ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಹತ್ಯಾಕಾಂಡದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಓರ್ವನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದು, ಸುಮಾರು 20 ಜನರನ್ನು ಬಂಧಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ಯಾಲೆಸ್ತೀನ್ ಪರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಕ್ವಿಲಿನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಜನರೊಂದಿಗೆ ಮಾತನಾಡಲು ಮತ್ತು ಪ್ಯಾಲೆಸ್ತೀನ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ಭಾನುವಾರ ಸಂಜೆ 4.45ರ ಸುಮಾರಿಗೆ ಫ್ರೇಜರ್ ಟೌನ್‌ನ ಕ್ಯಾರಿ ಫ್ರೆಶ್ ಸೂಪರ್‌ಮಾರ್ಕೆಟ್ ಬಳಿ 25-30 ಜನರು ಜಮಾಯಿಸಿದ್ದೆವು. ನಾವು ಚಹಾ ಸೇವಿಸುತ್ತಿದ್ದೆವು. ಪೊಲೀಸರು ನಮ್ಮನ್ನು ಹಿಡಿದು ಬಂಧಿಸಲು ಪ್ರಾರಂಭಿಸಿದರು. ಆಗ ನಾವು ಘೋಷಣೆಗಳನ್ನು ಕೂಗಿದೆವು ಎಂದು ಹೇಳಿದ್ದಾರೆ.
ನಮ್ಮ ಜೊತೆಯಿದ್ದ ಅರಿಂದಮ್ ಎಂಬ ಟ್ರೇಡ್ ಯೂನಿಯನ್ ಕಾರ್ಯಕರ್ತನ ಮೇಲೆ ಪೊಲೀಸ್ ವ್ಯಾನ್‌ನೊಳಗೆ ಹಲ್ಲೆ ಮಾಡಲಾಗಿದೆ. ಅವನ ತಲೆ ಸೇರಿದಂತೆ ದೇಹದ ಇತರ ಭಾಗಗಳ ಮೇಲೆ ಹೊಡೆಯುತ್ತಲೇ ಇದ್ದರು. ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಅವರನ್ನು ತೆರಳಲು ಬಿಟ್ಟಿಲ್ಲ. ಪುರುಷ ಪೊಲೀಸ್ ಸಿಬ್ಬಂದಿ ನಾಲ್ವರು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಒಬ್ಬ ಮಹಿಳಾ ಪ್ರೊಫೆಸರ್ ಜೊತೆ ಎಷ್ಟು ಹಿಂಸಾತ್ಮಕವಾಗಿ ನಡೆದಿಕೊಂಡಿದ್ದಾರೆ ಎಂದರೆ ಆಕೆಯ ಕೈಯಲ್ಲಿ ಗುರುತುಗಳಿವೆ ಎಂದು ಅಕ್ವಿಲಿನ್ ಹೇಳಿದ್ದಾರೆ.
ಪೂರ್ವ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಈ ಕುರಿತು ಪ್ರತಿಕ್ರಿಯಿಸಿದ್ದು, ಈ ಗುಂಪು ಏನಾದರೂ ಮಾಡಲು ಪ್ರಾರಂಭಿಸಿದೆಯೇ ಅಥವಾ ಇಲ್ಲವೇ ಎಂಬುದು ಪ್ರಶ್ನೆಯಲ್ಲ. ಹೈಕೋರ್ಟ್ ಒಂದು ಸ್ಥಳದಲ್ಲಿ ಮಾತ್ರ ಪ್ರತಿಭಟನೆಗೆ ಅನುಮತಿ ನೀಡಿದೆ ಮತ್ತು ಅವರು ಅನುಮತಿಯನ್ನು ತೆಗೆದುಕೊಂಡು ಅಲ್ಲಿ ಪ್ರತಿಭಟಿಸಬೇಕು ಎಂದು ಹೇಳಿದ್ದಾರೆ.
ಇದನ್ನು ಓದಿ: ಎಕ್ಸಿಟ್ ಪೋಲ್‌ಗಳನ್ನು ಎರಡು ತಿಂಗಳ ಹಿಂದೆ ಮನೆಯಲ್ಲೇ ಕುಳಿತು ತಯಾರಿಸಲಾಗಿದೆ: ಮಮತಾ ಬ್ಯಾನರ್ಜಿ


