Homeಅಂಕಣಗಳುನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದ ಹಾಸ್ಟೆಲ್ ವಾರ್ಡನ್ ಬಿ.ಹೆಚ್.ಚಂದ್ರಪ್ಪ

ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದ ಹಾಸ್ಟೆಲ್ ವಾರ್ಡನ್ ಬಿ.ಹೆಚ್.ಚಂದ್ರಪ್ಪ

- Advertisement -
- Advertisement -
ಎಲೆಮರೆ – 28

ಹಾಸ್ಟೆಲುಗಳೆಂದರೆ ಎಪ್ಪತ್ತರ ದಶಕದಲ್ಲಿ ದಲಿತ ಚಳವಳಿಗಳ ತವರು ಮನೆಗಳಂತಿದ್ದವು. ಹಾಸ್ಟೆಲ್ ವಿದ್ಯಾರ್ಥಿಗಳು ಎಲ್ಲ ಬಗೆಯ ಚಳವಳಿಗಳ ಕೇಂದ್ರಬಿಂದುವಾಗಿದ್ದರು. ಕಾರಣ ಹಳ್ಳಿಗಳಿಂದ ನಗರದ ಹಾಸ್ಟೆಲ್‍ನಲ್ಲಿ ಉಳಿದು ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಓದುತ್ತಲೇ ಸಾಮಾಜಿಕ ಅಸಮಾನತೆಯ ಬಗೆಗೆ ಅರಿವು ಮೂಡಿಸಿಕೊಂಡು, ಬಿಸಿರಕ್ತದ ಯುವಕ ಯುವತಿಯರು ಎಲ್ಲ ಬಗೆಯ ಅಸಮಾನತೆಯ ವಿರುದ್ಧ ಹೋರಾಟಕ್ಕೆ ಅಣಿಯಾತ್ತಿದ್ದರು. ಎಲ್ಲಾ ಹಿರಿಯ ಹೋರಾಟಗಾರರ ಹಾಸ್ಟೆಲ್ ಡೈರಿಗಳನ್ನು ಕೆದಕಿದರೆ ಅದೊಂದು ಅತ್ಯುತ್ತಮ ದಾಖಲೆಯಾಗಬಲ್ಲದು. ಆದರೆ 70-80 ರ ದಶಕದ ಹಾಸ್ಟೆಲುಗಳ ಕಣ್ಣೋಟದಿಂದ ಇಂದಿನ ಹಾಸ್ಟೆಲುಗಳನ್ನು ನೋಡುವಂತಿಲ್ಲ. ಹತ್ತಾರು ಬಿಗಿ ಬಂದೋಬಸ್ತುಗಳು, ವಿದ್ಯಾರ್ಥಿಗಳ ಗಂಭೀರ ಓದಿನ ಕೊರತೆ, ಹಾಸ್ಟೆಲ್ ವಾರ್ಡನ್, ಶಾಲಾ ಕಾಲೇಜು ಮೇಷ್ಟ್ರುಗಳ ಜಡತೆ ಹೀಗೆ ವ್ಯತ್ಯಾಸಗಳನ್ನು ಪಟ್ಟಿ ಮಾಡಬಹುದು. ಅದರಲ್ಲಿಯೂ ಕೆಲವು ಹಾಸ್ಟೆಲ್‍ಗಳು ಈಗಲೂ ವೈಚಾರಿಕ ತಿಳಿವಿನ ಕೇಂದ್ರಗಳಾಗಿ ಉಳಿದಿವೆ. ನಾನು ಗಮನಿಸಿದಂತೆ ಹರಪನಹಳ್ಳಿಯ ಹಿಂದುಳಿದ ವರ್ಗಗಳ ಹಾಸ್ಟೆಲ್ ವಾರ್ಡನ್ ಬಿ.ಹೆಚ್.ಚಂದ್ರಪ್ಪ ಈ ಕಾರಣಕ್ಕೆ ಗಮನಸೆಳೆಯುತ್ತಾರೆ.

