Homeಕರ್ನಾಟಕಸ್ಲಂ ನಲ್ಲಿ ಅರಳಿದ `ಭಾವೈಕ್ಯತಾ ವೇದಿಕೆ’

ಸ್ಲಂ ನಲ್ಲಿ ಅರಳಿದ `ಭಾವೈಕ್ಯತಾ ವೇದಿಕೆ’

ಅಬ್ದುಲ್ ಅವರ ಇಡೀ ಕುಟುಂಬವೇ ರಂಗಭೂಮಿಯಲ್ಲಿ ಸಕ್ರಿಯವಾಗಿದೆ. ಹೀಗೆ ಮುಸ್ಲೀಂ ಧರ್ಮದ ಒಂದು ಪಂಗಡವಾದ ಪಿಂಜಾರ ಸಮುದಾಯದ ಇಡೀ ಕುಟುಂಬವೇ ರಂಗದ ಮೇಲೆ ಕಾಣಿಸಿಕೊಳ್ಳುವುದು ಕೂಡ ವಿಶಿಷ್ಠ ಸಂಗತಿಯಾಗಿದೆ.

- Advertisement -
- Advertisement -

| ಅರುಣ್ ಜೋಳದಕೂಡ್ಲಿಗಿ |

ಹೊಸಪೇಟೆಯ ಸಿದ್ಧಲಿಂಗಪ್ಪ ಚೌಕಿಯ 2ನೇ ಕ್ರಾಸ್ ಕೊನೆಯ ಅರಳಿ ಮರದ ಹತ್ತಿರವಿರುವ `ಭಾವೈಕ್ಯತಾ ವೇದಿಕೆ’ಯ ಸಂತ ಶಿಶುನಾಳ ಶರೀಫ ರಂಗಮಂದಿರವಿದೆ. ಇಂಥದ್ದೊಂದು ಕೊಳಗೇರಿಯಲ್ಲಿ ಅರಳಿದ `ಭಾವೈಕ್ಯತಾ ವೇದಿಕೆ’ ರೂಪುಗೊಂಡದ್ದು ಹೇಗೆ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡರೆ, ವೇದಿಕೆಯನ್ನು ರೂಪಿಸುವಲ್ಲಿ ತನ್ನನ್ನೇ ತೇಯ್ದುಕೊಂಡ ಪಿ.ಅಬ್ದುಲ್ ಅವರು ತಮ್ಮದೇ ಆತ್ಮಕಥನದ ಮುಖ್ಯ ಎಳೆ ಎಂಬಂತೆ `ಪಯಣ’ ದ ಹೆಜ್ಜೆಗಳನ್ನು ವಿವರಿಸುತ್ತಾರೆ. ಇದು ವೇದಿಕೆಯ ಆತ್ಮಕಥನದಂತೆಯೂ ಕೇಳಿಸತೊಡಗುತ್ತದೆ.

ಅಬ್ದುಲ್ ಅವರು `ಪಿಂಜಾರ’ ಸಮುದಾಯದವರು. ಹತ್ತಿಯನ್ನು ಹದಗೊಳಿಸಿ ದಿಂಬು, ಗಾದಿಯನ್ನು ಹೊಲೆಯುವ `ಪಿಂಜಾರ’ ಸಮುದಾಯ ಮೂಲತಃ ಧಾರ್ಮಿಕ ಸಂಕರತೆಯ ಸೃಷ್ಠಿ. ಅಂತೆಯೇ ಇವರು ಹಿಂದೂಮುಸ್ಲಿಂ ಬೆಸುಗೆಯ ಸಾಂಸ್ಕೃತಿಕ ವಕ್ತಾರರಂತೆ ಕಾಣುತ್ತಾರೆ. ಹಾಗಾಗಿ ಮುಸ್ಲಿಂ ಧರ್ಮದಲ್ಲಿ ಪಿಂಜಾರರು ಒಂದು ಬಗೆಯಲ್ಲಿ ಅಸ್ಪೃಶ್ಯರು. ಮೂಲತಃ ಎರಡು ಸಂಗತಿಗಳನ್ನು ಹೊಲೆದು ಜೋಡಿಸುವ ಈ ಸಮುದಾಯ ಎರಡು ಧರ್ಮಗಳ ಜನರನ್ನು `ಬಂದುತ್ವ’ `ಸಾಮರಸ್ಯ’ದ ನೆಲೆಯಲ್ಲಿ ಹೊಲೆಯುವ ಕೆಲಸವನ್ನೂ ಮಾಡುತ್ತಿದೆ. ಈ ಬಗೆಯ ಸಮುದಾಯಿಕ ಪ್ರಜ್ಞೆಯ ಉತ್ಪನ್ನವಾಗಿಯೂ `ಭಾವೈಕ್ಯತಾ ವೇದಿಕೆ’ ರೂಪುಗೊಂಡಿದೆ.

