Homeಚಳವಳಿಭಾರತ್ ಬಂದ್: ಆಂಧ್ರಪ್ರದೇಶ, ಪಂಜಾಬ್ ಪೂರ್ಣ ಸ್ತಬ್ದ - ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ

ಭಾರತ್ ಬಂದ್: ಆಂಧ್ರಪ್ರದೇಶ, ಪಂಜಾಬ್ ಪೂರ್ಣ ಸ್ತಬ್ದ – ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ

- Advertisement -

ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಕಳೆದ ನಾಲ್ಕು ತಿಂಗಳುಗಳಿಂದ ಪ್ರತಿಭಟಿಸುತ್ತಿರುವ ರೈತರು ದೆಹಲಿಯ ಗಡಿಯಲ್ಲಿ ಹೋರಾಟವನ್ನು ತೀವ್ರಗೊಳಿಸಲು ಶುಕ್ರವಾರ (ಮಾರ್ಚ್ 26) ಸಂಪೂರ್ಣ ಭಾರತ್ ಬಂದ್ ನಡೆಸುತ್ತಿದ್ದಾರೆ.

ಬೆಳಗ್ಗೆ 6 ಗಂಟೆಗೆ ಆರಂಭವಾದ ಸಂಪೂರ್ಣ ಭಾರತ್ ಬಂದ್ ಕರೆಗೆ ದೇಶದ ಹಲವು ಭಾಗಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶಾದ್ಯಂತ ರೈತರು ಬಂದ್ ಭಾಗವಾಗಿ ಪ್ರತಿಭಟನೆಗೆ ಕರೆ ನೀಡಿದ್ದು, 12 ಗಂಟೆಗಳ ಕಾಲ ನಡೆಯಲಿರುವ ಬಂದ್ ಪರಿಣಾಮ ರೈಲು ಸಂಚಾರ ಅಸ್ತವ್ಯಸ್ಥವಾಗಿದೆ. ರಸ್ತೆ ಸಂಚಾರವನ್ನು ತಡೆ ಹಿಡಿಯಲಾಗಿದೆ.

ದೆಹಲಿಯಿಂದ ಚಂಡೀಗಢ, ಅಮೃತಸರ, ಕಲ್ಕಾಗೆ ಹೋಗುವ ಕೆಲವು ರೈಲುಗಳನ್ನು ಇಂದು ಬೆಳಿಗ್ಗೆಯೇ ರದ್ದುಪಡಿಸಲಾಗಿದೆ. ಹರಿಯಾಣ ರಾಜ್ಯದ ಅಂಬಾಲದ ಜಿಟಿ ರೋಡ್ ಮತ್ತು ಶಹಪುರ ರೈಲು ನಿಲ್ದಾಣದ ಹಳಿಗಳ ಮೇಲೆ ಕುಳಿತ ಪ್ರತಿಭಟನಾಕಾರರು ರೈಲುಗಳನ್ನು ತಡೆದಿದ್ದಾರೆ. ಅಮೃತಸರ ಸೇರಿದಂತೆ ಪಂಜಾಬ್‌ನ ಹಲವು ನಗರಗಳಲ್ಲಿ ರೈಲುಗಳ ಸಂಚಾರಕ್ಕೆ ತಡೆಯೊಡ್ಡಲಾಗಿದೆ.

ಇದನ್ನೂ ಓದಿ: ರೈತ ಮುಖಂಡ ರಾಕೇಶ್‌ ಟಿಕಾಯತ್‌ ವಿರುದ್ದ FIR: ಕೇಸು ರದ್ದು ಮಾಡಿ ಎಂದು ಕುಮಾರಸ್ವಾಮಿ

ದೆಹಲಿಯ ಗಾಜಿಪುರ ಮತ್ತು ಸಿಂಘು ಗಡಿಗಳಲ್ಲಿ ಹೋರಾಟ ನಡೆಸುತ್ತಿರುವ ರೈತರು ನೃತ್ಯ ಮಾಡುವ ಮೂಲಕ ವಿನೂತನ ಪ್ರತಿಭಟನೆ ಕೈಗೊಂಡಿದ್ದಾರೆ.

