ಬೇರೆ ಪಕ್ಷದಿಂದ ಬಿಜೆಪಿಗೆ ಸೇರಿದವರು ಮತ್ತು ಹೊಸದಾಗಿ ಪಕ್ಷಕ್ಕೆ ಸೇರ್ಪಡೆಯಾದ ಪಶ್ಚಿಮ ಬಂಗಾಳದ 79 ಬಿಜೆಪಿ ಮುಖಂಡರಿಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನವೆ ಕೇಂದ್ರದಿಂದ ವಿಐಪಿ ಭದ್ರತೆ ಒದಗಿಸಲಾಗಿದೆ.
ಬಿಜೆಪಿ ನಾಯಕರಾದ ಜಿತೇಂದರ್ ತಿವಾರಿ, ಹಿರೆನ್ಮಯ್ ಚಟ್ಟೋಪಾಧ್ಯಾಯ, ಯಶ್ ದಾಸ್‌ಗುಪ್ತಾ ಮತ್ತು ಶ್ರವಂತಿ ಚಟರ್ಜಿ ಮುಂತಾದವರಿಗೆ ಸಿಐಎಸ್‌ಎಫ್‌ನ ‘ವೈ’ ವರ್ಗದ ಭದ್ರತೆ ನೀಡಲಾಗಿದ್ದು, ನಟ ಪಾಯಲ್ ಸರ್ಕಾರ್ ಅವರಿಗೆ ‘ಎಕ್ಸ್’ ವರ್ಗದ ಭದ್ರತೆ ದೊರೆತಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಇತ್ತೀಚೆಗೆ ಬಿಜೆಪಿಗೆ ಸೇರಿದ ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಕೇಂದ್ರವು ‘ವೈ +’ ವಿಐಪಿ ಭದ್ರತಾ ರಕ್ಷಣೆಯನ್ನು ನೀಡಿದೆ.
ಇದನ್ನೂ ಓದಿ: ಉಸಿರುಗಟ್ಟಿಸುವ ಸಾಂಪ್ರದಾಯಿಕ ಸಂಸ್ಥೆಗಳು ಕಂಗೆಡುವಂತೆ ಬದುಕಿದ ವ್ಯಕ್ತಿಯ ಜ್ವಾಲಾಮುಖಿಯಂತಹ ಆತ್ಮಕಥೆ
ವಿಶೇಷ ಭದ್ರತಾ ಗುಂಪು (ಎಸ್‌ಎಸ್‌ಜಿ) ಎಂದು ಕರೆಯಲ್ಪಡುವ ಭದ್ರತೆಗೆ ಮೀಸಲಾದ ವಿಭಾಗವನ್ನು ಹೊಂದಿರುವ ಸಿಐಎಸ್‌ಎಫ್, ಈ ಭದ್ರತಾ ರಕ್ಷಣೆಯನ್ನು ಒದಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಮಿಥುನ್ ಚಕ್ರವರ್ತಿಗೆ ವೈ+ ಭದ್ರತೆ ನೀಡಲಾಗಿದೆ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಚುನಾವಣೆ ಸಂದರ್ಭದಲ್ಲಿ ಸಶಸ್ತ್ರ ಸಿಐಎಸ್ಎಫ್ ಕಮಾಂಡೋಗಳು ಅವರೊಂದಿಗೆ ಇರುತ್ತಾರೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐಬಿ ಮತ್ತು ರಾ ಒಳಗೊಂಡಿರುವ ಗುಪ್ತಚರ ಸಂಸ್ಥೆಗಳ ಆಂತರಿಕ ಮಾಹಿತಿಯ ಆಧಾರದ ಮೇಲೆ ಒಬ್ಬ ವ್ಯಕ್ತಿಗೆ ಅಗತ್ಯವಿರುವ ರಕ್ಷಣೆಯ ಮಟ್ಟವನ್ನು ಗೃಹ ಸಚಿವಾಲಯ ನಿರ್ಧರಿಸುತ್ತದೆ.
ಇದನ್ನೂ ಓದಿ: ಕಾನ್ಶಿರಾಮ್ ಜಯಂತಿ: JNU ಬಾಪ್ಸಾ ಅಧ್ಯಕ್ಷನ ಮೇಲೆ ABVP ಕಾರ್ಯಕರ್ತರಿಂದ ಹಲ್ಲೆ ಆರೋಪ


