ದಿ ನ್ಯೂಸ್ ಮಿನಿಟ್ ಬಹಿರಂಗಡಿಸಿರುವ ತನಿಖಾ ವರದಿಯ ನಂತರ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ಮತದಾರರ ಮಾಹಿತಿ ಕಳ್ಳತನದಲ್ಲಿ ತೊಡಗಿರುವ ‘ಚಿಲುಮೆ ಎಜುಕೇಶನಲ್ ಕಲ್ಚರಲ್ ಮತ್ತು ರೂರಲ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್’ ಎಂಬ ಎನ್‌ಜಿಒ ಸಂಸ್ಥೆಯ ಇಬ್ಬರು ಉದ್ಯೋಗಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಚಿಲುಮೆಯ ನಿರ್ದೇಶಕ ರೇಣುಕಾ ಪ್ರಸಾದ್ ಮತ್ತು ಮಾನವ ಸಂಪನ್ಮೂಲ ಸಿಬ್ಬಂದಿ ಧರ್ಮೇಶ್ ಎಂದು ಗುರುತಿಸಲಾಗಿದ್ದು, ಹಲಸೂರು ಗೇಟ್ ಠಾಣೆಯ ಪೊಲೀಸ್ ಅಧಿಕಾರಿಗಳು ಶುಕ್ರವಾರ ರಾತ್ರಿ ಅವರನ್ನು ಬಂಧಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅದಾಗ್ಯೂ, ಚಿಲುಮೆಯ ನಿರ್ದೇಶಕರೊಬ್ಬರಲ್ಲಾದ ಕೃಷ್ಣಪ್ಪ ರವಿಕುಮಾರ್ ಇನ್ನೂ ನಾಪತ್ತೆಯಾಗಿದ್ದು, ಅವರ ಬಂಧನ ಇನ್ನು ನಡೆದಿಲ್ಲ. ಅವರು 2013 ರಲ್ಲಿ ಟ್ರಸ್ಟ್ ಅನ್ನು ನೋಂದಾಯಿಸಿದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, ಚಿಲುಮೆ ಸಂಸ್ಥೆಯ ಪ್ರಮುಖ ವ್ಯಕ್ತಿಯಾಗಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಬಳಸಿಕೊಂಡು ಮತದಾರರ ಡೇಟಾ ಕದ್ದ ಬೊಮ್ಮಾಯಿ ಸರ್ಕಾರ: ಕಾಂಗ್ರೆಸ್ ದೂರು
ಬೆಂಗಳೂರಿನ ಮಲ್ಲೇಶ್ವರಂನ 16 ಮತ್ತು 17ನೇ ಅಡ್ಡರಸ್ತೆಯಲ್ಲಿರುವ ಚಿಲುಮೆ ಟ್ರಸ್ಟ್ ಮತ್ತು ಟ್ರಸ್ಟ್‌ಗೆ ಸಂಬಂಧಿಸಿದ ಖಾಸಗಿ ಕಂಪನಿಯ ಕಚೇರಿಗಳಲ್ಲೂ ಪೊಲೀಸ್ ಅಧಿಕಾರಿಗಳು ಶೋಧ ನಡೆಸಿದ್ದಾರೆ ಎಂದು ನ್ಯೂಸ್ ಮಿನಿಟ್ ವರದಿ ಹೇಳಿದೆ.
ಚುನಾವಣಾ ಅಧಿಕಾರಿಗಳ ಸೋಗು ಹಾಕಿ ವಿಧಾನಸಭಾ ಕ್ಷೇತ್ರಕ್ಕೆ ಕಾರ್ಯಕರ್ತರನ್ನು ಕಳುಹಿಸುವ ಮೂಲಕ ಸಂಸ್ಥೆಯು ಮತದಾರರ ಮಾಹಿತಿಯನ್ನು ಗುಪ್ತವಾಗಿ ಸಂಗ್ರಹಣೆ ಮಾಡಿರುವುದನ್ನು ನ್ಯೂಸ್ ಮಿನಿಟ್ ತನಿಖಾ ವರದಿ ಮಾಡಿತ್ತು. ಇದರ ನಂತರ ಬೆಂಗಳೂರು ಪೊಲೀಸರು ಚಿಲುಮೆ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದರು. ಇದರ ನಂತರ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ) ರಂಗಪ್ಪ ಎಸ್. ಅವರ ದೂರಿನ ಆಧಾರದ ಮೇಲೆ ಚಿಲುಮೆ ವಿರುದ್ಧ ನಗರದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಕ್ರಿಮಿನಲ್ ನಂಬಿಕೆ ದ್ರೋಹ, ವಂಚನೆ ಮತ್ತು ಫೋರ್ಜರಿ ಆರೋಪವನ್ನು ದೂರಿನಲ್ಲಿ ಮಾಡಲಾಗಿದೆ. ಎಫ್‌ಐಆರ್ ಚಿಲುಮೆ ನಿಯೋಜಿಸಿದ ಕ್ಷೇತ್ರಕಾರ್ಯಕರ್ತ ಲೋಕೇಶ್ ಅವರನ್ನು ಹೆಸರಿಸಿದೆ.
