Homeಮುಖಪುಟಈ ತಿಂಗಳು ಬರಲಿರುವ ಅಯೋಧ್ಯೆ ಪ್ರಕರಣದ ತೀರ್ಪನ್ನು ಹೇಗೆ ಸ್ವೀಕರಿಸಬೇಕು: ಯೋಗೇಂದ್ರ ಯಾದವ್‌

ಈ ತಿಂಗಳು ಬರಲಿರುವ ಅಯೋಧ್ಯೆ ಪ್ರಕರಣದ ತೀರ್ಪನ್ನು ಹೇಗೆ ಸ್ವೀಕರಿಸಬೇಕು: ಯೋಗೇಂದ್ರ ಯಾದವ್‌

‘ಎತ್ತು ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು’ ಮಾದರಿಯ ಸೆಕ್ಯುಲರಿಸಂ ಬೇಡ, ತತ್ವನಿಷ್ಠ ಸೆಕ್ಯುಲರಿಸಂ ಪಾಲಿಸೋಣ

- Advertisement -
- Advertisement -

ಸೆಕ್ಯುಲರ್ ರಾಜಕೀಯಕ್ಕೆ ಈ ನವೆಂಬರ್ ತಿಂಗಳು ಹಲವು ಕಠಿಣ ಪರೀಕ್ಷೆಗಳನ್ನೊಡ್ಡಲಿದೆ. ಸರ್ವೋಚ್ಚ ನ್ಯಾಯಲಯವು ಬಹುದಿನಗಳಿಂದ ಕಾಯುತ್ತಿದ್ದ ಅಯೋಧ್ಯೆ ತೀರ್ಪನ್ನು ಈ ತಿಂಗಳು ನೀಡಲಿದೆ. ನಾಗರಿಕರ ರಾಷ್ಟ್ರೀಯ ನೋಂದಣಿಯನ್ನು ಇಡೀ ದೇಶಕ್ಕೆ ಯಾವುದೇ ಸಮಯದಲ್ಲಾದರೂ ವಿಸ್ತರಿಸಬಹುದು. ಲೋಕಸಭೆಯ ಚಳಿಗಾಲದ ಅಧಿವೇಶನವೂ ಇದೇ ತಿಂಗಳು ಶುರುವಾಗಲಿದೆ. ಸರಕಾರವು ಅತ್ಯಂತ ಮಹತ್ವದ ಮೂರು ಮಸೂದೆಗಳನ್ನು ಪ್ರಸ್ತಾಪ ಮಾಡುವ, ಪರಿಚಯಿಸುವ ಅಥವಾ ಅಂಗೀಕರಿಸುವ ಸಾಧ್ಯತೆಗಳಿವೆ; ಏಕರೂಪ ನಾಗರಿಕ ಸಂಹಿತೆ (ಯುನಿಫಾರ್ಮ್ ಸಿವಿಲ್ ಕೋಡ್/ಯುಸಿಸಿ), ಕೇಂದ್ರೀಯ ಮತಾಂತರ ವಿರೋಧಿ ಕಾಯಿದೆ (ಸೆಂಟ್ರಲ್ ಅ್ಯಂಟಿ-ಕನ್ವರ್ಷನ್ ಆ್ಯಕ್ಟ್/ಎಸಿಎ) ಹಾಗೂ ಪೌರತ್ವ ತಿದ್ದುಪಡಿ ಮಸೂದೆ (ಸಿಟಿಜನ್‌ಶಿಪ್ ಅಮೆಂಡ್‌ಮೆಂಟ್ ಬಿಲ್/ಸಿಎಬಿ).

