Homeಮುಖಪುಟಕಟ್ಟೆಪುರಾಣ: ಮೋದಿಗೆ ಬುದ್ದಿಲ್ಲ, ಶಾಗೆ ತಲಿಲ್ಲ. ಅದ್ಕೆ ಇಂತ ಕಾನೂನು!

ಕಟ್ಟೆಪುರಾಣ: ಮೋದಿಗೆ ಬುದ್ದಿಲ್ಲ, ಶಾಗೆ ತಲಿಲ್ಲ. ಅದ್ಕೆ ಇಂತ ಕಾನೂನು!

- Advertisement -
- Advertisement -

ಉಗ್ರ ಚಿಂತಾಕ್ರಾಂತನಾಗಿ ಕುಳಿತಿದ್ದುದನ್ನು ಗಮನಿಸಿದ ಜುಮ್ಮಿ.

ಅದ್ಯಾಕ್ಲ ಹೆಂಡತಿ ಸತ್ತೋನಂಗೆ ತಲೆಮ್ಯಾಲೆ ಕೈ ಹೊತ್ತಗಂಡು ಕುಂತಿದ್ದಿ ಎಂದಳು.

ಹೇಳಿದ್ರೆ ನಿನಿಗೆ ಅರ್ಥಾಗದಿಲ್ಲ ಕಣೆ ಎಂದ.

ವಾಟಿಸ್ಸೆ ಬಂದ ಅವುನ್ನೇ ಕೇಳ್ತಿನಿ ಬುಡು.

ಗುಡಮಾನಿಂಗು ಕಣಕ್ಕ.

ಗೂಡೆ ಮಾರಮ್ಮನೂ ಬ್ಯಾಡ ಕ್ವಾಟೆ ಮಾರಮ್ಮನೂ ಬ್ಯಾಡ. ಈ ಉಗ್ರಿ ಊದಿಕಂಡು ಕುಂತವುನೆ. ಯಾಕ್ಲ ಅಂದ್ರೆ, ಹೇಳದ್ರೆ ನಿನಿಗೆ ಗೊತ್ತಾಗದಿಲ್ಲ ಅಂತನೆ ಅದೇನಾಗ್ಯದೆ ನೀನಾರ ಹೇಳ್ಳ ವಾಟಿಸ್ಸೆ.

ಏನಾಗ್ಯದೆ ಅಂತ ಇವತ್ತೇಳಿದ್ರೆ ಗೊತ್ತಾಗದಿಲ್ಲ ಕಣಕ್ಕ ಬಿಜೆಪಿಗಳು ಅಧಿಕಾರಕ್ಕೆ ಬಂದಾಗ್ಲೆ ಸುರುವಾಗ್ಯದೆ. ಈಗ ವರ್ಕು ಪಾಸ್ಟಾಗ್ಯದೆ ಅಷ್ಟೇ ಕಣಕ್ಕ.

ಅದೇನು ವರಕಲಾ.

ಅದೇನವ್ವ ಅಂದ್ರೆ ಬಿಜೆಪಿಗಳು ದೇಶನೆ ಸರ್ವನಾಶ ಮಾಡಕ್ಕೆ ವಂಟಿದ್ರಲ್ಲಕ್ಕ. ಈಗ ರೈತರನೇ ಮುಗಸೋ ಕಾನೂನು ತತ್ತಾ ಅವುರೆ.

ಅದೇನು ಅಂತ ಕಾನೂನು.

ಅದೇನವ್ವ ಅಂದ್ರೆ ರೈತೆಲ್ಲದೋರು ಭೂಮಿಕೊಳ್ಳಂಗಿರಲಿಲ್ಲ. ಈಗ ಬಂದೂ ನಮ್ಮ ಭೂಮಿ ಕೊಳ್ಳಬವುದಂತೆ ಅಂತ ಕಾನೂನು ಬತ್ತಾ ಅದೆ.

ರೈತರಲ್ಲದೊರು ಅಂದ್ರೆ ಅದ್ಯಾರ್ಲ.

