Homeಕೊರೊನಾ’ನಾನು 11 ಬಾರಿ ಲಸಿಕೆ ಪಡೆದಿದ್ದೇನೆ’ ಎಂದ ವ್ಯಕ್ತಿ: ತನಿಖೆಗೆ ಆದೇಶಿಸಿದ ಬಿಹಾರ ಸರ್ಕಾರ

’ನಾನು 11 ಬಾರಿ ಲಸಿಕೆ ಪಡೆದಿದ್ದೇನೆ’ ಎಂದ ವ್ಯಕ್ತಿ: ತನಿಖೆಗೆ ಆದೇಶಿಸಿದ ಬಿಹಾರ ಸರ್ಕಾರ

- Advertisement -
- Advertisement -

ಬಿಹಾರದ ಮಾಧೇಪುರ ಜಿಲ್ಲೆಯ ಬ್ರಹ್ಮದೇವ್ ಮಂಡಲ್‌ನ 84 ವರ್ಷದ ವೃದ್ಧರೊಬ್ಬರು ಕೋವಿಡ್ ಲಸಿಕೆಯ 11 ಡೋಸ್‌ಗಳನ್ನು ಪಡೆದಿರುವುದಾಗಿ ಹೇಳಿಕೊಂಡಿದ್ದು, ರಾಜ್ಯ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಮಾಧೇಪುರ ಜಿಲ್ಲೆಯ ಓರೈ ಗ್ರಾಮದ ನಿವಾಸಿ ಬ್ರಹ್ಮದೇವ್ ಮಂಡಲ್, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 12 ನೇ ಬಾರಿಗೆ ಲಸಿಕೆ ಪಡೆಯಲು ಬಂದಾಗ ಸಿಕ್ಕಿಬಿದ್ದಿದ್ದಾರೆ. ಕೋವಿಡ್ ಲಸಿಕೆಗಳಿಗಾಗಿ ಅವರು ತಮ್ಮ ಆಧಾರ್ ಕಾರ್ಡ್ ಮತ್ತು ಮೊಬೈಲ್ ಫೋನ್ ಸಂಖ್ಯೆಯನ್ನು ಎಂಟು ಬಾರಿ ಮತ್ತು ಮತದಾರರ ಗುರುತಿನ ಚೀಟಿ ಮತ್ತು ಅವರ ಪತ್ನಿಯ ಮೊಬೈಲ್ ಸಂಖ್ಯೆಯನ್ನು ಮೂರು ಬಾರಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

“ಲಸಿಕೆ ತುಂಬಾ ಪ್ರಯೋಜನಕಾರಿಯಾಗಿದೆ. ಸೊಂಟದ ನೋವಿನಂತಹ ಸಮಸ್ಯೆಗಳು ಹೋಗಿವೆ. ನನಗೆ ಈಗ ಹೆಚ್ಚು ಆಮ್ಲಜನಕ (ಸ್ಯಾಚುರೇಶನ್) ಇದೆ. ನಾನು ಇನ್ನು ಮುಂದೆ ಕೆಮ್ಮು ಅಥವಾ ಶೀತದಿಂದ ಬಳಲುವುದಿಲ್ಲ. ಇತರರು ಯಾಕೆ ಹೆಚ್ಚು ಹೆಚ್ಚು ಡೋಸ್‌ಗಳನ್ನು ತೆಗೆದುಕೊಳ್ಳುತ್ತಿಲ್ಲ” ಎಂದು ಮಂಡಲ್ ಮಾಧ್ಯಮಗಳಿಗೆ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮಕ್ಕಳಿಗೆ ಲಸಿಕೆ: ‘ಅವೈಜ್ಞಾನಿಕ’ ಎಂದ ಕೊವಾಕ್ಸಿನ್‌ ಪ್ರಯೋಗಗಳ ತನಿಖಾಧಿಕಾರಿ!

ರಾಜ್ಯ ಅಂಚೆ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಇವರು ತಾವು ತೆಗೆದುಕೊಂಡ ಪ್ರತಿ ಡೋಸ್‌ನ ವಿವರಗಳ ಪಟ್ಟಿಯನ್ನು ಹೊಂದಿದ್ದಾರೆ. ಅವರ ಪಟ್ಟಿಯಲ್ಲಿನ ಮಾಹಿತಿಯಂತೆ ಸೆಪ್ಟೆಂಬರ್‌ ತಿಂಗಳಲ್ಲಿಯೇ ಮೂರು ಡೋಸ್‌ಗಳನ್ನು ತೆಗೆದುಕೊಂಡಿದ್ದಾರೆ.

ವೃದ್ಧರ ಆಘಾತಕಾರಿ ಹೇಳಿಕೆಯ ಬಳಿಕ ಎಚ್ಚೆತ್ತಿರುವ ಜಿಲ್ಲಾ ಅಧಿಕಾರಿಗಳು ಕ್ರಮ ಕೈಗೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಸಿವಿಲ್ ಸರ್ಜನ್ ಅಮರೇಂದ್ರ ಪ್ರತಾಪ್ ಸಾಹಿ, ’ಮಂಡಲ್ ಅವರು ನಿಜವಾಗಿಯೂ 11 ಡೋಸ್‌ಗಳನ್ನು ಸ್ವೀಕರಿಸಿದ್ದಾರೆಯೇ ಎಂದು ಕಂಡುಹಿಡಿಯಲು ತನಿಖೆ ನಡೆಸಲಾಗುತ್ತಿದೆ. ಇದು ನಿಜವೆಂದು ಕಂಡುಬಂದರೆ, ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಆಫ್‌ಲೈನ್ ಶಿಬಿರಗಳಲ್ಲಿ ವ್ಯಾಕ್ಸಿನೇಷನ್ ಡ್ರೈವ್‌ಗಳು ನಡೆಯುವಾಗ ಇಂತಹ ಘಟನೆಗಳಿಗೆ ಕಾರಣವಾಗಬಹುದು ಎಂದು ಬಿಹಾರದ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಶಿಬಿರಗಳಲ್ಲಿ, ಆಧಾರ್ ಕಾರ್ಡ್ ವಿವರಗಳು ಮತ್ತು ಫೋನ್ ಸಂಖ್ಯೆಗಳನ್ನು ಸಂಗ್ರಹಿಸಿ, ನಂತರ ಡೇಟಾವನ್ನು ಸಿಸ್ಟಂಗೆ ಹಾಕಲಾಗುತ್ತದೆ ಎಂದಿದ್ದಾರೆ.


ಇದನ್ನೂ ಓದಿ: ಲಸಿಕೆ ಪಡೆದ ಮೂರು ತಿಂಗಳ ನಂತರ ಕೋವಿಶೀಲ್ಡ್ ರಕ್ಷಣೆ ಕ್ಷೀಣಿಸುತ್ತದೆ- ದಿ ಲ್ಯಾನ್ಸೆಟ್ ಅಧ್ಯಯನದ ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...