Homeಮುಖಪುಟಕೊರೊನಾ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್‌ನಿಂದ ಪ್ರಯೋಜನವಿಲ್ಲ: ಅಧ್ಯಯನ ವರದಿ

ಕೊರೊನಾ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್‌ನಿಂದ ಪ್ರಯೋಜನವಿಲ್ಲ: ಅಧ್ಯಯನ ವರದಿ

- Advertisement -
- Advertisement -

COVID-19 ರೋಗಿಗಳಿಗೆ ಮಲೇರಿಯಾ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ (HCQ) ಚಿಕಿತ್ಸೆ ನೀಡುವುದರಿಂದ ಯಾವುದೇ ಸಕಾರಾತ್ಮಕ ಪರಿಣಾಮ ಬೀರಲಿಲ್ಲ ಬದಲಿಗೆ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಯಿತು ಎಂದು ಎರಡು ಹೊಸ ಅಧ್ಯಯನಗಳು ತಿಳಿಸಿವೆ.

ಲ್ಯಾಬ್ ನಲ್ಲಿನ ಆರಂಭಿಕ ಅಧ್ಯಯನಗಳು ಹೈಡ್ರಾಕ್ಸಿಕ್ಲೋರೋಕ್ವಿನ್ (HCQ) ಚಿಕಿತ್ಸೆಯು ಕೊರೊನಾ ವೈರಸ್ ಪುನರಾವರ್ತನೆಯಾವುದುನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ತೋರಿಸಿದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಇತರರು ಸಂಭಾವ್ಯ ಈ ಚಿಕಿತ್ಸೆಯನ್ನು “ಗೇಮ್ ಚೇಂಜರ್” ಎಂದು ಕರೆದಿದ್ದರು.

ಅಮೆರಿಕ ಸರ್ಕಾರದಿಂದ ಧನಸಹಾಯ ಪಡೆದವು ಒಳಗೊಂಡಂತೆ ನಡೆಸಿದ ಅಧ್ಯಯನಗಳು COVID-19 ಯೊಂದಿಗೆ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ HCQ ಸಹಾಯ ಮಾಡುತ್ತದೆ ಎಂಬ ಭರವಸೆಯನ್ನು ಮೂಡಿಸಿದ್ದವು.

ಶುಕ್ರವಾರ ಬಿಡುಗಡೆಯಾದ ಮೊದಲ ಅಧ್ಯಯನದಲ್ಲಿ, ಫ್ರಾನ್ಸ್‌ನ ಸಂಶೋಧಕರು COVID-19 ಕಾರಣದಿಂದಾಗಿ ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಾದ ಆಮ್ಲಜನಕದ ಅಗತ್ಯವಿದ್ದ 181 ರೋಗಿಗಳ ಮೇಲೆ ನಿಗಾ ವಹಿಸಿ ಪ್ರಯೋಗ ನಡೆಸಲಾಗಿದೆ. ಅವರಲ್ಲಿ ಎಂಭತ್ತನಾಲ್ಕು ಜನರಿಗೆ ಎಚ್‌ಸಿಕ್ಯು ಚಿಕಿತ್ಸೆ ನೀಡಲಾಯಿತು ಮತ್ತು 97 ಮಂದಿ ಚಿಕಿತ್ಸೆ ನೀಡಿಲ್ಲ.

ಆದರೂ ತೀವ್ರ ನಿಗಾಕ್ಕೆ ವರ್ಗಾವಣೆ, ಏಳು ದಿನಗಳಲ್ಲಿ ಸಾವು ಅಥವಾ 10 ದಿನಗಳಲ್ಲಿ ತೀವ್ರವಾದ ಉಸಿರಾಟದ ತೊಂದರೆ ಸಿಂಡ್ರೋಮ್ ಅನ್ನು ಅಭಿವೃದ್ಧಿಪಡಿಸಲು ಗುಂಪುಗಳ ನಡುವೆ ಯಾವುದೇ ಅರ್ಥಪೂರ್ಣ ವ್ಯತ್ಯಾಸವನ್ನು ಅವರು ಕಂಡುಕೊಂಡಿಲ್ಲ ಎಂದು ಅಧ್ಯಯನ ವರದಿ ತಿಳಿಸಿದೆ.

