Homeಚಳವಳಿಈ ವರ್ಷದ ಬಜೆಟ್ಟಿನ ಒಂದು ಝಲಕ್: ರೈತರ ಸಂಕಷ್ಟಕ್ಕೆ ಕಾಸಿಲ್ಲ, ದಾಢಸಿ ಜಾತಿ ನಿಗಮಗಳಿಗೆ ಸಾವಿರ...

ಈ ವರ್ಷದ ಬಜೆಟ್ಟಿನ ಒಂದು ಝಲಕ್: ರೈತರ ಸಂಕಷ್ಟಕ್ಕೆ ಕಾಸಿಲ್ಲ, ದಾಢಸಿ ಜಾತಿ ನಿಗಮಗಳಿಗೆ ಸಾವಿರ ಕೋಟಿ ಅನುದಾನ!

- Advertisement -
- Advertisement -

ಮುಂದಿನ 5 ವರ್ಷಗಳಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಕೃಷಿ ಭೂಮಿಯಲ್ಲಿ ಸಾವಯವ ಇಂಗಾಲ ಹೆಚ್ಚಿಸುವ ಅಭಿಯಾನ ಕಾರ್ಯಕ್ರಮ; 2021-22ನೇ ಸಾಲಿನಲ್ಲಿ 10 ಕೋಟಿ ರೂ. ಅನುದಾನ (2021-22ರ ಬಜೆಟ್)

ಕರ್ನಾಟಕದ ಬಹುತೇಕ ಜಿಲ್ಲೆಗಳ ಸಾವಯವ ಇಂಗಾಲದ ಪ್ರಮಾಣ 0.5% ಗೆ ಇಳಿದಿದ್ದು ವೈಜ್ಞಾನಿಕ ನಿಷ್ಕರ್ಷೆಯೇ ಮಾನದಂಡವಾದಲ್ಲಿ ಇಲ್ಲಿ ಕೃಷಿ ಮಾಡಲು ಸಾಧ್ಯವೇ ಇಲ್ಲ! ತುರ್ತಾಗಿ ಈ ಸಾವಯವ ಇಂಗಾಲದ ಪ್ರಮಾಣವನ್ನು ಏರಿಸಬೇಕಾಗಿದೆ. ಸಾವಯವ ಇಂಗಾಲದ ಪ್ರಮಾಣ ಏರಿಸುವುದು ಅಂದರೆ ಕೃಷಿ ತ್ಯಾಜ್ಯ ಮತ್ತಿತರ ಜೈವಿಕ ಉಳಿಕೆಗಳನ್ನು ಮಣ್ಣಿಗೆ ಮರಳಿ ಸೇರಿಸುವುದು. ಇಂಥಾ ತುರ್ತು ಕಾರ‍್ಯಕ್ರಮಕ್ಕೆ ಸರಕಾರದ ಅನುದಾನ ಕೇವಲ 10 ಕೋಟಿ ರೂಪಾಯಿ!

ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು (PACS) ಹಾಗೂ ಟಿ.ಎ.ಪಿ.ಸಿ.ಎಂ.ಎಸ್.ಗಳಲ್ಲಿ ಸಂಗ್ರಹಿಸಿದ ಕೃಷಿ ಉತ್ಪನ್ನಗಳ ಮೇಲೆ ಶೇ. 11 ರ ದರದಲ್ಲಿ ವಿತರಿಸಿದ ಅಡಮಾನ ಸಾಲ ಸೌಲಭ್ಯಕ್ಕೆ 6 ತಿಂಗಳ ಅವಧಿಗೆ ಸರ್ಕಾರದಿಂದ ಶೇ. 4 ರ ಬಡ್ಡಿ ಸಹಾಯಧನ. ಐದು ಕೋಟಿ ರೂ. ಅನುದಾನ(2021-22ರ ಬಜೆಟ್)