ನಾನೊಮ್ಮೆ ಹರಪನಹಳ್ಳಿಗೆ ಟಿಪ್ಪು ಸುಲ್ತಾನ್ ಜಯಂತಿಯ ಭಾಷಣ ಮಾಡಲು ಹೋಗಿದ್ದೆ. ಅಂದು ನಾನು ತುಂಬಾ ಜೋಷಲ್ಲಿ ಮೈದುಂಬಿ ಮಾತನಾಡಿದೆ. ಮಾತು ಮುಗಿದ ನಂತರ ಗೆಳೆಯ ಶಿಕ್ಷಕ ಗಂಗಾಧರ ತನ್ನ ಸ್ನೇಹಬಳಗವನ್ನು ಪರಿಚಯಿಸಿದರು. ಅದರಲ್ಲಿ ಗಮನಸೆಳೆದ ವ್ಯಕ್ತಿ ಹಿಂದುಳಿದ ವರ್ಗಗಳ ಹಾಸ್ಟೆಲ್ ವಾರ್ಡನ್ ಹೆಚ್.ಬಿ. ಚಂದ್ರಪ್ಪ. ಕುಳ್ಳಗೆ ಪುಟಿಯುವ ವ್ಯಕ್ತಿತ್ವದ ಚಂದ್ರಪ್ಪ ಸದಾ ವಿದ್ಯಾರ್ಥಿಗಳ ಗುಂಪು ಕಟ್ಟಿಕೊಂಡು ಒಂದಿಲ್ಲೊಂದು ಚರ್ಚೆ ಸಂವಾದಗಳಲ್ಲಿ ತೊಡಗಿರುತ್ತಾರೆ.

ಮೂಲತಃ ಹರಿಹರ ತಾಲೂಕಿನ ನಿಟ್ಟೂರಿನ ಚಂದ್ರಪ್ಪನವರು ಬಿಎಸ್ಸಿ, ಬಿಎಡ್ ಮುಗಿದ ಮೇಲೆ 2002ರ ನವೆಂಬರ್‍ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್ ವಾರ್ಡ್‍ನ್ ಆಗಿ ನೇಮಕಗೊಂಡರು. ಚಂದ್ರಪ್ಪರಿಗೆ ವಿದ್ಯಾರ್ಥಿದೆಸೆಯಲ್ಲಿ ಓದಿನ ಹಸಿವಿತ್ತು. ಆದರೆ ಹಾಸ್ಟೆಲುಗಳಲ್ಲಿ ಪುಸ್ತಕಗಳಾಗಲಿ, ಅಂತಹದ್ದೊಂದು ವಾತಾವರಣವಾಗಲಿ ಇರಲಿಲ್ಲ. ಹೀಗಿದ್ದೂ ಹೇಗೋ ಪುಸ್ತಕಗಳನ್ನು ಒದಗಿಸಿಕೊಂಡು ಓದುತ್ತಿದ್ದರು. ವಿಶೇಷವಾಗಿ ತೇಜಸ್ವಿ ಕೃತಿಗಳು ವೈಚಾರಿಕ ಸೂಕ್ಷ್ಮತೆಯನ್ನೂ, ಪರಿಸರ ಪ್ರೀತಿಯನ್ನೂ, ಫೋಟೋಗ್ರಫಿಯ ಕನಸನ್ನೂ ಕಲಿಸಿದವು. ವಿದ್ಯಾರ್ಥಿದೆಸೆಯ ಕನಸುಗಳನ್ನು ಚಂದ್ರಪ್ಪ ತನ್ನ ಹಾಸ್ಟೆಲ್ ವಿದ್ಯಾರ್ಥಿಗಳ ಕನಸಾಗಿ ಪರಿವರ್ತಿಸಿದರು. ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಓದಿನ ಹಸಿವನ್ನು ಹೆಚ್ಚಿಸಿ, ಹಾಸ್ಟೆಲಿನಲ್ಲಿ ಪುಸ್ತಕಗಳ ಒದಗಿಸಲು ಮುಂದಾದರು.

