ಬಿಹಾರದ ಮುಜಾಫರ್‌ಪುರದಲ್ಲಿ ಹಲವಾರು ಮಹಿಳೆಯರನ್ನು ಟೆಲಿಮಾರ್ಕೆಟಿಂಗ್ ಮತ್ತು ನೆಟ್‌ವರ್ಕಿಂಗ್ ಕಂಪನಿಯೊಂದರಿಂದ ನೇಮಕ ಮಾಡಿದ ನಂತರ ತಿಂಗಳುಗಳ ಕಾಲ ಸೆರೆಯಲ್ಲಿಟ್ಟು, ಚಿತ್ರಹಿಂಸೆ ಮತ್ತು ಅತ್ಯಾಚಾರವೆಸಗಲಾಗಿದೆ ಎಂದು ಆರೋಪಿಸಲಾಗಿದೆ, ಈ ಪ್ರಕರಣವು 2018 ರಲ್ಲಿ ವರದಿಯಾದ ಮುಜಫರ್‌ಪುರ್ ಬಾಲಿಕಾ ಗೃಹ ಶೆಲ್ಟರ್ ಹೋಮ್ ದೌರ್ಜನ್ಯವನ್ನು ಹೋಲುತ್ತದೆ.
ಇತ್ತೀಚಿನ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಲ್ಲಿ ಒಬ್ಬನನ್ನು ಮಂಗಳವಾರ ಬಂಧಿಸಲಾಗಿದೆ. ಅಪರಾಧವು ರಹಸ್ಯವಾಗಿ ಮುಂದುವರಿದಿದ್ದು, ಈ ವರ್ಷದ ಆರಂಭದಲ್ಲಿ ಸ್ಥಳೀಯ ನ್ಯಾಯಾಲಯವನ್ನು ಸಂಪರ್ಕಿಸಲು ಧೈರ್ಯಮಾಡಿದ ಸಂತ್ರಸ್ತೆಯೊಬ್ಬಳು ಜೂನ್ 2 ರಂದು ಅಹಿಯಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಸಂತ್ರಸ್ತೆಯು ಈ ಪ್ರಕರಣದಲ್ಲಿ ಕ್ರಮಕ್ಕಾಗಿ ಕಾಯುತ್ತಿರುವಾಗ, ಬಾಲಕಿಯರ ಚಿತ್ರಹಿಂಸೆ ಮತ್ತು ದೌರ್ಜನ್ಯವನ್ನು ತೋರಿಸುವ ವೀಡಿಯೊ ಕ್ಲಿಪ್ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಪ್ರಕರಣದಲ್ಲಿ ಪೊಲೀಸರ ನಿಷ್ಕ್ರಿಯತೆಗೆ ಸಾರ್ವಜನಿಕರಿಂದ ವ್ಯಾಪಕ ಖಂಡನೆಗೆ ಕಾರಣವಾಯಿತು. ನಂತರ ಪೊಲೀಸರು ತಿಲಕ್ ಕುಮಾರ್ ಸಿಂಗ್ ಅವರನ್ನು ಉತ್ತರ ಪ್ರದೇಶದ ಗೋರಖ್‌ಪುರದಿಂದ ಬಂಧಿಸಿದ್ದರು.
“ನಾವು ಗೋರಖ್‌ಪುರದಿಂದ ತಿಲಕ್ ಕುಮಾರ್ ಸಿಂಗ್ ಎಂಬಾತನನ್ನು ಬಂಧಿಸಿದ್ದೇವೆ. ಪ್ರಕರಣದ ಒಂಬತ್ತು ಆರೋಪಿಗಳಲ್ಲಿ ಒಬ್ಬನಾಗಿದ್ದು, ಮುಜಾಫರ್‌ಪುರಕ್ಕೆ ಕರೆತರಲಾಗುತ್ತಿದೆ. ಇತರ ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ” ಎಂದು ಮುಜಫರ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ತಿಳಿಸಿದ್ದಾರೆ.