ಕೆಲವು ಭಾಗಗಳಲ್ಲಿ ರಸ್ತೆ ಸಂಚಾರಕ್ಕೂ ತೊಂದರೆಯಾಗಿದೆ. ರಾಷ್ಟ್ರ ರಾಜಧಾನಿ ಗಾಜಿಪುರ ಗಡಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ -9 ರಲ್ಲಿ ರಸ್ತೆ ತಡೆ ನಡೆದಿದೆ. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ.

ಗುರುವಾರ ವಿಡಿಯೋ ಸಂದೇಶದಲ್ಲಿ ಮಾತನಾಡಿದ್ದ ರೈತ ಮುಖಂಡ ದರ್ಶನ್ ಪಾಲ್ “ಪ್ರತಿಭಟನಾ ನಿರತ ರೈತರು ತರಕಾರಿಗಳು ಮತ್ತು ಹಾಲಿನ ಸರಬರಾಜನ್ನು ನಿಲ್ಲಿಸುತ್ತಾರೆ. ಪ್ರತಿಭಟನಾ ನಿರತ ರೈತರು ಶಾಂತಿಯುತವಾಗಿರಬೇಕು ಮತ್ತು ಭಾರತ್ ಬಂದ್  ಸಮಯದಲ್ಲಿ ಯಾವುದೇ ರೀತಿಯ ಕಾನೂನುಬಾಹಿರ ಕೃತ್ಯ ಮತ್ತು ಸಂಘರ್ಷಗಳಲ್ಲಿ ಭಾಗಿಯಾಗದಂತೆ” ಮನವಿ ಮಾಡಿದರು.

“ರೈತರು ವಿವಿಧ ಸ್ಥಳಗಳಲ್ಲಿ ರೈಲು ಸಂಚಾರ ನಿರ್ಬಂಧಿಸುತ್ತಾರೆ. ಭಾರತ್ ಬಂದ್ ಸಮಯದಲ್ಲಿ ಮಾರುಕಟ್ಟೆಗಳು ಮತ್ತು ಸಾರಿಗೆ ಸೇವೆಗಳನ್ನು ನಿಲ್ಲಿಸಲಾಗುವುದು ಎಂದು ಹಿರಿಯ ರೈತ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್ ತಿಳಿಸಿದ್ದರು.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾರತ್ ಬಂದ್ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. “ರೈತರ ಆಂದೋಲನ ದೇಶಹಿತವಾಗಿದ್ದು ಶಾಂತಿಪೂರ್ಣವಾಗಿರಲಿದೆ” ಎಂದಿದ್ದಾರೆ.

ಇದನ್ನೂ ಓದಿ: ದಶಕಗಳಿಂದ ದುಡಿದರೂ ಕನಿಷ್ಟ ಭದ್ರತೆಯಿಲ್ಲ: ಕೂಲಿ ನೇಕಾರ ಕಾರ್ಮಿಕರ ಗೋಳು ಕೇಳುವವರ್ಯಾರು?

Bharat Bandh: All the services come to standstill across Andhra Pradesh
PC:The Hans India

