- Advertisement -
- Advertisement -
‘ಅಗ್ನಿಪಥ’ ಸೇನಾ ನೇಮಕಾತಿ ಯೋಜನೆಯ ವಿಚಾರದಲ್ಲಿ ಒಕ್ಕೂಟ ಸರ್ಕಾರ ತನ್ನ ಪಟ್ಟು ಬಿಗಿ ಹಿಡಿದು ನಿಂತಿದೆ. ಯೋಜನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರಗೊಂಡಿದ್ದು, ಕೆಲವು ಸಂಘಟನೆಗಳು ಸೋಮವಾರದಂದು ‘ಭಾರತ ಬಂದ್’ಗೆ ಕರೆ ನೀಡಿವೆ. ಈ ಹಿನ್ನಲೆಯಲ್ಲಿ ದೇಶದಾದ್ಯಂತ 500 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
- ಸಶಸ್ತ್ರ ಪಡೆಗಳಿಗೆ ‘ಅಗ್ನಿಪಥ್’ ಅಲ್ಪಾವಧಿಯ ನೇಮಕಾತಿ ಯೋಜನೆ ವಿರೋಧಿಸಿ, ಕಳೆದ ಐದು ದಿನಗಳಿಂದ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಗಲಭೆ ನಡೆಸಿದ್ದರಿಂದ ರೈಲ್ವೆ ಇಲಾಖೆಗೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ. ಹೀಗಾಗಿ ದೇಶದ ಕೆಲವು ಭಾಗಗಳಲ್ಲಿ ಭಾರತ್ ಬಂದ್ ಕರೆಯನ್ನು ಗಮನದಲ್ಲಿಟ್ಟುಕೊಂಡು ಇಂದು 500 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others - ಬಂದ್ ಪರಿಣಾಮವಾಗಿ ದೆಹಲಿಯ ಕೆಲವು ಭಾಗಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ದೆಹಲಿ ಮತ್ತು ಅದರ ಗಡಿ ಪ್ರದೇಶಗಳಲ್ಲಿ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ದೆಹಲಿ-ನೋಯ್ಡಾ ಡೈರೆಕ್ಟ್ ಫ್ಲೈವೇ ಮತ್ತು ದೆಹಲಿ-ಗುರ್ಗಾಂವ್ ಎಕ್ಸ್‌ಪ್ರೆಸ್‌ವೇನಲ್ಲಿ ಭಾರಿ ಟ್ರಾಫಿಕ್ ಜಾಮ್ ಕಂಡುಬಂದಿದೆ. ಕಾನೂನು ಸುವ್ಯವಸ್ಥೆ ಹದಗೆಡಿಸುವ ಯಾವುದೇ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ‘ಅಗ್ನಿವೀರರಿಗೆ ಬಿಜೆಪಿ ಕಚೇರಿಯಲ್ಲಿ ಗಾರ್ಡ್ ಕೆಲಸ’: ಬಿಜೆಪಿ ನಾಯಕ ವಿಜಯವರ್ಗಿಯ ವಿವಾದಿತ ಹೇಳಿಕೆಗೆ ಖಂಡನೆ
- ‘ಅಗ್ನಿಪಥ’ ಯೋಜನೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸೇನಾ ಉದ್ಯೋಗಾಕಾಂಕ್ಷಿಗಳನ್ನು ಬೆಂಬಲಿಸಿ ಕಾಂಗ್ರೆಸ್ ನಾಯಕರು ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ‘ಸತ್ಯಾಗ್ರಹ’ ನಡೆಸಿದ್ದಾರೆ. ಕನ್ನಾಟ್ ಪ್ಲೇಸ್ ಬಳಿಯ ಶಿವಾಜಿ ಸೇತುವೆ ರೈಲು ನಿಲ್ದಾಣದಲ್ಲಿ ರೈಲನ್ನು ತಡೆದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ.
- ಹರಿಯಾಣದಲ್ಲಿ, ಸೇನಾ ಉದ್ಯೋಗಾಕಾಂಕ್ಷಿಗಳ ಗುಂಪೊಂದು ಫತೇಹಾಬಾದ್‌ನ ಲಾಲ್ ಬಟ್ಟಿ ಚೌಕ್ ಬಳಿ ರಸ್ತೆ ತಡೆ ನಡೆಸಿದ್ದಾರೆ. ರೋಹ್ಟಕ್ ಜಿಲ್ಲೆಯ ರಸ್ತೆಗಳಲ್ಲಿ ಕೂಡಾ ಪ್ರತಿಭಟನೆ ನಡೆಸಲಾಗಿದೆ. ಕೇರಳ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದ ಹಲವು ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಫರಿದಾಬಾದ್ ಮತ್ತು ನೋಯ್ಡಾದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳ ಸಭೆಯನ್ನು ನಿಷೇಧಿಸುವ ನಿಷೇಧಾಜ್ಞೆಗಳನ್ನು ವಿಧಿಸಲಾಗಿದೆ.