ಈ ಮೂರೂ ನಡೆಗಳನ್ನು ಒಂದೆಡೆ ಸೇರಿಸಿ ತರಲಾಗುತ್ತೋ ಅಥವಾ ಬಿಡಿಬಿಡಿಯಾಗಿ ಹಂತಹಂತವಾಗಿ ತರಲಾಗುತ್ತೋ ನಮಗೆ ತಿಳಿದಿಲ್ಲ. ಆದರೆ, ನಮಗೆ ಖಚಿತವಾಗಿ ತಿಳಿದಿರುವುದೇನೆಂದರೆ, ಇವೆಲ್ಲವುಗಳ ಒಟ್ಟಾರೆ ಪರಿಣಾಮ ಹಿಂದುತ್ವಕ್ಕೆ ದೊಡ್ಡ ಒತ್ತು ನೀಡುವುದಾಗಿರುತ್ತದೆ. ಇವೆಲ್ಲವೂ ಮಾಧ್ಯಮಗಳ ಗದ್ದಲದೊಂದಿಗೆ ಜಾರಿಯಾಗುತ್ತದೆ ಎಂಬುದನ್ನೂ ಮರೆಯಲಾಗದು. ಅಯೋಧ್ಯೆ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಲಯ ಯಾವುದೇ ತೀರ್ಪು ನೀಡಿದರೂ (ಈ ಪ್ರಕರಣವನ್ನು ನೇರವಾದ ಭೂಪ್ರಕರಣ ಎಂದು ಪರಿಗಣಿಸಿ, ವಕ್ಫ್ ಬೋರ್ಡ್ಗೆ ಒಡೆತನವನ್ನು ಹಿಂದಿರುಗಿಸುವ ಅನಿರೀಕ್ಷಿತ ತೀರ್ಪು ನೀಡುವಂತಹ ಒಂದನ್ನು ಹೊರತುಪಡಿಸಿ) ಆ ತೀರ್ಪನ್ನು ಹಿಂದುಗಳಿಗೆ ಆದ ಒಂದು ದೊಡ್ಡ ವಿಜಯವನ್ನಾಗಿ ಬಿತ್ತರಿಸಿ ಮಾರ್ಪಡಿಸಲಾಗುತ್ತದೆ. ರಾಷ್ಟ್ರವ್ಯಾಪಿ ಎನ್‌ಆರ್‌ಸಿ ಮತ್ತು 1955ರ ಪೌರತ್ವ ಕಾಯಿದೆಯ ತಿದ್ದುಪಡಿಗಳನ್ನು ಮುಸ್ಲಿಮ್ ವಲಸಿಗರ ಸಮಸ್ಯೆಗೆ ಅಂತಿಮ ಪರಿಹಾರ ಎಂದು ಬಿಂಬಿಸಲಾಗುವುದು. ಯುಸಿಸಿ ಮತ್ತು ಏಸಿಏಗಳನ್ನು ಸಂವಿಧಾನದಲ್ಲಿ ಇರುವ ಹಿಂದೂವಿರೋಧಿ ಪಕ್ಷಪಾತವನ್ನು ಸರಿಪಡಿಸಲು ಮಾಡಬೇಕಾದ ಕ್ರಮಗಳೆಂದು ಬಿಂಬಿಸಲಾಗುವುದು. ಸ್ಥೂಲವಾಗಿ ನೋಡುವುದಾದರೆ, ಆಳುತ್ತಿರುವ ಕೂಟವು ‘ಹಿಂದೂ ಹಿತಾಸಕ್ತಿಗಳ ಪರಮ ರಕ್ಷಕ’ನಾಗಿ ತನ್ನ ಶಕ್ತಿಯನ್ನು ಸಾಬೀತುಪಡಿಸುವ ಪ್ರಯತ್ನ ಮಾಡುತ್ತದೆ.