ರೈತರ ಕರೆಗೆ ಒಗ್ಗಟ್ಟು ಸೂಚಿಸಿರುವ ಆಂಧ್ರಪ್ರದೇಶದಲ್ಲಿ ಭಾರತ್ ಬಂದ್ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ಆಂಧ್ರಪ್ರದೇಶ ಸರ್ಕಾರ, ವೈಎಸ್‌ಆರ್‌ಸಿಪಿ, ಟಿಡಿಪಿ ಮತ್ತು ಎಡಪಕ್ಷಗಳು ಬಂದ್‌ಗೆ ಬೆಂಬಲ ನೀಡಿದ್ದು, ಎಲ್ಲಾ ಜಿಲ್ಲೆಗಳಲ್ಲಿನ ಆರ್‌ಟಿಸಿ ಬಸ್‌ಗಳು ಡಿಪೋಗಳಿಗೆ ಸೀಮಿತವಾಗಿವೆ ನಿಂತಿವೆ. ಕಾಯ್ದೆಗಳ ವಿರುದ್ಧ ಮತ್ತು ವೈಜಾಗ್ ಸ್ಟೀಲ್ ಪ್ಲಾಂಟ್ ಖಾಸಗೀಕರಣ ವಿರೋಧಿಸಿ ಕೇಂದ್ರದ ವಿರುದ್ಧ ಎಡ ಪಕ್ಷಗಳ ಸದಸ್ಯರು ಇಂದು ಮಡಿಲಪಲಂ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಭಾರತ ಬಂದ್ ಬೆಂಬಲಿಸಿ ರಾಜ್ಯದಲ್ಲಿಯೂ ಮೂರು ಕಾಯ್ದೆಗಳ ಶವಯಾತ್ರೆಗೆ ಕರೆ ನೀಡಲಾಗಿತ್ತು. ಭಾರತ್ ಬಂದ್ ಬೆಂಬಲಿಸಿ ಬೆಂಗಳೂರಿನಲ್ಲಿ ಮೂರು ಕೃಷಿ ಕಾಯ್ದೆಗಳ ಶವಯಾತ್ರೆ ಮಾಡಲು ಟೌನ್ ಹಾಲ್ ಮುಂದೆ ಸಜ್ಜಾಗಿದ್ದ ಜನಶಕ್ತಿ ಯುವ ಹೋರಾಟಗಾರರಾದ ರವಿ ಮೋಹನ್, ಗಜೇಂದ್ರ, ರಾಜಶೇಖರ ಅಂಗಡಿ ಇವರನ್ನು ಪೊಲೀಸರು ಬಂಧಿಸಿದ್ದಾರೆ.

ನಂತರ ರೈತ ನಾಯಕಿ ಕವಿತ ಕುರುಗಂಟಿ ಸೇರಿದಂತೆ ಕರ್ನಾಟಕ ರಾಜ್ಯ ರೈತ ಸಂಘ, ಸ್ವರಾಜ್ ಇಂಡಿಯಾ ಮತ್ತು  ಕನ್ನಡಪರ ಸಂಘಟನೆಗಳ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೆಕು, ಎಂಎಸ್‌ಪಿ ಮತ್ತು ಬೆಳೆ ಸಂಗ್ರಹಣೆ ಕುರಿತು ಕಾನೂನು ಮಾಡಬೇಕು, ರೈತರ ವಿರುದ್ಧದ ಎಲ್ಲಾ ಪೊಲೀಸ್ ಪ್ರಕರಣಗಳನ್ನು ರದ್ದುಗೊಳಿಸಬೇಕು, ವಿದ್ಯುತ್ ಬಿಲ್ ಮತ್ತು ಮಾಲಿನ್ಯ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಡೀಸೆಲ್, ಪೆಟ್ರೋಲ್ ಮತ್ತು ಅನಿಲದ ಬೆಲೆಯನ್ನು ಕಡಿಮೆ ಮಾಡಬೇಕು ಎನ್ನುವ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಭಾರತ್ ಬಂದ್ ಹಮ್ಮಿಕೊಳ್ಳಲಾಗಿದೆ ಎಂದು ರೈತ ಒಕ್ಕೂಟ ಹೇಳಿದೆ.


ಇದನ್ನೂ ಓದಿ: ‘ಭಾರತೀಯ ಸೇನೆಯಲ್ಲಿ ಲಿಂಗ ತಾರತಮ್ಯ’ – ಸರಿಪಡಿಸಲು ಸುಪ್ರೀಂ ಆದೇಶ

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ಪರೇಡ್‌ ಮೈದಾನ ಸಜ್ಜು, ಸಾರ್ವಜನಿಕರಿಗಿಲ್ಲ ಪ್ರವೇಶ

0
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಬೆಂಗಳೂರಿನ  ಮಹಾತ್ಮ ಗಾಂಧಿ ರಸ್ತೆಯ ಮಾಣಿಕ್ ಷಾ ಪರೇಡ್‌ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ಗೆ ಸಾರ್ವಜನಿಕರಿಗೆ ಅವಕಾಶ ನೀಡಿಲ್ಲ. ಆಹ್ವಾನ ಪತ್ರಗಳು ಮತ್ತು ಪಾಸ್ ಹೊಂದಿರುವವರಿಗೆ ಮಾತ್ರ ಪರೇಡ್‌ನಲ್ಲಿ...
Wordpress Social Share Plugin powered by Ultimatelysocial
Shares