Homeಮುಖಪುಟ500 ಕೋಟಿ ಮೌಲ್ಯದ ಮತ್ತೊಂದು ಪ್ಯಾಕೇಜ್ ಘೋಷಿಸಿದ ಯಡಿಯೂರಪ್ಪ

500 ಕೋಟಿ ಮೌಲ್ಯದ ಮತ್ತೊಂದು ಪ್ಯಾಕೇಜ್ ಘೋಷಿಸಿದ ಯಡಿಯೂರಪ್ಪ

- Advertisement -
- Advertisement -

ಕೊರೊನಾ ಲಾಕ್‌ಡೌನ್‌ ಕಾರಣಕ್ಕೆ ಕುಸಿದಿರುವ ಆರ್ಥಿಕತೆ ಸರಿದೂಗಿಸುವ ನಿಟ್ಟಿನಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು 500 ಕೋಟಿ ಮೌಲ್ಯದ ಮತ್ತೊಂದು ಪ್ಯಾಕೇಜ್ ಘೋಷಿಸಿದ್ದಾರೆ.

ರಾಜ್ಯದಲ್ಲಿ ಕುಗ್ಗಿರುವ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ಕಳೆದ ವಾರ 1,610 ಕೋಟಿ ರೂ ಮೌಲ್ಯದ ವಿಶೇಷ ಪ್ಯಾಕೇಜ್ ಅನ್ನು ಯಡಿಯೂರಪ್ಪನವರು ಘೋಷಿಸಿದ್ದರು.

ಇಂದು ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಶೇಷ ಪ್ಯಾಕೇಜ್‌ ಘೋಷಿಸಿರುವ ಬಿ.ಎಸ್.‌ ಯಡಿಯೂರಪ್ಪ, “ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಮೆಕ್ಕೆಜೋಳ ರೈತರಿದ್ದಾರೆ. ಇವರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ ಸರ್ಕಾರವೇ ಖರೀದಿಸಲು ಮುಂದಾಗಿದೆ” ಎಂದು ಆಶ್ವಾಸನೆ ನೀಡಿದ್ದಾರೆ.

ಇದಲ್ಲದೆ, “ಈ ಹಿಂದೆ ನೈಸರ್ಗಿಕ ವಿಕೋಪ ಮತ್ತು ಅಪಘಾತದಿಂದ ಕುರಿ ಮೇಕೆ ಸತ್ತರೆ ರೈತರಿಗೆ 5,000 ರೂ ಪರಿಹಾರ ನೀಡಲಾಗುತ್ತಿತ್ತು. ಈ ಯೋಜನೆಯನ್ನು ಹಾಗೆ ಮುಂದುವರಿಸಲು ರಾಜ್ಯ ಸರ್ಕಾರ ಮುಂದಾಗಿದೆ” ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕೊರೋನಾ ಕಾಲದಲ್ಲಿ ರಾಜ್ಯಾದ್ಯಂತ ಸೇವೆ ಸಲ್ಲಿಸಿರುವ ಆಶಾ ಕಾರ್ಯಕರ್ತೆಯರಿಗೆ 3,000 ಮಾಸಿಕ ಧನ ನೀಡಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಸುಮಾರು 40,260 ಜನ ಆಶಾ ಕಾರ್ಯಕರ್ತೆಯರಿದ್ದು ಎಲ್ಲರಿಗೂ ಹಣ ತಲುಪಿಸಲಾಗುವುದು. ಇದಕ್ಕೆಂದು 12.5 ಕೋಟಿ ಮೀಸಲಿಡಲಾಗಿದೆ” ಎಂದು ಬಿ.ಎಸ್. ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಲಾಕ್‌ಡೌನ್‌ ಸಂಕಷ್ಟ: 1,610 ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸಿದ ಯಡಿಯೂರಪ್ಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನನಗೆ ಒಂದು ವಿಷಯ ಅರ್ಥ ಆಗುತ್ತಿಲ್ಲ ಕರ್ನಾಟಕಕ್ಕೆ ಐದು ನೂರು ಕೋಟಿ ಕರೋನ ಸಂಕಷ್ಟದಲ್ಲಿ ಅನುದಾನ ನಮ್ಮ ಕರ್ನಾಟಕದಲ್ಲಿ 1610 ಕೋಟಿ ಜನಸಂಖ್ಯೆ ಇಲ್ಲ ಕರ್ನಾಟಕದಲ್ಲಿ ೭ ರಿಂದ ೮ ಕೋಟಿ ಜನಸಂಖ್ಯೆ ಒಬ್ಬೊಬ್ಬರಿಗೆ ಒಂದೊಂದು ಕೋಟಿ ಕೊಟ್ಟರೂ ಅವರು ಶ್ರೀಮಂತರಾಗುತ್ತಿದ್ದಾರು ಇಲ್ಲಿ ಜನಗಳ ಮೂರ್ಖರ ಇಲ್ಲ ಅಂಕಿಗಳಿಗೆ ಲೆಕ್ಕವೇ ಇಲ್ಲ ಒಂದು ಅರ್ಥ ಆಗುತ್ತಿಲ್ಲ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...