Homeಕರ್ನಾಟಕಬಳ್ಳಾರಿ ಅದಿರುಗ್ಯಾಂಗ್ ಮಣ್ಣುಪಾಲು: ಡಿಸಿಎಂ ಆಗುವರೇ ಶ್ರೀರಾಮುಲು?

ಬಳ್ಳಾರಿ ಅದಿರುಗ್ಯಾಂಗ್ ಮಣ್ಣುಪಾಲು: ಡಿಸಿಎಂ ಆಗುವರೇ ಶ್ರೀರಾಮುಲು?

- Advertisement -
- Advertisement -

2008 ಮತ್ತು 2019…. ಈ ನಡುವಿನ ಅವಧಿಯೆಲ್ಲ ಕರ್ನಾಟಕಕ್ಕೆ ಬರವೇ. ಯಾವ ಪಕ್ಷವೂ ಜನರ ನೋವಿಗೆ ಮಿಡಿದೇ ಇಲ್ಲ. ಆದರೆ, ಈಗ ಈ ವರದಿಯ ಉದ್ದೇಶವಿಷ್ಟೇ: 2008ರಲ್ಲಿ ಒಂದು ‘ಅಕ್ರಮ’ ಸರ್ಕಾರವನ್ನು ನಿರ್ಮಿಸಿದ ಗುಂಪೊಂದು, ಈಗ ಇನ್ನೊಂದು ಅಕ್ರಮ ಸರ್ಕಾರ ನಿರ್ಮಾಣವಾಗುವ ವೇಳೆಯಲ್ಲಿ ಎಲ್ಲಿತ್ತು?

ಅಂದು ಲೋಡುಗಟ್ಟಲೇ ಹಣ ಹೂಡಿದವರನ್ನು ಇವತ್ತು ಬಿಜೆಪಿ ಚಿಮ್ಮಿಬಿಟ್ಟಿತೇ? ಅಥವಾ ಇವತ್ತು ಹೂಡಲಾಗದಷ್ಟು ಅಸಹಾಯಕತೆಯಲ್ಲಿ ಇರುವರೇ? ದಿಕ್ಕಾಪಾಲಾಗಿರುವ ಬಳ್ಳಾರಿ ಅದಿರಿನ ಗ್ಯಾಂಗಿಗೆ ಈಗ ಬಿಜೆಪಿಯಲ್ಲಿ ಗೌರವ ಅಷ್ಟಕ್ಕಷ್ಟೇ. ಶ್ರೀಮಂತಿಕೆಯಲ್ಲಿ ತೀರಾ ಪಾತಾಳಕ್ಕೇನೂ ಅವರು ಕುಸಿದಿಲ್ಲವಾದರೂ ರಾಜಕೀಯ ಸೋಲುಗಳಿಂದ ಕಂಗೆಟ್ಟಿದ್ದಾರೆ. ಅದಕ್ಕಿಂತ ಮುಖ್ಯವಾದ ಸಂಗತಿ ಎಂದರೆ, ಈಗ ಕೇಂದ್ರ ಬಿಜೆಪಿಯೇ ಇಂತಹವರನ್ನು ಲೋಡುಗಟ್ಟಲೇ ರೊಕ್ಕ ಕೊಟ್ಟು ಖರೀದಿಸುವ ಇಲ್ಲವೇ ಬೆದರಿಸಿ ಲಪಟಾಯಿಸುವ ಮಟ್ಟವನ್ನು ತಲುಪಿದೆ.