ಇದನ್ನೂ ಓದಿ: ಅಹಿಂದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಸರ್ಕಾರ ಕೈಬಿಟ್ಟಿದೆ: ಡಿ.ಕೆ.ಶಿವಕುಮಾರ್
ಮಹದೇವಪುರ ಚುನಾವಣಾ ನೋಂದಣಿ ಅಧಿಕಾರಿ ಚಂದ್ರಶೇಖರ್ ನೀಡಿದ ಮತ್ತೊಂದು ದೂರಿನ ಮೇರೆಗೆ ನಗರದ ಮಹದೇವಪುರದ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಚಿಲುಮೆ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಈ ದೂರಿನಲ್ಲಿ ಕೂಡಾ ಲೋಕೇಶ್ ಅವರನ್ನು ಪ್ರಕರಣದ ಆರೋಪಿ ಎಂದು ಹೆಸರಿಸಲಾಗಿದೆ.
ಚುನಾವಣಾ ಅಧಿಕಾರಿಗಳನ್ನು ಯಾಮಾರಿಸಿ ಬೆಂಗಳೂರಿನಲ್ಲಿ ಮತದಾರರ ಡೇಟಾವನ್ನು ಗುಪ್ತವಾಗಿ ಸಂಗ್ರಹಿಸಲು ಚಿಲುಮೆಯಿಂದ ನಿಯೋಜಿಸಲ್ಪಟ್ಟ ಅನೇಕ ಯುವಕರೊಂದಿಗೆ ನ್ಯೂಸ್ ಮಿನಿಟ್ ಸ್ವತಂತ್ರವಾಗಿ ಮಾತನಾಡಿದ್ದು, ಹಗರಣವನ್ನು ಬಯಲಿಗೆಳೆದ್ದು, ಸರಣಿ ವರದಿಯನ್ನು ಮಾಡಿದೆ. ಈ ವರದಿಯನ್ನು ನ್ಯೂಸ್ ಮಿನಿಟ್ ನವೆಂಬರ್ 16 ರಂದು ಪ್ರಕಟಿಸಿದ್ದು, ತನಿಖಾ ವರದಿಯನ್ನು ನ್ಯೂಸ್ ಮಿನಿಟ್ ಮತ್ತು ‘ಪ್ರತಿಧ್ವನಿ’ ಜಂಟಿಯಾಗಿ ನಡೆಸಿತ್ತು.
ಮತದಾನದ ಹಕ್ಕುಗಳು ಮತ್ತು ಮತದಾರರ ಪಟ್ಟಿಗಳ ಪರಿಷ್ಕರಣೆ ಕುರಿತು ‘ಜಾಗೃತಿ ಮೂಡಿಸಲು’ ಚಿಲುಮೆಗೆ ನೀಡಿದ್ದ ಸರ್ಕಾರಿ ಆದೇಶವನ್ನು ದುರುಪಯೋಗಪಡಿಸಿದ್ದ ಸಂಸ್ಥೆಯು ಮತದಾರರ ಮಾಹಿತಿಯನ್ನು ಕಳ್ಳತನ ಮಾಡಿಕೊಂಡಿದೆ ಎಂದು ನ್ಯೂಸ್ ಮಿನಿಟ್ ವರದಿಯಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: ಚುನಾವಣಾ ಸಮೀಕ್ಷೆಗಳೆಂಬ ಏಜೆಂಟ್‌ಗಳು; ಮತದಾರರನ್ನು ಸುಲಭವಾಗಿ ದಾರಿ ತಪ್ಪಿಸುತ್ತವೆ!
ಬಿಜೆಪಿಯ ಮಾಜಿ ಶಾಸಕ ನಂದೀಶ ರೆಡ್ಡಿ ಅವರು ಮತದಾರರ ದತ್ತಾಂಶ ಸಮೀಕ್ಷೆಗಾಗಿ ಚಿಲುಮೆಗೆ 18 ಲಕ್ಷ ರೂ. ನೀಡಿದ್ದರು ಎಂದು ವರದಿ ಹೇಳಿದೆ.


