Homeಅಂತರಾಷ್ಟ್ರೀಯವಿದ್ಯಾರ್ಥಿ ದಂಗೆ ಬಳಿಕ ಬಾಂಗ್ಲಾದಲ್ಲಿ ಇಂದು ಮೊದಲ ಮತದಾನ

ವಿದ್ಯಾರ್ಥಿ ದಂಗೆ ಬಳಿಕ ಬಾಂಗ್ಲಾದಲ್ಲಿ ಇಂದು ಮೊದಲ ಮತದಾನ

- Advertisement -
- Advertisement -

ಬಾಂಗ್ಲಾದೇಶದಲ್ಲಿ ಇಂದು (ಫೆ. 12, 2026) ಸಾರ್ವತ್ರಿಕ ಚುನಾವಣೆಯ ಮತದಾನ ನಡೆಯುತ್ತಿದೆ. ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ ನಡೆಯುತ್ತಿರುವ ಮೊದಲ ಪ್ರಮುಖ ಚುನಾವಣೆ ಇದಾಗಿದೆ.

ಸ್ಥಳೀಯ ಕಾಲಮಾನ ಬೆಳಿಗ್ಗೆ 7:30ಕ್ಕೆ ಆರಂಭವಾದ ಮತದಾನವು ಸಂಜೆ 4:30ರವರೆಗೆ ನಡೆಯಲಿದೆ. ಸುಮಾರು 12.77 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.

ಒಟ್ಟು 300 ಸಂಸದೀಯ ಕ್ಷೇತ್ರಗಳ ಪೈಕಿ 299 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಒಬ್ಬ ಅಭ್ಯರ್ಥಿಯ ಮರಣದ ಕಾರಣ ಒಂದು ಕ್ಷೇತ್ರದಲ್ಲಿ ಮತದಾನ ರದ್ದುಗೊಳಿಸಲಾಗಿದೆ.

ಈ ಬಾರಿ ಸಂಸತ್ ಚುನಾವಣೆಯೊಂದಿಗೆ ‘ಜುಲೈ ಚಾರ್ಟರ್’ ಎಂಬ ಸಾಂವಿಧಾನಿಕ ಸುಧಾರಣೆಗಳ ಕುರಿತು ರಾಷ್ಟ್ರೀಯ ಜನಾಭಿಪ್ರಾಯ ಸಂಗ್ರಹವೂ ನಡೆಯುತ್ತಿದೆ.

‘ಜುಲೈ ಚಾರ್ಟರ್’ ಎಂಬುದು 2024ರ ಜುಲೈನಲ್ಲಿ ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿ ನೇತೃತ್ವದ ಬೃಹತ್ ಪ್ರತಿಭಟನೆ ಮತ್ತು ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ ರೂಪಿಸಲಾದ ಒಂದು ಮಹತ್ವದ ಸಾಂವಿಧಾನಿಕ ಸುಧಾರಣಾ ದಾಖಲೆಯಾಗಿದೆ.

ನೋಬೆಲ್ ಪ್ರಶಸ್ತಿ ಪುರಸ್ಕೃತ ಡಾ. ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರವು ಈ ಚಾರ್ಟರ್ ಅನ್ನು ಸಿದ್ಧಪಡಿಸಿದೆ. ಇದನ್ನು ‘ಹೊಸ ಬಾಂಗ್ಲಾದೇಶದ ಜನ್ಮ’ ಎಂದು ಬಣ್ಣಿಸಲಾಗಿದೆ.

ಪ್ರಧಾನ ಮಂತ್ರಿಯ ಅಧಿಕಾರಾವಧಿಯನ್ನು ಗರಿಷ್ಠ 10 ವರ್ಷಗಳಿಗೆ (ಎರಡು ಅವಧಿ) ಸೀಮಿತಗೊಳಿಸುವ ಪ್ರಸ್ತಾವನೆ ಇದರಲ್ಲಿದೆ. ಪ್ರಸ್ತುತ ಇರುವ ಏಕಸದನ ಸಂಸತ್ತಿನ ಬದಲು, ದ್ವಿಸದನ, ಅಂದರೆ ಎರಡು ಸದನಗಳಿರುವ ಸಂಸತ್ತನ್ನು (300 ಸದಸ್ಯರ ಕೆಳಮನೆ ಮತ್ತು 100 ಸದಸ್ಯರ ಮೇಲ್ಮನೆ) ರಚಿಸುವ ಗುರಿ ಹೊಂದಿದೆ.

