Homeಮುಖಪುಟಲಿಖಿಂಪುರ್‌: ಪತ್ರಕರ್ತ ಮತ್ತು ರೈತರ ಕುಟುಂಬಗಳಿಗೆ 50 ಲಕ್ಷ ರೂ ನೀಡುವುದಾಗಿ ಘೋಷಿಸಿದ ಛತ್ತೀಸ್‌ಗಡ, ಪಂಜಾಬ್...

ಲಿಖಿಂಪುರ್‌: ಪತ್ರಕರ್ತ ಮತ್ತು ರೈತರ ಕುಟುಂಬಗಳಿಗೆ 50 ಲಕ್ಷ ರೂ ನೀಡುವುದಾಗಿ ಘೋಷಿಸಿದ ಛತ್ತೀಸ್‌ಗಡ, ಪಂಜಾಬ್ ಸರ್ಕಾರ

- Advertisement -
- Advertisement -

ಉತ್ತರ ಪ್ರದೇಶದ ಲಿಖಿಂಪುರ್‌ ಖೇರಿಯ ಹತ್ಯಾಕಾಂಡದಲ್ಲಿ ಮೃತಪಟ್ಟ ನಾಲ್ವರು ರೈತರು ಹಾಗೂ ಪತ್ರಕರ್ತನ ಕುಟುಂಬಗಳಿಗೆ ತಲಾ 50 ಲಕ್ಷ ರೂಪಾಯಿಗಳ ಆರ್ಥಿಕ ನೆರವನ್ನು ನೀಡುವುದಾಗಿ ಛತ್ತೀಸ್‌ಗಡ ಮತ್ತು ಪಂಜಾಬ್ ಸರ್ಕಾರಗಳು ಬುಧವಾರ ಘೋಷಿಸಿವೆ.

ಕಾಂಗ್ರೆಸ್ ಆಡಳಿತವಿರುವ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಈಗಾಗಲೆ, ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಲಕ್ನೋಗೆ ಆಗಮಿಸಿದ್ದಾರೆ. ಅಲ್ಲಿಂದ ಅವರು ಲಿಖಿಂಪುರ್‌ ಖೇರಿಗೆ ಹೋಗಿ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಲು ತೆರಳಲಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರು ಲಿಖಿಂಪುರ್‌ ಹತ್ಯಾಕಾಂಡವನ್ನು 1919 ರಲ್ಲಿ ಬ್ರಿಟೀಷರಿಂದ ನಡೆದ ಜಲಿಯನ್‌ ವಲಾಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ್ದು, ಯುಪಿ ಸರ್ಕಾರವು ಪ್ರಜಾಪ್ರಭುತ್ವವನ್ನು ಅಣಕಿಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲಿಖಿಂಪುರ್‌ ಘಟನಾ ಸ್ಥಳದಲ್ಲಿ ರೈತರ ನಡುವೆ ಉಗ್ರರಿದ್ದರು: ಅಜಯ್ ಮಿಶ್ರಾ

“ಲಿಖಿಂಪುರ್‌ ಹಿಂಸಾಚಾರದಲ್ಲಿ ಮೃತಪಟ್ಟ ರೈತರು ಮತ್ತು ಪತ್ರಕರ್ತನ ಕುಟುಂಬಗಳಿಗೆ ನಮ್ಮ ಸರ್ಕಾರ ತಲಾ 50 ಲಕ್ಷವನ್ನು ನೀಡುತ್ತದೆ” ಎಂದು ಅವರು ಘೋಷಿಸಿದ್ದಾರೆ.

ಚನ್ನಿ ಅವರದೇ ಮಾತುಗಳನ್ನು ಪ್ರತಿಧ್ವನಿಸಿದ ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ತಮ್ಮ ಸರ್ಕಾರ ಕೂಡಾ ರೈತರ ಕುಟುಂಬಗಳಿಗೆ ಮತ್ತು ಪತ್ರಕರ್ತನಿಗೆ 50 ಲಕ್ಷ ರೂಪಾಯಿಗಳನ್ನು ನೀಡಲಿದೆ ಎಂದು ಹೇಳಿದ್ದಾರೆ.

ಲಖಿಂಪುರ್‌‌ ಖೇರಿಯಲ್ಲಿ ಭಾನುವಾರದಂದು ಕಾರ್ಯಕ್ರಮವೊಂದಕ್ಕೆ ಅಜಯ್ ಮಿಶ್ರಾ ಆಗಮಿಸಿದ್ದಾಗ, ರೈತರು ಅವರ ವಿರುದ್ದ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನೆ ಮುಗಿಸಿ ವಾಪಾಸು ಹೋಗುತ್ತಿದ್ದ ರೈತರ ಮೇಲೆ ಕಾರು ಹರಿಸಿ ಹತ್ಯೆ ಮಾಡಲಾಗಿತ್ತು. ಘಟನೆಯ ವಿಡಿಯೊ ಕೂಡಾ ವೈರಲ್ ಆಗಿದೆ. ಘಟನೆಯಲ್ಲಿ ನಾಲ್ಕು ರೈತರು ಸೇರಿದಂತೆ ಒಟ್ಟು ಎಂಟು ಜನರು ಸಾವನ್ನಪ್ಪಿದ್ದಾರೆ.

ಘಟನೆಯ ಕುರಿತು ಆಶಿಶ್ ಮಿಶ್ರಾ ವಿರುದ್ಧ ಯುಪಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ, ಆದರೆ ಇದುವರೆಗೂ ಬಂಧಿಸಿಲ್ಲ. ಘಟನಾ ಸ್ಥಳದಲ್ಲಿದ್ದ ವಾಹನ ತನಗೆ ಸೇರಿದ್ದು ಎಂದು ಸಚಿವರು ಒಪ್ಪಿಕೊಂಡಿದ್ದರೂ, ಅವರು ಹಾಗೂ ಅವರ ಮಗ ಆಶೀಶ್ ಮಿಶ್ರಾ ಸ್ಥಳದಲ್ಲಿ ಇರಲಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಲಖಿಂಪುರ್‌ ಭೇಟಿ: ರಾಹುಲ್‌ ಗಾಂಧಿಗೆ ಅನುಮತಿ ನೀಡಿ ಏರ್‌ಪೋರ್ಟ್‌ನಲ್ಲಿ ತಡೆದ ಆದಿತ್ಯನಾಥ್‌ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...