ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದ ಜನತೆಗೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದು, ಭಾರತ ಮಾತೆಯನ್ನು ಪ್ರತಿಯೊಬ್ಬ ಭಾರತೀಯನ ಧ್ವನಿ ಎಂದು ಕರೆದಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್(X)(ಟ್ವಿಟ್ಟರ್) ನಲ್ಲಿ ಈ ಕುರಿತು ಬರೆದುಕೊಂಡಿರುವ ರಾಹುಲ್ ಗಾಂಧಿ, ಭಾರತ ಮಾತೆ ಪ್ರತಿಯೊಬ್ಬ ಭಾರತೀಯನ ಧ್ವನಿ, ಎಲ್ಲಾ ದೇಶವಾಸಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಹೇಳಿದ್ದಾರೆ.
ಇದೇ ವೇಳೆ ಭಾರತ್ ಜೋಡೋ ಯಾತ್ರೆಯ ಅನುಭವವನ್ನು ಕೂಡ ಹಂಚಿಕೊಂಡ ಕಾಂಗ್ರೆಸ್ ನಾಯಕ, ಸಮುದ್ರದ ಅಂಚಿನಲ್ಲಿ 145 ದಿನಗಳ ನಡಿಗೆಯನ್ನು ಪ್ರಾರಂಭಿಸಿ ಕಾಶ್ಮೀರದ ಹಿಮವನ್ನು ತಲುಪಿದ್ದೇನೆ ಎಂದು ಹೇಳಿದರು.
ನಾನು ನನ್ನ ಮನೆ ಎಂದು ಕರೆಯುವ ನನ್ನ ಈ ನೆಲದಲ್ಲಿ ನಾನು ಕಳೆದ ಬಾರಿ 145 ದಿನ ನಡೆದಿದ್ದೇನೆ. ಸಮುದ್ರದ ಹಂಚಿನಿಂದ ನನ್ನ ನಡೆಯನ್ನು ಪ್ರಾರಂಭಿಸಿ, ಬಿಸಿಲು, ಧೂಳು ಮಳೆಗೆ ನಡೆದಿದ್ದೇನೆ.ಕಾಡುಗಳು, ಪಟ್ಟಣಗಳು ಮತ್ತು ಬೆಟ್ಟಗಳ ಮೂಲಕ, ನಾನು ನನ್ನ ಪ್ರೀತಿಯ ಕಾಶ್ಮೀರದ ಮೃದುವಾದ ಹಿಮವನ್ನು ತಲುಪುವವರೆಗೆ ನಡೆದಿದ್ದೇನೆ ಎಂದು ಅವರು ಹೇಳಿದರು.
ತಮ್ಮ ಯಾತ್ರೆಯನ್ನು ಮುಂದುವರೆಸುವಾಗ ಅವರು ಎದುರಿಸಿದ ನೋವು ಮತ್ತು ಯಾತ್ರೆಯನ್ನು ಮುಂದುವರೆಸಲು ಸಹಾಯ ಮಾಡಿದ ಪ್ರೇರಣೆಯನ್ನೂ ಅವರು ಪ್ರಸ್ತಾಪಿಸಿದರು.
ಭಾರತ್ ಜೋಡೋ ಯಾತ್ರೆಯ ವೇಳೆ ಕೆಲವೇ ದಿನಗಳಲ್ಲಿ ಕಾಲು ನೋವು ಬಂದಿದೆ. ನನ್ನ ಹಳೆಯ ಮೊಣಕಾಲಿನ ಗಾಯ, ಕೆಲವು ದಿನಗಳ ಬಳಿಕ ಯಾತ್ರೆಯಲ್ಲಿ ನನ್ನ ಫಿಸಿಯೋಥೆರಫಿಸ್ಟ್ ನಮ್ಮೊಂದಿಗೆ ಸೇರಿಕೊಂಡರು, ಅವರು ಬಂದು ನನಗೆ ಸಲಹೆ ನೀಡಿದರು. ನೋವು ಆದರೂ ಮುಂದುವರಿದಿತ್ತು. ಪ್ರತಿ ಬಾರಿ ನಾನು ನಿಲ್ಲಿಸುವ ಬಗ್ಗೆ ಯೋಚಿಸಿದಾಗ, ಯಾರಾದರೂ ಬಂದು ನನಗೆ ಮುಂದುವರಿಯಲು ಶಕ್ತಿಯನ್ನು ಉಡುಗೊರೆಯಾಗಿ ನೀಡುತ್ತಿದ್ದರು ಎಂದು ಅವರು ಹೇಳಿದರು.
ಇದನ್ನು ಓದಿ; ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ NEP ರದ್ದು: ಸಿಎಂ ಸಿದ್ದರಾಮಯ್ಯ