ಕೃಷಿ ಉತ್ಪನ್ನವನ್ನು ಸಂಕಷ್ಟದ ಸಮಯದಲ್ಲಿ ಮಾರಾಟ ಮಾಡಬಾರದು, ಅದನ್ನು ಸಹಕಾರಿ ಸಂಘಗಳಲ್ಲಿ ಅಡಮಾಣ ಇಟ್ಟು ಸಾಲ ತೆಗೆದುಕೊಂಡು ಉತ್ತಮ ಬೆಲೆ ಬಂದಾಗ ಮಾರಲು ಅನುಕೂಲ ಕಲ್ಪಿಸಬೇಕು. ಅದಕ್ಕೆ ಶೇ. 11ರ ಬಡ್ಡಿ ಹಾಕಲಾಗುತ್ತದೆ. ಈ ಬಡ್ಡಿಗೆ ಸಹಾಯಧನ ಶೇ.4ರಷ್ಟು ಕೊಡುವ ಸರಕಾರ ಅದಕ್ಕೆ ಮೀಸಲಿಟ್ಟ ಹಣ ಕೇವಲ 5 ಕೋಟಿ. ಈ ಐದು ಕೋಟಿ ಅಂದರೆ ಎಷ್ಟು ಸಾಲಕ್ಕೆ ಸಹಾಯ ನೀಡಿದಂತಾಗುತ್ತದೆ ಗೊತ್ತೇ? ಕೇವಲ 250 ಕೋಟಿಯ ಗೋದಾಮು ಸಾಲಕ್ಕೆ. ನಿಜಕ್ಕೂ ಬಡ್ಡಿ ಮನ್ನಾಕ್ಕೆ ಕನಿಷ್ಠ 100 ಕೋಟಿ ರೂ ನೀಡಿದಲ್ಲಿ ಏನಿಲ್ಲವೆಂದರೂ 2000 ಕೋಟಿಯ ಕೃಷಿ ಉತ್ಪನ್ನಗಳನ್ನು ರೈತರು ಗೋದಾಮಿನಲ್ಲಿಟ್ಟು ಉತ್ತಮ ಬೆಲೆ ಬಂದಾಗ ಮಾರಬಹುದು. ಇದೂ ಕರ್ನಾಟಕದ ಕೃಷಿ ಉತ್ಪನ್ನದ ಮೌಲ್ಯಕ್ಕೆ ಹೋಲಿಸಿದರೆ ಯಃಕಶ್ಚಿತ್. ಸರಕಾರ ದೃಢವಾದ ಬೆಂಬಲ ನೀಡದಿದ್ದರೆ ರೈತರು ಸಂಕಷ್ಟದ ಮಾರಾಟ ಮಾಡುವುದು ಹೇಗೆ ತಾನೇ ನಿಲ್ಲುತ್ತದೆ?

ಸಮಾಜ ಕಲ್ಯಾಣ ಇಲಾಖೆ ವತಿಯಿಂದ 50 ಕೋಟಿ ರೂ. ವೆಚ್ಚದಲ್ಲಿ 50 ಹೊಸ ಮೆಟ್ರಿಕ್ ನಂತರದ ಹಾಸ್ಟೆಲ್ ಪ್ರಾರಂಭ. 5 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲ. (2021-22ರ ಬಜೆಟ್)

ಬಡ ವಿದ್ಯಾರ್ಥಿಗಳಿಗೆ 50 ಹೊಸ ಹಾಸ್ಟೆಲ್ ಆರಂಭ! ಅನುದಾಣ ತಲಾ ಒಂದು ಕೋಟಿ ರೂಪಾಯಿ! ಈ ಒಂದು ಕೋಟಿ ರೂಪಾಯಿ ಈಗ ಮೇಲ್ಮಧ್ಯಮ ವರ್ಗದ ಮನೆಗೇ ಸಾಕಾಗುವುದಿಲ್ಲ! ಒಂದೊಂದು ಹಾಸ್ಟೆಲ್ಲಿನಲ್ಲಿ ಹೆಚ್ಚುವರಿ 50 ಮಕ್ಕಳಿಗೆ ಅವಕಾಶ ಎಂದು ಹೇಳಿದಂತಾಯಿತು. ಬೇಡಿಕೆ ಎಷ್ಟಿದೆ? ಈ ಬಾರಿ 10ನೇ ತರಗತಿಯಲ್ಲಿ ಎಲ್ಲರೂ ಪಾಸಾಗಿರುವಾಗ, ವಿದ್ಯಾಕಾಂಕ್ಷಿ ಹುಡುಗರ ಕತೆ ಏನು? ಕೋವಿಡ್ ಕಾಲದಲ್ಲಿ ಸರಕಾರಕ್ಕೆ ಇದು ಗೊತ್ತಿಲ್ಲದೇ ಏನೂ ಅಲ್ಲ!