ದೇಸದಲ್ಲಿ ಪ್ಯಾಗುಟ್ರಿ ಮಡಗಿರೊ ಸಾವುಕಾರ್ರ್‍ಅವುರೆ, ಮಾರವಾಡಿಗಳವುರೆ, ಐಎಎಸ್, ಐಪಿಎಸ್ ಅಧಿಕಾರಿಗಳವುರೆ, ಬಿಜೆಪಿಗಳವುರೆ. ಅವರಿಗ್ಯಲ್ಲ ಭೂಮಿ ಬೇಕಾದ್ರೆ ಬಂದು ಕೇಳಿದಷ್ಟು ದುಡ್ಡು ಕೊಟ್ಟು ತಗತರೆ.

ತಗಂಡೇನು ಮಾಡ್ಯರೂ.

ಗೆಣಸು ಬ್ಯಳಿತರೆ, ಕಡ್ಳೆಕಾಯಿ ಬ್ಯಳಿತರೆ, ರಾಗಿ ಬ್ಯಳಿತರೆ.

ಸರಿಯಾಗೇಳ್ಳ ಅಣಕ ವಡಿಬ್ಯಾಡ.

ಏನು ಮಾಡ್ತರೆ ಗೊತ್ತೇನಕ್ಕಾ. ಈ ಉಗ್ರಿ ನಾನು ನೀನು ಸೀರಪ್ಪನಂಥೋರು ಮಾರಿಕತ್ತೀವಿ ಅನ್ನು. ಟೋಟ್ಲು ೨೦ ಯಕರೆ ಆಯ್ತು ಅನ್ನು. ಅದಕ್ಯಲ್ಲ ತಂತಿಬೇಲಿ ಹಾಕ್ತನೆ. ಅಮ್ಯಾಲೆ ಬಂದು ಟೀಕ್ ಮರನೋ, ಸಾಗುವಾನಿ ಮರನೋ ನೆಟ್ಟು ಒಂದು ಪಾರಂ ಹೌಸ್ ಮಾಡಿ, ಒಬ್ಬ ವಾಚ್ ಮ್ಯಾನ್ ಇಟ್ಟು ವಂಟೋಯ್ತನೆ. ಇಲ್ಲ ಹಾಳು ಬುಡ್ತನೆ.

ಅಂಗೆ ಮಾಡ್ತರೇನ್ಲ.

ನಮ್ಮೂರಿಗೂ ಬೆಂಗಳೂರಿಗೂ ಕಾರಲ್ಲಿ ಒಂದೂವರೆಗಂಟೆ ಜರ್ನಿ. ಅಲ್ಲಿಂದ ಬಂದು ಇಲ್ಲಿ ಪಾರ್ಟಿ ಮಾಡಿಕಂಡು, ನಾಟಿಕೋಳಿ ತಿಂದು, ಯಾರಾದ್ರು ಲೇಡಿ ಸಿಕ್ಕಿದ್ರೆ ರಾತ್ರಿ ಅವುಳ ಜೊತೆ ಇದ್ದು, ವಂಟೋಯ್ತರೆ ಕಣಕ್ಕ.

ಥೂ ಅವುರ ಮನಿಯಾಳಾಗ ಅಂಥೋರ ಸೇರುಸಬಾರ್ದು ಕಂಡ್ಳ ಇಲ್ಲೀ.

ಅಂಗಂತ ಎಡೂರಪ್ಪನಿಗೇಳು.

ಅವುನ ಕಾಲಾಗ್ಲೆ ಅತ್ತಮುಂದಾಗ್ಯವೆ ಅವುನಿಗೇನೇಳ್ತಿಯೊ ಎಂದ ಉಗ್ರಿ ಸಿಟ್ಟಿನಿಂದ.

ಇದರಲ್ಲವುಂದೇನು ತೆಪ್ಪಿಲ್ಲ ಕಣೋ. ಮೋದಿ ಶಾಗಳು ಹೇಳಿದ್ದ ಮಾಡ್ತ ಅವುನೆ.

ಅವುರ್‍ಯಾಕ್ಲ ಅಂಗೆ ಮಾಡ್ತ ಅವುರೆ.

