Homeಮುಖಪುಟಬೇಂದ್ರೆ 125; ಬೇಂದ್ರೆ ಮತ್ತು ಬೆಳಗಾವಿ : ಕನ್ನಡ ಮತ್ತು ಮರಾಠಿ ಮನಸ್ಸುಗಳ ನಡುವೆ ಸೌಹಾರ್ದ...

ಬೇಂದ್ರೆ 125; ಬೇಂದ್ರೆ ಮತ್ತು ಬೆಳಗಾವಿ : ಕನ್ನಡ ಮತ್ತು ಮರಾಠಿ ಮನಸ್ಸುಗಳ ನಡುವೆ ಸೌಹಾರ್ದ ಸೇತುವೆ

- Advertisement -
- Advertisement -

ಮರಾಠಿ ಮಾತೃಭಾಷೆಯಾಗಿದ್ದರೂ ಕನ್ನಡ ಸಾಹಿತ್ಯದಲ್ಲಿ ಅತ್ಯುನ್ನತ ಸ್ಥಾನ ಮತ್ತು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ-ಮರಾಠಿ ಸಾಹಿತ್ಯದ ನಡುವೆ ಪ್ರಮುಖ ಕೊಂಡಿಗಳಲ್ಲಿ ಒಬ್ಬರು. ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಬೇಂದ್ರೆಯವರಿಗೆ ಪುನೇರಿ ಎನ್ನಬೇಕೋ? ಕಾನಡಿ ಎನ್ನಬೇಕೋ? ಯಾಕೆಂದರೆ ಕನ್ನಡದ ವರಕವಿ ಅವರು. ಈ ಹಿನ್ನೆಲೆಯಲ್ಲಿ, ಇವತ್ತಿನ ಕನ್ನಡ-ಮರಾಠಿ ಅಥವಾ ಕರ್ನಾಟಕ-ಮಹಾರಾಷ್ಟ್ರ ಅಥವಾ ಬೆಳಗಾವಿ ಗಡಿ ವಿವಾದವನ್ನು ಯಾವ ರೀತಿ ಗ್ರಹಿಸಬೇಕು ಅನ್ನುವ ಪ್ರಶ್ನೆ ಎದ್ದೇಳುತ್ತದೆ. ಭಾಷೆ ಹಾಗೂ ಮನಸ್ಸಿಗೆ ಯಾವುದೇ ಗಡಿ ಇಲ್ಲವೆಂಬುವುದಕ್ಕೆ ಬೇಂದ್ರ್ರೆಯವರಿಗಿಂತ ಉತ್ತಮ ಉದಾಹರಣೆ ಬೇಕೇ? ಪೂನಾದ ಕಾಮರ್ಸ ಕಾಲೇಜಿನಲ್ಲಿ 1942-1943ರ ನಡುವೆ ಮತ್ತು 1994ರಲ್ಲಿ ಸೊಲ್ಲಾಪುರದ ಡಿ.ಎ.ವಿ. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ ವೃತ್ತಿ ಮಾಡಿದರು. ಇವರ ಮೂಲ ವಂಶಜರು ಮಹಾರಾಷ್ಟ್ರದ ರತ್ನಾಗಿರಿಯಿಂದ ಬಂದು ಕರ್ನಾಟಕದ ಶಿರಹಟ್ಟಿಯಲ್ಲಿ ನೆಲೆಸಿದರು. ಹೀಗೆ ಕನ್ನಡ-ಮರಾಠಿ ದ್ವಿಭಾಷಾ ಪರಿಸರದಲ್ಲಿ ಬೆಳೆದ ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಬೇಂದ್ರೆಯವರ ಮೇಲೆ ದ್ವಿಸಂಸ್ಕೃತಿಗಳ ಪ್ರಭಾವ ವಿಫುಲವಾಗಿದೆ ಎನ್ನುವುದನ್ನು ಅಲ್ಲಗಳೆಯುವುದಿಲ್ಲ.

1929ರಲ್ಲಿ ಬೆಳಗಾವಿಯಲ್ಲಿ ಮಾಸ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ’ಹಕ್ಕಿ ಹಾರುತಿದೆ ನೋಡಿದಿರಾ’ ಕವನವನ್ನು ವಾಚಿಸಿದಾಗ, ಸಭಿಕರೆಲ್ಲಾ ಮಂತ್ರಮುಗ್ಧರಾಗಿದ್ದು ಈಗ ದಂತಕಥೆ. ಆಗ ಬೇಂದ್ರೆಯವರಿಗೆ ಕೇವಲ ಮೂವತ್ಮೂರು ವರ್ಷ.

