Homeಅಂತರಾಷ್ಟ್ರೀಯವಿವಾದಾತ್ಮಕ ಪ್ರದೇಶದ ಬಳಿ ಸೇನಾ ಬ್ಯಾರಕ್‌ಗಳನ್ನು ಸ್ಥಾಪಿಸಲಿರುವ ನೇಪಾಳ...!!

ವಿವಾದಾತ್ಮಕ ಪ್ರದೇಶದ ಬಳಿ ಸೇನಾ ಬ್ಯಾರಕ್‌ಗಳನ್ನು ಸ್ಥಾಪಿಸಲಿರುವ ನೇಪಾಳ…!!

- Advertisement -
- Advertisement -

ರಾಷ್ಟ್ರೀಯ ನಕ್ಷೆಯಲ್ಲಿ ವಿವಾದಾತ್ಮಕ ಹೊಸ ಪ್ರದೇಶಗಳನ್ನು ಸೇರಿಸಿ ಅದನ್ನ ಸಂಸತ್ತಿನಲ್ಲಿ ಅಂಗೀಕಾರ ಮಾಡಿದ ನಂತರ ನೇಪಾಳವು ಈಗ ’ಕಾಲಾಪಾನಿ’ ಬಳಿ ಸೇನಾ ಬ್ಯಾರಕ್ ಸ್ಥಾಪಿಸಲು ಹಾಗೂ ಅಲ್ಲಿಗೆ ಸುಲಭವಾಗಿ ಪ್ರವೇಶಿಸಲು ರಸ್ತೆಯನ್ನು ನಿರ್ಮಿಸಲು ನಿರ್ಧರಿಸಿದೆ.

ಇದು ಭಾರತ ಮತ್ತು ನೇಪಾಳದ ನಡುವಿನ ಸಂಬಂಧಗಳು ಮತ್ತಷ್ಟು ಹದಗೆಡುತ್ತಿರುವ ಸಂಕೇತವಾಗಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನೇಪಾಳವೂ ಅಂಗೀಕರಿಸಿದ ಹೊಸ ನಕ್ಷೆಯಲ್ಲಿ ಭಾರತದ ಕಾಲಾಪಣಿ, ಲಿಂಪಿಯಾಧುರಾ ಮತ್ತು ಲಿಪುಲೆಖ್‌ನ ಮೂರು ಪ್ರದೇಶಗಳು ಸೇರಿದೆ.

ಬುಧವಾರ ನೇಪಾಳ ಸೇನಾ ಮುಖ್ಯಸ್ಥ ಜನರಲ್ ಪೂರ್ಣ ಚಂದ್ರ ಥಾಪಾ ಕಾಲಾಪಣಿ ಗಡಿ ಪ್ರದೇಶಕ್ಕೆ ಭೇಟಿ ನೀಡಿದ್ದರು.

“ನಾವು ಗಡಿಯ ಬಳಿ ಸೈನ್ಯದ ಬ್ಯಾರಕ್ ಸ್ಥಾಪಿಸಲಿದ್ದೇವೆ. ಈಗ ನೇರ ರಸ್ತೆ ಪ್ರವೇಶವಿಲ್ಲ. ಆದ್ದರಿಂದ ಓಪನ್ ಟ್ರ್ಯಾಕ್ ಮಾಡುವ ಕರ್ತವ್ಯವನ್ನು ಸೈನ್ಯಕ್ಕೆ ನೀಡಲಾಗುತ್ತದೆ, ಅಲ್ಲದೆ ನಾವು ಕಲಾಪಾಣಿ ಬಳಿಯ ಚಾಂಗ್ರುನಲ್ಲಿ ಬಿಒಪಿ (ಸಶಸ್ತ್ರ ಪೊಲೀಸ್ ಪಡೆಯ ಗಡಿ ಹೊರಠಾಣೆ) ಸ್ಥಾಪಿಸಿದ್ದೇವೆ ”ಎಂದು ವಿದೇಶಾಂಗ ವ್ಯವಹಾರಗಳ ವಿಭಾಗದ ಉಪ ಮುಖ್ಯಸ್ಥ ಮತ್ತು ನೇಪಾಳ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯ ಸದಸ್ಯ ಬಿಷ್ಣು ರಿಜಾಲ್‌ಗೆ ತಿಳಿಸಿದ್ದಾರೆ.

ನೇಪಾಳದ ಸಂಸತ್ತಿನ ಮೇಲ್ಮನೆ ತನ್ನ ನಕ್ಷೆಯನ್ನು ಬದಲಾಯಿಸಲು ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ ಒಂದು ದಿನದ ನಂತರ ಈ ಹೇಳಿಕೆ ಬಂದಿದ್ದು, ಮೇಲ್ಮನೆಯ ಅಧ್ಯಕ್ಷ ಬಿಡ್ಯಾ ದೇವಿ ಭಂಡಾರಿ ಅದೇ ದಿನ ಅದನ್ನು ಅನುಮೋದಿಸಿದ್ದರು. ನೇಪಾಳದ ಕೆಳಮನೆ ಕಳೆದ ವಾರ ಪ್ರಸ್ತುತ ಮಸೂದೆಯನ್ನು ಅಂಗೀಕರಿಸಿತ್ತು.

ನೇಪಾಳದ ಈ ನಡೆಗೆ ಭಾರತವು “ಕೋಪಗೊಂಡಿದೆ” ಎಂದು ಮೂಲಗಳು ತಿಳಿಸಿದ್ದು, ಆದರೆ ನೇಪಾಳ ಈಗ ಪುನಃ ಒಂದು ಹೆಜ್ಜೆ ಮುಂದೆ ಹೋಗಿದೆ.

ಈ ನೇಪಾಳದ ಪ್ರಧಾನಿ ಭಾರತ ತಮ್ಮ ಪ್ರದೇಶವನ್ನು ಆತಿಕ್ರಮಿಸಿಕೊಂಡಿದೆ, ಅದನ್ನು ವಾಪಾಸು ಕೊಡಬೇಕು ಎಂದು ಹೇಳಿದ್ದರು.


ಓದಿ: ನೇಪಾಳ ಪೊಲೀಸರ ಗುಂಡಿನ ದಾಳಿ; ಬಿಹಾರ ಗಡಿಯಲ್ಲಿ ಓರ್ವ ಸಾವು, ನಾಲ್ವರ ಸ್ಥಿತಿ ಗಂಭೀರ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...