Homeರಾಷ್ಟ್ರೀಯಹೋರಾಟಗಾರ ಸವುಕ್ಕು ಶಂಕರ್ ಜೈಲಿನಿಂದ ಬಿಡುಗಡೆ: ಷರತ್ತುಗಳು ಅನ್ವಯ ಎಂದ ಹೈಕೋರ್ಟ್‌‌!

ಹೋರಾಟಗಾರ ಸವುಕ್ಕು ಶಂಕರ್ ಜೈಲಿನಿಂದ ಬಿಡುಗಡೆ: ಷರತ್ತುಗಳು ಅನ್ವಯ ಎಂದ ಹೈಕೋರ್ಟ್‌‌!

- Advertisement -
- Advertisement -

ಹೋರಾಟಗಾರ, ಯೂಟ್ಯೂಬರ್‌‌ ಸವುಕ್ಕು ಶಂಕರ್‌ ಅವರು ಚೆನ್ನೈ ಸೆಂಟ್ರಲ್‌‌ ಕ್ರೈಂ ಬ್ರಾಂಚ್‌ನ ಸೈಬರ್ ಕ್ರೈಂ ವಿಭಾಗವು ದಾಖಲಿಸಿದ ನಾಲ್ಕು ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದು, ಶನಿವಾರ ಅವರನ್ನು ತಮಿಳುನಾಡಿನ ಕಡಲೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು. ಎಗ್ಮೋರ್ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಗುರುವಾರದಂದು ಬಾಕಿ ಉಳಿದಿರುವ ಪ್ರಕರಣಗಳಲ್ಲಿ ಶಂಕರ್‌ಗೆ ಜಾಮೀನು ಮಂಜೂರು ಮಾಡಿತ್ತು.

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿದ್ದ ಆರು ತಿಂಗಳ ಶಿಕ್ಷೆಯನ್ನು ಸುಪ್ರೀಂಕೋರ್ಟ್‌ ರದ್ದು ಮಾಡಿದ ನಂತರ ನವೆಂಬರ್ 10 ರಂದು ಅವರನ್ನು ನಾಲ್ಕು ಪ್ರಕರಣಗಳಲ್ಲಿ ಬಂಧಿಸಲಾಯಿತ್ತು. ಆ ವೇಳೆ ಅವರು ಇನ್ನೂ ಕಡಲೂರು ಕೇಂದ್ರ ಕಾರಾಗೃಹದಲ್ಲಿ ಇದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ರಿಜಿಸ್ಟ್ರಾರ್ ಶಂಕರ್ ಅವರಿಗೆ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. ಮುಂದಿನ ಆದೇಶದವರೆಗೆ ಶಂಕರ್ ಅವರು ಪ್ರತಿದಿನ ಬೆಳಿಗ್ಗೆ 10.30 ಕ್ಕೆ ಮಧುರೈನ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ VI ರ ಮುಂದೆ ಹಾಜರಾಗಬೇಕು ಎಂದು ಆದೇಶಿಸಿದ್ದಾರೆ.

ಇದನ್ನೂ ಓದಿ: ‘ನ್ಯಾಯಾಂಗ ನಿಂದನೆ’: ಹೋರಾಟಗಾರ ಸವುಕ್ಕು ಶಂಕರ್‌‌ಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಿದ ಮದ್ರಾಸ್ ಹೈಕೋರ್ಟ್‌

ಶಿಕ್ಷೆಯ ಅಮಾನತಿನ ಅವಧಿಯಲ್ಲಿ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಶಂಕರ್ ಅವರು ಯಾವುದೇ ಹೇಳಿಕೆಗಳನ್ನು ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಅಂತಹ ಯಾವುದೇ ಚಟುವಟಿಕೆಯನ್ನು ಮಾಡಲು ಅನುಮತಿ ಇಲ್ಲ ಎಂದು ಷರತ್ತು ಹೇಳಿದೆ.

ಸುಪ್ರಿಂಕೋರ್ಟ್‌‌ ಅವರ ಶಿಕ್ಷೆಯನ್ನು ಅಮಾನತುಗೊಳಿಸುವಾಗ ಹೈಕೋರ್ಟ್‌ನ ಯಾವುದೇ ಪ್ರಕ್ರಿಯೆಗಳ ಬಗ್ಗೆ ಯಾವುದೇ ವೀಡಿಯೊ ಅಥವಾ ಕಾಮೆಂಟ್‌ಗಳನ್ನು ಮಾಡದಂತೆ ಈ ಹಿಂದೆ ಅವರಿಗೆ ಸೂಚಿಸಿತ್ತು. ನಿರ್ದೇಶನದ ಮೇರೆಗೆ ಅವರು ಮದ್ರಾಸ್ ಹೈಕೋರ್ಟ್‌ಗೆ ಹಾಜರಾಗಬೇಕು ಮತ್ತು ನ್ಯಾಯಾಂಗಕ್ಕೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಅವರಿಗೆ ಸೂಚಿಸಲಾಗಿದೆ.

ಇದನ್ನೂ ಓದಿ: ಹೈಕೋರ್ಟ್‌ ನೀಡಿದ್ದ ಶಿಕ್ಷೆ ಸುಪ್ರಿಂನಿಂದ ಅಮಾನತು; ಆದರೂ ಜೈಲಿನಲ್ಲೆ ಉಳಿಯಲಿರುವ ಹೋರಾಟಗಾರ ಸವುಕ್ಕು ಶಂಕರ್‌!

ಚೆನ್ನೈ ಕೇಂದ್ರ ಅಪರಾಧ ವಿಭಾಗದ ಸೈಬರ್ ಕ್ರೈಂ ವಿಭಾಗ 2020 ಮತ್ತು 2021 ರಲ್ಲಿ ದಾಖಲಾದ ಒಟ್ಟು ನಾಲ್ಕು ಪ್ರಕರಣಗಳಲ್ಲಿ ಅವರನ್ನು ಬಂಧಿಸಿತ್ತು. ಇದಕ್ಕೂ ಮುಂಚೆ ಶಂಕರ್ ಅವರನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ನ್ಯಾಯಾಂಗ ನಿಂದನೆಗೆ ತಪ್ಪಿತಸ್ಥರೆಂದು ಪರಿಗಣಿಸಿ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...