ಉತ್ತಮ ಪರಿಸರದ ಭಾಗವಾಗಿ ಅಬ್ದುಲ್ ಅವರ ಬಾಲ್ಯ ರೂಪುಗೊಂಡಿತು. ಆಗಲೆ ಅವರ ಒಳಗೊಂದು ಸೌಹಾರ್ಧದ ಕನಸಿನ ಕೂಸು ಮೊಳಕೆಯೊಡೆಯಿತು. ರಂಗಭೂಮಿಯ ಜತೆಗಿನ ನಂಟು ಗಾಢವಾಯಿತು, ಹೋರಾಟದ ಪ್ರಾಥಮಿಕ ಪಾಠವೆಂಬಂತೆ ಗೋಕಾಕ್ ಚಳವಳಿಯಲ್ಲಿ ಉಪವಾಸ ಕೈಗೊಂಡು ಜೈಲುವಾಸವನ್ನೂ ಅನುಭವಿಸಿದರು. ಹೀಗೆ ಅಬ್ದುಲ್ ಅವರಿಗೆ ಪ್ರೇರಕ ಶಕ್ತಿಯಾಗಿದ್ದ ಹೆಚ್.ಇಬ್ರಾಹಿಂ ಸಾಹೇಬರು ಆಗಸ್ಟ್ 1, 2014 ರಲ್ಲಿ ದೇಹತ್ಯಜಿಸಿದರು. ಆ ಹೊತ್ತಿಗೆ ಅವರ ಸೌಹಾರ್ಧದ ಕನಸು ಭಾವೈಕ್ಯತಾ ವೇದಿಕೆ 23 ವರ್ಷ ಪೂರೈಸಿ ಬೆಳ್ಳಿಹಬ್ಬದತ್ತ ಹೆಜ್ಜೆ ಇಟ್ಟಿತ್ತು.

ಇಬ್ರಾಹಿಂ ಸಾಹೇಬ್ರು

ಹೀಗೆ ಅಬ್ದುಲ್ ಅವರು ಇಂತಹ ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದು, ಪದವಿವರೆಗೂ ಓದಿ ಕ್ರಾಂತಿಯ ಕನಸೊತ್ತು, ಸಮಾಜವನ್ನು ಬದಲಿಸಬೇಕೆಂಬ ಉತ್ಸಾಹದಲ್ಲಿ ತಾನು ಹುಟ್ಟಿದ ಇದೇ ಹೊಸಪೇಟೆಯ ಸಿದ್ದಲಿಂಗಪ್ಪ ಚೌಕಿಗೆ ವಾಪಾಸಾದರು. ಮಹಿಳೆಯರ ಕಳ್ಳ ಸಾಗಣೆ ವಿರುದ್ಧ ಸಮುದಾಯದವರು ಹೇಳಿದ ದೂರನ್ನು ದಾಖಲಿಸಿದ್ದಕ್ಕೆ ಹಲ್ಲೆಗೆ ಒಳಗಾದರು, ಊರು ಬಿಟ್ಟು ಓಡಿದರು. ಸುಳ್ಳು ಕೇಸುಗಳ ಜಾಲದಲ್ಲಿ ಸಿಲುಕಿ ಕೆಲಕಾಲ ತಲೆಮರೆಸಿಕೊಂಡರು, ಇಷ್ಟಾಗಿಯೂ ಇದೇ ಚೌಕಿಯಲ್ಲಿ ಏನನ್ನಾದರೂ ಮಾಡಬೇಕೆಂದು ಪಣತೊಟ್ಟರು.

