ಬೆಂಗಳೂರಿನ ಖ್ಯಾತ ವಕೀಲರಾದ ಜಗದೀಶ್ ಮಹಾದೇವ್‌ರವರು ಇಂದು ಪ್ರೆಸ್‌ ಕ್ಲಬ್‌ ಆವರಣದಲ್ಲಿ ಅಧಿಕೃತವಾಗಿ ಆಮ್ ಆದ್ಮಿ ಪಕ್ಷ ಸೇರಿದರು.

ಈ ಭ್ರಷ್ಟ ಸರ್ಕಾರಗಳು ಮುಂದಿನ ದಿನಗಳಲ್ಲಿ ನಾವು ಉಸಿರಾಡುವುದಕ್ಕೂ ಟ್ಯಾಕ್ಸ್ ವಿಧಿಸುವ ಪರಿಸ್ಥಿತಿ ಬರುತ್ತದೆ. ಹಾಗಾಗಿ ಅದನ್ನು ತಪ್ಪಿಸಲು ಮತ್ತು ಲೂಟಿಕೋರರ ಮಧ್ಯದಲ್ಲಿ ಜನಪರವಾದ ಆಡಳಿತ ಮಾಡಿ ತೋರಿಸಲು ಆಮ್ ಆದ್ಮಿ ಪಕ್ಷ ಸೇರುತ್ತಿದ್ದೇನೆ ಎಂದು ಅವರು ತಿಳಿಸಿದರು.

ನಮ್ಮ ಮುಂದಿನ ಗುರಿ ಬಿಬಿಎಂಪಿ ಚುನಾವಣೆಯಾಗಿದೆ. ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಿಸಬೇಕು, ಕಸದ ಮಾಫಿಯಾ, ಕಾಂಟ್ರಾಕ್ಟರ್ ಮಾಫಿಯಾವನ್ನು ತೊಲಗಿಸಬೇಕಿದೆ ಎಂದರು.

ಆಪ್ ಸೇರುವುದಕ್ಕೆ ಪ್ರೇರಣೆ ಏನು ಎಂದು ನಾನುಗೌರಿ.ಕಾಂ ಜೊತೆ ಮಾತನಾಡಿದ ಜಗದೀಶ್ ಮಹಾದೇವ್‌, “ಇಂದು ಜನಪರ ಆಡಳಿತ ಕಾಣುತ್ತಿಲ್ಲ. ಬೆಲೆ ಏರಿಕೆ ನಿರಂತರವಾಗಿದೆ. ಇದನ್ನು ತಪ್ಪಿಸಲು ಒಂದು ರಾಜಕೀಯ ಪರ್ಯಾಯ ಬೇಕಿದೆ. ಇದುವರೆಗೂ ವಯಕ್ತಿಕ ಮಟ್ಟದಲ್ಲಿ ಹೋರಾಟ ಮಾಡುತ್ತಿದ್ದ ನನಗೆ ಅದನ್ನು ಮುಂದುವರೆಸಲು ಆಪ್ ಸೂಕ್ತ ವೇದಿಕೆಯಾಗಿದೆ” ಎಂದರು.

ಭ್ರಷ್ಟಾಚಾರ ವಿರೋಧಿ ಹೋರಾಟವೇ ನಾನು ಆಪ್ ಸೇರಲು ಕಾರಣ. ಅವರ ದೆಹಲಿಯಲ್ಲಿನ ಆಡಳಿತ ನನಗೆ ಬಹಳ ಇಷ್ಟವಾಗಿದೆ. ಉಚಿತ ಶಿಕ್ಷಣ, ಆರೋಗ್ಯ, ನೀರು, ವಿದ್ಯುತ್ ಮತ್ತು ಮಹಿಳೆಯರಿಗೆ ಉಚಿತ ಬಸ್ ಪಾಸ್ ಕೊಟ್ಟಿರುವುದು ಒಳ್ಳೆಯ ಆಡಳಿತವಾಗಿದೆ. ಅದನ್ನು ಕರ್ನಾಟಕದಲ್ಲಿಯೂ ಮಾಡುವ ಬಯಕೆ ನಮ್ಮದು ಎಂದರು.

ಪಕ್ಷದ ರಾಜ್ಯ ಸಂಚಾಲಕರಾದ ಪೃಥ್ವಿರೆಡ್ಡಿಯವರು ಮಾತನಾಡಿ, “ಒಳ್ಳೆಯ ಜನ ಒಗ್ಗೂಡಿದರೆ ಜನಸಾಮಾನ್ಯರ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಹುದೆಂದು ದೆಹಲಿಯಲ್ಲಿ ತೋರಿಸಲಾಗಿದೆ. ಅದೇ ರೀತಿಯ ಬದಲಾವಣೆ ಬರಬೇಕೆಂದು ಕರ್ನಾಟಕದಲ್ಲಿ ಆಪ್ ಪ್ರಯತ್ನಿಸುತ್ತಿದೆ. ಜಗದೀಶ್‌ರವರ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬಂದಿದೆ” ಎಂದರು.

ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ, ಮಾಧ್ಯಮ ಸಂಚಾಲಕ ಜಗದೀಶ್ ಸದಂ, ಪ್ರಶಾಂತಿ ಸುಭಾಷ್ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಇದನ್ನೂ ಓದಿ; ‘ಮೋದಿ ಸರ್ವಾಧಿಕಾರಿ ಅಲ್ಲ’: ಅಮಿ‌ತ್‌‌ ಶಾ ಹೇಳಿಕೆ ಜೋಕ್ ಎಂದ ಅಮೆರಿಕಾ ಟೆನಿಸ್ ದಂತಕಥೆ…

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here