ಚುನಾವಣೆಗಳನ್ನು ನಡೆಸಲು ಮತ್ತೆ ‘ತಟಸ್ಥ ಉಸ್ತುವಾರಿ ಸರ್ಕಾರ’ ವ್ಯವಸ್ಥೆಯನ್ನು ಜಾರಿಗೆ ತರುವುದು. ಸಂವಿಧಾನದಲ್ಲಿ ನಾಗರಿಕರನ್ನು ‘ಬೆಂಗಾಲಿ’ (ಜನಾಂಗೀಯ) ಎನ್ನುವ ಬದಲು ‘ಬಾಂಗ್ಲಾದೇಶಿ’ (ನಾಗರಿಕ ಗುರುತು) ಎಂದು ಬದಲಾಯಿಸುವುದು. ರಾಜಕೀಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು (ಮೇಲ್ಮನೆಯಲ್ಲಿ ಶೇ. 10 ಮತ್ತು ಕೆಳಮನೆಯಲ್ಲಿ ಹಂತ ಹಂತವಾಗಿ ಶೇ. 33ಕ್ಕೆ ಏರಿಸುವುದು) ಇತ್ಯಾದಿ ವಿಷಯಗಳನ್ನು ಜುಲೈ ಚಾರ್ಟರ್‌ ಒಳಗೊಂಡಿದೆ.

ಇಂದಿನ ಸಾರ್ವತ್ರಿಕ ಚುನಾವಣೆಯೊಂದಿಗೆ, ಈ ಚಾರ್ಟರ್ ಅನ್ನು ಜಾರಿಗೆ ತರಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಜನರಿಂದ ‘ಹೌದು’ ಅಥವಾ ‘ಅಲ್ಲ’ ಎಂಬ ಅಭಿಪ್ರಾಯವನ್ನು ಪಡೆಯಲಾಗುತ್ತಿದೆ.

ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷವನ್ನು ನಿಷೇಧಿಸಿರುವುದರಿಂದ ಈ ಚುನಾವಣೆಯಲ್ಲಿ ಆ ಪಕ್ಷ ಸ್ಪರ್ಧಿಸುತ್ತಿಲ್ಲ. ಮುಖ್ಯವಾಗಿ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಮತ್ತು ಜಮಾತ್-ಎ-ಇಸ್ಲಾಮಿ ನಡುವೆ ನೇರ ಪೈಪೋಟಿ ಇದೆ.

ಶಾಂತಿಯುತ ಮತದಾನಕ್ಕಾಗಿ ಸುಮಾರು 10 ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.

ಸ್ಪರ್ಧೆಯಲ್ಲಿರುವ ಪ್ರಮುಖ ಅಭ್ಯರ್ಥಿಗಳು

ಸಾರ್ವತ್ರಿಕ ಚುನಾವಣೆಯಲ್ಲಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷವು ಸ್ಪರ್ಧಿಸುತ್ತಿಲ್ಲ. ಹೀಗಾಗಿ, ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಮತ್ತು ಜಮಾತ್-ಎ-ಇಸ್ಲಾಮಿ ನೇತೃತ್ವದ ಮೈತ್ರಿಕೂಟಗಳ ನಡುವೆ ತೀವ್ರ ಪೈಪೋಟಿ ಇದೆ.