1991 ರಲ್ಲಿ ಹೊಸಪೇಟೆ ಭಾಗದಲ್ಲಿ ನಡೆದ ಕೋಮುಗಲಬೆಯಿಂದಾಗಿ ಇಡೀ ನಗರ ಮತ್ತು ಸುತ್ತಮುತ್ತಣ ಹಳ್ಳಿಗಳಲ್ಲಿ ಆತಂಕದ ಛಾಯೆಯಿತ್ತು. ಸೌಹಾರ್ಧದಿಂದ ಬದುಕುವ ಜನಬದುಕಿನಲ್ಲಿ ದೊಡ್ಡದೊಂದು ಗಾಯವಾಗಿ ನೋಯತೊಡಗಿತ್ತು. ಇಂತಹದ್ದೊಂದು ಗಾಯಕ್ಕೆ ಮುಲಾಮು ಹುಡುಕುವ ಯೋಚನೆ ಅಬ್ದುಲ್ ಅವರನ್ನು ನಿದ್ದೆಗೆಡಿಸಿತು. ಫಲವಾಗಿ ಹೊಸಪೇಟೆಯ ಜಂಬಯ್ಯ ನಾಯಕ, ನಾರಾಯಣ ಭಟ್, ಕಲ್ಲಂಭಟ್, ಪರುಷರಾಮ ಕಲಾಲ್ ಮೊದಲಾದವರು ಸೇರಿ ಚರ್ಚಿಸಿದರು. ಹಿಂದು ಮುಸ್ಲಿಂ ಸೌಹಾರ್ಧತೆಯ ಕುರುಹಾದ ಮೊಹರಂ ಹಾಡುಗಳ ಸ್ಪರ್ಧೆಯನ್ನು ಆಯೋಜಿಸಿದರು. ಈ ಸಮಾವೇಶಕ್ಕೆ ಹೆಸರಿಡುವ ಚರ್ಚೆ ಬಂದಾಗ ಜಂಬಯ್ಯನಾಯಕ ಸೂಚಿಸಿದ `ಭಾವೈಕ್ಯತೆ’ ಎನ್ನುವ ಹೆಸರು ಅಂತಿಮವಾಯ್ತು. ಮುಂದೆ ಅದೇ ಹೆಸರಿನ ವೇದಿಕೆಯೊಂದು ರೂಪುಗೊಂಡಿತು. ಅಬ್ದುಲ್ ವೇದಿಕೆಯ ಖಜಾಂಚಿಯಾದರು. ಇದೀಗ ಇಪ್ಪತ್ತೇಳರ ಹರೆಯದಲ್ಲಿ ವೇದಿಕೆ ತನ್ನದೇ ಆದ ಛಾಪು ಮೂಡಿಸುತ್ತಿದೆ.

ಒಮ್ಮೆ ಚೌಕಿಯಲ್ಲಿ ಹೆಣ್ಣೊಬ್ಬಳ ಅಸಹಜ ಸಾವು ಕೊಲೆಯಾಗಿರಬಹುದೆಂಬ ಪಿಸುಮಾತುಗಳು ಧ್ವನಿಗೂಡಿದಾಗ, ಈ ಘಟನೆ ಅಬ್ದುಲ್ರನ್ನು ಕಾಡುತ್ತದೆ. ಕೂಡಲೆ ತಮ್ಮ ಓಣಿಯ ಹುಡುಗರಿಂದ ಜಾಗೃತಿ ಮೂಡಿಸಲು ಬೀದಿ ನಾಟಕ ರೂಪಿಸುತ್ತಾರೆ. ಅದು ಮನೆಯಿಂದ ಮನೆಗೆ ಹಬ್ಬುತ್ತದೆ. `ಈ ಸಾವು ನ್ಯಾಯವೇ? ಎನ್ನುವ ಪ್ರತಿಧ್ವನಿಯನ್ನು ಮೂಡಿಸುತ್ತದೆ. ಪರಿಣಾಮವಾಗಿ ಇಡೀ ಚೌಕಿಯಲ್ಲಿ ಮಹಿಳೆಯ ಸಾವಿನ ಬಗ್ಗೆ ತಳೆದಿದ್ದ ಮೌನದ ಕಟ್ಟೊಡೆದು, ಪೊಲೀಸರಿಗೆ ದೂರು ಕೊಡಲು ಜನರು ಮುಂದಾಗುತ್ತಾರೆ. ಈ ಪ್ರಯೋಗ ಹೆಣ್ಣಿನ ದಾರುಣ ಅಂತ್ಯಕ್ಕೆ ಹೋರಾಟದ ಆಯಾಮ ನೀಡುತ್ತದೆ. ಈ ಘಟನೆಯೇ ಭಾವೈಕ್ಯತಾ ವೇದಿಕೆಯ ಬಹುಮುಖ್ಯ ಸಂವಹನದ ಗುರುತಾಗಿ `ಬೀದಿನಾಟಕ’ ಮುನ್ನಲೆಗೆ ಬರುತ್ತದೆ.