ಶಾಲೆಗಳು ಪಠ್ಯಪುಸ್ತಕಗಳಿಗೆ ಒತ್ತು ನೀಡುತ್ತವೆ. ಹೀಗಾಗಿ ಶಾಲಾ ಪಠ್ಯಗಳಿಗಿಂತಲೂ ವೈಚಾರಿಕ ಮತ್ತು ಸ್ಪರ್ಧಾತ್ಮಕ ಕೃತಿಗಳನ್ನು ನಾವುಗಳು ಕೊಡಬೇಕೆನ್ನುವುದು ಚಂದ್ರಪ್ಪರ ಕನಸಾಗಿತ್ತು. ಮೊದಲು ಕೆಲಸಕ್ಕೆ ಸೇರಿದ ಚನ್ನಗಿರಿ ತಾಲೂಕಿನ ಕೆರೆಬಿಳಚಿಯಲ್ಲಿ ಮಕ್ಕಳಿಗಾಗಿ ಪುಸ್ತಕಗಳ ಸಂಗ್ರಹ ಆರಂಭಿಸುತ್ತಾರೆ. ಪ್ರೀ ಮೆಟ್ರಿಕ್ ಮಕ್ಕಳಾದ ಕಾರಣ ವೈಚಾರಿಕ ಪುಸ್ತಕಗಳು ಅಷ್ಟು ಅರಗಲಿಲ್ಲ. ಮೆಟ್ರಿಕ್ ನಂತರದ ಹಾಸ್ಟೆಲ್ ವಾರ್ಡನ್ ಆಗಿ ಹರಪನಹಳ್ಳಿಗೆ ಬಂದಾಗ ಈ ಪ್ರಯೋಗಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಿತು.

ಚಂದ್ರಪ್ಪರ ಪುಸ್ತಕದ ನಂಟು ಸಹಜವಾಗಿ ಹರಪನಹಳ್ಳಿ ಭಾಗದ ಸಾಹಿತ್ಯ ವಲಯವನ್ನು ಬೆಸೆಯುತ್ತದೆ. ಕೊಟ್ಟೂರಿನ ಕುಂ.ವಿ, ಸ್ಥಳೀಯರಾದ ಇಸ್ಮಾಯಿಲ್ ಎಲಿಗಾರ, ರಾಮನ ಮಲಿ ಮುಂತಾದವರ ಸಂಪರ್ಕ ಸಿಕ್ಕ ಮೇಲೆ ಸಾಹಿತ್ಯ ಓದಿನ ಅಭಿರುಚಿಯ ವ್ಯಾಪಕತೆ ಹೆಚ್ಚುತ್ತದೆ. `ಮಕ್ಕಳು ವೈಚಾರಿಕವಾಗಿ ಪ್ರಬುದ್ಧರಾಗಬೇಕು, ಓದು ಮುಗಿಯುತ್ತಲೇ ಉದ್ಯೋಗ ಹಿಡಿಯಬೇಕು’ ಎನ್ನುವ ತತ್ವವನ್ನು ಚಂದ್ರಪ್ಪ ಪಾಲಿಸಿದರು. ಇದರ ಪರಿಣಾಮ ಸಾಹಿತ್ಯಿಕ ಕೃತಿಗಳ ಜೊತೆಗೆ ಸ್ಪರ್ಧಾತ್ಮಕ ಪುಸ್ತಕಗಳ ಸಂಗ್ರಹ ಮತ್ತು ಓದಿಸುವಿಕೆಯೂ ಹೆಚ್ಚಿತು.

ಮಳೆಯಾಧಾರಿತ ಈ ಪ್ರದೇಶದ ಮಕ್ಕಳಿಗೆ ಸರಕಾರಿ ಕೆಲಸ ಬಹುದೊಡ್ಡ ಕನಸು. ಹಾಗಾಗಿ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಠಿಣವಾಗಿ ತೊಡಗಿಸಿದರು. ಪರಿಣಾಮ ಐಎಎಸ್, ಕೆಎಎಸ್ ಹೊರತುಪಡಿಸಿ ಎಲ್ಲಾ ಇಲಾಖೆಯಲ್ಲಿಯೂ ಐದುನೂರಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉದ್ಯೋಗಸ್ತರಾಗಿದ್ದಾರೆ. ಇದು ಹಾಸ್ಟೆಲ್ ವಾರ್ಡನ್ ಆಗಿ ಚಂದ್ರಪ್ಪ ಅವರ ಅತ್ತುತ್ತಮ ಮಾದರಿಯಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಓದಿದ ಮಕ್ಕಳು ಉದ್ಯೋಗ ಹಿಡಿಯುವಂತಾದರೆ, ಹಳ್ಳಿಗಳಲ್ಲಿ ಶಿಕ್ಷಣದ ಬಗೆಗಿನ ಒತ್ತು ಹೆಚ್ಚುತ್ತದೆ. ನಿರುದ್ಯೋಗ ಹೆಚ್ಚಾದರೆ, ಗ್ರಾಮೀಣರ ಶಿಕ್ಷಣದ ಮೇಲಿನ ಆಸಕ್ತಿ ಕಡಿಮೆಯಾಗುತ್ತದೆ. ಹೀಗಾಗಿ ಚಂದ್ರಪ್ಪ ಅವರ ಕೆಲಸ ಹರಪನಹಳ್ಳಿ ಭಾಗದ ಹಳ್ಳಿಗಳಲ್ಲಿ ಶಿಕ್ಷಣದ ಬಗೆಗೆ ಜನರಲ್ಲಿ ವಿಶ್ವಾಸ ಮೂಡುವಂತೆ ಮಾಡಿದೆ. ಮನೆಗಳಲ್ಲಿ ತಂದೆ ತಾಯಿಗಳು ಮಕ್ಕಳ ಭವಿಷ್ಯ ರೂಪಿಸಲು ಎಷ್ಟು ಕಾಳಜಿ ವಹಿಸುತ್ತಾರೋ ಅಷ್ಟು ಕಾಳಜಿಯನ್ನು ನಾವು ವಹಿಸುತ್ತೇವೆ ಎನ್ನುವ ಚಂದ್ರಪ್ಪ ಅವರ ಮಾತಿನಲ್ಲಿಯೇ ಅವರ ಬದ್ಧತೆ ಅರ್ಥವಾಗುತ್ತದೆ.

