Homeಅಂತರಾಷ್ಟ್ರೀಯವಿಶ್ವ ತಾಯ್ನುಡಿ ದಿನ: ಜಗತ್ತಿನ 40% ಜನ ತಾವು ಮಾತಾಡುವ ಭಾಷೆಯಲ್ಲಿ ಶಿಕ್ಷಣ ಪಡೆಯುತ್ತಿಲ್ಲ!

ವಿಶ್ವ ತಾಯ್ನುಡಿ ದಿನ: ಜಗತ್ತಿನ 40% ಜನ ತಾವು ಮಾತಾಡುವ ಭಾಷೆಯಲ್ಲಿ ಶಿಕ್ಷಣ ಪಡೆಯುತ್ತಿಲ್ಲ!

- Advertisement -
- Advertisement -

ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಮತ್ತು ಬಹುಭಾಷೆಯನ್ನು ಉತ್ತೇಜಿಸಲು ಫೆಬ್ರವರಿ 21 ರಂದು (ಸೋಮವಾರ) ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನು (ತಾಯ್ನುಡಿ ದಿನ) ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ದಿನದ ಆಚರಣೆಯನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) 1999 ರಲ್ಲಿ ಅನುಮೋದಿಸಿತು.

“ಮಾತೃಭಾಷೆ ಆಧಾರಿತ ಬಹುಭಾಷಾ ಶಿಕ್ಷಣವು ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ಗೌರವವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದರೆ ವಿಶ್ವದ ಜನಸಂಖ್ಯೆಯ ಶೇಕಡಾ 40 ರಷ್ಟು ಜನ ತಾವು ಮಾತನಾಡುವ ಅಥವಾ ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ಶಿಕ್ಷಣವನ್ನು ಹೊಂದಿಲ್ಲ” ಎಂದು ಯುನೆಸ್ಕೊ ಕಳವಳ ವ್ಯಕ್ತಪಡಿಸಿದೆ.

ಹೀಗಾಗಿ 2022 ರ ಅಂತರರಾಷ್ಟ್ರೀಯ ಮಾತೃಭಾಷಾ ದಿನದ ಧ್ಯೇಯ ವಾಕ್ಯವಾಗಿ “ಬಹುಭಾಷಾ ಕಲಿಕೆಗೆ ತಂತ್ರಜ್ಞಾನ ಬಳಕೆ- ಸವಾಲುಗಳು ಮತ್ತು ಅವಕಾಶಗಳು” ಎಂಬ ಥೀಮ್​ ಆಯ್ಕೆ ಮಾಡಿಕೊಂಡಿದೆ.

ಇದನ್ನೂ ಓದಿ: ಕೊಡಗು: ವಿದ್ಯಾರ್ಥಿಗಳಿಗೆ ಬಜರಂಗದಳದಿಂದ ಕೇಸರಿ ಶಲ್ಯ ವಿತರಣೆ; ವಿಡಿಯೊ ವೈರಲ್

UNESCO ವೆಬ್‌ಸೈಟ್‌ನ ಪ್ರಕಾರ 2000 ನೇ ವರ್ಷದಿಂದ ಪ್ರಪಂಚದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಭಾಷೆಗಳು ಕಣ್ಮರೆಯಾಗುತ್ತಿರುವ ಬಗ್ಗೆ ಯುನೆಸ್ಕೋ ಕಳವಳ ವ್ಯಕ್ತಪಡಿಸಿದೆ.  “ಸುಸ್ಥಿರ ಸಮಾಜಗಳ ಉಳಿವಿಗೆ ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಯ ಪ್ರಾಮುಖ್ಯತೆ ಹೆಚ್ಚಿದೆ ಎಂದು ಯುನೆಸ್ಕೊ ನಂಬುತ್ತದೆ” ಎಂದು ತಿಳಿಸಿದೆ.

ವಿಶೇಷವಾಗಿ ಆರಂಭಿಕ ಶಾಲಾ ಶಿಕ್ಷಣದಲ್ಲಿ ಮಾತೃಭಾಷೆಯ (ತಾಯ್ನುಡಿ) ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಯುನೆಸ್ಕೋ ಈ ದಿನವನ್ನು ಆಚರಿಸಲು ನಿರ್ಧರಿಸಿತು. ಅಂತರಾಷ್ಟ್ರೀಯ ಮಾತೃಭಾಷಾ ದಿನವು ಸಾರ್ವಜನಿಕ ಜೀವನದಲ್ಲಿ ಮಾತೃಭಾಷೆಯ ಬೆಳವಣಿಗೆಗೆ ತಾವು ನೀಡಬೇಕಾದ ಬದ್ಧತೆಯೆಡೆಗೆ ಒಂದು ಹೆಜ್ಜೆಯಾಗಿದೆ.