ಪಿ. ಅಬ್ದುಲ್ಲಾ

ಈತನಕದ ವೇದಿಕೆಯ ಪಯಣದಲ್ಲಿ ಅಭಿನಯಗೊಂಡ ಬೀದಿ ನಾಟಕಗಳ ಸಂಖ್ಯೆ ದೊಡ್ಡದಿದೆ. ಮುಖ್ಯವಾದ ಸಂಗತಿಯೆಂದರೆ ಈ ಯಾವುದೇ ನಾಟಕಗಳು ಕಲೆಗಾಗಿ ಕಲೆ ಎನ್ನುವಂತೆ ಹುಟ್ಟಿದವುಗಳಲ್ಲ. ಬದಲಾಗಿ ಆಯಾ ಕಾಲದ ಬಿಕ್ಕಟ್ಟಿನ ಹೊಟ್ಟೆಯೊಡೆದು ಜೀವತಳೆದವುಗಳು. ಅವುಗಳೆಂದರೆ, ವಿಸರ್ಜನೆ, ಹುಡುಗಿ ಓದಲೇಬೇಕು, `ಕಾಲರಾ’ `ನಾವು ಮನುಜರು’ `ಈ ನೆಲ-ಈ ಜಲ’ `ಅರಿವು’ `ಜೀತಪದ್ದತಿ’ `ಭಾವೈಕ್ಯತೆ’ `ಚುನಾವಣೆ’ `ಏಡ್ಸ್’ `ಫಲ್ಸ್ ಫೋಲಿಯೋ’ `ಓ ಮತದಾರ ಪ್ರಭುವೆ’ `ಕೂಡಿ ಬಾಳೋಣ’ `ಮಗಳು ಮಾತನಾಡಿದಳು’ `ಅಲ್ಲೆ ಇದ್ದೋರು’ `ದೌಡ್ ಗಾಂಧಿ ದೌಡ್’ `ವಿಶ್ವರೂಪ ದರ್ಶನ’ ಹೀಗೆ ಸಾಮಾಜಿಕ ಸಮಸ್ಯೆಗಳಿಗೆ ನಾಟಕದ ಸ್ವರೂಪ ನೀಡಿ ಅದನ್ನು ಬೀದಿಗೆ ತಂದು ಜನರೆದುರು ಅಭಿನಯಿಸಿ ಗೆದ್ದಿದ್ದಾರೆ.