ಸೆಕ್ಯುಲರ್ ಶಕ್ತಿಗಳ ಪ್ರತಿಕ್ರಿಯೆಯನ್ನೂ ಇಷ್ಟೇ ಸುಲಭವಾಗಿ ಊಹಿಸಬಹುದಾಗಿದೆ. ಸರ್ವೋಚ್ಚ ನ್ಯಾಯಲಯದ ತೀರ್ಪನ್ನು ಬಹುಸಂಖ್ಯಾತರ ಪಕ್ಷಪಾತಿ ಎಂದೂ ಟೀಕಿಸಬಹುದು. ಯುಸಿಸಿಯನ್ನು ಅಲ್ಪಸಂಖ್ಯಾತರ ಹಿತಾಸಕ್ತಿಗಳಿಗೆ ಸಂವೇದನಾಶೀಲವಾಗಿಲ್ಲವೆಂದು ವಿರೋಧಿಸಬಹುದು ಹಾಗೂ ಏಸಿಏ (ಮತಾಂತರ ವಿರೋಧಿ ಮಸೂದೆ)ಅನ್ನು ತಮ್ಮ ಧರ್ಮವನ್ನು ಪ್ರಸಾರ ಮಾಡುವ ಸಾಂವಿಧಾನಿಕ ಹಕ್ಕನ್ನು ರದ್ದುಪಡಿಸುವ ಕ್ರಮವೆಂದು ವಿರೋಧಿಸಬಹುದು ಹಾಗೂ ಸಿಏಬಿಯು ಮುಸ್ಲಿಮರನ್ನು ಗುರಿಮಾಡುವ ಒಂದು ಭವ್ಯ ವಿನ್ಯಾಸ ಎಂದು ತಿರಸ್ಕರಿಸಬಹುದಾಗಿದೆ. ಒಟ್ಟಾರೆಯಾಗಿ ಸೆಕ್ಯುಲರ್ ರಾಜಕಾರಣಿಗಳು ಮತ್ತು ಬುದ್ಧಿಜೀವಿಗಳು ಈ ಎಲ್ಲ ಕ್ರಮಗಳನ್ನು ಅಲ್ಪಸಂಖ್ಯಾತ ವಿರೋಧಿ ಹಾಗೂ ಹಿಂದು ರಾಷ್ಟ್ರದೆಡೆಗೆ ಇಟ್ಟ ಹೆಜ್ಜೆಗಳು ಎಂದು ವಿರೋಧಿಸುವ ಲಕ್ಷಣಗಳಿವೆ.

ಇವರೆಲ್ಲ ಇದನ್ನೇ ಮಾಡಲಿ, ಹೀಗೇ ಮಾಡಲಿ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಬಯಸುತ್ತವೆ.

ಭಾರತದ ಬಲಪಂಥೀಯ ಶಕ್ತಿಗಳು ಸೆಕ್ಯುಲರ್ ರಾಜಕೀಯಕ್ಕೆ ಪದೇಪದೇ ಇಂತಹುದೇ ಬಲೆಯ ಜಾಲವನ್ನು ಬಹುಕಾಲದಿಂದ ಹೆಣೆದಿವೆ. ಸೆಕ್ಯುಲರ್ ರಾಜಕೀಯವು ಆ ಬಲೆಯಲ್ಲೇ ತನ್ನ ಕಾಲನ್ನಿರಿಸಿ ಅವರು ಬಯಸುವುದನ್ನೇ ಮಾಡಿದೆ. ಇದಕ್ಕೆ ತ್ರಿವಳಿ ತಲಾಕ್ ಪ್ರಕರಣ ಒಳ್ಳೆಯ ಉದಾಹರಣೆಯಾಗಿದೆ. ಸಂಘಪರಿವಾರದ ಹುನ್ನಾರಕ್ಕೆ ಸೆಕ್ಯುಲರಿಸ್ಟ್‌ಗಳ ತಕ್ಷಣದ ಅನೈಚ್ಛಿಕ ಪ್ರತಿಕ್ರಿಯೆಯು ಸುಲಭವಾಗಿ ಬಲಿಬೀಳುವಂಥದ್ದಾಗಿರುತ್ತದೆ. ಸೆಕ್ಯುಲರ್ ವಲಯದ ಚುನಾವಣಾ ಶಕ್ತಿಗಳು ‘ಅಲ್ಪಸಂಖ್ಯಾತಪರ ನಡೆ’ಯನ್ನು ಪದೇಪದೇ ಕಡ್ಡಾಯವಾದ ಪ್ರದರ್ಶಿಸುತ್ತಾ ಬಂದಿವೆ, ವೋಟ್ ಬ್ಯಾಂಕ್ ರಾಜಕಾರಣದ ಅಸ್ತ್ರವಾಗಿ. ಇತ್ತೀಚೆಗೆ, ಚುನಾವಣಾ ರಾಜಕೀಯದ ಒತ್ತಡದ ಕಾರಣಕ್ಕೆ ಕಾಂಗ್ರೆಸ್‌ನಂತಹ ‘ಸೆಕ್ಯುಲರ್’ ಪಕ್ಷಗಳು ಸೆಕ್ಯುಲರಿಸಂನಿಂದ ಸ್ವಲ್ಪ ವಿನಾಯತಿ ಪಡೆದು ಹಿಂದುತ್ವದ ಭಾವನೆಗಳನ್ನು ಪುರಸ್ಕರಿಸಿದ್ದೂ ಇದೆ. ಈ ಆಚರಣೆಯನ್ನು ಮೃದು ಹಿಂದುತ್ವ ಎಂದು ಸರಿಯಾಗಿಯೇ ಕರೆಯಲಾಗಿದೆ. ಇವೆಲ್ಲದರ ಫಲವಾಗಿ ಜಾತ್ಯತೀತತೆಯ ಪವಿತ್ರ ಸಾಂವಿಧಾನಿಕ ತತ್ವವನ್ನು ‘ಮೋಸದ ಲೆಕ್ಕಾಚಾರದಿಂದ ತುಂಬಿದ ರಾಜಕೀಯ ಜಾತ್ಯತೀತತೆ’ ಎಂದು ಬಿಂಬಿಸುವುದು ಸುಲಭವಾಗಿದೆ.

