Homeಮುಖಪುಟಲಖಿಂಪುರ್‌‌ ಘಟನಾ ಸ್ಥಳದಲ್ಲಿ ರೈತರ ನಡುವೆ ಉಗ್ರರಿದ್ದರು: ಅಜಯ್ ಮಿಶ್ರಾ

ಲಖಿಂಪುರ್‌‌ ಘಟನಾ ಸ್ಥಳದಲ್ಲಿ ರೈತರ ನಡುವೆ ಉಗ್ರರಿದ್ದರು: ಅಜಯ್ ಮಿಶ್ರಾ

ತನ್ನ ಮಗ ರೈತರ ಮೇಲೆ ಕಾರು ಹರಿಸಿ ಹತ್ಯೆ ಮಾಡಿದ್ದಾನೆ ಎಂಬ ಆರೋಪದ ನಡುವೆ ಸಚಿವ ಅಜಯ್ ಮಿಶ್ರಾ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿದ್ದಾರೆ

- Advertisement -
- Advertisement -

ಉತ್ತರಪ್ರದೇಶದ ಲಖಿಂಪುರ್‌‌ ಖೇರಿಯಲ್ಲಿ ತನ್ನ ಮಗ ರೈತರ ಮೇಲೆ ಕಾರು ಹರಿಸಿ ಹತ್ಯೆ ಮಾಡಿದ್ದಾನೆ ಎಂಬ ಆರೋಪದ ನಡುವೆ, ಸಚಿವ ಅಜಯ್ ಮಿಶ್ರಾ ಅವರು ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರನ್ನು ಬುಧವಾರ ಭೇಟಿ ಮಾಡಿದ್ದಾರೆ. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಘಟನೆಯಲ್ಲಿ ನನ್ನ ಚಾಲಕ ಮತ್ತು ಇಬ್ಬರು ಕಾರ್ಯಕರ್ತರು ಮೃತರಾಗಿದ್ದಾರೆ, ಅಲ್ಲದೆ ಕಾರುಗಳನ್ನು ಸುಟ್ಟು ಹಾಕಿದ್ದು, ಇಂತಹ ಜನರು ಕೃಷಿಕರಾಗಲು ಸಾಧ್ಯವಿಲ್ಲ, ಇವರು ರೈತರ ನಡುವೆ ಅಡಗಿರುವ ಉಗ್ರರು” ಎಂದು ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ನನ್ನ ರಾಜೀನಾಮೆಗೆ ಯಾವುದೆ ಒತ್ತಡವಿಲ್ಲ ಎಂದು ಹೇಳಿರುವ ಅಜಯ್ ಮಿಶ್ರಾ, “ನಾನು ಯಾಕೆ ರಾಜೀನಾಮೆ ನೀಡಬೇಕು? ನನ್ನ ಮೇಲೆ ಯಾವುದೇ ಒತ್ತಡವಿಲ್ಲ. ಘಟನೆಯ ಬಗ್ಗೆ ನಾವು ತನಿಖೆ ಮಾಡುತ್ತೇವೆ, ಒಳಸಂಚು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲಖಿಂಪುರ್‌‌ ಖೇರಿ ಹಿಂಸಾಚಾರವು ಕೇಂದ್ರ ಸಚಿವ, ಆತನ ಮಗನಿಂದಾದ ‘ಯೋಜಿತ ಪಿತೂರಿ’: ಎಫ್‌ಐಆರ್‌‌

ಸಚಿವರ ಬೆಂಗಾವಲಿನಲ್ಲಿದ್ದ ಕಾರು ಪ್ರತಿಭಟನಾಕಾರರ ಮೇಲೆ ಹರಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಕಾರನ್ನು ಒಕ್ಕೂಟ ಸರ್ಕಾರದ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಚಾಲನೆ ಮಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಘಟನೆಯ ಕುರಿತು ಆಶಿಶ್ ಮಿಶ್ರಾ ವಿರುದ್ಧ ಯುಪಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ, ಆದರೆ ಇದುವರೆಗೂ ಬಂಧಿಸಿಲ್ಲ. ಘಟನಾ ಸ್ಥಳದಲ್ಲಿದ್ದ ವಾಹನ ತನಗೆ ಸೇರಿದ್ದು ಎಂದು ಸಚಿವರು ಒಪ್ಪಿಕೊಂಡಿದ್ದರೂ, ಅವರು ಹಾಗೂ ಅವರ ಮಗ ಆಶೀಶ್ ಮಿಶ್ರಾ ಸ್ಥಳದಲ್ಲಿ ಇರಲಿಲ್ಲ ಎಂದು ಪ್ರತಿಪಾದಿಸಿದ್ದಾರೆ.