`ದಾರಿದೀಪ’ ಎನ್ನುವ ವೇದಿಕೆಯೊಂದನ್ನು ಚಂದ್ರಪ್ಪ ರೂಪಿಸಿದ್ದಾರೆ. ಇದು ಈ ಹಾಸ್ಟೆಲ್ ದಾರಿಯಲ್ಲಿ ಬದುಕನ್ನು ಕಟ್ಟಿಕೊಂಡವರು ಮರಳಿ ಹಾಸ್ಟೆಲ್‍ಗೆ ಎನ್ನುವಂತಿದೆ. ಈಗಾಗಲೆ ಈ ಹಾಸ್ಟೆಲಿನಲ್ಲಿ ಓದಿ, ನೌಕರಿ ಪಡೆದವರು ಈಗ ಹಾಸ್ಟೆಲಿನಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿದ್ದಾರೆ. ಜಿಲ್ಲಾ, ತಾಲೂಕು ಆಡಳಿತಕ್ಕೆ ಬರುವ ಯುವ ಐಎಎಸ್ ಕೆಎಎಸ್ ಅಧಿಕಾರಿಗಳನ್ನು ಹಾಸ್ಟೆಲಿಗೆ ಕರೆಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಉಪನ್ಯಾಸ ಕೊಡಿಸುತ್ತಾರೆ. ಚಂದ್ರಪ್ಪ ಸ್ವತಃ ಪರಿಸರವಾದಿ ಪಕ್ಷಿಪ್ರೇಮಿ. ತನ್ನ ಈ ಪರಿಸರ ಪ್ರೇಮವನ್ನು ತನ್ನ ಹಾಸ್ಟೆಲ್ ವಿದ್ಯಾರ್ಥಿಗಳಿಗೂ ವಿಸ್ತರಿಸುತ್ತಾರೆ. ಬೇಸಿಗೆಯಲ್ಲಿ ಬೆಟ್ಟ ಗುಡ್ಡಗಳ ಅಲೆದು ವಿದ್ಯಾರ್ಥಿಗಳ ಸಹಾಯದಿಂದ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಹಿಂದೆ ಉಚ್ಚಂಗಿದುರ್ಗದ ಗುಡ್ಡವನ್ನು ದತ್ತು ಪಡೆದು ರಜೆಗಳಲ್ಲಿ ವಿದ್ಯಾರ್ಥಿಗಳ ಸಹಾಯದಿಂದ ಸಸಿ ನೆಡುವ, ಇರುವ ಸಸ್ಯ ಜಾತಿಗಳನ್ನು ಉಳಿಸುವ ಕಾರ್ಯಕ್ರಮ ಆಯೋಜಿಸಿದ್ದರು.