ಅವುರು ಮಾರವಾಡಿಗಳ ರಾಜ್ಯ ಗುಜರಾತಿಂದ ಬಂದೋರು ಕಣ್ಣಕ್ಕ. ಯಾವುದೇ ವಿಷಯ ತಗಂಡ್ರೂ ಮಾರವಾಡಿಗಳ ತರ ಲಾಭ-ನಷ್ಟ ನೋಡ್ತರೆ. ಅದ್ಕೆ ರೈತರು ಬೇಸಾಯದಲ್ಲಿ ನಷ್ಟ ಮಾಡಿಕತ್ತಾ ಅವುರೆ ಅಂದ್ರೇ, ಅಂಗರೆ ಮಾರಿಬುಡಿ, ಕೈತುಂಬಾ ದುಡ್ಡು ಸಿಗತದೆ ಅರಾಮಾಗಿರಿ ಅಂತರೆ.

ಅಲ್ಲಾ ಕಂಡ್ಳ, ಜಮೀನ ನಾವ್ಯಾವತ್ತು ಲಾಭ ನಷ್ಟದಲ್ಲಿ ನೋಡಿದ್ದವೀ. ಅದರ ಜ್ವತೆ ಬುದುಕ್ತಯಿದ್ದೀವಿ. ಬೇಜಾರಾದ್ರೆ ವಲ್ತಕ್ಕೋಯ್ತಿವಿ. ದನ ಮೇಸ್ತಿವಿ, ಯಮ್ಮೆ ಮೇಸ್ತಿವಿ, ಆಡುಕುರಿ ಮೇಸ್ತಿವಿ. ಅವುನ್ಯಲ್ಲ ಮೇಸಕ್ಕೆ ಜಮೀನು ಬ್ಯಾಡವೇ?

ಬೇಕವ್ವ. ಅದು ಮೋದಿಶಾಗೆ ಹೊಳಿಬೇಕಲ್ಲ. ಮೋದಿಗೆ ಬುದ್ದಿಲ್ಲ. ಶಾಗೆ ತಲಿಲ್ಲ. ಅದ್ಕೆ ಇಂತ ಮನಿಯಾಳ ಕಾನೂನು ತಂದು ಇಡೀ ದೇಶದ ರೈತರು ದಿಕ್ಕು ದೆಸೆಯಿಲ್ದೆ ನ್ಯಲೆ ಕಳಕಂಡು ಅಲಿಯಂಗೆ ಮಾಡ್ತ ಅವುರೆ.

ಇದ ತಡಿಯಕ್ಕಾಗದಿಲವೆ.

ತಡಿಬೇಕಾದ್ರೆ, ರೈತದು ಬೀದಿಗೆ ಬರಬೇಕು. ಚಳುವಳಿ ಮಾಡಬೇಕು. ಆದ್ರೆ ಕರೊನ ಬಂದು ಹಟಕಾಯಿಸಿಗಂಡದೆ. ಅಂಗಾಗಿ ಯಾರೂ ಬೀದಿಗ ಬರಂಗಿಲ್ಲ. ಅದ್ಕೆ, ಇದೇ ಸರಿಯಾದ ಟೈಮು ಅಂತ, ಬಿಜೆಪಿಗಳು ಯೋಚನೆ ಮಾಡಿ, ಎಪಿಎಂಸಿ ಕತೆ ಮುಗಿಸಿದ್ರು. ಈಗ ರೈತರ ಕತೆ ಮುಗುಸ್ತ ಅವುರೆ.

ಅಂಗಾದ್ರೆ ಗತಿಯೇನ್ಲಾ.

ಗತಿ ಇನ್ನೇನು, ಈಗಾಗ್ಲೆ ಬೆಂಗಳೂರಿಂದ ಕುಬೇರ್ರು ಬಂದು ಜಮೀನ ಹುಡುಕ್ತ ಇದ್ದರಂತೆ. ಇನ್ನುಮುಂದೆ ರೈತರೆಲ್ಲ ಹೋಗಿ ಕೃಷಿ ಕಾರ್ಮಿಕರಾಯ್ತರೆ, ಅಷ್ಟೇಯ.

ಅಯ್ಯೋ ಅವುರ ಮನಿಯಾಳಾಗ ಹೋಗು. ಇವುರ ಸೊಲ್ಲು ಯಾವತ್ತಡಗತದ್ಲ.

  • ಬಿ.ಚಂದ್ರೇಗೌಡ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...