“ಸಣ್ಣ ಅಧ್ಯಯನಗಳಲ್ಲಿ ಬಂದ ಸಕಾರಾತ್ಮಕ ಫಲಿತಾಂಶಗಳ ಕಾರಣ COVID-19 ಗೆ ಸಂಭಾವ್ಯ ಚಿಕಿತ್ಸೆಯಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ವಿಶ್ವಾದ್ಯಂತ ಗಮನ ಸೆಳೆದಿದೆ” ಎಂದು BMJ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯ ಲೇಖಕರು ಹೇಳಿದ್ದಾರೆ.

“ಆದಾಗ್ಯೂ, ಈ ಅಧ್ಯಯನದ ಫಲಿತಾಂಶಗಳು COVID-19 ಯೊಂದಿಗೆ ಆಸ್ಪತ್ರೆಗೆ ದಾಖಲಾದ ಆಮ್ಲಜನಕದ ಅಗತ್ಯವಿರುವ ರೋಗಿಗಳಿಗೆ ಇದರ ಬಳಕೆ ಉತ್ತಮವಲ್ಲ ಎಂದು ಅಧ್ಯಯನ ತಿಳಿಸಿದೆ.

ಎರಡನೇ ಅಧ್ಯಯನದಲ್ಲಿ ಚೀನಾದಲ್ಲಿ ಸಂಶೋಧಕರು 150 COVID-19 ರೋಗಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿದ್ದಾರೆ, ಅದರಲ್ಲಿ ಒಂದು ಗುಂಪಿಗೆ HCQ ಚಿಕಿತ್ಸೆ ನೀಡಿದ್ದಾರೆ. ನಾಲ್ಕು ವಾರಗಳ ಪರೀಕ್ಷೆಗಳ ನಂತರ ಎರಡೂ ಗುಂಪುಗಳಲ್ಲಿ ನಿರಂತರ ಸೋಂಕಿನ ಪ್ರಮಾಣವು ಬಹಿರಂಗವಾಯಿತು, ಆದರೂ ಚಿಕಿತ್ಸೆಗೆ ಪ್ರತಿಕೂಲ ಪ್ರತಿಕ್ರಿಯೆಗಳು HCQ ಗುಂಪಿನಲ್ಲಿ ಹೆಚ್ಚು ಕಂಡುಬಂದಿದೆ ಎಂದು ಹೇಳಲಾಗಿದೆ. ರೋಗಲಕ್ಷಣಗಳ ತೀವ್ರತೆ ಅಥವಾ ಅವಧಿಯು ಪ್ರತಿ ಗುಂಪಿನ ನಡುವೆ ಭಿನ್ನವಾಗಿರಲಿಲ್ಲ ಎಂದು ತಿಳಿಸಲಾಗಿದೆ.

ಮಲೇರಿಯಾ ಚಿಕಿತ್ಸೆಗಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಸಂಬಂಧಿತ ಸಂಯುಕ್ತ ಕ್ಲೋರೊಕ್ವಿನ್ ಅನ್ನು ದಶಕಗಳಿಂದ ಬಳಸಲಾಗುತ್ತದೆ.

ಕಳೆದ ತಿಂಗಳು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಎಚ್‌ಸಿಕ್ಯು COVID-19 ಗೆ ಚಿಕಿತ್ಸೆ ನೀಡುವ ಯಾವುದೇ ಸೂಚನೆಯಿಲ್ಲ ಎಂದು ಎಚ್ಚರಿಸಿದೆ. ಅಲ್ಲದೇ ಇದರಿಂದ ಕೆಲವು ಅಧ್ಯಯನಗಳ ಪ್ರಕಾರ ರೋಗಿಗಳಲ್ಲಿ ಗಂಭೀರ ಮತ್ತು ಕೆಲವೊಮ್ಮೆ ಮಾರಣಾಂತಿಕ ಹೃದಯ ಸಮಸ್ಯೆಗಳನ್ನು ಕಂಡಿದೆ ಎಂದು ಅದು ಹೇಳಿದೆ.


ಇದನ್ನೂ ಓದಿ: ಪೋಸ್ಟ್‌ಕಾರ್ಡ್ ಹರಡಿದ ಸುಳ್ಳು: ಹೈಡ್ರಾಕ್ಸಿಕ್ಲೊರೋಕ್ವಿನ್ ಔಷಧಿ ಕಂಡುಹಿಡಿದದ್ದು ಯಾರು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಮಹಿಳೆಯೊಬ್ಬರ ಅಪಹರಣ ಪ್ರತ್ಯೇಕ ಪ್ರಕರಣದಲ್ಲಿ ಶಾಸಕ ಹೆಚ್‌.ಡಿ ರೇವಣ್ಣ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ...