Homeಮುಖಪುಟಜಮ್ಮು ಕಾಶ್ಮೀರದಂತೆ ಇನ್ನು ಹತ್ತು ರಾಜ್ಯಗಳಿಗೆ ಈಗಲೂ ವಿಶೇಷ ಸ್ಥಾನಮಾನ ಚಾಲ್ತಿಯಲ್ಲಿದೆ. ನಿಮಗಿದು ಗೊತ್ತೆ?

ಜಮ್ಮು ಕಾಶ್ಮೀರದಂತೆ ಇನ್ನು ಹತ್ತು ರಾಜ್ಯಗಳಿಗೆ ಈಗಲೂ ವಿಶೇಷ ಸ್ಥಾನಮಾನ ಚಾಲ್ತಿಯಲ್ಲಿದೆ. ನಿಮಗಿದು ಗೊತ್ತೆ?

- Advertisement -
- Advertisement -

370ನೇ ಕಲಂ ರದ್ದುಗೊಳಿಸು ಮೂಲಕ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಕಿತ್ತುಹಾಕಿರುವುದು ನಿಮಗೆಲ್ಲ ತಿಳಿದಿರುವ ವಿಚಾರ. ರಾಷ್ಟ್ರಪತಿಯವರ ಆದೇಶದ ಮೂಲಕ ಈ ಕ್ರಮವನ್ನು ಜರುಗಿಸಲಾಗಿದೆ. ಈ ಕ್ರಮ ಸಾಂವಿಧಾನಿಕವೇ ಇಲ್ಲವೇ ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ಕೇಳಿಬರುತ್ತಿವೆ. ಕೆಲವರು ವಿಶೇಷ ಸ್ಥಾನಮಾನ ರದ್ದು ಮಾಡಿರುವುದಕ್ಕೆ ಭಾರೀ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.

ಇದೇ ಸಮಯದಲ್ಲಿ ಜಮ್ಮು ಕಾಶ್ಮೀರ ಮಾತ್ರವಲ್ಲದೆ ಸಂವಿಧಾನದ ಮೂಲಕ ವಿಶೇಷ ಸ್ಥಾನಮಾನ ಪಡೆದ ಇನ್ನು ಹತ್ತು ರಾಜ್ಯಗಳಿವೆ ಎಂದರೆ ನೀವು ನಂಬಲೇಬೇಕು. ಇದರಲ್ಲಿ ಕೆಲವು ರಾಜ್ಯಗಳಲ್ಲಿ ಸಂಸದೀಯ ಕಾನೂನುಗಳು ಸಹ ನಿಯಂತ್ರಣಕ್ಕೊಳಪಟ್ಟಿವೆ. ಅವುಗಳೆಂದರೆ

ಕಲಂ 371: ಮಹಾರಾಷ್ಟ್ರ ಮತ್ತು ಗುಜರಾತ್

ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯದ ರಾಜ್ಯಪಾಲರುಗಳಿಗೆ ಅಭಿವೃದ್ದಿಯ ಬೋರ್ಡ್ ಗಳನ್ನು ನೇಮಕ ಮಾಡುವ ವಿಶೇಷ ಅಧಿಕಾರವಿರುತ್ತದೆ. ವಿದರ್ಭ, ಮರಾಠವಾಡ, ಕಟಕ್ ಈ ರೀತಿಯಾಗಿ ರಚನೆಯಾಗಿರುವ ಕೆಲವು ಪ್ರಾಂತ್ಯಗಳಾಗಿವೆ.

ಕಲಂ 371ಎ: ನಾಗಾಲ್ಯಾಂಡ್

ನಾಗಾ ಜನರ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳು, ನಾಗಾ ಕಾನೂನು ಮತ್ತು ಕಾರ್ಯವಿಧಾನ, ನಾಗಾ ಜನರ ಕ್ರಿಮಿನಲ್ ಮತ್ತು ಸಿವಿಲ್ ಕೇಸುಗಳು, ಅವರ ನೈಸರ್ಗಿಕ ಸಂಪತ್ತು ಮತ್ತು ಭೂಮಿಯನ್ನು ಕೊಳ್ಳುವುದು ಮಾರುವುದು ಇಷ್ಟು ವಿಚಾರಗಳಿಗೆ ಪಾರ್ಲಿಮೆಂಟ್ ನ ಕಾನೂನುಗಳು ಅನ್ವಯವಾಗುವುದಿಲ್ಲ. ಇದಕ್ಕೆ ನಾಗಾ ಜನರೇ ರೂಪಿಸಿಕೊಂಡಿರುವ ವಿಶೇಷ ಕಾನೂನುಗಳಿವೆ. ಈ ವಿಷಯಗಳಿಗೆ ಕೇಂದ್ರ ಸರ್ಕಾರದ ಕಾನೂನುಗಳು ಅನ್ವಯವಾಗಬೇಕಾದರೆ ನಾಗಾ ವಿಧಾನಸಭೆಯು ಒಪ್ಪಿ ನಿರ್ಣಯವನ್ನು ಪಾಸು ಮಾಡಬೇಕಿರುವುದು ಅಗತ್ಯವಾಗಿರುತ್ತದೆ.

ಕಲಂ 371ಬಿ: ಅಸ್ಸಾಂ

ಅಸ್ಸಾಂನ ಬುಡಕಟ್ಟು ಜನರಿಂದ ಆಯ್ಕೆಯಾದ ವಿಧಾನಸಭಾ ಸದಸ್ಯರ ಸಮಾಲೋಚನೆಯೊಂದಿಗೆ ಅಸ್ಸಾಂ ವಿಧಾನಸಭೆಯು ಅಲ್ಲಿನ ಬುಡಕಟ್ಟು ಜನರ ಸ್ವಾಯುತ್ತತ್ತೆ ಮತ್ತು ಹಿತಾಸಕ್ತಿಗಾಗಿ ವಿಶೇಷ ಕಾರ್ಯಚಟುವಟಿಕೆಗಳು ಮತ್ತು ಸಂವಿಧಾನವನ್ನು ರೂಪಿಸುವ ಅಧಿಕಾರ ರಾಷ್ಟ್ರಪತಿಯವರಿಗಿರುತ್ತದೆ.

ಕಲಂ 371ಸಿ: ಮಣಿಪುರ

ಇದು ಸಹ ಅಸ್ಸಾಂ ರೀತಿಯ ಅಧಿಕಾರವಾಗಿದೆ

ಕಲಂ 371ಡಿ ಮತ್ತು ಇ: ಆಂಧ್ರ ಪ್ರದೇಶ

ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಆಂಧ್ರ ಪ್ರದೇಶದ ಜನರ ಹಕ್ಕು, ಹಿತಾಸಕ್ತಿಗಳನ್ನು ಕಾಪಾಡಲು, ಅವರಿಗೆ ಸಮಾನ ಅವಕಾಶ ಮತ್ತು ಸೌಲಭ್ಯಗಳನ್ನು ಒದಗಿಸುವ ಉದ್ದೇಶಕ್ಕಾಗಿ ಕಲಂ 371ಡಿಯನ್ನು ಸಂವಿಧಾನಕ್ಕೆ 1974ರಲ್ಲಿ ಸೇರಿಸಲಾಯಿತು. ಇದರಂತೆ ಆಂಧ್ರ ಪ್ರದೇಶವು ಸ್ಥಳೀಯವಾಗಿ ಅಗತ್ಯಕ್ಕನುಗುಣವಾಗಿ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ನೇರ ನೇಮಕಾತಿ ಮಾಡಿಕೊಳ್ಳುವ ಅಧಿಕಾರ ಹೊಂದಿದೆ. ಕಲಂ 371ಇ ಆಂಧ್ರಪ್ರದೇಶವು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವುದಕ್ಕೆ ಪಾರ್ಲಿಮೆಂಟ್ ಅವಕಾಶ ನೀಡುವುದಾಗಿದೆ.

ಕಲಂ 371ಎಫ್: ಸಿಕ್ಕಿಂ

1975ರಲ್ಲಿ ಇದು ಸೇರ್ಪಡೆಯಾಯಿತು. ಇದರಂತೆ ಸಿಕ್ಕಿಂ ವಿಧಾನಸಭೆಯ ಸದಸ್ಯರ ಸಂಖ್ಯೆ 30ಕ್ಕಿಂತ ಕಡಿಮೆ ಇರಬಾರದು. ಸಿಕ್ಕಿಂ ನಲ್ಲಿರುವ ವಿವಿಧ ಗುಂಪುಗಳನ್ನು ಒಳಗೊಳ್ಳುವುದು ಮತ್ತು ವಿವಿಧ ಜನವಿಭಾಗಗಳಿಗೆ ಅವಕಾಶ ನೀಡುವುದಕ್ಕಾಗಿ ಈ ವಿಶೇಷ ಸ್ಥಾನಮಾನ ನೀಡಲಾಗಿದೆ.

ಕಲಂ 371ಜಿ: ಮಿಝೋರಾಂ

ಇದು ಕಲಂ 371ಎ ನಾಗಾಲ್ಯಾಂಡ ನಂತೆಯೂ ಮಿಝೋರಾಂ ನ ಜನತೆಗೂ ಅನ್ವಯಿಸುತ್ತವೆ.

ಕಲಂ 371ಎಚ್: ಅರುಣಚಲಪ್ರದೇಶ

ಇದು ಅಲ್ಲಿನ ಗವರ್ನರ್ ಗೆ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ವಿಶೇಷ ಅಧಿಕಾರವಿರುತ್ತದೆ. ಇದರನ್ವಯ ಇವರು ಅಲ್ಲಿನ ಮುಖ್ಯಮಂತ್ರಿಯ ನಿರ್ಧಾರಗಳನ್ನು ತಳ್ಳಿಹಾಕುವ ಅಧಿಕಾರ ಗವರ್ನರ್ ಗೆ ಇರುತ್ತದೆ.

ಕಲಂ 371ಐ: ಗೋವಾ

ಇದರಂತೆ ಗೋವಾ ವಿಧಾನಸಭೆಯ ಸದಸ್ಯರ ಸಂಖ್ಯೆ 30ಕ್ಕಿಂತ ಕಡಿಮೆ ಇರಬಾರದು.

ಕಲಂ 371ಜೆ: ಕರ್ನಾಟಕ

ಕಲಂ 371ಜೆ ಯು ಹೈದರಾಬಾದ್ ಕರ್ನಾಟಕದ 6 ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನವನ್ನು ನೀಡುತ್ತದೆ. ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗಿರುವಂತೆ ಅಭಿವೃದ್ದಿಯ ಬೋರ್ಡ್ ಗಳನ್ನು ನೇಮಕ ಮಾಡುವ ವಿಶೇಷ ಅಧಿಕಾರವಿರುತ್ತದೆ. ಜೊತೆಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸ್ಥಳೀಯರಿಗೆ ಮೀಸಲಾತಿಯನ್ನು ಒದಗಿಸುತ್ತದೆ.

ಕೃಪೆ: ಲೈವ್ ಲಾ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

8 COMMENTS

  1. Nanu Gouri anta heli En Eno madoke ready ansute Gouri MadaM idare IdeLa Madta idaro ila adare avara name nali Matra En eno Barta ide Yardo name use Madodakinta Nanu mUrty anta use madi article publishe madi

    370 and 371J diffraction Enu anta frst odi amele Anuvad madi Sumane advertisement GE Madodu beda

  2. ಜಮ್ಮು ಕಾಶ್ಮೀರದಂತೆ ಇನ್ನು ಹತ್ತು ರಾಜ್ಯಗಳಿಗೆ ಈಗಲೂ ವಿಶೇಷ ಸ್ಥಾನಮಾನ DIFFERENCE ಪಟ್ಟಿ ಮಾಡಿ ?

  3. Hello Nanu Gouri
    HYDRABADA KARNTAKA DAILY ? HAKOLA
    ARMY ILAA YAVAGA BEKADRU HOGI BARBHUDU. KARNATAK DALI ILWA NIVU
    370 J YAKE ವಿಶೇಷ ಸ್ಥಾನಮಾನವನ್ನು Nididevi anta Gota Banaglre nali idare gotagola HK Hogi bani

    • Neevu heluva tharada vishesha sthaanamaana innoo halavaaru bhaagagalige kottiddaare. Aadare illi idee raajyakke vishesha sthaanamaana neediruvudu – bereyavaru aasti kolluva haagilla tharaddu, adara bagge bareyalaagide.

  4. ಜಮ್ಮು ಕಾಶ್ಮೀರಕ್ಕೆ ಇದ್ದ 370 ಕಾಯ್ದೆಗೂ ಇತರ ರಾಜ್ಯಗಳಿಗೆ ಇರುವ ಇದೇ ಕಾಯ್ದೆಯ ಸಬ್ ಕಾಯ್ದೆಗಳಿಗೂ ಬಹಳ ವ್ಯತ್ಯಾಸವಿದೆ.ಹಾಗೂ ಈ ಕಾಯ್ದೆಯನ್ನು ಜಮ್ಮು ವಿನಲ್ಲಿ ಕೆಲವು ರಾಜಕೀಯ ಪಕ್ಷಗಳು&ಕುಟುಂಬ ಗಳು ದುರುಪಯೋಗ ಮತ್ತು ಸ್ವಾರ್ಥ ಕ್ಕಾಗಿ ಬಳಸಿಕೊಂಡು, ಪಾಕ್ ಕುತಂತ್ರ ಗಳಿಗೆ ಹಾಗೂ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡಿದ್ದರಿಂದ ಕಾಯ್ದೆ ರದ್ದು ಮಾಡಲು ಕಾರಣವಾಯಿತು.

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...