- ಶಾಂತಿಗೆ ಧಕ್ಕೆ ತರುವಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
- ಪಂಜಾಬ್‌ನಲ್ಲಿ, ಯೋಜನೆಯ ಬಗ್ಗೆ ಪ್ರಚೋದನೆ ನೀಡುವ ಮಾಹಿತಿಯನ್ನು ಬರೆಯುವ ಅಥವಾ ಹರಡುವ ಸಾಮಾಜಿಕ ಮಾಧ್ಯಮ ಗುಂಪುಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಪೊಲೀಸರನ್ನು ಕೇಳಲಾಗಿದೆ.ಇದನ್ನೂ ಓದಿ: ಅಗ್ನಿವೀರರಿಗೆ ‘ಬಟ್ಟೆ ಒಗೆಯುವ & ಕ್ಷೌರ ತರಬೇತಿ’ ನೀಡುತ್ತೇವೆ: ಒಕ್ಕೂಟ ಸರ್ಕಾರದ ಸಚಿವ
- ಬಿಹಾರ ಸರ್ಕಾರವು ದಾಳಿಗೊಳಗಾಗಬಹುದು ಎಂದು ಪರಿಗಣಿಸಲಾದ ಪಕ್ಷದ ಕಚೇರಿಗಳಿಗೆ ಭದ್ರತೆಯನ್ನು ಹೆಚ್ಚಿಸಿದೆ. ಸದ್ಯಕ್ಕೆ 20 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ.
- ಜಾರ್ಖಂಡ್‌ನಲ್ಲಿ, ‘ಅಗ್ನಿಪಥ್’ ಯೋಜನೆ ವಿರುದ್ಧ ಪ್ರತಿಭಟನೆಯ ನಡುವೆ ಇಂದು ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ.
- ಭಾನುವಾರದಂದು ಸೇನೆಯ ಮೂರು ಸೇವೆಗಳು ‘ಅಗ್ನಿಪಥ್’ ಯೋಜನೆಯಡಿ ದಾಖಲಾತಿಗಳ ವಿಶಾಲ ವೇಳಾಪಟ್ಟಿಯನ್ನು ಹೊರತಂದಿವೆ. ಜೊತೆಗೆ ಹಿಂಸಾಚಾರ ಮತ್ತು ಬೆಂಕಿ ಹಚ್ಚುವುದರಲ್ಲಿ ತೊಡಗಿರುವವರನ್ನು ಸೇರ್ಪಡೆಗೊಳಿಸಲಾಗುವುದಿಲ್ಲ ಎಂದು ಎಚ್ಚರಿಸಿದೆ.
- ಸಶಸ್ತ್ರ ಪಡೆಗಳಲ್ಲಿ ನಾಲ್ಕು ವರ್ಷಗಳ ಅಧಿಕಾರಾವಧಿಯ ನಂತರ ‘ಅಗ್ನಿಪಥ್’ ನೇಮಕಾತಿಗಳಿಗೆ ಉದ್ಯೋಗಗಳಲ್ಲಿ ಹೊಸ 10% ಕೋಟಾಗಳನ್ನು ನೀಡುವ ಬಗ್ಗೆ ಶನಿವಾರ ಗೃಹ ಮತ್ತು ರಕ್ಷಣಾ ಸಚಿವಾಲಯಗಳು ಭರವಸೆ ನೀಡಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.ಇದನ್ನೂ ಓದಿ: Explainer: ಏನಿದು ಅಗ್ನಿಪಥ್ ಯೋಜನೆ? ಯಾಕಿಷ್ಟು ವಿರೋಧ?
- ಒಕ್ಕೂಟ ಸರ್ಕಾರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ನೇಮಕಾತಿಗಾಗಿ ಅಗ್ನಿವೀರ್‌ಗಳಿಗೆ ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ಮೀರಿ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲು ಗೃಹ ಸಚಿವಾಲಯ ನಿರ್ಧರಿಸಿದೆ.
- ಇದಕ್ಕೂ ಮೊದಲು, ಪ್ರತಿಭಟನಾಕಾರರನ್ನು ಸಮಾಧಾನಪಡಿಸುವ ಉದ್ದೇಶದಿಂದ ಒಕ್ಕೂಟ ಸರ್ಕಾರವು 2022 ಕ್ಕೆ ಒಂದು ಬಾರಿಯ ಕ್ರಮವಾಗಿ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ಹೆಚ್ಚಿಸಿತ್ತು.