ಇತರ ಆರೋಪಿಗಳಲ್ಲಿ ಮನೀಶ್ ಪ್ರತಾಪ್ ಸಿಂಗ್, ಇನಾಮುಲ್ ಅನ್ಸಾರಿ, ಅಹ್ಮದ್ ರಜಾ, ವಿಜಯ್ ಗಿರಿ, ಕನ್ಹಯ್ಯಾ ಕುಶ್ವಾಹ, ಹೃದಯಾನಂದ್ ಸಿಂಗ್, ಹರೇರಾಮ್ ಕುಮಾರ್ ಮತ್ತು ಇರ್ಫಾನ್ ಸೇರಿದ್ದಾರೆ. ಮನೀಶ್ ನೋಯ್ಡಾ ಮೂಲದವರಾಗಿದ್ದರೆ, ಇತರರು ಬಿಹಾರದ ವಿವಿಧ ಭಾಗಗಳಿಂದ ಬಂದವರು.
ಬದುಕುಳಿದವರು ಟೆಲಿಮಾರ್ಕೆಟಿಂಗ್ ಮತ್ತು ನೆಟ್‌ವರ್ಕಿಂಗ್ ಕಂಪನಿ ಡಿಬಿಆರ್ ಯುನಿಕ್ ಅನ್ನು ಜೂನ್ 2022 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಜಾಹೀರಾತನ್ನು ವೀಕ್ಷಿಸಿದ ನಂತರ ಮಹಿಳೆಯರು ಸೇರಿಕೊಂಡರು ಎಂದು ಆರೋಪಿಸಿದ್ದಾರೆ. ಹರೇರಾಮ್ ಕುಮಾರ್ ಆಕೆಯನ್ನು ಸಂಪರ್ಕಿಸಿ ತಿಂಗಳಿಗೆ ₹15,000 ವೇತನ ನೀಡುವುದಾಗಿ ಭರವಸೆ ನೀಡಿದ್ದರು. ಆಕೆಯು ಪ್ರಸ್ತಾಪವನ್ನು ಒಪ್ಪಿಕೊಂಡ ನಂತರ, ತರಬೇತಿಗಾಗಿ ₹20,500 ಠೇವಣಿ ಮಾಡಲು ಕೇಳಿದ್ದಾರೆ; ನಂತರ, ಆಕೆ ತನ್ನ ಚಿಕ್ಕಮ್ಮನಿಂದ ಸಾಲವನ್ನು ಪಡೆದು ಹಣ ನೀಡಿದ್ದಾರೆ.
“ನಾನು ಮುಜಾಫರ್‌ಪುರದ ಕಂಪನಿಗೆ ಸೇರಿಕೊಂಡೆ; ಇನ್ನೂ ಹಲವಾರು ಹುಡುಗಿಯರಿದ್ದರು. ನಮ್ಮನ್ನು ಒಂದು ಕೋಣೆಯಲ್ಲಿ ಇರಿಸಲಾಯಿತು. ಫೋನ್ ಮೂಲಕ ಗ್ರಾಹಕರನ್ನು ಹೇಗೆ ಮನವರಿಕೆ ಮಾಡುವುದು, ಹೆಚ್ಚಿನ ಜನರೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಉದ್ಯೋಗಗಳಿಗಾಗಿ ಕಂಪನಿಯತ್ತ ಅವರನ್ನು ಆಕರ್ಷಿಸುವುದು ಹೇಗೆ ಎಂಬುದರ ಕುರಿತು ತರಗತಿಗಳನ್ನು ನಡೆಸಲಾಯಿತು. 15 ದಿನಗಳ ತರಬೇತಿಯ ನಂತರ ನಮ್ಮ ಕೆಲಸ ಪ್ರಾರಂಭವಾಯಿತು” ಎಂದು ಸಂತ್ರಸ್ತೆಯೊಬ್ಬರು ತಿಳಿಸಿದರು.