ಸೆಕ್ಯುಲರ್ ರಾಜಕೀಯ ಇವೆಲ್ಲಕ್ಕೂ ಭಿನ್ನವಾಗಿ ಪ್ರತಿಕ್ರಿಯಿಸಲು ಸಾಧ್ಯವೇ? ಮೃದು ಹಿಂದುತ್ವ ಅಥವಾ ತಕ್ಷಣದ ಅನೈಚ್ಛಿಕ ಅಲ್ಪಸಂಖ್ಯಾತವಾದದ ಬದಲಿಗೆ ನಾವುಗಳು ಈ ಐದು ನಡೆಗಳಿಗೆ ತತ್ವಾಧಾರಿತ ಸೆಕ್ಯುಲರ್ ಪ್ರತಿಕ್ರಿಯೆಯ ಬಗ್ಗೆ ಚಿಂತಿಸಬಹುದೆ?

ಹೌದು, ನಮಗಿದು ಸಾಧ್ಯವಿದೆ. ನನ್ನ ಪ್ರಕಾರ, ಸೆಕ್ಯುಲರಿಸಂನ ಉಳಿವು ಮೇಲೆ ಹೆಸರಿಸಿದ ಇಂತಹ ಪ್ರಕರಣಗಳಿಗೆ ತತ್ವಾಧಾರಿತ ಪ್ರತಿಕ್ರಿಯೆಯನ್ನು ರೂಪಿಸುವುದರಲ್ಲಿಯೇ ಇದೆ. ಹಾಗಾಗಿ, ಈ ಐದು ಪ್ರಕರಣಗಳಿಗೆ ಪ್ರತಿಕ್ರಿಯಿಸಲು ಒಂದು ವಿಧಾನವನ್ನು ಪ್ರಸ್ತಾಪಿಸಲು ಅವಕಾಶ ಮಾಡಿಕೊಡಬೇಕೆಂದು ಕೋರುತ್ತೇನೆ. ನಾವುಗಳು ಸಂಘಪರಿವಾರದ ಈ ನಡೆಗಳನ್ನು ಒಂದೇ ಉಸಿರಿನಲ್ಲಿ ತಿರಸ್ಕರಿಸುವುದರ ಬದಲಿಗೆ, ಪ್ರತೀ ನಡೆಗಳಿಗೆ ಭಿನ್ನವಾದ ಮತ್ತು ಹಂತಹಂತವಾದ ಪ್ರತಿಕ್ರಿಯೆಯನ್ನು ರೂಪಿಸಬೇಕಿದೆ.