ಹೀಗಾಗಿ, ವಿಶ್ವಾಸಮತದ ಚರ್ಚೆಯಲ್ಲಿ ಶ್ರೀರಾಮುಲು ಮತ್ತು ಸೋಮಶೇಖರರೆಡ್ಡಿ ಇಬ್ಬರೇ ಅಕ್ಕಪಕ್ಕ ಕೂತು ತಮ್ಮ ಪಾಡಿಗೆ ತಾವು ಏನೇನೋ ಮಾತಾಡುತ್ತ ಕೂರಬೇಕಾಯಿತು. 2008ರ ಸಂದರ್ಭವನ್ನು ಒಮ್ಮೆ ಗಮನಿಸಿ: 110 ಸೀಟು ಪಡೆದ ಬಿಜೆಪಿ ಸರಳ ಬಹುಮತದ ಕೊರತೆ ಇದ್ದಾಗಲೂ ಸರ್ಕಾರ ರಚನೆಗೆ ಮುಂದಾಗಿತ್ತು. ಆಗ ಮೋದಿ-ಶಾ ಇನ್ನು ಗುಜರಾತ್ ಲೆವೆಲ್ಲಿನಲ್ಲೇ ಇದ್ದರು.

ಆಗ ರಾಜ್ಯ ಬಿಜೆಪಿ ನಂಬಿದ್ದು ಜನಾರ್ದನರೆಡ್ಡಿ ಮತ್ತು ಶ್ರೀರಾಮುಲು ಎಂಬ ಗಣಿ ಉದ್ಯಮಿಗಳನ್ನು. ಅವರು ಬಹುಮತಕ್ಕೆ ಅಗತ್ಯವಿದ್ದ ಮೂರು ಇರಲಿ ಎಂಟ್ಹತ್ತು ಶಾಸಕರನ್ನೇ ದಂಡಿಯಾಗಿ ಕರೆತಂದು ಒಗೆದು ವಿಶ್ವಾಸಮತ ಗೆಲ್ಲಿಸಿಕೊಂಡಿದ್ದರು. ಅನರ್ಹತೆ ಎಂಬ ಪದಕ್ಕೆ ಅವಕಾಶವನ್ನೇ ನೀಡದಂತೆ, ಅವರಿಂದ ರಾಜಿನಾಮೆ ಕೊಡಿಸಲಾಗಿತ್ತು. ಅವರಿಗೆಲ್ಲ ಸಚಿವಗಿರಿಯ ಜೊತೆಗೆ ಸಾಕಷ್ಟು ಗಣಿ ಮಣ್ಣಿನ ಪಾಪದ ದುಡ್ಡನ್ನು ಕಾಣಿಕೆಯಾಗಿ ನೀಡಲಾಯಿತು. ಮುಂದೆ ಉಪ ಚುನಾವಣೆಯಲ್ಲಿ ಅವರಲ್ಲಿ ಬಹುತೇಕರನ್ನು ಗೆಲ್ಲಿಸುವ ಮೂಲಕ ಬಳ್ಳಾರಿಯ ಗಣಿಗಳ್ಳರು ‘ತಮ್ಮದೇ’ ಸರ್ಕಾರವನ್ನು ಕಾಪಾಡಿಕೊಂಡರು.

ಇಡೀ ಬಳ್ಳಾರಿ ಜಿಲ್ಲೆಯೇ ಆಗ ಅವರ ಸುಪರ್ದಿಗೆ ಒಳಪಟ್ಟಿತ್ತು. ತಮಗೆ ಬೇಕಾದ ಎಸ್‍ಪಿ, ಡಿಸಿ ಮತ್ತು ಅರಣ್ಯಾಧಿಕಾರಿಗಳನ್ನೆಲ್ಲ ಹಾಕಿಸಿಕೊಂಡು ಅಕ್ರಮ ಗಣಿಗಾರಿಕೆಯನ್ನು ಅಧಿಕೃತ ವ್ಯಾಪಾರದ ಮಟ್ಟಕ್ಕೆ ಇಳಿಸಿದ್ದರು. ತಮ್ಮ ಅಕ್ರಮ ಗಣಿಗಳಲ್ಲದೇ ಇತರ ಗಣಿಗಳಿಂದ ಹಫ್ತಾ ವಸೂಲಿಯನ್ನೂ ವ್ಯವಸ್ಥಿತವಾಗಿ ಮಾಡುವ ಮೂಲಕ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆದರು. ರಾಷ್ಟ್ರೀಯ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ‘ಮಂಗಳ ಗೌರಿ’ ನೆಪದಲ್ಲಿ ಉಡಿ ತುಂಬಿಸುವ ಮೂಲಕ ಒಲಿಸಿಕೊಂಡಿದ್ದ ಈ ಬಳ್ಳಾರಿ ಗ್ಯಾಂಗ್ ಒಂದು ಹಂತದಲ್ಲಿ ಯಡಿಯೂರಪ್ಪನವರ ವಿರುದ್ಧವೇ ತಿರುಗಿಬಿದ್ದು ಸರ್ಕಾರ ಬೀಳಿಸುವ ಧಮಕಿ ಹಾಕಿತ್ತು.