ತಾರಿಕ್ ರೆಹಮಾನ್, ಡಾ. ಶಫೀಕರ್ ರೆಹಮಾನ್, ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್, ನಹಿದ್ ಇಸ್ಲಾಂ, ಜಿ. ಎಂ. ಖಾದರ್ ಸ್ಪರ್ಧೆಯಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಖಲೀದಾ ಝಿಯಾ ಅವರ ಮಗ ತಾರಿಕ್ ರೆಹಮಾನ್ ಬಿಎನ್‌ಪಿ ಪಕ್ಷದ ಮುಖ್ಯಸ್ಥ. 17 ವರ್ಷಗಳ ಬಳಿಕ ದೇಶಕ್ಕೆ ಮರಳಿರುವ ಇವರು, ಈ ಚುನಾವಣೆಯ ಪ್ರಬಲ ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ. ಇವರು ಪ್ರತಿಷ್ಠಿತ ಢಾಕಾ-17 ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಡಾ. ಶಫೀಕರ್ ರೆಹಮಾನ್ ಜಮಾತ್-ಎ-ಇಸ್ಲಾಮಿ ಪಕ್ಷದ ಅಮೀರ್ (ಮುಖ್ಯಸ್ಥ). ಇವರು 11 ಪಕ್ಷಗಳ ಮೈತ್ರಿಕೂಟದ ನೇತೃತ್ವ ವಹಿಸಿದ್ದು, ಪ್ರಧಾನಿ ಹುದ್ದೆಯ ಮತ್ತೊಬ್ಬ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಇವರು ಢಾಕಾ-15 ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್ ಬಿಎನ್‌ಪಿ ಪಕ್ಷದ ಪ್ರಧಾನ ಕಾರ್ಯದರ್ಶಿ. ಇವರು ಠಾಕೂರ್‌ಗಾಂವ್-1 ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ನಹಿದ್ ಇಸ್ಲಾಂ 2024ರ ಜುಲೈ ಪ್ರತಿಭಟನೆಯ ವಿದ್ಯಾರ್ಥಿ ನಾಯಕ. ಇವರು ಹೊಸದಾಗಿ ರಚನೆಯಾದ ನ್ಯಾಷನಲ್ ಸಿಟಿಜನ್ ಪಾರ್ಟಿ (ಎನ್‌ಸಿಪಿ)ಯ ಸಂಚಾಲಕರಾಗಿದ್ದು, ಯುವ ಸಮೂಹದ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದಾರೆ.

ಜಿ. ಎಂ. ಖಾದರ್ ಜಾತೀಯ ಪಕ್ಷದ ಮುಖ್ಯಸ್ಥರು. ಇವರು ರಂಗ್‌ಪುರ-3 ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಜಮಾತ್-ಎ-ಇಸ್ಲಾಮಿ ಪಕ್ಷವು ಈ ಬಾರಿ ಮೊದಲ ಬಾರಿಗೆ ತನ್ನ ಮೈತ್ರಿಕೂಟದ ಮೂಲಕ ಕೃಷ್ಣಾ ನಂದಿ ಎಂಬ ಹಿಂದೂ ಅಭ್ಯರ್ಥಿಯನ್ನು ಖುಲ್ನಾ-1 ಕ್ಷೇತ್ರದಿಂದ ಕಣಕ್ಕಿಳಿಸಿದೆ.

ಬಾಂಗ್ಲಾದೇಶದ ಪ್ರಸ್ತುತ ಮಧ್ಯಂತರ ಸರ್ಕಾರದ ಮುಖ್ಯಸ್ಥರಾದ ಡಾ. ಮುಹಮ್ಮದ್ ಯೂನುಸ್ ಅವರು ಇಂದು ಢಾಕಾದಲ್ಲಿ ತಮ್ಮ ಮತ ಚಲಾಯಿಸಿದ್ದಾರೆ, ಆದರೆ ಅವರು ಯಾವುದೇ ಪಕ್ಷದ ಪರವಾಗಿ ಸ್ಪರ್ಧಿಸಿಲ್ಲ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಂಗ್ರೆಸ್ ಮುಸ್ಲಿಮರನ್ನು ದುರ್ಬಳಕೆ ಮಾಡಿಕೊಂಡಿದೆ: ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪ

ದಾವಣಗೆರೆ: ಕಾಂಗ್ರೆಸ್ ಪಕ್ಷವು ಇಷ್ಟು ವರ್ಷಗಳಿಂದ ಮುಸ್ಲಿಮರನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಮುಸ್ಲಿಮರು ತಮ್ಮೊಳಗೆ ಚರ್ಚಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ...