“ಮೊದಲ ದಿನದಿಂದ, ಥಾರ್(ವಾಹನ) ನಮ್ಮದು, ಅದು ನಮ್ಮ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ ಎಂದು ನಾವು ಸ್ಪಷ್ಟಪಡಿಸಿದ್ದೇವೆ. ನಮ್ಮ ಕಾರ್ಯಕರ್ತರನ್ನು ಕರೆದುಕೊಂಡು ಯಾರನ್ನೋ ಬರಮಾಡಿಕೊಳ್ಳಲು ಹೋಗುತ್ತಿತ್ತು. ಈ ವೇಳೆ ನನ್ನ ಮಗ ಇನ್ನೊಂದು ಸ್ಥಳದಲ್ಲಿದ್ದನು. ಬೆಳಿಗ್ಗೆ 11 ಗಂಟೆಯಿಂದ ಸಂಜೆವರೆಗೆ ಅವರು ಇನ್ನೊಂದು ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದರು” ಎಂದು ಅಜಯ್ ಮಿಶ್ರಾ ಹೇಳಿದ್ದಾರೆ.

ಇದನ್ನೂ ಓದಿ: NMP ಯೋಜನೆ: ಕಾಂಗ್ರೆಸ್ ಡಿಎನ್‌ಎಯಲ್ಲಿ ಲೂಟಿ ಇದೆ ಎಂದ ಸಚಿವೆ ನಿರ್ಮಲಾ ಸೀತಾರಾಮನ್

“ನನ್ನ ಮಗ ಅಲ್ಲಿ ಹಾಜರಿದ್ದನು ಮತ್ತು ಅಲ್ಲಿ ಸಾವಿರಾರು ಜನರು ಇದ್ದರು. ನೀವು ಅವರ ಕಾಲ್ ರೆಕಾರ್ಡ್, ಲೊಕೇಶನ್ ಎಲ್ಲವನ್ನು ಪರಿಶೀಲಿಸಬಹುದು. ಆಶಿಶ್ ಮಿಶ್ರಾ ಅಲ್ಲಿದ್ದರು ಎಂಬುವುದಕ್ಕೆ ಸಾವಿರಾರು ಜನರು ಸಾಕ್ಷಿಗಳಿದ್ದಾರೆ” ಎಂದು ಅವರು ಹೇಳಿದ್ದಾರೆ.

“ವಾಹನದ ಬಗ್ಗೆ ಹೇಳುವುದಾದರೆ, ನನ್ನ ಚಾಲಕ, ಇಬ್ಬರು ಕಾರ್ಯಕರ್ತರು ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಕಾರ್ಯಕರ್ತ ಪರಾರಿಯಾಗಿದ್ದಾರೆ ಹಾಗೂ ಮೂವರು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಕಾರನ್ನು ತಳ್ಳಿ, ಎರಡು ವಾಹನ ಸುಟ್ಟು ಹಾಕಲಾಗಿದೆ. ಇಂತಹ ಜನರು ಕೃಷಿಕರಾಗಲು ಸಾಧ್ಯವಿಲ್ಲ, ಇವರು ರೈತರ ನಡುವೆ ಅಡಗಿರುವ ಉಗ್ರರು” ಎಂದು ಅಜಯ್ ಮಿಶ್ರಾ ತಿಳಿಸಿದ್ದಾರೆ.

ಲಖಿಂಪುರ್‌‌ ಖೇರಿಯಲ್ಲಿ ಭಾನುವಾರದಂದು ಕಾರ್ಯಕ್ರಮವೊಂದಕ್ಕೆ ಅಜಯ್ ಮಿಶ್ರಾ ಆಗಮಿಸಿದ್ದಾಗ, ರೈತರು ಅವರ ವಿರುದ್ದ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನೆ ಮುಗಿಸಿ ವಾಪಾಸು ಹೋಗುತ್ತಿದ್ದ ರೈತರ ಮೇಲೆ ಕಾರು ಹರಿಸಿ ಹತ್ಯೆ ಮಾಡಲಾಗಿತ್ತು. ಘಟನೆಯ ವಿಡಿಯೊ ಕೂಡಾ ವೈರಲ್ ಆಗಿದೆ. ಘಟನೆಯಲ್ಲಿ ನಾಲ್ಕು ರೈತರು ಸೇರಿದಂತೆ ಒಟ್ಟು ಎಂಟು ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ತಲೆ ಬೋಳಿಸಿಕೊಂಡು ಬಿಜೆಪಿ ತೊರೆಯಲು ಸಿದ್ದರಾದ ತ್ರಿಪುರ ಶಾಸಕ- ಟಿಎಂಸಿ ಸೇರುವ ಸಾಧ್ಯತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ | Naanu Gauri

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ

0
ಹೈದರಾಬಾದ್‌ನ ಜನನಿಬಿಡ ಬೇಗಂ ಬಜಾರ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು 21 ವರ್ಷದ ಯುವಕನನ್ನು ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಇರಿದು ಕೊಂದಿರುವ ಘಟನೆ ಮೇ 20ರ ಶುಕ್ರವಾರದ ಸಂಜೆ ನಡೆದಿದೆ ಎಂದು ನ್ಯೂಸ್ ಮಿನಿಟ್...