ವಿಧಾನಸಭಾ ಅಧಿವೇಶನದಲ್ಲೇ ಜನಾರ್ದನರೆಡ್ಡಿ ಸಿದ್ದರಾಮಯ್ಯ ಅವರಿಗೆ ‘ಬಳ್ಳಾರಿಗೆ ಬನ್ನಿ, ನಿಮ್ಮನ್ನೆಲ್ಲ ನೋಡಿಕೊಳ್ತೇವೆ’ ಎನ್ನುವ ಮಟ್ಟಕ್ಕೆ ಹೋದರೆ, ರೆಡ್ಡಿಯ ಚೇಲಾ ಶಾಸಕ ಸುರೇಶ ಬಾಬು ತೋಳೇರಿಸಿ ವಿಪಕ್ಷದವರ ಮೇಲೆ ದಾದಾಗಿರಿ ನಡೆಸಲೂ ಯತ್ನಿಸಿದ್ದರು.
ಸಂತೋಷ್ ಹೆಗ್ಡೆ ವರದಿ ನಂತರ ಕೋರ್ಟುಗಳು ಕೂಡ ತೀಕ್ಷ್ಣ ಆದೇಶಗಳನ್ನು ಕೊಡತೊಡಗಿದವು. ಇತ್ತ ಭೂ ಹಗರಣದಲ್ಲಿ ಸಿಕ್ಕ ಯಡಿಯೂರಪ್ಪ ಜೈಲು ಪಾಲಾದರು. ಅಲ್ಲಿಗೆ ಬಳ್ಳಾರಿ ಗ್ಯಾಂಗಿನ ಒಂದು ಹಂತದ ಆಟ ಮುಗಿದಿತ್ತು. ಮುಂದೆ ಯಡಿಯೂರಪ್ಪ ಒಂದು ಪಾರ್ಟಿ ಕಟ್ಟಿದರೆ, ಬಳ್ಳಾರಿ ಗ್ಯಾಂಗ್ ಇನ್ನೊಂದು ಪಾರ್ಟಿ ಕಟ್ಟಿತು. ಎರಡೂ ಮಕಾಡೆ ಮಲಗಿದವು.

ಜೈಲಲ್ಲಿ ವರ್ಷಗಳನ್ನು ಸವೆಸಿದ ರೆಡ್ಡಿಯನ್ನು ರಾಷ್ಟ್ರೀಯ ಬಿಜೆಪಿ ದೂರವಿಡತೊಡಗಿತು. ಕೇವಲ 10 ವರ್ಷಗಳಲ್ಲಿ ಎಂತಹ ಬದಲಾವಣೆ? ಅಂದು ಸರ್ಕಾರವನ್ನೇ ರಚಿಸಿದ್ದ ಬಳ್ಳಾರಿ ಗ್ಯಾಂಗ್ ಬಿಜೆಪಿ ಪಾಲಿಗೆ ಹೀರೋ ಆಗಿತ್ತು, ಈಗದು ಝೀರೋ, ಬಿಗ್ ಝೀರೋ!