CNN ಪತ್ರಕರ್ತರ ಮೇಲೆ ಇಸ್ರೇಲಿ ಸೈನಿಕರಿಂದ ದಾಳಿ : ಮಾಧ್ಯಮ ಒಕ್ಕೂಟದಿಂದ ತೀವ್ರ ಖಂಡನೆ

ಆಕ್ರಮಿತ ಪಶ್ಚಿಮ ದಂಡೆಯಲ್ಲಿ ವರದಿ ಮಾಡುತ್ತಿದ್ದ ಸಿಎನ್‌ಎನ್‌ ಮಾಧ್ಯಮ ಸಂಸ್ಥೆಯ ಪತ್ರಕರ್ತರ ಮೇಲೆ ಇಸ್ರೇಲಿ ಸೈನಿಕರು ನಡೆಸಿದ ದೌರ್ಜನ್ಯವನ್ನು ಮಾಧ್ಯಮ ಒಕ್ಕೂಟ ಫಾರಿನ್ ಪ್ರೆಸ್ ಅಸೋಸಿಯೇಷನ್ (ಎಫ್‌ಪಿಎ) ತೀವ್ರವಾಗಿ ಖಂಡಿಸಿದೆ. ಪ್ಯಾಲೆಸ್ತೀನ್‌ನ ತಯಾಸಿರ್...

ಪಶ್ಚಿಮ ಏಷ್ಯಾ ಸಂಘರ್ಷ: ಮಧ್ಯಪ್ರಾಚ್ಯಕ್ಕೆ 3,500 ಅಮೆರಿಕ ಸೈನಿಕರ ನಿಯೋಜನೆ; ಇರಾನ್ ಮೇಲೆ ಭೂದಾಳಿ ನಡೆಸಲು ಪೆಂಟಗನ್ ಸಿದ್ಧತೆ

ಇರಾನ್ ಜೊತೆಗಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆ, ಪೆಂಟಗನ್ ಸಂಭಾವ್ಯ ನೆಲದ ಕಾರ್ಯಾಚರಣೆಗಳಿಗೆ ಸಿದ್ಧತೆ ನಡೆಸುತ್ತಿದೆ ಎಂದು ವರದಿಗಳು ಸೂಚಿಸುತ್ತಿರುವಾಗಲೂ, ಅಮೆರಿಕವು ಮಧ್ಯಪ್ರಾಚ್ಯದಲ್ಲಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ, 3,500 ಕ್ಕೂ ಹೆಚ್ಚು ಸೈನಿಕರನ್ನು...

ಮುಂಬೈನಲ್ಲಿ ವಿತರಣಾ ಟೆಂಪೋದಿಂದ 27 ಎಲ್‌ಪಿಜಿ ಸಿಲಿಂಡರ್‌ಗಳು ಕಳವು; ತನಿಖೆ 

ಮುಂಬೈನಲ್ಲಿ ವಿತರಣಾ ವಾಹನದಿಂದ ಐದು ತುಂಬಿದ ಎಲ್‌ಪಿಜಿ ಸಿಲಿಂಡರ್‌ಗಳು ಸೇರಿದಂತೆ ಇಪ್ಪತ್ತೇಳು ಎಲ್‌ಪಿಜಿ ಸಿಲಿಂಡರ್‌ಗಳು ಕಳವಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಅನಿಲ ಪೂರೈಕೆಯ...

No Kings : ಅಮೆರಿಕದಾದ್ಯಂತ ಟ್ರಂಪ್ ವಿರುದ್ಧ ಬೃಹತ್ ಪ್ರತಿಭಟನೆ; ಬೀದಿಗಿಳಿದ ಲಕ್ಷಾಂತರ ಜನರು

ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಅಮೆರಿಕದಾದ್ಯಂತ ಶನಿವಾರ (ಮಾ. 28) ದೊಡ್ಡ ಮಟ್ಟದ 'ನೋ ಕಿಂಗ್ಸ್' ಪ್ರತಿಭಟನೆಗಳು ನಡೆದಿವೆ. ಟ್ರಂಪ್ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ, ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಜನರು ಲಕ್ಷಾಂತರ ಸಂಖ್ಯೆಯಲ್ಲಿ...

ಈ ವರ್ಷದಿಂದಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಿಂದಿಯನ್ನು ಪರಿಗಣಿಸದಿರಲು ತೀರ್ಮಾನಿಸಿದ್ದೇವೆ : ಸಿಎಂ ಸಿದ್ದರಾಮಯ್ಯ

ಈ ವರ್ಷದಿಂದಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತೃತೀಯ ಭಾಷೆ ಹಿಂದಿಯನ್ನು ಪರಿಗಣಿಸದಿರಲು ತೀರ್ಮಾನ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು (ಮಾ.28) ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಜಾರಿ ಮತ್ತು...