ವೇದಿಕೆಯ ಮುಖ್ಯವಾದ ಅಭಿವ್ಯಕ್ತಿ ಬೀದಿನಾಟಕವಾದರೂ, ರಂಗದಲ್ಲಿ ವಿಶಿಷ್ಠ ಗಮನಾರ್ಹ ನಾಟಕಗಳ ಪ್ರಯೋಗಗಳನ್ನೂ ಮಾಡಿದೆ. ಕುವೆಂಪು ಅವರ `ಧನ್ವಂತರಿ ಚಿಕಿತ್ಸೆ’ ಸಪ್ದಾರ್ ಹಷ್ಮಿಯ `ಕೆಂಪು ಹೂ’ ಲಂಕೇಶರ `ಮುಟ್ಟಿಸಿಕೊಂಡವರು’ ದೇವನೂರು ಮಹಾದೇವ ಅವರ `ಡಾಂಬರು ಬಂದುದು’ ಪರುಶುರಾಮ ಕಲಾಲರ `ಅಕ್ಕ’, ದ.ರಾ. ಬೇಂದ್ರೆಯವರ `ಕುಣಿಯೋಣ ಬಾರಾ’ ರೂಪಕ, ವಿಜ್ಞಾನಿ ಗೆಲಿಲಿಯೋ ಜೀವನ ಆಧಾರಿತ ನಾಟಕ ಹೀಗೆ ಇಂತಹ ಪ್ರಯೋಗಾತ್ಮಕ ನಾಟಕಗಳ ಪಟ್ಟಿಯೂ ದೊಡ್ಡದಿದೆ. ಇದಕ್ಕೆ ಮುಖ್ಯ ಕಾರಣ ಕರ್ನಾಟಕದ ರಂಗಭೂಮಿಯ ಬಹುಮುಖ್ಯರ ಜತೆಗಿನ ಒಡನಾಟ. ಬಿ.ವಿ.ಕಾರಂತ, ಸಿಜಿಕೆ, ಮದೇನೂರು ಸಂಗಣ್ಣ, ಬಸವರಾಜ ಮಲಶೆಟ್ಟಿ, ಸಿ.ಬಸವಲಿಂಗಯ್ಯ, ಶಶಿಧರ ಅಡಪ, ಪ್ರಸನ್ನ, ಮರಿಯಮ್ಮನಹಳ್ಳಿ ಕೆ. ನಾಗರತ್ನಮ್ಮ, ವಿಜಯಾ ಮೊದಲಾದ ರಂಗಕರ್ಮಿಗಳ ಒಡನಾಟವನ್ನು ಪಡೆದಿದೆ. ಅವರೆಲ್ಲರ ಸಲಹೆ ಸೂಚನೆಗಳಿಗೂ ವೇದಿಕೆ ಕಿವಿಗೊಟ್ಟಿದೆ.

ಇದನ್ನು ಓದಿ: 20ನೆ ಶತಮಾನದ ಭಾರತದ ಮುಸ್ಲಿಂ ಮಹಿಳೆಯರ ಅನನ್ಯ ಸಾಧನೆಗಳು

ಅಂತೆಯೇ ನಾನಾಸಂ, ಶಿವಸಂಚಾರ, ರಂಗಾಯಣ ಮುಂತಾದ ನಾಟಕ ಸಂಸ್ಥೆಗಳ ಜತೆಗೂ ಅನೋನ್ಯ ಸಂಬಂಧವಿಟ್ಟುಕೊಂಡಿದೆ. ಭಾವೈಕ್ಯತಾ ವೇದಿಕೆಯ ಮತ್ತೊಂದು ಮುಖ್ಯ ಗುರುತೆಂದರೆ, ಮಕ್ಕಳ ರಂಗಭೂಮಿ. ಮಕ್ಕಳ ಮನೋವಿಕಾಸವನ್ನು ರೂಪಿಸುವ ಮೂಲಕ ಅವರನ್ನು ಆರೋಗ್ಯಕರ ಪ್ರಜೆಯನ್ನಾಗಿಸುವ ಗುರುತರವಾದ ಜವಾಬ್ದಾರಿಯನ್ನು ವೇದಿಕೆ ಸದಾ ನಿರ್ವಹಿಸಿಕೊಂಡು ಬಂದಿದೆ. ಅರ್ಧಕ್ಕೆ ಓದು ನಿಲ್ಲಿಸಿದ ಬಡವರ ಮನೆ ಮಕ್ಕಳು, ಚಿಂದಿ ಆಯುವ ಮಕ್ಕಳು, ಜಾತಿ, ಧರ್ಮದ ಭೇದ ತೊರೆದ ಮಕ್ಕಳಿವರು. ಅವರೆಲ್ಲ ಕೊಳಗೇರಿಯಲ್ಲಿ ಅರಳಿದ ಹೂವಿನಂಥವರು. ಸ್ಕೂಲಿಗೆ ಹೋಗಲು ಪಡಿಪಾಟಲು ಪಡುವಂಥಹ ಈ ಮಕ್ಕಳಿಗೆ ವೇದಿಕೆ ತಾಯಿಯಾಗಿ ಸಾಂತ್ವಾನ ನೀಡುತ್ತದೆ. ಅವರನ್ನೆಲ್ಲ ಕಿನ್ನರಲೋಕಕ್ಕೆ ಕರೆದೊಯ್ದು ಬದುಕಿನ ಕಷ್ಟಗಳನ್ನು ಕೆಲದಿನಗಳಾದರೂ ಮರೆಸುತ್ತದೆ.

