ಲಖಿಂಪುರ್ ಹತ್ಯಾಕಾಂಡದಲ್ಲಿ ರೈತರ ಪರವಾಗಿ ಧ್ವನಿ ಎತ್ತಿದ್ದ ಬಿಜೆಪಿ ನಾಯಕ ವರುಣ್ ಗಾಂಧಿ ನಂತರ, ಇದೀಗ ಮತ್ತೊಬ್ಬ ಬಿಜೆಪಿ ನಾಯಕ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷರಾಗಿರುವ ಸ್ವತಂತ್ರ ದೇವ್ ಸಿಂಗ್ ಅವರು, “ರಾಜಕೀಯ ನಾಯಕರಾಗಿರುವುದು ಎಂದರೆ, ಫಾರ್ಚುನರ್ ಕಾರಿನಿಂದ ಯಾರನ್ನಾದರೂ ಅಡಿಗೆ ಹಾಕುವುದಲ್ಲ” ಎಂದು ಭಾನುವಾರ ಹೇಳಿದ್ದಾರೆ.
ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಹತ್ಯಾಕಾಂಡದಲ್ಲಿ ರೈತರ ಪರವಾಗಿ ಧ್ವನಿ ಎತ್ತಿದ್ದ ವರುಣ್ ಗಾಂಧಿ ಅವರನ್ನು ಪಕ್ಷವು ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಿಂದ ಹೊರಕಾಕಿತ್ತು. ಅದಾಗಿಯು ಮತ್ತೊಬ್ಬ ಬಿಜೆಪಿ ನಾಯಕ ಲಿಖಿಂಪುರ್ ಘಟನೆ ಬಗ್ಗೆ ಮಾತನಾಡಿ, ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ: ಲಖಿಂಪುರ್: ಪ್ರಧಾನ ಆರೋಪಿ ಆಶಿಶ್ ಮಿಶ್ರಾನಿಗೆ 14 ದಿನಗಳ ನ್ಯಾಯಾಂಗ ಬಂಧನ
ಸ್ವತಂತ್ರ ಸಿಂಗ್ ಅವರು ಉತ್ತರ ಪ್ರದೇಶದ ಲಕ್ನೋದಲ್ಲಿ ಪಕ್ಷದ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಅಧಿವೇಶನದಲ್ಲಿ, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
“ಚುನಾವಣೆಗಳನ್ನು ನಡವಳಿಕೆಯ ಆಧಾರದ ಮೇಲೆ ಗೆಲ್ಲಬೇಕು. ರಾಜಕೀಯವು ನಿಮ್ಮ ಸಮಾಜಕ್ಕೆ, ನಿಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದಾಗಿದೆ. ಇದರಲ್ಲಿ ಯಾವುದೇ ಜಾತಿ ಮತ್ತು ಧರ್ಮವಿಲ್ಲ. ರಾಜಕೀಯ ನಾಯಕರಾಗುವುದೆಂದರೆ ಲೂಟಿ ಮಾಡುವುದಲ್ಲ ಹಾಗೂ ಫಾರ್ಚೂನರ್‌ನಿಂದ ಯಾರನ್ನಾದರೂ ಅಡಿಗೆ ಹಾಕುವುದಲ್ಲ. ನಾವು ಬಡವರ ಸೇವೆಗಾಗಿ ಪಕ್ಷದಲ್ಲಿ ಈ ಇದ್ದೇವೆ. ರಾಜಕೀಯವೆಂದರೆ ಅರೆಕಾಲಿಕ ಕೆಲಸವಲ್ಲ” ಎಂದು ಅವರು ಹೇಳಿದ್ದಾರೆ.
#WATCH | Lucknow: UP BJP chief Swatantra Dev Singh says, "A tea seller, born in a poor family, became a CM, the PM of the nation. He said 'Na Khaunga, Na Khane Dunga'…Being a political leader doesn't mean that you loot, it doesn't mean that you mow down anyone by Fortuner…" pic.twitter.com/yGAA9jIpTW
— ANI UP (@ANINewsUP) October 10, 2021
ಇದನ್ನೂ ಓದಿ: ಲಖಿಂಪುರ್: 2 ನೇ FIR ನಲ್ಲಿ ರೈತರ ಮೇಲೆಯೇ ಆರೋಪ; ರೈತರ ಸಾವಿನ ಬಗ್ಗೆ ಉಲ್ಲೇಖವಿಲ್ಲ!
ತನ್ನ ಭಾಷಣದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಶ್ಲಾಘಿಸಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒಂದು ದಶಕದಿಂದ ರಾಷ್ಟ್ರವನ್ನು ಲೂಟಿ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಲಖಿಂಪುರ್ ಖೇರಿಯಲ್ಲಿ ಪ್ರತಿಭಟನೆ ಮುಗಿಸಿ ಹಿಂತಿರುಗುತ್ತಿದ್ದ ರೈತರ ಮೇಲೆ, ಒಕ್ಕೂಟ ಸರ್ಕಾರದ ಸಚಿವ ಅಜಯ್ ಮಿಶ್ರಾ ತೇನಿ ಅವರ ಪುತ್ರ ಆಶಿಶ್ ಮಿಶ್ರಾ ಅವರು ಕಾರು ಹರಿಸಿ ಹತ್ಯೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಬಂಧನವು ಆಗಿದೆ. ಇದರ ಮಧ್ಯೆ ಸ್ವತಂತ್ರ ಸಿಂಗ್ ಅವರ ಹೇಳಿಕೆ ಹೊರ ಬಿದ್ದಿದೆ.
ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿ ಸೇರಿದಂತೆ ಇತರ ರಾಜಕೀಯ ಪಕ್ಷಗಳು ಈಗಾಗಲೇ ಚುನಾವಣೆಗಾಗಿ ತಯಾರಿ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: ಲಖಿಂಪುರ್: ಪತ್ರಕರ್ತ ಮತ್ತು ರೈತರ ಕುಟುಂಬಗಳಿಗೆ 50 ಲಕ್ಷ ರೂ ನೀಡುವುದಾಗಿ ಘೋಷಿಸಿದ ಛತ್ತೀಸ್‌ಗಡ, ಪಂಜಾಬ್ ಸರ್ಕಾರ



ಇದೊಂದು ಸ್ವಾಗತಾರ್ಹ ಬೆಳವಣಿಗೆ.