷೆ ವಿಧಿಸುತ್ತಿದ್ದಾನೆಂದು ಆತ್ಮ ವಿಮರ್ಶೆ ಮಾಡಿ ಕೊಳ್ಳುವುದು.

LEAVE A REPLY

Please enter your comment!
Please enter your name here

- Advertisment -

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...