ಈ ಸರಕಾರ ಉದಾರವಾಗುವುದು ಯಾವುದಕ್ಕೆ ನೋಡಿ:

ಸಾವಯವ ಇಂಗಾಲ ಹೆಚ್ಚಿಸಲು, ರೈತರ ಗೋದಾಮು ಸಾಲದ ಬಡ್ಡಿ ಸಹಾಯಕ್ಕೆ ಕಾಸಿಲ್ಲ. ಆದರೆ ರಾಜ್ಯದ ಮೂರು ಬಲಾಢ್ಯ ಜಾತಿಗಳ ಅಭಿವೃದ್ಧಿಗೆ 1050 ಕೋಟಿ ಅನುದಾನ!! ಜಾತಿ ನಿಗಮಗಳಿಗೆ ಕಾಸು ಧಾರಾಳ, ರೈತರ ಕಷ್ಟಕ್ಕೆ ಕಾಸಿಲ್ಲ!

  • ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ ಅನುದಾನ ನಿಗದಿ; 100 ಕೋಟಿ ರೂ. ಈಗಾಗಲೇ ಬಿಡುಗಡೆ. (2021-22ರ ಬಜೆಟ್)
  • ಒಕ್ಕಲಿಗ ಸಮುದಾಯದ ಹೊಸ ನಿಗಮ ಸ್ಥಾಪನೆ; 500 ಕೋಟಿ ರೂ. ವೆಚ್ಚದಲ್ಲಿ ಕಾರ್ಯಕ್ರಮಗಳ ಅನುಷ್ಠಾನ. (2021-22ರ ಬಜೆಟ್)
  • ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಚಟುವಟಿಕೆಗಳಿಗೆ 50 ಕೋಟಿ ರೂ. (2021-22ರ ಬಜೆಟ್)!

– ಕೆ.ಪಿ.ಸುರೇಶ

ಇಂಗ್ಲಿಷ್ ಅಧ್ಯಾಪಕರಾಗಲು ಎಂ.ಎ ಓದಿದ್ದ ಕೆ.ಪಿ.ಸುರೇಶ ಅವರು ಕೃಷಿಯಲ್ಲಿ ತೊಡಗಲು ಸುಳ್ಯ ತಾಲೂಕಿನ ತಮ್ಮ ಊರಿಗೆ ಮರಳಿದ್ದರು. ತಮ್ಮ ಸ್ವಂತ ಅನುಭವ, ಅಧ್ಯಯನ ಹಾಗೂ ಒಳನೋಟಗಳ ಕಾರಣಕ್ಕೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯ ವಿಚಾರದಲ್ಲಿ ತಜ್ಞರಿಗೂ, ರೈತರಿಗೂ ಪಾಠ ಮಾಡಬಲ್ಲರು. ಅಪಾರ ಕೀಟಲೆಯ ಸ್ವಭಾವದ ಅವರು ಹಲವು ವಿಚಾರಗಳ ಕುರಿತು ಬರೆಯುತ್ತಿರುವ ಆಲ್‌ರೌಂಡರ್ ಕೂಡ.


ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣದ ಸಾಂವಿಧಾನಿಕ ಹಕ್ಕು ಮತ್ತು ಕರ್ನಾಟಕ ಸರ್ಕಾರದ ವೈಫಲ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...