ಯುಸಿಸಿ (ಏಕರೂಪ ನಾಗರಿಕ ಸಂಹಿತೆ)ಗೆ ಸೆಕ್ಯುಲರ್ ಪ್ರತಿಕ್ರಿಯೆಯು ನಿಸ್ಸಂದಿಗ್ಧವಾದ ಸ್ವೀಕಾರ ಮತ್ತು ಸ್ವಾಗತವಾಗಿರಬೇಕು. ವಿವಾಹ, ವಿಚ್ಛೇದನ, ಉತ್ತರಾಧಿಕಾರಿಗಳಿಗೆ ಆಸ್ತಿಯ ಹಸ್ತಾಂತರ (ಇನ್‌ಹೆರಿಟೆನ್ಸ್) ಇತ್ಯಾದಿಗಳನ್ನು ನಿಯಂತ್ರಿಸುವ ಎಲ್ಲಾ ಕುಟುಂಬ ಕಾಯಿದೆಗಳು ಸಂವಿಧಾನವು ಶಿಫಾರಸು ಮಾಡುವ ತತ್ವಗಳಿಗೆ ಅನುಗುಣವಾಗಿರಬೇಕು; ಸೆಕ್ಯುಲರ್ ತತ್ವಗಳಿಗೆ ಅನುಗುಣವಾಗಿರುವ ಆಶಯಗಳಿಗೇ ಒಳಪಟ್ಟಿರಬೇಕು. ಏಕರೂಪ ನಾಗರಿಕ ಸಂಹಿತೆಯು ಎರಡು ಸ್ವರೂಪಗಳನ್ನು ಪಡೆದುಕೊಳ್ಳಬಹುದಾಗಿದೆ. ಭಿನ್ನ ಭಿನ್ನ ಧಾರ್ಮಿಕ ಸಮುದಾಯಗಳನ್ನು ನಿಯಂತ್ರಿಸುವ ಪ್ರತ್ಯೇಕ ಕುಟುಂಬ ಕಾನೂನುಗಳನ್ನು ರದ್ದುಪಡಿಸುವುದು ಮತ್ತು ಅವುಗಳ ಬದಲಿಗೆ ಒಂದೇ ಕಾನೂನು ರಚಿಸುವುದು ಮೊದಲನೆಯ ಆಯ್ಕೆ. ಇದು ಅತ್ಯಂತ ಸುದೀರ್ಘವಾದ ತೊಡಕಿನ ಕ್ರಮವಾಗಿದ್ದು ಆ ಆಯ್ಕೆಯನ್ನು ಕೈಬಿಡುವುದು ಒಳ್ಳೆಯದು. ಇದಕ್ಕಿಂತ ಒಳ್ಳೆಯ ಮಾರ್ಗವೆಂದರೆ, ಪ್ರತ್ಯೇಕ ಕುಟುಂಬ ಕಾನೂನುಗಳನ್ನು ಹಾಗೆಯೇ ಉಳಿಸಿಕೊಂಡು ಅವೆಲ್ಲದರಲ್ಲಿ ಇರುವ ಮಹಿಳಾವಿರೋಧಿಯಾದ ಮತ್ತು ಅನ್ಯಾಯದ ಕಲಮುಗಳನ್ನು ತೆಗೆದುಹಾಕುವುದು. ಒಂದೇ ಧಾರ್ಮಿಕ ಸಮುದಾಯದ ಕುಟುಂಬ ಕಾಯಿದೆಗಳನ್ನು ಇತರರ ಮೇಲೆ ಹೇರದೇ ಇದ್ದರೆ ಈ ಎರಡೂ ಆಯ್ಕೆಗಳು ಸೆಕ್ಯುಲರಿಸಂಗೆಗೆ ಅನುಗುಣವಾಗಿಯೇ ಇರುತ್ತವೆ.