ಚಂದ್ರಪ್ಪ ಸ್ವತಃ ಒಳ್ಳೆಯ ಫೋಟೋಗ್ರಾಫರ್, ಮೊದಲಿಂದಲೂ ವೈಲ್ಡ್ ಲೈಫ್ ಫೋಟೊಗ್ರಫಿಯ ಆಸಕ್ತಿ ಇತ್ತು. ಇದೀಗ ಬಯಲು ಸೀಮೆ ಪಕ್ಷಿಗಳ ಕುರಿತು ಅಧ್ಯಯನ ಮಾಡುತ್ತಿದ್ದಾರೆ. ಗಾಳಿಫ್ಯಾನು (ವಿಂಡ್ ಪವರ್) ಗಳಿಂದ ನೆಲವಾಸಿ ಕ್ರಿಮಿ, ಕೀಟ, ಪಶು, ಪಕ್ಷಿಗಳಿಗೆ ಹೇಗೆ ತೊಂದರೆಯಾಗುತ್ತಿದೆ ಎನ್ನುವುದನ್ನು ಗುರುತಿಸುತ್ತಿದ್ದಾರೆ. ಚಂದ್ರಪ್ಪ ಹೇಳುವಂತೆ ಗಾಳಿಯ ಫ್ಯಾನುಗಳ ಶಬ್ದದಿಂದಾಗಿ ಜೀವಜಂತುಗಳ ನಿದ್ರೆ ಮತ್ತು ವಿಶ್ರಾಂತಿಗೆ ತೊಂದರೆಯಾಗಿ, ಅವುಗಳ ದೈನಂದಿನ ದಿನಚರಿ ಏರುಪೇರಾಗುತ್ತದೆ. ಇದು ಮೊಟ್ಟೆ ಇಟ್ಟು ಮರಿ ಮಾಡುವುದರ ಮೇಲೂ ಪರಿಣಾಮ ಬೀರುತ್ತದೆ, ಹೀಗಾಗಿ ಪಕ್ಷಿ ಕ್ರಿಮಿ ಕೀಟಗಳ ಸಂತಾನೋತ್ಪತ್ತಿ ಕುಂಟಿತವಾಗಿ ಅಳಿವಿನಂಚಿಗೆ ಬರುತ್ತವೆ ಎನ್ನುವುದು ಚಂದ್ರಪ್ಪ ಅವರ ಕಕ್ಕುಲಾತಿ.

ಹೀಗೆ ಚಂದ್ರಪ್ಪ ಅವರು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮನೆಯ ವಾತಾವರಣವನ್ನು ಸೃಷ್ಟಿಸಿ, ಅವರಲ್ಲಿ ಓದಿನ ಮೂಲಕ ವೈಚಾರಿಕತೆ ಬೆಳೆಸಿ, ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಾರೆ. ಏಕಕಾಲದಲ್ಲಿ ಪರಿಸರದ ಕಾಳಜಿಯನ್ನೂ, ಬದುಕಿನ ಪ್ರೀತಿಯನ್ನೂ ಕಲಿಸುತ್ತಾ, ನಿಜಕ್ಕೂ ಒಬ್ಬ ಹಾಸ್ಟೆಲ್ ವಾರ್ಡನ್ ಅಂದರೆ ಹೀಗಿರಬೇಕು ಎನ್ನುವಂತಿರುವ ಚಂದ್ರಪ್ಪ ಅವರ ಹೊಸ ಹೊಸ ಕನಸುಗಳೂ ಸಾಕಾರವಾಗಲಿ.

ಚಂದ್ರಪ್ಪ ಅವರ ಫೋಟೋಗ್ರಫಿ ಮತ್ತು ಹಾಸ್ಟೆಲ್ ಚಟುವಟಿಕೆಗಳನ್ನು ಗಮನಿಸಲು ಅವರ ಫೇಸ್‍ಬುಕ್ ಪೇಜನ್ನು ಗಮನಿಸಿ. https://www.facebook.com/chandrappabh.bcm

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಚಂದ್ರಪ್ಪನವರ ಕಾರ್ಯವೈಖರಿ ಶ್ಲಾಘನೀಯ ಮತ್ತು ಅನುಕರಣನೀಯ. ನಮ್ಮ ಎಲ್ಲಾ ಹಾಸ್ಟೆಲ್ ಗಳ ವಾರ್ಡನ್ಗಳೂ ಚಂದ್ರಪ್ಪನವರ ಕಾರ್ಯವೈಖರಿಯನ್ನು ಅನುಸರಿಸಿದರೆ ವಿದ್ಯಾರ್ಥಿಗಳಲ್ಲಿ ಅದ್ಭುತ ಸಾಧನೆಯನ್ನು ಕಾಣಬಹುದು. ಅರುಣ್ ಅವರಿಗೆ ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...