1930ರಲ್ಲಿ ಮೊದಲ ಬಾರಿಗೆ ಜಯ ಕರ್ನಾಟಕ ಪತ್ರಿಕೆಯಲ್ಲಿ ಅವರ ’ನರಬಲಿ’ ಕವನ ಪ್ರಕಟವಾಯಿತು. ತದನಂತರದಲ್ಲಿ 1932ರಲ್ಲಿ ಪ್ರಕಟವಾದ ’ಗರಿ’ ಕವನ ಸಂಕಲನದಲ್ಲಿ ’ನರಬಲಿ’ ಕವನ ಮರುಪ್ರಕಟವಾಯಿತು. ’ನರಬಲಿ’ ಕವನ ಪುಸ್ತಕ ರೂಪದಲ್ಲಿ ಬಂದಂತಹ ಸಂದರ್ಭದಲ್ಲಿ, ಅಂದಿನ ಸರಕಾರ ಬೇಂದ್ರೆ ಅವರ ಮೇಲೆ ದೇಶದ್ರೋಹ ಆರೋಪ ಹೊರಿಸಿ, (ಬಂಗಾಳದಲ್ಲಿ ನಡೆದ ಮಾರಣಹೋಮವನ್ನು ಕುರಿತು ಬರೆದದ್ದು ’ನರಬಲಿ’ ಕವಿತೆ) ಅಂದಿನ ಸರಕಾರ ಅವರನ್ನು 3 ತಿಂಗಳ ಕಾಲ ಬೆಳಗಾವಿಯ ಹಿಂಡಲಗಿ ಸೆರೆಮನೆಗೆ ಕಳುಹಿಸಿತ್ತು ಹಾಗೂ ಬಿಡುಗಡೆಯ ನಂತರವೂ ಬೇಂದ್ರೆಯವರಿಗೆ ಯಾರೂ ನೌಕರಿ ಕೊಡಬಾರದೆನ್ನುವ ಆದೇಶ ಹೊರಡಿಸಿತ್ತು. 1932ರ ಈ ಐತಿಹಾಸಿಕ ಘಟನೆಯ ಕುರಿತು ಹೆಳವನಿದ್ದಲ್ಲಿ ಹೊಳೆ ಬಂದಿತು (ಸಖೀಗೀತ) ಎಂದು ನೆನಪಿಸಿಕೊಂಡಿದ್ದಾರೆ.

ಬೇಂದ್ರೆಯವರ ಕೃತಿಗಳು ಕನ್ನಡದಲ್ಲಿ ನಾಟಕಗಳನ್ನು, ವಿಮರ್ಶಾ ಗ್ರಂಥಗಳನ್ನು, ಕವನ ಸಂಕಲನಗಳನ್ನು ಒಳಗೊಂಡಿವೆ; ಕೆ. ವಿ. ಅಯ್ಯರ್ ಅವರ ’ಶಾಂತಲಾ’ ಕಾದಂಬರಿಯನ್ನು ಮರಾಠಿಗೆ ಅನುವಾದಿಸಿದ್ದಾರೆ. ಗೀತಾ ಜಾಗರಣ(ವ್ಯಾಖ್ಯಾನ), ವಿಠ್ಠಲ ಪಾಂಡುರಂಗ (ಕವನ ಸಂಕಲನ), ವಿಠ್ಠಲ ಸಂಪ್ರದಾಯ (ವ್ಯಾಖ್ಯಾನ), ಸಂತ ಮಹತಾಂಚಾ ಪೂರ್ಣ ಶಂಭು ವಿಠ್ಠಲ (ವ್ಯಾಖ್ಯಾನ), ಸಂವಾದ ಕವಿತಾ ಸಂಗ್ರಹಗಳು ಮರಾಠಿಯಲ್ಲಿರುವ ಬೇಂದ್ರೆ ಅವರ ಇತರ ಕೃತಿಗಳು. ಮಹಾರಾಷ್ಟ್ರದಿಂದ ಹೊರಡುವ ’ಸನ್ಮತಿ’ ಎನ್ನುವ ಮರಾಠಿ ಭಾಷೆಯ ಪತ್ರಿಕೆಯಲ್ಲಿಯೂ ಬೇಂದ್ರೆಯವರು ಲೇಖನಗಳನ್ನು ಬರೆದಿದ್ದುಂಟು. 1965ರಲ್ಲಿ ಮರಾಠಿಯಲ್ಲಿ ರಚಿಸಿದ ’ಸಂವಾದ’ ಕೃತಿಗೆ ಕೇಳ್ಕರ್ ಬಹುಮಾನ ಪಡೆದಿದ್ದಾರೆ.