ಅಖಿಲ ಭಾರತ ಮತಾಂತರ ವಿರೋಧಿ ಮಸೂದೆಗೆ ಶರತ್ತುಬದ್ಧ ಸ್ವೀಕಾರದೊಂದಿಗೆ ಪ್ರತಿಕ್ರಿಯಿಸಬೇಕು. ಈ ಸಲಹೆ ವಿವಾದಾತ್ಮವಾಗಿದೆ ಎನ್ನುವ ಅರಿವು ನನಗಿದೆ. ಸಂವಿಧಾನ ರಚನಾ ಸಭೆಯಲ್ಲಿ ಈ ಪರಿಕಲ್ಪನೆಗೆ ಯಾವುದೇ ಪ್ರೋತ್ಸಾಹ ಸಿಗಲಿಲ್ಲ ಎನ್ನುವುದು ಸತ್ಯ. ಇದನ್ನು ಒಬ್ಬರ ಧರ್ಮಪ್ರಸಾರ ಮಾಡುವ ಸಂವಿಧಾನಾತ್ಮಕ ಹಕ್ಕಿನ ಉಲ್ಲಂಘನೆಯೆಂದು ನೋಡಬಹುದು. ನನಗನ್ನಿಸುವುದು ಈ ಸೀಮಿತ ನೋಟವು ಬಲವಂತದ, ಮೋಸದ ಅಥವಾ ಆರ್ಥಿಕ ಸೆಳೆತದಿಂದ ಸಾಧಿಸಿದ ಮತಾಂತರ ಅಥವಾ ಮರುಮತಾಂತರಗಳನ್ನು ನಿಷೇಧಿಸುವ ಅಗತ್ಯಗಳನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಹಿಂದುಯಿಸಂ ಹಾಗೂ ಅನೇಕ ಆದಿವಾಸಿ ಧರ್ಮಗಳು ಒಂದು ಕಟ್ಟುನಿಟ್ಟಿನ ಗಡಿಯನ್ನು ಹೊಂದಿಲ್ಲ ಹಾಗೂ ಅವು ಸಾಂಸ್ಥಿಕ ಆಕ್ರಮಣಕ್ಕೆ ಗುರಿಯಾಗುವ ಸಾಧ್ಯತೆಗಳು ಇರುತ್ತವೆ. ಇಂತಹ ಮತಾಂತರಗಳನ್ನು ನಿಷೇಧಿಸುವ ಕಾನೂನು ಈಗಾಗಲೇ 11 ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ. ಇದಕ್ಕೆ ಇರಬೇಕಾದ ಒಂದೇ ಷರತ್ತು, ಇಂತಹ ಕಾನೂನನ್ನು ದೇಶಾದ್ಯಂತ ವಿಸ್ತರಿಸಬೇಕಾದರೆ, ಇದು ಕೇವಲ ಮತಾಂತರಗಳಿಗೆ ಅನ್ವಯಿಸದೇ ಮರುಮತಾಂತರಕ್ಕೂ ಅನ್ವಯಿಸಬೇಕು ಹಾಗೂ ಹಿಂದೂಗಳನ್ನಷ್ಟೇ ರಕ್ಷಿಸದೇ, ಭಾರತದ ಜನಗಣತಿಯಿಂದ ಪಟ್ಟಿ ಮಾಡಿದ ಎಲ್ಲಾ ಧರ್ಮಗಳನ್ನು ರಕ್ಷಿಸುವಂತಾಗಬೇಕು.