ಇತ್ತೀಚಿನ ಜನಗಣತಿ ಮಾಹಿತಿಯ ಪ್ರಕಾರ ಭಾರತದಲ್ಲಿ 19,500 ಕ್ಕೂ ಹೆಚ್ಚು ಭಾಷೆಗಳು ಅಥವಾ ಉಪಭಾಷೆಗಳನ್ನು ಮಾತೃಭಾಷೆಯಾಗಿ ಮಾತನಾಡುತ್ತಾರೆ. ಭಾರತದಲ್ಲಿ 10,000 ಅಥವಾ ಅದಕ್ಕಿಂತ ಹೆಚ್ಚು ಜನರು ಮಾತನಾಡುವ 121 ಭಾಷೆಗಳಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಗುಜರಾತ್‌ ಬಿಜೆಪಿಯ ವಿವಾದಾತ್ಮಕ ಪೋಸ್ಟ್‌‌ ರದ್ದು ಮಾಡಿದ ಟ್ವಿಟರ್‌ ಸಂಸ್ಥೆ

Image

 

10,000 ಅಥವಾ ಅದಕ್ಕಿಂತ ಹೆಚ್ಚು ಜನರು ಮಾತನಾಡುವ 121 ಭಾಷೆಗಳನ್ನು ಎರಡು ಭಾಗಗಳಲ್ಲಿ ವಿಭಾಗಿಸಲಾಗಿದೆ. ಭಾರತೀಯ ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ 22 ಭಾಷೆಗಳಿದ್ದು ಇದು ಒಂದು ವಿಭಾಗವಾಗಿದೆ. ಎರಡನೇ ವಿಭಾಗದಲ್ಲಿ, ಎಂಟನೇ ಶೆಡ್ಯೂಲ್‌ನಲ್ಲಿ ಸೇರಿಸದ ಭಾಷೆಗಳು 99 ಭಾಷೆಗಳಿವೆ.

ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಉಲ್ಲೇಖಿಸಲಾಗಿರುವ ಅನುಸೂಚಿತ ಭಾಷೆಗಳು: ಅಸ್ಸಾಮಿ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು, ಉರ್ದು, ಬೋಡೋ, ಸಂತಾಲಿ, ಮೈಥಿಲಿ ಮತ್ತು ಡೋಗ್ರಿ.

ಇವುಗಳಲ್ಲಿ 14 ಭಾಷೆಗಳನ್ನು ಮಾತ್ರ ಸಂವಿಧಾನದಲ್ಲಿ ಮೊದಲು ಸೇರಿಸಲಾಗಿತ್ತು. 1967 ರಲ್ಲಿ ಸಿಂಧಿ ಭಾಷೆಯನ್ನು ಸೇರಿಸಲಾಯಿತು. ನಂತರ 1992 ರಲ್ಲಿ ಕೊಂಕಣಿ, ಮಣಿಪುರಿ ಮತ್ತು ನೇಪಾಳಿ ಮೂರು ಭಾಷೆಗಳನ್ನು ಸೇರಿಸಲಾಯಿತು. ಬೋಡೋ, ಡೋಗ್ರಿ, ಮೈಥಿಲಿ ಮತ್ತು ಸಂತಾಲಿ ಭಾಷೆಗಳನ್ನು 2004 ರಲ್ಲಿ ಸೇರಿಸಲಾಗಿದೆ.


ಇದನ್ನೂ ಓದಿ: ಇಂದು ವಿಶ್ವ ಸಾಮಾಜಿಕ ನ್ಯಾಯ ದಿನ; ಚರ್ಚೆಯಾಗಬೇಕಾದುದ್ದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಹಾಲಕ್ಷಿ ಮತ್ತು ಮೆಟ್ರೋ’: ತೆಲಂಗಾಣ ಸರ್ಕಾರ-ಎಲ್‌&ಟಿ ನಡುವೆ ಜೋರಾದ ಜಟಾಪಟಿ

0
ಹೈದರಾಬಾದ್ ಮಹಾನಗರ ಮೆಟ್ರೋ ಸೇವೆ ಸೇರಿದಂತೆ ತೆಲಂಗಾಣ ರಾಜ್ಯದ ಹಲವು ಬೃಹತ್ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆ ಮಾಡುತ್ತಿರುವ 'ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ)' ಕಂಪನಿ ಮತ್ತು ರಾಜ್ಯ ಸರ್ಕಾರದ...