“ನಮ್ಮನ್ನು ಮುಜಾಫರ್‌ಪುರ, ಹಾಜಿಪುರ (ವೈಶಾಲಿ ಜಿಲ್ಲೆ) ಮತ್ತು ಇತರ ಸ್ಥಳಗಳಲ್ಲಿ ಕೊಠಡಿಗಳಲ್ಲಿ ಇರಿಸಲಾಯಿತು ಮತ್ತು ಹೆಚ್ಚಿನ ಹುಡುಗಿಯರನ್ನು ಕೆಲಸಕ್ಕೆ ನೇಂಇಸುವಂತೆ ಒತ್ತಾಯಿಸಲಾಯಿತು. ಕೆಲಸ ಮಾಡಲು ನಿರಾಕರಿಸಿದ ಮತ್ತು ಬಿಡಲು ಬಯಸಿದವರಿಗೆ ಚಿತ್ರಹಿಂಸೆ ನೀಡಿ ಅತ್ಯಾಚಾರ ಎಸಗಲಾಯಿತು. ನಮ್ಮನ್ನೆಲ್ಲ ಬಂಧಿಯಾಗಿಟ್ಟರು; ಹುಡುಗಿಯರಿಗೆ ಒಮ್ಮೆ ಮನೆಗೆ ಕರೆ ಮಾಡಲು ಅವಕಾಶ ನೀಡಲಾಯಿತು. ಆದರೆ, ಕಂಪನಿಯ ಜನರ ಸಮ್ಮುಖದಲ್ಲಿ ಮಾತ್ರ” ಎಂದು ಅವರು ಹೇಳಿದರು.
21 ಹುಡುಗಿಯರನ್ನು ಕಂಪನಿಗೆ ಸಂಪರ್ಕಿಸಿದ ನಂತರ ಆಕೆ ಇನ್ನು ಮುಂದೆ ಕೆಲಸ ಮಾಡಲು ನಿರಾಕರಿಸಿದಳು ಎಂದು ಸಂತ್ರಸತೆಯಿಬ್ಬರು ಹೇಳಿದದ್ದಾರೆ. ಆಕೆಗೆ ಚಿತ್ರಹಿಂಸೆ ನೀಡಲಾಯಿತು, ಅತ್ಯಾಚಾರ ಮಾಡಲಾಯಿತು ಮತ್ತು ಗರ್ಭಪಾತಕ್ಕೆ ಒಳಗಾಗಬೇಕಾಯಿತು ಎಂದು ಅವರು ಹೇಳಿದರು. ಬದುಕುಳಿದವರ ಪ್ರಕಾರ, ಹಲವಾರು ಇತರ ಹುಡುಗಿಯರು ಅದೇ ಸ್ಥಿತಿ ಅನುಭವಿಸಿದರು. ಕಂಪನಿಯಲ್ಲಿ ಸುಮಾರು 200 ಹುಡುಗಿಯರು ಕೆಲಸ ಮಾಡುತ್ತಿದ್ದರು. ಆರೋಪಿಗಳು ತನ್ನನ್ನು ಮತ್ತು ಇತರ ಹುಡುಗಿಯರನ್ನು ವಶಪಡಿಸಿಕೊಳ್ಳಲು ಮದುವೆಯಾಗುವುದಾಗಿ ಭರವಸೆ ನೀಡಿದರು ಎಂದು ಅವರು ಹೇಳಿದರು.
ಎಸ್‌ಎಸ್‌ಪಿ ರಾಕೇಶ್ ಕುಮಾರ್, ಈ ವಿಷಯವು ಬಿಂಬಿಸಲಾಗುತ್ತಿರುವ ರೀತಿಯದ್ದಲ್ಲ ಎಂದು ಈ ಪತ್ರಿಕೆಗೆ ತಿಳಿಸಿದ್ದಾರೆ. ಏಕೆಂದರೆ, ಇದುವರೆಗೆ ಯಾವುದೇ ಹುಡುಗಿಯರು ಇದೇ ರೀತಿಯ ಆರೋಪಕ್ಕೆ ಮುಂದಾಗಿಲ್ಲ ಎಂದು ಹೇಳಿದ್ದಾರೆ.