ಎನ್‌ಆರ್‌ಸಿ ವಿಷಯಕ್ಕೆ ಬಂದರೆ, ಅಲ್ಲಿ ಒಂದು ಅರ್ಹವಾದ ಆಕ್ಷೇಪಣೆ ಇರಬೇಕಿದೆ. ತನ್ನ ಪ್ರಜೆಗಳ ಒಂದು ನವೀಕರಿಸಿದ ಮತ್ತು ಪರಿಶೀಲಿಸಿದ ಪಟ್ಟಿಯನ್ನು ಹೊಂದಲು ಸರಕಾರ ಮಾಡುವ ಪ್ರಯತ್ನದಲ್ಲಿ ತಾತ್ವಿಕವಾಗಿ ಯಾವುದೇ ತಪ್ಪು ಕಾಣುವುದಿಲ್ಲ. ಎನ್‌ಆರ್‌ಸಿ ಎನ್ನುವುದು ಮುಸ್ಲಿಮ್‌ವಿರೋಧಿ ಪಿತೂರಿ ಎಂದು ಹೇಳುವುದು ಸರಿಯಲ್ಲ. ಎನ್‌ಆರ್‌ಸಿಯನ್ನು ದೇಶಾದ್ಯಂತ ವಿಸ್ತರಿಸುವ ಯಾವುದೇ ಪ್ರಯತ್ನಕ್ಕೆ ಇರುವ ನಿಜವಾದ ಸಮಸ್ಯೆ ಉದ್ಭವಿಸುವುದು ಯಾವಾಗ ಅಂದರೆ, ಆ ನಿಯಮಗಳು ಮತ್ತು ಕಾರ್ಯವಿಧಾನಗಳು ಪಕ್ಷಪಾತಿಯಾಗಿದ್ದಲ್ಲಿ ಹಾಗೂ ಆಸ್ಸಾಮ್‌ನಲ್ಲಿ ಆದಂತೆ ತನ್ನ ಪೌರತ್ವವನ್ನು ಸಾಬೀತುಪಡಿಸುವ ಹೊರೆ ಪ್ರಜೆಗಳ ಮೇಲೆ ಬಿದ್ದಾಗ ಸಮಸ್ಯೆ ಉದ್ಭವಿಸುತ್ತವೆ. ಇಂತಹ ನೀತಿಯು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ನರಕ ಸೃಷ್ಟಿಸುವುದಿಲ್ಲ. ಅದರೊಂದಿಗೆ ಸಾಕ್ಷ್ಯಗಳನ್ನು, ಪುರಾವೆಗಳನ್ನು ಹೊಂದಿಸಲು ಸಾಧ್ಯವಾಗದ ಕೋಟ್ಯಾಂತರ ಬಡ ಜನರು ಮತ್ತು ಇತರರ ಮೇಲೂ ನರಕ ಹೊರೆಸಿದಂತಾಗುತ್ತದೆ. ಈ ಅಂಶವನ್ನು ಸೆಕ್ಯುಲರ್ ಶಕ್ತಿಗಳು ಆಕ್ಷೇಪಿಸಬೇಕು.

ಅಯೋಧ್ಯೆಯ ವಿವಾದ ಈ ಎಲ್ಲಾ ವಿಷಯಗಳಿಗಿಂತ ಕ್ಲಿಷ್ಟ್ಟಕರವಾಗಿದೆ. ಹಾಗೂ ಒಂದು ಗೌರವಯುತ ಸಂಧಾನ/ರಾಜಿ ಮನೋಭಾವವನ್ನು ಅದು ಅಪೇಕ್ಷಿಸುತ್ತದೆ. ಒಂದು ಕಾಲದಲ್ಲಿ ಬಾಬ್ರಿ ಮಸೀದಿ ನಿಂತ ಜಾಗದ ಒಡೆತನದ ಸರಳ ಭೂಪ್ರಕರಣದ ಸಮಸ್ಯೆ ಎಂದು ನೋಡಿದಲ್ಲಿ ವಕ್ಫ್ ಬೋರ್ಡ್ಗೆ ಮಾತ್ರ ನಿಜವಾದ ಹಕ್ಕಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಸೆಕ್ಯುಲರ್ ಶಕ್ತಿಗಳು ಈ ಕಿರಿದಾದ ಸಂಕುಚಿತ ಕಾನೂನಾತ್ಮಕ ನೋಟವನ್ನು ತೆಗೆದುಕೊಳ್ಳುವ ಸುಲಭ ದಾರಿಯನ್ನು ಹಿಡಿಯಬಾರದು. ಅದರಂತೆ ನ್ಯಾಯಾಲಯವೂ ಮಸೀದಿಗಿಂತ ಮುಂಚೆ ಅಲ್ಲಿ ಏನಿತ್ತು ಎನ್ನುವುದನ್ನು ಕಂಡುಹಿಡಿಯುವ ದಾರಿಯನ್ನು ಹಿಡಿಯಬಾರದು. ಸುಲಭವಾಗಿ ಸರಿಪಡಿಸಲಾಗದ ಈ ವಿವಾದದ ಸಂಕೀರ್ಣತೆಯನ್ನು ಗಮನದಲ್ಲಿಟ್ಟುಕೊಂಡು, ಒಂದು ಮಹತ್ವದ ಒಪ್ಪಂದವನ್ನು ಒಪ್ಪಿಕೊಳ್ಳುವುದು ಅತ್ಯುತ್ತಮ ದಾರಿ. ನ್ಯಾಯಾಲಯದ ತೀರ್ಪಿನ ತಪ್ಪುಒಪ್ಪುಗಳನ್ನು ಒತ್ತಿಹೇಳುವ ಬದಲಿಗೆ, ಸರ್ವೋಚ್ಚ ನ್ಯಾಯಲಯ ಸೂಚಿಸಿದ ಗೌರವಯುತ ಮತ್ತು ನ್ಯಾಯಯುತ ರಾಜಿಸಂಧಾನವನ್ನು ಸ್ವೀಕರಿಸಲು ಮುಕ್ತವಾಗಿರಬೇಕು. ಅದು ಇಂತಹ ಎಲ್ಲಾ ವಿವಾದಗಳನ್ನು ಅಂತಿಮಗೊಳಿಸುವಂತಿದ್ದರೆ ಮಾತ್ರ.