ಫಾರೆಸ್ಟ್ ಅಧಿಕಾರಿಗೆ ಸಜೆ!
ಆದರೆ ರೆಡ್ಡಿಗಳ ಆಟಾಟೋಪ ಮತ್ತೆ ಮುಂದುವರೆಯಲಿದೆಯೇ ಎಂಬ ಪ್ರಶ್ನೆ ಕಾಡಲು ಕಾರಣವಾಗಿದ್ದು, ಮೊಟ್ಟ ಮೊದಲ ಬಾರಿಗೆ ಜನಾರ್ದನರೆಡ್ಡಿಯ ಅಕ್ರಮ ಗಣಿಗಾರಿಕೆಯ ಮೇಲೆ ಮುಗಿಬಿದ್ದಿದ್ದ ಫಾರೆಸ್ಟ್ ಆಫೀಸರ್ ಒಬ್ಬರನ್ನು ಕೇಂದ್ರ ಸರ್ಕಾರ ಈ ವಾರ ಕಾಯಂ ನಿವೃತ್ತಿಗೊಳಿಸಿದ ವಿಷಯ. ಕಲ್ಲೋಳ್ ಬಿಸ್ವಾಸ್ ಎಂಬ ಈ ಅಧಿಕಾರಿಯನ್ನು ಕಡ್ಡಾಯ ನಿವೃತ್ತಿಗೊಳಿಸಿದುದರ ಹಿಂದೆ ಯಡಿಯೂರಪ್ಪ ಪಾತ್ರವಿದೆಯಾ ಅಥವಾ ಜಗನ್‍ರೆಡ್ಡಿಯ ಪಾತ್ರವಿದೆಯಾ ಎಂಬುದು ಸದ್ಯಕ್ಕೆ ಅಸ್ಪಷ್ಟ…..

ಹಳೆಯ ಸೇಡನ್ನು ತೀರಿಸಿಕೊಂಡಿರುವುದರ ಹೊರತಾಗಿ, ಇದರಿಂದ ರೆಡ್ಡಿ ರಾಮುಲು ಬಳಗಕ್ಕಂತೂ ವಿಶೇಷ ಅನುಕೂಲಗಳೇನೂ ದಕ್ಕುವಂತೆ ಕಾಣುತ್ತಿಲ್ಲ. ಒಟ್ಟಿನಲ್ಲಿ ಕೋಟೆ ಕಟ್ಟಿ ಮೆರೆದ ಗಣಿಗಳ್ಳರು ಈಗ ಬಿಜೆಪಿಗೇ ಬೇಡವಾಗಿದ್ದಾರೆ! ಆದರು ಶ್ರೀರಾಮುಲು ಡಿಸಿಎಂ ಕನಸು ಬಿಟ್ಟಿಲ್ಲ. ಜಾತಿಬಲ ಮಾತ್ರವೇ ಅವರಿಗೆ ಈಗ ಆಶಾಕಿರಣವಾಗಿದೆ. ದೆಹಲಿಯಲ್ಲಿ ಅಮಿತ್ ಶಾ ಸಂಪುಟ ವಿಸ್ತರಣೆಗೆ ಅವಕಾಶ ಕೊಡುದಿರುವುದು ನೋಡಿದರೆ ಪಕ್ಕಾ ಆರ್.ಎಸ್.ಎಸ್ ನವರಿಗೆ ಮಾತ್ರ ಮಂತ್ರಿ ಭಾಗ್ಯ ಎಂಬ ಸುಳಿವು ಸಿಗುತ್ತಿವೆ. ಅಂದರೆ ಅದಿರಿನ ದಂಧೆಯ ಕುಸಿತದೊಂದಿಗೆ ಬಳ್ಳಾರಿಯ ಗ್ಯಾಂಗೂ ಮಣ್ಣು ಪಾಲಾಯಿತೇ ಎಂಬ ಪ್ರಶ್ನೆ ಬರುತ್ತಿದೆ. ಏನಾದರೂ ಆಗಲಿ ಇಂದರಿಂದ ಜನರಿಗೆ ಮಾತ್ರ ಏನೂ ಪ್ರಯೋಜನವಿಲ್ಲವೆಂಬುದು ಸತ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...