ಮಹಾಜನ ಆಯೋಗ ವರದಿಯ ಸಮಯ ಹಾಗೂ 1970ರಲ್ಲಿ ಬೆಳಗಾವಿಯಲ್ಲಿ ಗಡಿ ತಗಾದೆ ತಾರಕಕ್ಕೇರಿದಾಗ, ಕೆಲ ಪುಂಡರು ಧಾರವಾಡದಲ್ಲಿರುವ (ಇವಾಗಲೂ ಬೆಳಗಾವಿ ರಸ್ತೆಯಲ್ಲಿದೆ) ’ಮರಾಠಿ ಮಂಡಳ’ ಎಂಬ ಕಟ್ಟಡಕ್ಕೆ ಬೆಂಕಿ ಹಚ್ಚಿದಾಗ ಬೇಂದ್ರೆಯವರು ಅದನ್ನು ಖಂಡಿಸಿದ್ದಲ್ಲದೇ, ’ನಮ್ಮ ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವಿನ ಸೀಮಾಭೂಮಿ ರುದ್ರ ಭೂಮಿಯಾಗದೇ ಶಿವಭೂಮಿಯಾಗಬೇಕು’ ಅನ್ನುವ ಮಾತನ್ನು ಅವರು ಆಡಿದ್ದು, ಅಂದಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ವರದಿಯಾಗಿತ್ತು. ರುದ್ರ ಅಂದರೆ ಭಯಂಕರ ಹಾಗೂ ಶಿವ ಅಂದರೆ ಸೌಮ್ಯ, ಒಳ್ಳೆಯದು ಎಂಬ ಹಿನ್ನೆಲೆಯಲ್ಲಿ ಅವರ ಮಾತನ್ನು ಇವತ್ತು ಮರಾಠಿ ಹಾಗೂ ಕನ್ನಡ ಬಂಧುಗಳು ಗ್ರಹಿಸಬಹುದಾಗಿದೆ.

1971 ಸಪ್ಟೆಂಬರ್ 12ರಲ್ಲಿ ಬೆಳಗಾವಿಯ ಆಝಾದ ಟಾಕೀಸ್‌ನಲ್ಲಿ (ಇವಾಗ ಈ ಟಾಕೀಸ್ ಬಂದ್ ಆಗಿದೆ) ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಂದಿನ ನಗರಸಭಾಧ್ಯಕ್ಷ ಶಿವಾಜಿರಾವ್ ಕಾಕತಕರ್ ಅವರು ಪ್ರೋತ್ಸಾಹ ನೀಡಿದ್ದನ್ನು ಬೆಳಗಾವಿ ಜನತೆ ನೆನಪಿಸಿಕೊಳ್ಳುತ್ತಿರುತ್ತದೆ. ಆ ಕಾರ್ಯಕ್ರಮದ ಸಮಾರೋಪದ ಅತಿಥಿ ಬೇಂದ್ರೆಯವರಾಗಿದ್ದರು.

ಇವತ್ತಿನ ಸಂದರ್ಭದಲ್ಲಿ ಬೆಳಗಾವಿಯನ್ನು ಕೇಂದ್ರವಾಗಿಸಿಕೊಂಡು ಗಡಿ ವಿವಾದಕ್ಕೆ ಮತ್ತೆ ಕಿಡಿ ಹಚ್ಚುವ ಕೆಲಸ ಆಗಾಗ್ಗೆ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಬೇಂದ್ರೆಯಂತಹ ಕವಿಗೆ ಮರಾಠಿ ಹಾಗೂ ಕನ್ನಡ ಪರಿಸರಗಳು ವೈರತ್ವವಾಗಿ ಕಾಣಲಿಲ್ಲ. ಅದೇ ರೀತಿ ಓದುಗ ರಸಿಕರಿಗೂ ಬೇಂದ್ರೆಯಾಗಲಿ ಅಥವಾ ಕನ್ನಡ-ಮರಾಠಿ ಸಾಹಿತ್ಯದಲ್ಲಾಗಲಿ, ವಾತಾವರಣದಲ್ಲಾಗಲಿ ವೈರ ಭಾವ ಕಾಣಲಿಲ್ಲ.