ಸಿಏಬಿ (ಸಿಟಿಝನ್‌ಶಿಪ್ ಅಮೆಂಡ್‌ಮೆಂಟ್ ಬಿಲ್), ದೇಶದ ಪೌರತ್ವ ಕಾನೂನನ್ನು ತಿದ್ದುಪಡಿ ಮಾಡುವ ಪ್ರಸ್ತಾಪಕ್ಕೆ ಸಂಪೂರ್ಣ ಮತ್ತು ದೃಢನಿಶ್ಚಯದ ಪ್ರತಿರೋಧದಿಂದಲೇ ಸ್ವಾಗತಿಸಬೇಕು. ಈ ಮಸೂದೆಯ ಅರ್ಥ, ವಲಸಿಗರಿಗೆ ‘ಮುಸ್ಲಿಮರು ಮಾತ್ರ ಬೇಡ’ ಎಂದು ಹೇಳಿದಂತೆ. ಇದು ಸಮಾನತೆಯ ಹಕ್ಕನ್ನು ಬಿಟ್ಟುಕೊಟ್ಟಂತೆ ಹಾಗೂ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಸೆಕ್ಯುಲರ್ ಸಿದ್ಧಾಂತ ರದ್ದುಗೊಳಿಸಿದಂತೆ. ಒಂದು ವೇಳೆ, ಭಾರತೀಯ ಗಣತಂತ್ರದ ಪೌರತ್ವಕ್ಕೆ ಧರ್ಮವನ್ನು ಆಧಾರವಾಗಿ ಒಪ್ಪಿಕೊಂಡಲ್ಲಿ, ನಾವು ದ್ವಿ-ರಾಷ್ಟ್ರ ಸಿದ್ಧಾಂತವನ್ನು ಮರಳಿ ತಂದಂತೆ. ಇದು ಭಾರತದ ಮೂಲ ಪರಿಕಲ್ಪನೆಯ ವಿರುದ್ಧದ ನಡೆಯಾಗಿದೆ. ಒಂದು ವೇಳೆ ಗಾಂಧೀಜಿ ಇಂದು ನಮ್ಮೊಂದಿಗಿದ್ದರೆ, ಈ ವಿಷಯದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತಿದ್ದರು ಎನ್ನುವಲ್ಲಿ ಯಾವುದೇ ಸಂಶಯವಿಲ್ಲ. ಈ ವಿಷಯದಲ್ಲಿ ತತ್ವನಿಷ್ಠ ಸೆಕ್ಯುಲರಿಸಂ ತನ್ನ ಮೂಲನೆಲೆಯ ಮೇಲೆ ಗಟ್ಟಿಯಾಗಿ ನಿಂತು ಭಾರತದ ಆತ್ಮವನ್ನು ಉಳಿಸುವ ಯುದ್ಧಕ್ಕೆ ಹೋರಾಟ ಮಾಡಲೇಬೇಕು.

  • ಯೋಗೇಂದ್ರ ಯಾದವ್

ಅನುವಾದ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...