ಅಬ್ದುಲ್ ಅವರ ಜತೆ ನಿಂತು ಭಾವೈಕ್ಯತಾ ವೇದಿಕೆಯನ್ನು ರೂಪಿಸಿದವರು ಹಲವರು. ಆರಂಭಕ್ಕೆ ಜಂಬಯ್ಯ ನಾಯಕ, ಕಲ್ಲಂಭಟ್ಟ, ಪರುಶುರಾಮ ಕಲಾಲ ಮೊದಲಾದ ಹಿರಿಯ ಸಂಗಾತಿಗಳು ಜೊತೆಯಾದರೆ, ನಂತರದಲ್ಲಿ ಕಿರಿಯರು ಮಕ್ಕಳು ವೇದಿಕೆಯ ಭಾಗವಾಗತೊಡಗಿದರು. ಕೆಲವೊಮ್ಮೆ ಅಬ್ದುಲ್ ಅವರ ಇಡೀ ಕುಟುಂಬವೇ ರಂಗಭೂಮಿಯಲ್ಲಿ ಸಕ್ರಿಯವಾಗಿದೆ. ಹೀಗೆ ಮುಸ್ಲೀಂ ಧರ್ಮದ ಒಂದು ಪಂಗಡವಾದ ಪಿಂಜಾರ ಸಮುದಾಯದ ಇಡೀ ಕುಟುಂಬವೇ ರಂಗದ ಮೇಲೆ ಕಾಣಿಸಿಕೊಳ್ಳುವುದು ಕೂಡ ವಿಶಿಷ್ಠ ಸಂಗತಿಯಾಗಿದೆ.
ಹೀಗೆ ಬಿಸಿಲನಾಡು ಬಳ್ಳಾರಿಯಲ್ಲಿ ಬೆಳದಿಂಗಳಂತೆ ರೂಪುಗೊಂಡ ಭಾವೈಕ್ಯತಾ ವೇದಿಕೆ. ಹತ್ತಾರು ಹೊಸ ಸಾಧ್ಯತೆಗಳಿಗೆ ಸಾಕ್ಷಿಯಾಗಿದೆ. ಅಂತೆಯೇ ರಂಗಭೂಮಿಯನ್ನು ಜನಸಾಮಾನ್ಯರ ಕಡುಕಷ್ಟಗಳ ಒಳಗಿಂದಲೂ ತರಬಹುದೆಂಬ ಆತ್ಮವಿಶ್ವಾಸವನ್ನು ಮೂಡಿಸಿದೆ. ಕೋಮು ಸೌಹಾರ್ಧತೆಯನ್ನು ತರುವ ಕಾಣಕ್ಕೆ ಹುಟ್ಟಿಕೊಂಡ ಈ ವೇದಿಕೆ ಮತ್ತೆ ಸೌಹಾರ್ಧ ಕದಡುತ್ತಿರುವ ಈ ಹೊತ್ತಲ್ಲಿ ಮೂಲ ಆಶಯಕ್ಕೆ ಮರಳಬೇಕಿದೆ. ಅಂತೆಯೇ ರಂಗಭೂಮಿಯ ಮೇಲೆ ಸೌಹಾರ್ಧದ ಕಥನಗಳಿಗೆ ಜೀವತುಂಬಬೇಕಿದೆ. ದಣಿವರಿಯದ ರಂಗಕರ್ಮಿ ಪಿ.ಅಬ್ದುಲ್ ಅವರ ಕನಸಿನ ಈ ವೇದಿಕೆ ಮತ್ತಷ್ಟು ರೆಕ್ಕೆಗಳನ್ನು ಹೊಂದಿ ಹಾರಬೇಕಿದೆ. ಜನಪದ ರಂಗಭೂಮಿಗೆ ಹೊಸ ಚೈತನ್ಯ ತುಂಬುವ ಪ್ರಯೋಗಶೀಲತೆಗೂ ಮತ್ತಷ್ಟು ತನ್ನನ್ನು ತೆರೆದುಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...