“ಈ ಹಂತದಲ್ಲಿ ನಾವು ಏನನ್ನೂ ನಿರಾಕರಿಸುವುದಿಲ್ಲ ಮತ್ತು ಪ್ರಸಾರವಾದ ವೀಡಿಯೊವನ್ನು ನಾವು ಸತ್ಯವೆಂದು ಒಪ್ಪಿಕೊಳ್ಳುತ್ತೇವೆ. ಆದರೆ, ಈ ಪ್ರಕರಣವು ವಂಚನೆ, ದೈಹಿಕ ಸಂಬಂಧ ಮತ್ತು ಗರ್ಭಪಾತಕ್ಕೆ ಪ್ರವೇಶಿಸಲು ಮದುವೆಯ ಭರವಸೆಯನ್ನು ತೋರುತ್ತದೆ. ಸಂತ್ರಸ್ತ ಮಹಿಳೆಗೆ ಗರ್ಭಪಾತದ ವಿವರಗಳನ್ನು ಮತ್ತು ಆಕೆ ಚಿಕಿತ್ಸೆ ಪಡೆದುಕೊಂಡ ಕ್ಲಿನಿಕ್ ವಿವರ ಒದಗಿಸುವಂತೆ ನಾವು ಕೇಳಿದ್ದೇವೆ. ಆದರೆ, ಸ್ಥಳೀಯ ಔಷಧಿಗಳ ಸಹಾಯದಿಂದ ಇದನ್ನು ಮಾಡಲಾಗಿದೆ ಎಂದು ಅವರು ಹೇಳಿದರು” ಎಸ್ಎಸ್‌ಪಿ ಹೇಳಿದರು.
50 ಕ್ಕೂ ಹೆಚ್ಚು ಪುರುಷರು ಮತ್ತು ಯಾವುದೇ ಮಹಿಳೆಯರು ಕೆಲಸ ಮಾಡದ ಮುಜಾಫರ್‌ಪುರದ ಕಂಪನಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಎಸ್‌ಎಸ್‌ಪಿ ಹೇಳಿದರು. “ಅವರು ಕೆಲವೊಮ್ಮೆ ಥಳಿಸಿದರು. ಆದರೆ, ಹುಡುಗಿಯರ ಅತ್ಯಾಚಾರವನ್ನು ನಿರಾಕರಿಸಿದರು” ಎಂದು ಅವರು ಹೇಳಿದರು.
ಕಂಪನಿಯ ದಾಖಲೆಗಳು ಕಳಪೆಯಾಗಿವೆ ಮತ್ತು ಅದರ ವಿರುದ್ಧ ವಿವಿಧ ಜಿಲ್ಲೆಗಳಲ್ಲಿ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮುಜಾಫರ್‌ಪುರ ಪೊಲೀಸರು ಸೇರಿಸಿದ್ದಾರೆ. “ಒಂದು ಪ್ರಕರಣ – ಎಫ್‌ಐಆರ್ ಸಂಖ್ಯೆ 607/23 – ಕಳೆದ ವರ್ಷ ಅದೇ ಅಹಿಯಾಪುರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ವಂಚನೆ ಮತ್ತು ಸುಲಿಗೆ ಆರೋಪವನ್ನು ದಾಖಲಿಸಿದ್ದಾರೆ. ಈ ಸಂಬಂಧ ಏಳು ಮಂದಿಯನ್ನು ಬಂಧಿಸಲಾಗಿದೆ” ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.
ಇದನ್ನೂ ಓದಿ; ಕುವೈತ್‌ಗೆ ತೆರಳಲು ಕೇರಳ ಸಚಿವರಿಗೆ ಅನುಮತಿ ನಿರಾಕರಣೆ; ಪ್ರಧಾನಿಗೆ ಪತ್ರ ಬರೆದ ಪಿಣರಾಯಿ ವಿಜಯನ್