ಹಾಗೆಯೇ ಪೂನಾದ ಚಿತಳೆಯ ಬಾಕರವಡಿ ಹಾಗೂ ಧಾರವಾಡದ ಬಾಬುಸಿಂಗ ಪೇಡಾದ ಕಥೆ ಭಿನ್ನವಾಗಿಲ್ಲ. ವಂಶ ಪಾರಂಪರ್‍ಯವಾಗಿ ಮೂರ್‍ನಾಲ್ಕು ಪೀಳಿಗೆಗಳು ನಡೆಸಿಕೊಂಡು ಬರುತ್ತಿರುವ ಈ ತಿಂಡಿ ತಿನಿಸುಗಳಿಗೆ ಯಾವ ಗಡಿ ಇಲ್ಲ. ಬಾಕರವಡಿ ಹಾಗೂ ಪೇಡಾದ ನಡುವೆ ಬೆಳೆದ ಬೇಂದ್ರೆ ಕನ್ನಡಿಗರಿಗೆಷ್ಟೋ ಅಷ್ಟೇ ಮರಾಠಿಗರಿಗೂ ಪ್ರಿಯವಾದ ಕವಿ.

2021ನೇ ಸಾಲಿನ ಅಂಬಿಕಾತನಯದತ್ತ ಪ್ರಶಸ್ತಿಗೆ ಭಾಜನರಾದ ಪ್ರೊ ಎಚ್.ಎಸ್. ಶಿವಪ್ರಕಾಶ್ ಅವರು ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಬರೆದುಕೊಂಡಂತೆ: “ನನ್ನ ವ್ಯಾವಸ್ಥೆಯಲ್ಲಿ ಕಾವ್ಯ ಕಸುಬಿನ ಹಲವು ಗುಟ್ಟುಗಳನ್ನು ನಾನು ಕಲಿತದ್ದು ಬೇಂದ್ರೆ ಕಾವ್ಯದ ಮುಖೇಣ.” ಹೀಗೆ ಕನ್ನಡದ ಹಲವು ಹಿರಿಯ ಹಾಗೂ ಕಿರಿಯ ಕವಿಗಳಿಗೆ ಕನ್ನಡದ ವರಕವಿಯ ಪ್ರಭಾವವಾಗಿರುವುದನ್ನು ಅಲ್ಲಗಳೆಯುವಂತಿಲ್ಲ.

ಅವರೊಬ್ಬ ’ಮರಾಠಿ ಮಾನುಸ್ ಅಂದು ಕನ್ನಡದ ಯಾವ ಮನಸ್ಸುಗಳೂ ಅವರನ್ನು ದೂರ ಇಟ್ಟಿಲ್ಲ. ಇದು ಇವತ್ತಿನ ಸೀಮಾಭೂಮಿ ಬೆಳಗಾವಿ ಜನರ (ಕನ್ನಡ ಹಾಗೂ ಮರಾಠಿ) ಸ್ಥಿತಿ ಹಾಗೂ ಮನಸ್ಥಿತಿಯೂ ಹೌದು. ಶತಮಾನ ಕಳೆದ ಮರಾಠಿ ಮಾತೃಭಾಷಿಕ ಕನ್ನಡದ ವರಕವಿ ಬೇಂದ್ರೆಯನ್ನು ಒಪ್ಪಿ ಅಪ್ಪಿಕೊಂಡವರ ಹಾಗೂ ಅರ್ಧ ಶತಮಾನ ಕಳೆದರೂ ಮಹಾಜನ ವರದಿಯನ್ನು ಒಪ್ಪದವರ ನಡುವೆ ಸಿಲುಕಿ ಬೇಯುತ್ತಿರುವುದು ಕನ್ನಡ-ಮರಾಠಿ ಎನ್ನುವ ಭೇದಭಾವವಿಲ್ಲದ ಬದುಕುತ್ತಿರುವ ಮುಗ್ಧ ಮನಸ್ಸುಗಳೇ ಹೊರತು ರಾಜಕಾರಣಿಗಳಲ್ಲ.

ಶೋಭಾ ನಾಯಕ್

ಶೋಭಾ ನಾಯಕ್
ಶೋಭಾ ನಾಯಕ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ೬ ಸುವರ್ಣ ಪದಕಗಳೊಂದಿಗೆ ಕರ್ನಾಟಕ ವಿ.ವಿ ಸ್ನಾತಕೋತ್ತರ ಪದವಿ ಪಡೆದರು. ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಪುಟಕ್ಕಿಟ್ಟ ಪುಟಗಳು: ಪುರುಷಾಧಿಪತ್ಯವನ್ನು ಪ್ರಶ್ನಿಸಿ ಆರೋಗ್ಯಕರ ಶೃಂಗಾರ ಪಾಠ ಹೇಳುವ ’ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....