ಇರಾನ್‌ನ ಸರ್ವೋಚ್ಚ ನಾಯಕನನ್ನು ‘ನಿರ್ಮೂಲನೆ’ ಮಾಡಲಾಗಿದೆ; ನಮ್ಮ ಮುಂದಿನ ಗುರಿ ಕ್ಯೂಬಾ: ಡೊನಾಲ್ಡ್‌ ಟ್ರಂಪ್

ಪಶ್ಚಿಮ ಏಷ್ಯಾದಾದ್ಯಂತ ಯುದ್ಧ ಮುಂದುವರೆದಿದ್ದರೂ ಮತ್ತು ರಾಜತಾಂತ್ರಿಕ ಪ್ರಯತ್ನಗಳು ಅನಿಶ್ಚಿತವಾಗಿದ್ದರೂ ಸಹ, ಇರಾನ್‌ನ ಉನ್ನತ ನಾಯಕರು ಮತ್ತು ಅದರ ಹೆಚ್ಚಿನ ಮಿಲಿಟರಿ ಸಾಮರ್ಥ್ಯ ನಾಶವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮಿಯಾಮಿಯಲ್ಲಿ ಸೌದಿ...

ತೆಲಂಗಾಣ| ನಿಗದಿತ ವೇತನ-ಉದ್ಯೋಗ ಭದ್ರತೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರಿಂದ ಸರ್ಕಾರದ ವಿರುದ್ಧ ಪ್ರತಿಭಟನೆ

ಹೈದರಾಬಾದ್‌ನ ಧರಣಾ ಚೌಕ್‌ನಲ್ಲಿ ಇಂದು ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು ನಡೆಸುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ಅವರನ್ನು ಬಂಧಿಸಲಾಯಿತು. ಸರ್ಕಾರವು 18,000 ರೂ.ಗಳ ಮಾಸಿಕ ನಿಗದಿತ ವೇತನ ಮತ್ತು ಉದ್ಯೋಗ ಭದ್ರತೆಯ ಚುನಾವಣಾ...

2001-2006 ರ ಚುನಾವಣೆ ಗೆಲ್ಲಲು ವಿ.ಡಿ. ಸತೀಸನ್ ಆರ್‌ಎಸ್‌ಎಸ್ ಬೆಂಬಲ ಕೋರಿದ್ದರು: ಸಂಘದ ನಾಯಕನಿಂದ ಆರೋಪ

ಕೇರಳದ ಯುಡಿಎಫ್ ಅಧ್ಯಕ್ಷ ವಿ ಡಿ ಸತೀಸನ್ 2001 ಮತ್ತು 2006 ರಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಗೆಲ್ಲಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರ ಬೆಂಬಲ ಕೋರಿದ್ದರು ಎಂದು ಸಂಘ ಪರಿವಾರದ ಹಿರಿಯ ನಾಯಕ...

ಚರ್ಚ್‌ಗಳಲ್ಲಿ ಧರ್ಮಾಧ್ಯಕ್ಷರಾಗಲು ಕನ್ನಡ ಕಲಿತು ಬರಬೇಕು: ಡಾ.ಎಲ್.ಹನುಮಂತಯ್ಯ

ಬೆಂಗಳೂರು, ಮಾ.28: ಇತರೇ ರಾಜ್ಯಗಳಿಂದ ಕರ್ನಾಟಕದ ಚರ್ಚ್‌ಗಳಲ್ಲಿ ಧರ್ಮಾಧ್ಯಕ್ಷರಾಗಲು ಬರುವವರು ಕಡ್ಡಾಯವಾಗಿ ಕನಿಷ್ಠ ಆರು ತಿಂಗಳು ವ್ಯಾವಹಾರಿಕ ಕನ್ನಡವನ್ನು ಕಲಿತು ಬರಬೇಕು. ಇಲ್ಲದಿದ್ದರೆ ಇಲ್ಲಿನ ಧರ್ಮಾಧ್ಯಕ್ಷರ ಸ್ಥಾನಕ್ಕೆ ಗೌರವ ಉಳಿಯುವುದಿಲ್ಲ ಎಂದು ಸಾಹಿತಿ...